"ಹೊಯ್ಸಳ ತುಂಬಾನೇ ರೊಮ್ಯಾಂಟಿಕ್" ಎಂದ ಅಮೃತಾ ಅಯ್ಯಂಗಾರ್: ಮ್ಯಾಟರ್ ಬ್ಯಾರೆನೇ ಐತಿ!
ಡಾಲಿ 25ನೇ ಸಿನಿಮಾ 'ಗುರುದೇವ್ ಹೊಯ್ಸಳ' ಬಿಡುಗಡೆಗೆ ಕ್ಷಣಗಣನೆ ಶುರುವಾಗಿದೆ. ಕಳೆದೊಂದು ತಿಂಗಳಿಂದ ಭರ್ಜರಿ ಪ್ರಚಾರ ಮಾಡಿದ್ದ ಚಿತ್ರತಂಡಕ್ಕೆ ನಾಳೆ(ಮಾರ್ಚ್ 30) ಫಲಿತಾಂಶ ಸಿಗಲಿದೆ. ಪಕ್ಕಾ ಮಾಸ್ ಲುಕ್‌ನಲ್ಲಿ ಖಾಕಿ ತೊಟ್ಟು ನಟರಾಕ್ಷಸ ಅಖಾಡಕ್ಕೆ ಇಳಿಯುತ್ತಿದ್ದಾರೆ.
'ಗುರುದೇವ್ ಹೊಯ್ಸಳ' ಆಕ್ಷನ್ ಮೂಡ್ನಲ್ಲಿದ್ದಾರೆ. ರಫ್ ಅಂಡ್ ಟಪ್ ಪೊಲೀಸ್ ಅಧಿಕಾರಿಯಾಗಿ ಅಖಾಡಕ್ಕಿಳಿಯುತ್ತಿದ್ದಾರೆ. ಈಗಾಗಲೇ ಟ್ರೈಲರ್‌ನಲ್ಲಿ ಡಾಲಿ ಖದರ್ ನೋಡಿ ಅಭಿಮಾನಿಗಳಂತೂ ಸುಸ್ತು ಹೊಡೆದಿದ್ದಾರೆ. ಇದರ ಜೊತೆ ಅಮೃತಾ ಐಯ್ಯಾಂಗಾರ್ ಹಾಗೂ ಡಾಲಿ ಮತ್ತೊಮ್ಮೆ ಜೋಡಿಯಾಗಿ ಕಾಣಿಸಿಕೊಳ್ಳುತ್ತಿದ್ದು, ಎಲ್ಲರ ಕಣ್ಣು ಈ ಜೋಡಿ ಮೇಲಿದೆ.

ಕೊನೆ ಹಂತದಲ್ಲಿ ಅಮೃತಾ ಅಯ್ಯಂಗಾರ್ 'ಹೊಯ್ಸಳ'ನ ಬಗ್ಗೆ ಒಂದು ಸೀಕ್ರೆಟ್ ರಿವೀಲ್ ಮಾಡಿದ್ದಾರೆ. ಡಾಲಿ ತುಂಬಾನೇ ರೊಮ್ಯಾಂಟಿಕ್. ಆದರೆ, ನಾನೇ ಸಮಯ ಕೊಡೋದಿಲ್ಲ ಅಂತ ಹೇಳಿಬಿಟ್ಟಿದ್ದಾರೆ. ಅಷ್ಟಕ್ಕೂ ಅಮೃತಾ ಅಯ್ಯಂಗಾರ್ ಈ ಮಾತನ್ನು ಎಲ್ಲಿ ಹೇಳಿದ್ದು? ಯಾವಾಗ ಹೇಳಿದ್ದು? ಅನ್ನೋದನ್ನು ತಿಳಿಯಲು ಮುಂದೆ ಓದಿ.
