'ಹರಿಕಥೆ ಅಲ್ಲ ಗಿರಿಕಥೆ' ನಟಿ ತಪಸ್ವಿನಿ ಪೂಣಚ್ಚ 'ಗಜರಾಮ'ಗೆ ನಾಯಕಿ!
ಸ್ಯಾಂಡಲ್‌ವುಡ್‌ನ ಹ್ಯಾಂಡ್‌ಸಮ್ ಹೀರೊ ರಾಜವರ್ಧನ್ ಹೊಸ ಸಿನಿಮಾ ಸೆಟ್ಟೇರಲು ಸಜ್ಜಾಗಿದೆ. ಈಗಾಗಲೇ 'ಬಿಚ್ಚುಗತ್ತಿ' ಸಿನಿಮಾ ಮೂಲಕ ಮ್ಯಾಸಿವ್ ಸ್ಟಾರ್ ಆಗಿ ಹೊರಹೊಮ್ಮಿರೋ ನಟ. ಸದ್ಯ 'ಗಜರಾಮ'ನಾಗಿ ಅಖಾಡಕ್ಕೆ ಇಳಿಯಲು ರಾಜವರ್ಧನ್ ಸಜ್ಜಾಗಿ ನಿಂತಿದ್ದಾರೆ.
ರಾಜವರ್ಧನ್‌ಗೆ ಹೀರೊಯಿನ್ ಆಗಿ ಕೊಡಗಿನ ಕುವರಿ ತಪಸ್ವಿನಿ ಪೂಣಚ್ಚ ನಟಿಸುತ್ತಿದ್ದಾರೆ. ಈಗಾಗಲೇ ರಿಷಬ್ ಶೆಟ್ಟಿ ಅಭಿನಯದ 'ಹರಿಕಥೆ ಅಲ್ಲ ಗಿರಿಕಥೆ' ಸಿನಿಮಾದಲ್ಲಿ ತಪಸ್ವಿನಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಅದೇ ನಟಿಯ ಎರಡನೇ ಸಿನಿಮಾವಿದು.

