'ಹೆಡ್ ಬುಷ್' ರಿಲೀಸ್ ಬಳಿಕ 'ಕಾಂತಾರ' ವೀಕ್ಷಿಸಿದ ಡಾಲಿ ಈಗ ರಿಷಬ್ ಶೆಟ್ಟಿಯ ಅಭಿಮಾನಿ!
'ಕಾಂತಾರ' ಸಿನಿಮಾ ನೋಡಿ ಬಂದವರು ಇನ್ನೂ ಆ ಗುಂಗಿನಲ್ಲೇ ಇದ್ದಾರೆ. ಈ ಗುಂಗಿನಿಂದ ಹೊರಬರೋಕೆ ಪ್ರಯತ್ನ ಪಡುತ್ತಿದ್ದಾರೆ. ಅತ್ತ ಬೇರೆ ಭಾಷೆಯ ಸೆಲೆಬ್ರೆಟಿಗಳು ಕೂಡ 'ಕಾಂತಾರ' ಸಿನಿಮಾ ನೋಡಿ ಮೆಚ್ಚುಗೆ ಶಾಕ್ ಆಗಿದ್ದಾರೆ.
ಇತ್ತೀಚೆಗೆ ಬಾಲಿವುಡ್ ನಟಿ ಕಂಗನಾ ರಣಾವತ್, 'ದಿ ಕಾಶ್ಮೀರ್ ಫೈಲ್ಸ್' ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ಸಿನಿಮಾ ನೋಡಿ ಸಿನಿಮಾವನ್ನು ಹಾಡಿ ಹೊಗಳಿದ್ದಾರೆ. ಹಿಂದಿ, ತೆಲುಗು, ತಮಿಳು ಹಾಗೂ ಮಲಯಾಳಂ ಭಾಷೆಯಲ್ಲೂ ಈ ಸಿನಿಮಾಗೆ ಮೆಚ್ಚುಗೆ ವ್ಯಕ್ತವಾಗುತ್ತಿದೆ.
ಇತ್ತ 'ಹೆಡ್ ಬುಡ್' ಸಿನಿಮಾ ಪ್ರಚಾರದಲ್ಲಿ ಬ್ಯುಸಿಯಾಗಿರೋ ಡಾಲಿ ಧನಂಜಯ್ ಕೂಡ 'ಕಾಂತಾರ' ಸಿನಿಮಾ ವೀಕ್ಷಿಸಿದ್ದಾರೆ. ