twitter
    For Quick Alerts
    ALLOW NOTIFICATIONS  
    For Daily Alerts

    ದರಿದ್ರ ಕನ್ನಡ ಚಿತ್ರಗಳು ಯಾವ್ನಿಗೆ ಬೇಕು, ಗೋವಿಂದ ರಾವ್

    |

    ಬುದ್ದಿಜೀವಿ,ಖ್ಯಾತ ರಂಗಕರ್ಮಿ ಮತ್ತು ಚಲನಚಿತ್ರ ನಟ ಪ್ರೊ.ಗೋವಿಂದ ರಾವ್ ತಮ್ಮ ವಸ್ತುನಿಷ್ಠ, ನೇರಾನೇರ ಮಾತುಗಳಿಂದ ಅಭಿಮಾನಿಗಳಿಗಿಂತ ಹೆಚ್ಚಾಗಿ ವಿರೋಧಿಗಳನ್ನೇ ಕಟ್ಟಿಕೊಂಡವರು.

    ಮೂಢನಂಬಿಕೆ ವಿರುದ್ದ, ನಕ್ಸಲರ ಪರ ಧ್ವನಿ ಎತ್ತುವ ಗೋವಿಂದ ರಾವ್ ಮಾಧ್ವ ಪೀಠಾಧಿಪತಿಗಳನ್ನು, ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿಯನ್ನು ಟೀಕಿಸುವ ಯಾವುದೇ ಸನ್ನಿವೇಶಗಳನ್ನು ಬಿಟ್ಟುಕೊಟ್ಟಿಲ್ಲ.

    ಈಗ ಬರುತ್ತಿರುವ ದರಿದ್ರ ಕನ್ನಡ ಚಿತ್ರವನ್ನು ಚಿತ್ರಮಂದಿರಕ್ಕೆ ಹೋಗಿ ಯಾವನು ನೋಡುತ್ತಾರೆ. ಹೆಚ್ಚಾಗಿ ಕನ್ನಡ ಚಿತ್ರ ಪ್ರದರ್ಶಿಸುವ ಚಿತ್ರಮಂದಿರಗಳು ಬಾಗಿಲು ಹಾಕುತ್ತಿವೆ ಎನ್ನುವ ವಿಷಯ ತಿಳಿದಾಗ ಸಂತೋಷ ಪಡುತ್ತಿದ್ದೇನೆಂದು ಗೋವಿಂದ ರಾವ್ ಹೇಳಿದ್ದಾರೆ.

    ನಗರದ ನಯನ ಸಭಾಂಗಣದಲ್ಲಿ ಶನಿವಾರ (ಡಿ 21) ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದ ಗೋವಿಂದ ರಾವ್, ಗಾಂಧಿನಗರದಲ್ಲಿ ಈಗ ಬರುತ್ತಿರುವ ದರಿದ್ರ ಕನ್ನಡ ಚಿತ್ರಗಳನ್ನು ನೋಡಲು ಅಸಹ್ಯವಾಗುತ್ತದೆ. ನೂರಾರು ರೂಪಾಯಿ ಖರ್ಚು ಮಾಡಿ ಇಂತಹ ಕನ್ನಡ ಚಿತ್ರ ನೋಡಲು ಯಾರು ಹೋಗುತ್ತಾರೆ.

    ಎರಡು ಮೂರು ತಿಂಗಳು ಬಿಟ್ಟರೆ ಟಿವಿಯಲ್ಲೇ ಸಿನಿಮಾ ಪ್ರಸಾರವಾಗುತ್ತದೆ. ಕಡ್ಲೆಪುರಿ ತಿಂದುಕೊಂಡು ಮನೆಯಲ್ಲೇ ಚಿತ್ರ ವೀಕ್ಷಿಸಬಹುದು ಎಂದು ಗೋವಿಂದರಾವ್ ಅಭಿಪ್ರಾಯ ಪಟ್ಟಿದ್ದಾರೆ.

    ಹಲವು ಧಾರವಾಹಿಗಳಲ್ಲೂ ನಟಿಸಿರುವ ಗೋವಿಂದ ರಾವ್, ಈಗ ಬರುತ್ತಿರುವ ಧಾರವಾಹಿಗಳ ಗುಣಮಟ್ಟ ಅಭಿರುಚಿಯಿಂದ ಕೂಡಿಲ್ಲ. ನೋಡಲು ಯೋಗ್ಯವಾದುದಲ್ಲ ಎಂದು ವಿಷಾದದಿಂದ ಅಭಿಪ್ರಾಯ ಪಟ್ಟಿದ್ದಾರೆ.

    ಮೋದಿಯನ್ನು ಏಕವಚನದಲ್ಲಿ ತರಾಟೆಗೆ ತೆಗೆದುಕೊಂಡ ಗೋವಿಂದ ರಾವ್, ಸ್ಲೈಡಿನಲ್ಲಿ....

    ನರೇಂದ್ರ ಮೋದಿ

    ನರೇಂದ್ರ ಮೋದಿ

    ಬಿಜೆಪಿ ಪ್ರಧಾನಿ ಅಭ್ಯರ್ಥಿ ಮೋದಿ ಸಭೆಗೆ ಜನ ಯಾಕೆ ಸೇರುತ್ತಿದ್ದಾರೆಂದು ಅರ್ಥವಾಗುತ್ತಿಲ್ಲ. ಅವನ ಅಭಿವೃದ್ದಿ ಮಂತ್ರಕ್ಕೆ ನನ್ನ ಸಹಮತವಿಲ್ಲ. ಗೋಧ್ರಾ ಹತ್ಯಾಕಾಂಡ ರೂವಾರಿಯಾದ ಆತನನ್ನು ಮರೆಯುಲು ಹೇಗೆ ಸಾಧ್ಯ?