"ಹೊಯ್ಸಳ ತುಂಬಾನೇ ರೊಮ್ಯಾಂಟಿಕ್"
'ಗುರುದೇವ್ ಹೊಯ್ಸಳ' ರಿಲೀಸ್ ಆಗೋವರೆಗೂ ಪ್ರಚಾರ ನಡೆಯುತ್ತಲೇ ಇರುತ್ತೆ. ಕೆಆರ್‌ಜಿ ಸ್ಟುಡಿಯೋ ಯೂಟ್ಯೂಬ್ ಚಾನೆಲ್‌ನಲ್ಲಿ ಅಮೃತಾ ಅಯ್ಯಂಗಾರ್‌ಗೆ ರಾಪಿಡ್ ಫೈಯರ್ ರೌಂಡ್ ಮಾಡಿದ್ದಾರೆ. ಈ ವೇಳೆ ನಟಿ ಅಮೃತಾ ಹೊಯ್ಸಳ ತುಂಬಾನೇ ರೊಮ್ಯಾಂಟಿಕ್ ಅಂತ ಹೇಳಿಕೆ ಕೊಟ್ಟಿದ್ದಾರೆ.
"ಹೊಯ್ಸಳ ತುಂಬಾನೇ ಎನೆರ್ಜೆಟಿಕ್, ರೊಮ್ಯಾಂಟಿಕ್.. ಆದರೆ ನಾನು ಟೈಮೇ ಕೊಡೋದಿಲ್ಲ" ಅಂತ ಈ ರಾಪಿಡ್ ಫೈಯರ್‌ನಲ್ಲಿ ನಟಿ ಅಮೃತಾ ಅಯ್ಯಂಗಾರ್ ಹೇಳಿಬಿಟ್ಟಿದ್ದಾರೆ. ಈಗ ಸೋಶಿಯಲ್ಸ ಮೀಡಿಯಾದಲ್ಲಿ ಹೊಯ್ಸಳ ರೊಮ್ಯಾಂಟಿಕ್ ಅನ್ನೋ ವಿಚಾರದ ಬಗ್ಗೆನೇ ಚರ್ಚೆ ಮಾಡುವುದಕ್ಕೆ ಶುರು ಮಾಡಿದ್ದಾರೆ. ಅಷ್ಟಕ್ಕೂ ಅಮೃತಾ, ಹೊಯ್ಸಳ ರೊಮ್ಯಾಂಟಿಕ್ ಎಂದಿದ್ದರಿಂದ ಈ ಜೋಡಿಯನ್ನು ತೆರೆಮೇಲೆ ನೋಡಿವುದಕ್ಕೆ ಇಬ್ಬರ ಫ್ಯಾನ್ಸ್ ಎದುರು ನೋಡುತ್ತಿದ್ದಾರೆ.

ಮಾರ್ಚ್ 30 ಏನ್ಮಾಡ್ತಾರೆ ಅಮೃತಾ ಅಯ್ಯಂಗಾರ್?
'ಗುರುದೇವ್ ಹೊಯ್ಸಳ' ಟ್ರೈಲರ್ ಇತ್ತೀಚೆಗೆ ರಿಲೀಸ್ ಆಗಿತ್ತು. ಅಲ್ಲಿಂದ 'ಗುರುದೇವ್ ಹೊಯ್ಸಳ' ನಿರೀಕ್ಷೆಯನ್ನು ದುಪ್ಪಟ್ಟು ಮಾಡಿದೆ. ಹೀಗಾಗಿ ನಾಳೆ(ಮಾರ್ಚ್ 30) ಇಡೀ ತಂಡ ಥಿಯೇಟರ್ ವಿಸಿಟ್ ಹಾಕುತ್ತಿದೆ. ನಟಿ ಅಮೃತಾ ಅಯ್ಯಂಗಾರ್ ಇಡೀ ದಿನ ಏನು ಮಾಡುತ್ತಾರೆ? ಅನ್ನೋದನ್ನು ರಿವೀಲ್ ಮಾಡಿದ್ದಾರೆ.
