ಕೆನಡಾದ ನಯಾಗರ ಫಾಲ್ಸ್‌ನಲ್ಲಿ ರಾಜು ಜೇಮ್ಸ್ ಬಾಂಡ್ ಟೀಸರ್ ರಿಲೀಸ್: ಹೇಗಿದೆ ರೆಸ್ಪಾನ್ಸ್?

'ಫಸ್ಟ್ ರ‍್ಯಾಂಕ್‌ ರಾಜು'‌ ಯಾರಿಗೆ ಗೊತ್ತಿಲ್ಲ. 'ವಿದ್ಯೆ 100%, ಬುದ್ದಿ 0%' ಅಂತ ಟ್ಯಾಗ್ ಲೈನ್ ಕೊಟ್ಟು ರಿಲೀಸ್ ಆಗಿದ್ದ ಸಿನಿಮಾ ಬಾಕ್ಸಾಫೀಸ್‌ನಲ್ಲಿ ಸಖತ್ ಸೌಂಡು ಮಾಡಿತ್ತು. ಇಲ್ಲಿಂದ ರಾಜು ಸಿರೀಸ್ ಆರಂಭ ಆಗಿದೆ. ಆದರೆ, ಪ್ರತಿ ಸರಣಿಯಲ್ಲೂ ನಿರ್ಮಾಪಕರು ನಿರ್ದೇಶಕರು ಬದಲಾಗಿದ್ದಾರೆ. ಆದರೆ, ಬದಲಾಗದೆ ಉಳಿದವರು ಹೀರೋ ಗುರುನಂದನ್ ಮಾತ್ರ.

'ಫಸ್ಟ್ ರ‍್ಯಾಂಕ್‌ ರಾಜು' ರಿಲೀಸ್ ಬಳಿಕ ಗುರುನಂದನ್ ಇಮೇಜ್ ಬದಲಾಗಿತ್ತು. ಸಿನಿಪ್ರಿಯರು ಇವರನ್ನು ಗುರುನಂದನ್ ಅಂತ ಕರೆಯುವುದಕ್ಕಿಂತ ಹೆಚ್ಚಾಗಿ 'ಫಸ್ಟ್ ರ‍್ಯಾಂಕ್‌ ರಾಜು' ಅಂತ ಗುರುತಿಸುವುದೇ ಹೆಚ್ಚು. ಅದಕ್ಕೆ ರಾಜು ಸರಣಿಯ ಮತ್ತೊಂದು ಸಿನಿಮಾ ಬಿಡುಗಡೆಗೆ ಸಜ್ಜಾಗುತ್ತಿದೆ. ಅದುವೇ 'ರಾಜು ಜೇಮ್ಸ್ ಬಾಂಡ್' ಎರಡು ವರ್ಷಗಳಿಂದ ಸದ್ದಿಲ್ಲದೆ ಶೂಟಿಂಗ್ ನಡೆದಿದ್ದು, ಈಗ ಟೀಸರ್ ಬಿಡುಗಡೆ ಮಾಡಲಾಗಿದೆ.

ನಯಾಗರ ಫಾಲ್ಸ್‌ನಲ್ಲಿ 'ರಾಜು ಜೇಮ್ಸ್ ಬಾಂಡ್'

ನಯಾಗರ ಫಾಲ್ಸ್‌ನಲ್ಲಿ 'ರಾಜು ಜೇಮ್ಸ್ ಬಾಂಡ್'

'ಫಸ್ಟ್ ರ‍್ಯಾಂಕ್‌ ರಾಜು' ಮೂಲಕ ಮೋಡಿ ಮಾಡಿದ್ದ ಗುರುನಂದನ್ ಮೂರನೇ ಬಾರಿ ರಾಜು ಅವತಾರವೆತ್ತಿ ಬಂದಿದ್ದಾರೆ. ಈ ಬಾರಿ ಜೇಮ್ಸ್ ಬಾಂಡ್ ಲುಕ್ ಕೊಟ್ಟಿರುವ ಗುರುನಂದನ್ ಜೋರಾಗೇ ಸದ್ದು ಮಾಡುವುದಕ್ಕೆ ಸಜ್ಜಾಗಿ ನಿಂತಿದ್ದಾರೆ. ಅದಕ್ಕೆ 'ರಾಜು ಜೇಮ್ಸ್ ಬಾಂಡ್' ಸಿನಿಮಾದ ಟೀಸರ್ ಅನ್ನು ಕೆನಡಾದ ನಯಾಗರ ಫಾಲ್ಸ್‌ನಲ್ಲಿ ಅದ್ಧೂರಿಯಾಗಿ ಕೆನಡಾ ಕನ್ನಡಿಗರ ಸಮ್ಮುಖದಲ್ಲಿ ರಿಲೀಸ್ ಮಾಡಿದ್ದಾರೆ. ಈ ಸಿನಿಮಾ ಮೂಲಕ ಮತ್ತೆ ಸ್ಯಾಂಡಲ್‌ವುಡ್‌ನಲ್ಲಿ ನಗುವಿನ ಕಚಗುಳಿ ಇಡಲು ಸಜ್ಜಾಗುತ್ತಿದ್ದಾರೆ.