    ಗೋವಿಂದ ರಾವ್

    ಗೋವಿಂದ ರಾವ್

    ಮೋದಿಯ ವಿರುದ್ದ ಏಕವಚನದಲ್ಲಿ ಹರಿಹಾಯ್ದ ರಾವ್, ಪ್ರಧಾನಿ ಪಟ್ಟದ ಕನಸು ಹೊತ್ತಿರುವ ಮೋದಿಯ ಆಡಳಿತ ಶೈಲಿ ನನಗೆ ಹಿಡಿಸುವುದಿಲ್ಲ. ಬರೀ ಮೆಟ್ರೋ, ಮೇಲ್ಸೇತುವೆ ಕಟ್ಟಿದರೆ ಮೋದಿ ಅಭಿವೃದ್ದಿ ಅಂದು ಕೊಂಡಿದ್ದಾನೆ. ದಲಿತರು, ಅಲ್ಪಸಂಖ್ಯಾತರನ್ನು ಕಂಡಾಗ ಅವನು ಹೇಗೆ ಸ್ಪಂಧಿಸುತ್ತಾನೆ ಎನ್ನುವುದು ಇಲ್ಲಿ ಮುಖ್ಯ.

    ರವಿಶಂಕರ್ ಸಮಾಜಘಾತುಕ

    ರವಿಶಂಕರ್ ಸಮಾಜಘಾತುಕ

    ರವಿಶಂಕರ್ ತಮ್ಮ ಆಶ್ರಮದಲ್ಲಿ ದೇಶದ್ರೋಹಿಗಳನ್ನು ಸೃಷ್ಟಿಸುತ್ತಿದ್ದಾರೆ. ಬಡವರ, ಸರಕಾರಿ ಭೂಮಿಯನ್ನು ಕೊಳ್ಳೆ ಹೊಡೆಯುವ ನಕಲಿಸ್ವಾಮಿಯೇ ರವಿಶಂಕರ್ ಎಂದು ಗೋವಿಂದ ರಾವ್ ಈ ಹಿಂದೆ ಆರೋಪಿಸಿದ್ದರು.

    ಮಾಧ್ವ ತರುಣಿಯರನ್ನು ಮದುವೆ ಮಾಡಿಸಿ ಕೊಡಿ

    ಮಾಧ್ವ ತರುಣಿಯರನ್ನು ಮದುವೆ ಮಾಡಿಸಿ ಕೊಡಿ

    ಕುರುಬರಿಗೂ ವೈಷ್ಣವ ದೀಕ್ಷೆ ನೀಡಲು ಸಿದ್ದ ಎನ್ನುತ್ತಿರುವ ಪೇಜಾವರರು, ಕುರುಬ ಸಮುದಾಯದ ಯುವಕರಿಗೆ ಮಾಧ್ವ ಬ್ರಾಹ್ಮಣ ಕುಟುಂಬದ ಹೆಣ್ಣುಮಕ್ಕಳನ್ನು ಮದುವೆ ಮಾಡಿಕೊಡಲು ಸಿದ್ದರಿದ್ದಾರೆಯೇ ಎಂದು ಗೋವಿಂದ ರಾವ ಸವಾಲೆಸಿದಿದ್ದರು.

    ಕಿಮ್ಮನೆ ರತ್ನಾಕರ

    ಕಿಮ್ಮನೆ ರತ್ನಾಕರ

    ಮಲೆನಾಡಿನಲ್ಲಿ ಹುಟ್ಟಿದ ಮೇಲೆ ಒಳ್ಳೆಯವರಾಗದೇ ಇರಲು ಹೇಗೆ ಸಾಧ್ಯ? ಕಿಮ್ಮನೆ ರತ್ನಾಕರ ಒಳ್ಳೆಯ ವ್ಯಕ್ತಿತ್ವ ಉಳ್ಳವರು. ಸಮಾಜದಲ್ಲಿ ಬದಲಾವಣೆ ತರಲು ಸಾವಿರಾರು ಜನ ಬೇಕಾಗಿಲ್ಲ, ಕಿಮ್ಮನೆಯವರಂತಹ ಒಳ್ಳೆಯ ಮನುಷ್ಯರಿದ್ದರೆ ಸಾಕು.

    ಮಡೆಸ್ನಾನ

    ಮಡೆಸ್ನಾನ

    ಮೇಲು, ಕೀಳು ಎಂಬ ಭಾವನೆಯನ್ನು ಚಾಲ್ತಿಯಲ್ಲಿಡುವ ಹುನ್ನಾರವೇ ಮಡೆಸ್ನಾನ. ನಂಬಿಕೆಯ ಹೆಸರಿನಲ್ಲಿ ಎಂಜಲೆಲೆಯ ಮೇಲೆ ಉರುಳಾಡುವ ಆಚರಣೆಯನ್ನು ಚರಂಡಿಗೆ ಎಸೆಯಬೇಕು.

    English summary
    Happy to see Kannada screening theaters closing, Prof G K Govinda Rao
    Sunday, December 22, 2013, 21:26
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X