"ಮಾರ್ಚ್ 30 ಬೆಳಗ್ಗೆ ಎದ್ದು ಫಸ್ಟ್ ಡೇ ಫಸ್ಟ್ ಶೋ ಸಂತೋಷ್ ಥಿಯೇಟರ್‌ನಲ್ಲಿ ನೋಡಿ, ಇಡೀ ದಿನ ಎಲ್ಲಾ ಥಿಯೇಟರ್‌ಗೂ ವಿಸಿಟ್ ಮಾಡಿಕೊಂಡು, ಫ್ಯಾನ್ಸ್ ಕೂತು ಶಿಳ್ಳೆ ಹೊಡೆಯುತ್ತಾ? ಮಜಾ ಮಾಡ್ತಾ, ಪಾಪ್ ಕಾರ್ನ್ ತಿನ್ನುತ್ತ ಸಿನಿಮಾ ನೋಡುವುದು. ನಾನಂತೂ ಬರುತ್ತಾ ಇದ್ದೀನಿ. ಎಲ್ಲಾ ಥಿಯೇಟರ್‌ಗೂ ನೀವು ಬರಬೇಕು" ಎಂದು ಅಮೃತಾ ಅಯ್ಯಂಗಾರ್ ಅಭಿಮಾನಿಗಳಿಗೆ ಕರೆ ನೀಡಿದ್ದಾರೆ.
ಬಹುತೇಕ ಉತ್ತರ ಕರ್ನಾಟಕದಲ್ಲೇ ಚಿತ್ರೀಕರಣ
'ಗುರುದೇವ್ ಹೊಯ್ಸಳ' ಇದೊಂದು ಉತ್ತರ ಕರ್ನಾಟಕ ಭಾಷೆಯ ಸೊಗಡಿನ ಸಿನಿಮಾ. ಹೀಗಾಗಿ ಬಹುತೇಕ ಚಿತ್ರೀಕರಣ ಉತ್ತರ ಕರ್ನಾಟಕದಲ್ಲೇ ಮಾಡಲಾಗಿದೆ.
ಧನಂಜಯ್ 'ಹೊಯ್ಸಳ'ನಾಗಿ ನಟಿಸಿದ್ದರೆ, ನಾಯಕಿಯಾಗಿ ಅಮೃತಾ ಅಯ್ಯಂಗಾರ್ ಕಾಣಿಸಿಕೊಂಡಿದ್ದಾರೆ. ಇವರೊಂದಿಗೆ ಅಚ್ಯುತ್ ಕುಮಾರ್, ನವೀನ್ ಶಂಕರ್, ಅವಿನಾಶ್, ಪ್ರತಾಪ್ ನಾರಾಯಣ್, ರಾಜೇಶ್ ನಟರಂಗ, ನಾಗಭೂಷಣ್, ರಘು ಶಿವಮೊಗ್ಗ, ಅನಿರುದ್ಧ್ ಭಟ್, ಮಯೂರಿ ನಟರಾಜ್ ಹಲವರು ಸಿನಿಮಾದಲ್ಲಿ ನಟಿಸಿದ್ದಾರೆ.
ಕೆಆರ್‌ಜಿ ಸ್ಟುಡಿಯೋಸ್ ಬ್ಯಾನರ್‌ನಲ್ಲಿ ಕಾರ್ತಿಕ್ ಗೌಡ ಹಾಗೂ ಯೋಗಿ ಜಿ ರಾಜ್ 'ಗುರುದೇವ್ ಹೊಯ್ಸಳ' ಸಿನಿಮಾವನ್ನು ನಿರ್ಮಾಣ ಮಾಡಿದ್ದಾರೆ. ವಿಜಯ್ ಎನ್ ಆಕ್ಷನ್ ಕಟ್ ಹೇಳಿದ್ದಾರೆ. ಅಜನೀಶ್ ಲೋಕನಾಥ್ ಟ್ಯೂನ್ ಹಾಕಿದ್ದಾರೆ.


Click it and Unblock the Notifications