ಗುರುನಂದನ್ ಬರ್ತ್‌ಡೇಗೆ ಜೇಮ್ಸ್ ಬಾಂಡ್

ಗುರುನಂದನ್ ಬರ್ತ್‌ಡೇಗೆ ಜೇಮ್ಸ್ ಬಾಂಡ್

ಗುರುನಂದನ್‌ ಕೆನಡಾದ ನಯಾಗರ ಫಾಲ್ಸ್‌ನಲ್ಲಿ ಟೀಸರ್ ರಿಲೀಸ್ ಮಾಡುವುದಕ್ಕೆ ಒಂದು ಕಾರಣವಿದೆ. ಡಿಸೆಂಬರ್ 30 ರಂದು ಗುರುನಂದನ್ ಹುಟ್ಟುಹಬ್ಬ. ಈ ಕಾರಣಕ್ಕಾಗಿ 'ರಾಜು ಜೇಮ್ಸ್ ಬಾಂಡ್' ಸಿನಿಮಾದ ಟೀಸರ್ ಅನ್ನು ಕೆನಡಾ ವಿಶ್ವಪ್ರಸಿದ್ಧ ನಯಾಗರ ಫಾಲ್ಸ್‌ನಲ್ಲಿ ರಿಲೀಸ್ ಮಾಡಲು ತಯಾರಿ ನಡೆಸಿದ್ದರು. ಅದರಂತೆ ಕೆನಡಾ ಕನ್ನಡಿಗರ ಸಮ್ಮುಖದಲ್ಲಿ ಟೀಸರ್ ರಿಲೀಸ್ ಆಗಿದೆ. "ನಯಾಗರ ಫಾಲ್ಸ್ ಕೆನಡಾದಲ್ಲಿ ಇವತ್ತು ಕೆನಡಾದ ಕನ್ನಡಿಗರ ಜೊತೆ ಸೇರಿ 'ರಾಜು ಜೇಮ್ಸ್ ಬಾಂಡ್' ಟೀಸರ್ ಅನ್ನು ರಿಲೀಸ್ ಮಾಡಿದ್ದೇನೆ. ಎಲ್ಲಾ ಕೆನಡಾದ ಕನ್ನಡಿಗರು ಪ್ರೀತಿ ತೋರಿಸಿ ಟೀಸರ್ ರಿಲೀಸ್ ಮಾಡಿಕೊಟ್ಟಿದ್ದಾರೆ. ನನ್ನ ಸಿನಿಮಾ ಕೂಡ ಇನ್ನು ಕೆಲವೇ ದಿನಗಳಲ್ಲಿ ರಿಲೀಸ್ ಆಗಲಿದೆ." ಎಂದು ಗುರುನಂದನ್ ಕೆನಡಾದಿಂದ ತಮ್ಮ ಅಭಿಮಾನಿಗಳಿಗೆ ಸಂದೇಶ ರವಾನೆ ಮಾಡಿದ್ದಾರೆ.