ಯುವ ನಿರ್ದೇಶಕ ಸುನೀಲ್ ಕುಮಾರ್ ಕಥೆ ಕೇಳಿ ನಟ ರಾಜವರ್ಧನ್ ಗ್ರೀನ್ ಸಿಗ್ನಲ್ ಕೊಡುವಂತೆ ಮಾಡಿದೆ. 'ಗಜರಾಮ' ಸಿನಿಮಾದ ಫಸ್ಟ್ ಲುಕ್ ಪೋಸ್ಟರ್ ಮೂಲಕ ಈಗಾಗಲೇ ಸಿನಿಪ್ರಿಯರಿಗೆ ಕಿಕ್ ಕೊಟ್ಟಾಗಿದೆ. ಈಗ 'ಗಜರಾಮ'ನಿಗೆ ನಾಯಕಿಯೂ ಕೂಡ ಸಿಕ್ಕಿದ್ದಾಗಿದೆ.
'ಹರಿಕಥೆ ಅಲ್ಲ ಗಿರಿಕಥೆ' ಚಿತ್ರಕ್ಕೆ ನಾನು ಸೆಲೆಕ್ಟ್ ಆಗಿದ್ದೇ ಆಕಸ್ಮಿಕವಾಗಿ. ಸಿನಿಮಾ ಇಂಡಸ್ಟ್ರಿಗೆ ಬರಬೇಕು ಅನ್ನೋದು ನನ್ನ ಉದ್ದೇಶ ಆಗಿರಲಿಲ್ಲ. ಆದರೆ ಇನ್‌ಸ್ಟಾಗ್ರಾಂನಲ್ಲಿ ನನ್ನದೊಂದು ಫೋಟೊ ನೋಡಿ ಚಿತ್ರತಂಡ ನನ್ನನ್ನು ಸಂಪರ್ಕ ಮಾಡಿತ್ತು. ಕಥೆ ಕೇಳಿ ಇಷ್ಟ ಆಯ್ತು ಒಪ್ಪಿಕೊಂಡೆ. ಇದೀಗ 'ಗಜರಾಮ' ಸಿನಿಮಾ ಅವಕಾಶ ಸಿಕ್ಕಿದೆ. 'ಹರಿಕಥೆ ಅಲ್ಲ ಗಿರಿಕಥೆ' ಚಿತ್ರದ ಬಳಿಕ ಸಾಕಷ್ಟು ಸಿನಿಮಾ ಆಫರ್ ಬರ್ತಿದೆ. ಆದರೆ 'ಗಜರಾಮ' ಸಿನಿಮಾ ಪಾತ್ರ ತುಂಬಾನೇ ಇಷ್ಟ ಆಯ್ತು. ಹಳ್ಳಿ ಹುಡುಗಿ ಪಾತ್ರದಲ್ಲಿ ನಾನು ಕಾಣಿಸಿಕೊಳ್ಳುತ್ತಿದ್ದೇನೆ" ಎಂದು ಪಾತ್ರದ ಬಗ್ಗೆ ಮಾಹಿತಿ ಬಿಟ್ಟುಕೊಟ್ಟಿದ್ದಾರೆ ನಟಿ ತಪಸ್ವಿನಿ ಪೂಣಚ್ಚ.
'ಗಜರಾಮ' ಸಿನಿಮಾದ ನಿರ್ದೇಶಕ ಸುನೀಲ್ ಕುಮಾರ್ ಈಗಾಗಲೇ ಸಾಕಷ್ಟು ಸಿನಿಮಾಗಳಲ್ಲಿ ಡೈರೆಕ್ಷನ್ ಡಿಪಾರ್ಟ್‌ಮೆಂಟ್‌ನಲ್ಲಿ ದುಡಿದಿದ್ದಾರೆ. ಈಗ 'ಗಜರಾಜ' ಸಿನಿಮಾ ಮೂಲಕ ಸ್ವತಂತ್ರ ನಿರ್ದೇಶಕರಾಗಿ ಬಡ್ತಿ ಪಡೆದಿದ್ದಾರೆ. ಆಕ್ಷನ್ ಮಾಸ್ ಎಂಟಟೈನರ್ ಕಥೆ ಇರೋ ಈ ಸಿನಿಮಾಗೆ ಮನೋಮೂರ್ತಿ ಸಂಗೀತ ನೀಡುತ್ತಿದ್ದಾರೆ. ಕೆ.ಎಸ್.ಚಂದ್ರಶೇಖರ್ ಛಾಯಾಗ್ರಾಹಣ ಮಾಡುತ್ತಿದ್ದಾರೆ.

ಜ್ಞಾನೇಶ್ ಬಿ ಮಠದ್ ಸಂಕಲನ, ಧನಂಜಯ್ ನೃತ್ಯ ನಿರ್ದೇಶನ, ಚಿನ್ಮಯ್ ಭಾವಿಕೆರೆ, ಜಯಂತ್ ಕಾಯ್ಕಿಣಿ ಸಾಹಿತ್ಯವಿದೆ. ನರಸಿಂಹ ಮೂರ್ತಿ ಈ ಸಿನಿಮಾವನ್ನು ನಿರ್ಮಾಣ ಮಾಡುತ್ತಿದ್ದು, ಮಲ್ಲಿಕಾರ್ಜುನ್ ಕಾಶಿ ಮತ್ತು ಝವೀಯರ್ ಫರ್ನಾಂಡಿಸ್ ಕೂಡ ನಿರ್ಮಾಣದ ಜವಾಬ್ದಾರಿ ಹೊತ್ತುಕೊಂಡಿದ್ದಾರೆ. ಈ ತಿಂಗಳ ಅಂತ್ಯಕ್ಕೆ ಸಿನಿಮಾ ಸೆಟ್ಟೇರಲಿದೆ.


Click it and Unblock the Notifications











