For Quick Alerts
  ALLOW NOTIFICATIONS  
  For Daily Alerts

  ಆಸ್ಟ್ರಿಯಾ ಅಂತಾರಾಷ್ಟ್ರೀಯ ಚಿತ್ರೋತ್ಸವಕ್ಕೆ ಹರಿಪ್ರಿಯಾ ಅಭಿನಯದ 'ಅಮೃತಮತಿ' ಆಯ್ಕೆ

  |

  ನಟಿ ಹರಿಪ್ರಿಯಾ ಮುಖ್ಯ ಪಾತ್ರದಲ್ಲಿ ನಟಿಸಿರುವ ಬರಗೂರು ರಾಮಚಂದ್ರಪ್ಪ ನಿರ್ದೇಶನದ 'ಅಮೃತಮತಿ' ಚಿತ್ರವು ಆಸ್ಟ್ರಿಯಾ ಅಂತಾರಾಷ್ಟ್ರೀಯ ಚಿತ್ರೋತ್ಸವಕ್ಕೆ ಆಯ್ಕೆಯಾಗಿದೆ.

  ಅಣ್ಣ ಬಿಟ್ಟುಹೋದ ಚಿತ್ರಗಳ ಬೆಂಬಲಕ್ಕೆ ನಿಂತ ಧ್ರುವಸರ್ಜಾ | Dhruva Sarja to dub Chiru movies

  ಕೊರೊನಾ ವೈರಸ್ ಕಾರಣದಿಂದ ಜಗತ್ತಿನಾದ್ಯಂತ ಪ್ರಮುಖ ಚಿತ್ರೋತ್ಸವಗಳು ಮುಂದಕ್ಕೆ ಹೋಗಿವೆ. ಇನ್ನು ಕೆಲವು ರದ್ದಾಗಿವೆ. ಈ ನಡುವೆ ಕೆಲವು ಚಿತ್ರೋತ್ಸವಗಳನ್ನು ಆನ್‌ಲೈನ್ ಮೂಲಕವೇ ನಡೆಸಲು ಉದ್ದೇಶಿಸಲಾಗುತ್ತಿದೆ. ಆಸ್ಟ್ರಿಯಾ ಅಂತಾರಾಷ್ಟ್ರೀಯ ಚಿತ್ರೋತ್ಸವ ಕೂಡ ಆನ್‌ಲೈನ್‌ನಲ್ಲಿ ನಡೆಯಲಿದ್ದು, ಅದರಲ್ಲಿ ಅಮೃತಮತಿ ಪ್ರದರ್ಶನಗೊಳ್ಳಲಿದೆ.

  ಚಿರು ಯಾವತ್ತೂ ಚಿರಂಜೀವಿನೇ...: ಹರಿಪ್ರಿಯಾ ಭಾವುಕ ಮಾತುಚಿರು ಯಾವತ್ತೂ ಚಿರಂಜೀವಿನೇ...: ಹರಿಪ್ರಿಯಾ ಭಾವುಕ ಮಾತು

  ಜುಲೈ 22 ರಿಂದ ಆಗಸ್ಟ್ 5ರವರೆಗೆ ಆನ್‌ಲೈನ್ ಸ್ಕ್ರೀನಿಂಗ್ ಮೂಲಕ ಚಿತ್ರೋತ್ಸವ ನಡೆಯಲಿದೆ. ಚಿತ್ರೋತ್ಸವಗಳಲ್ಲಿ ಸಾಮಾನ್ಯವಾಗಿ ಇರುವಂತೆ ವಿವಿಧ ವಿಭಾಗ ಮತ್ತು ಸ್ಪರ್ಧೆಗಳೂ ಇರಲಿವೆ. ಮುಂದೆ ವಿಶೇಷ ಸಮಾರಂಭವನ್ನು ಆಯೋಜಿಸಿ ಸ್ಪರ್ಧೆಯ ಫಲಿತಾಂಶ ಪ್ರಕಟಿಸಲಾಗುತ್ತದೆ.

  'ಅಮೃತಮತಿ' ಈ ಹಿಂದೆ ನೋಯ್ಡಾ ವಿಶ್ವ ಚಿತ್ರೋತ್ಸವಕ್ಕೆ ಆಯ್ಕೆಯಾಗಿತ್ತು. ಅದರಲ್ಲಿ ಹರಿಪ್ರಿಯಾ ಅವರಿಗೆ ಅತ್ಯುತ್ತಮ ನಟಿ ಪ್ರಶಸ್ತಿ ಒಲಿದಿತ್ತು. ಈಗ ಮತ್ತೊಂದು ಪ್ರಮುಖ ಚಿತ್ರೋತ್ಸವಕ್ಕೆ 'ಅಮೃತಮತಿ' ಆಯ್ಕೆಯಾಗಿದೆ.

  ಚಿರು ಇನ್ನಿಲ್ಲ ಎಂಬ ಕಹಿ ಸಂಗತಿಯನ್ನು ವೈದ್ಯರು ಮೊದಲು ತಿಳಿಸಿದ್ದು ಈ ನಿರ್ದೇಶಕರಿಗೆ...ಚಿರು ಇನ್ನಿಲ್ಲ ಎಂಬ ಕಹಿ ಸಂಗತಿಯನ್ನು ವೈದ್ಯರು ಮೊದಲು ತಿಳಿಸಿದ್ದು ಈ ನಿರ್ದೇಶಕರಿಗೆ...

  13ನೇ ಶತಮಾನದ ಖ್ಯಾತ ಕವಿ ರನ್ನ ರಚಿಸಿದ 'ಯಶೋಧರ ಚರಿತೆ' ಕಾವ್ಯವನ್ನು ಆಧರಿಸಿದ ಸಿನಿಮಾ ಇದಾಗಿದೆ. ಪುಟ್ಟಣ್ಣ ಪ್ರೊಡಕ್ಷನ್ಸ್ ನಿರ್ಮಾಣ ಮಾಡಿದೆ. ಯಶೋಧರನ ಪಾತ್ರದಲ್ಲಿ ನಟ ಕಿಶೋರ್ ಅಭಿನಯಿಸಿದ್ದಾರೆ. ಸುಂದರ್ ರಾಜ್, ಪ್ರಮೀಳಾ ಜೋಷಾಯ್, ವತ್ಸಲಾ ಮೋಹನ್, ತಿಲಕ್, ಸುಪ್ರಿಯಾ ರಾವ್ ಮುಂತಾದವರು ನಟಿಸಿದ್ದಾರೆ. ಶಮಿತಾ ಮಲ್ನಾಡ್ ಸಂಗೀತ ನೀಡಿದ್ದಾರೆ.

  English summary
  Haripriya starring, Baraguru Ramachandarappa directed Amruthamathi will be screened at Austria International Film Festival.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X