ರಾಯಲ್ ಬಾಂಡ್ ಲುಕ್‌ಗೆ ಫಿದಾ

ರಾಯಲ್ ಬಾಂಡ್ ಲುಕ್‌ಗೆ ಫಿದಾ

'ರಾಜು ಜೇಮ್ಸ್ ಬಾಂಡ್' ಸಿನಿಮಾ ಟೀಸರ್ ಅದ್ಭುತವಾಗಿ ಪ್ರೇಕ್ಷಕರಿಗೆ ಮತ್ತೆ ಹಾಸ್ಯದ ಕಚಗುಳಿ ಇಡುವ ಸೂಚನೆ ನೀಡಿದೆ. ಈ ಸಿನಿಮಾದಲ್ಲಿ ಗುರುನಂದನ್ ರಾಯಲ್ ಬಾಂಡ್ ಅವತಾರ ಸಿನಿಪ್ರಿಯರನ್ನು ರಂಜಿಸಲಿದ್ದಾರೆ. ಅಂದಹಾಗೆ ಈ ಸಿನಿಮಾ 2019ರಲ್ಲಿ ಸೆಟ್ಟೇರಿತ್ತು. ಆದರೆ, ಈ ಮಧ್ಯೆದಲ್ಲಿ ಕೊರೊನಾ, ಲಾಕ್‌ಡೌನ್ ಅಂತಹ ಅಡೆ-ತಡೆಗಳು ಎದುರಾಗಿದ್ದರಿಂದ ಸಿನಿಮಾ ಬಿಡುಗಡೆ ತಡವಾಗಿದೆ. ಸದ್ಯ ಚಿತ್ರೀಕರಣ ಕಂಪ್ಲೀಟ್ ಮಾಗಿದ್ದು, ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದೆ. ದೀಪಕ್ ಮಧುವನಹಳ್ಳಿ ಈ ಸಿನಿಮಾವನ್ನು ನಿರ್ದೇಶನ ಮಾಡಿದ್ದಾರೆ. ಈ ಸಿನಿಮಾವನ್ನು ಮಂಜುನಾಥ್ ವಿಶ್ವಕರ್ಮ, ಕಿರಣ್ ಬರ್ತೂರ್ ನಿರ್ಮಾಣ ಮಾಡಿದ್ದಾರೆ. 'ರಾಜು ಜೇಮ್ಸ್ ಬಾಂಡ್' ಚಿತ್ರಕ್ಕೆ ಅನೂಪ್ ಸೀಳಿನ್ ಸಂಗೀತ ನೀಡಿದ್ರೆ, ಮನೋಹರ್ ಜೋಶಿ ಕ್ಯಾಮೆರಾ ಕೈ ಚಳಕವಿದೆ.

ಜೇಮ್ಸ್ ಬಾಂಡ್‌ ಜೊತೆ ಕನ್ನಡದ ತಾರಾಬಳಗ

ಜೇಮ್ಸ್ ಬಾಂಡ್‌ ಜೊತೆ ಕನ್ನಡದ ತಾರಾಬಳಗ

ರಾಜು ಅವತಾರವೆತ್ತಿರುವ ಗುರುನಂದನ್ ವಿನೂತನ ಹಾಸ್ಯ ಪ್ರಜ್ಞೆಯಿಂದ ಪ್ರೇಕ್ಷಕರನ್ನು ನಗಿಸಲಿದ್ದಾರೆ. ಗುರುನಂದನ್‌ಗೆ ಜೋಡಿಯಾಗಿ ನಟಿ ಮೃದುಲಾ ಕಾಣಿಸಿಕೊಂಡಿದ್ದಾರೆ. ಇವರೊಂದಿಗೆ ಸ್ಯಾಂಡಲ್‌ವುಡ್ ಹಿರಿಯ ನಟರ ದಂಡೇ ಇದೆ. ಸಾಧು ಕೋಕಿಲ, ರವಿಶಂಕರ್, ಚಿಕ್ಕಣ್ಣ, ಜೈ ಜಗದೀಶ್, ಅಚ್ಯುತ್ ಕುಮಾರ್, ತಬಲ ನಾಣಿ, ವಿಜಯ್ ಚೆಂದೂರ್ 'ರಾಜ ಜೇಮ್ಸ್ ಬಾಂಡ್' ಜೊತೆ ಕೈ ಜೋಡಿಸಿದ್ದಾರೆ. ಪೋಸ್ಟ್ ಪ್ರೊಡಕ್ಷನ್‌ನಲ್ಲಿ ಬ್ಯುಸಿಯಾಗಿರುವ ಈ ಸಿನಿಮಾ ಅತೀ ಶೀಘ್ರದಲ್ಲಿಯೇ ರಿಲೀಸ್ ಡೇಟ್ ಅನೌನ್ಸ್ ಮಾಡಲಿದೆ.

More from Filmibeat

English summary
Gurunandan starrer Raju James Bond Movie teaser released in canada Niagara falls. Raju James Bond has started in 2019, now movie in post production phase.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X