ಸದ್ದಿಲ್ಲದೆ ಸಿನಿಮಾ ಚಿತ್ರೀಕರಣ ಮುಗಿಸಿದ ಹರ್ಷಿಕಾ
'ಚಿಟ್ಟೆ' ಸಿನಿಮಾದಲ್ಲಿ ವಿಭಿನ್ನ ಪಾತ್ರವನ್ನು ನಿರ್ವಹಿಸಿ ಪ್ರೇಕ್ಷಕರ ಗಮನ ಸೆಳೆದಿದ್ದ ನಟಿ ಹರ್ಷಿಕಾ ಪೂಣಚ್ಚ ಮುಂದೆ ಯಾವ ಚಿತ್ರದಲ್ಲಿ ಕಾಣಿಸಿಕೊಳ್ಳುತ್ತಾರೆ, ಎನ್ನುವ ಕುತೂಹಲ ಅನೇಕರಲ್ಲಿ ಇತ್ತು. ಆದರೆ ಯಾವುದೇ ಸುಳಿವು ನೀಡದೇ ಹರ್ಷಿಕಾ ತಮ್ಮ ಮುಂದಿನ ಸಿನಿಮಾದ ಚಿತ್ರೀಕರಣ ಕಂಪ್ಲೀಟ್ ಮಾಡಿದ್ದಾರೆ.
ಕನ್ನಡ ಚಿತ್ರರಂಗದ ಹಿರಿಯ ನಿರ್ದೇಶಕ ಸುನೀಲ್ ಕುಮಾರ್ ದೇಸಾಯಿ ಆಕ್ಷನ್-ಕಟ್ ಹೇಳುತ್ತಿರುವ 'ಉದ್ಘರ್ಷ' ಸಿನಿಮಾದಲ್ಲಿ ಹರ್ಷಿಕಾ ಪ್ರಮುಖ ಪಾತ್ರವನ್ನು ಮಾಡಿದ್ದಾರೆ. ವಿಶೇಷ ಎಂದರೆ ಈ ಹಿಂದೆ ತಮ್ಮ ವೃತ್ತಿ ಜೀವನದಲ್ಲಿ ಎಂದೂ ಕಾಣಿಸಿಕೊಳ್ಳದಷ್ಟು ಬೋಲ್ಡ್ ಆಗಿ ಹರ್ಷಿಕಾ ಈ ಚಿತ್ರದಲ್ಲಿ ಅಭಿನಯಿಸಿದ್ದಾರಂತೆ.

ಹರ್ಷಿಕಾ ಪೂಣಚ್ಚ ಜೊತೆ ಫೇಮಸ್ ಆದ ಲಿಟಲ್ ಸ್ಟಾರ್
ಕಾಸ್ಟ್ಯೂಮ್, ಡೈಲಾಗ್ ಮತ್ತು ವ್ಯಕ್ತಿತ್ವ, ಈ ಮೂರೂ ವಿಚಾರದಲ್ಲಿಯೂ ಹರ್ಷಿಕಾ ಬೋಲ್ಡ್ ಆಗಿ ಆಕ್ಟ್ ಮಾಡಿದ್ದಾರಂತೆ. ಕಥೆ ಕೇಳಿದ ಕೆಲವೇ ಗಂಟೆಗಳಲ್ಲಿ ಹರ್ಷಿಕಾ ಚಿತ್ರದಲ್ಲಿ ಅಭಿನಯ ಮಾಡಲು ಗ್ರೀನ್ ಸಿಗ್ನಲ್ ನೀಡಿದರಂತೆ. ನಿರ್ದೇಶಕರ ಮೇಲಿನ ನಂಬಿಕೆಯೇ ಚಿತ್ರದಲ್ಲಿ ಅಭಿನಯಿಸಲು ನಿರ್ಧಾರ ಮಾಡುವಂತೆ ಮಾಡಿತು ಎನ್ನುವುದು ಹರ್ಷಿಕಾ ಅವರ ಮಾತು.

'ಉದ್ಘರ್ಷ' ಶೀರ್ಷಿಕೆಯೇ ಹೇಳುವಂತೆ ಪಕ್ಕಾ ಥ್ರಿಲ್ಲರ್ ಸಿನಿಮಾ. ಇದೇ ಮೊದಲ ಬಾರಿಗೆ ಹರ್ಷಿಕಾ ಪೂರ್ಣಪ್ರಮಾಣದ ಥ್ರಿಲ್ಲರ್ ಸಿನಿಮಾದಲ್ಲಿ ಅಭಿನಯಿಸಿದ್ದಾರೆ. ಹರ್ಷಿಕಾ ಜೊಡಿಯಾಗಿ ಜೋಡಿಯಾಗಿ 'ಸಿಂಗಂ 3' ಖ್ಯಾತಿಯ ಅನೂಪ್ ಠಾಕೂರ್ ಸಿಂಗ್ ನಟಿಸಿದ್ದಾರೆ.


Click it and Unblock the Notifications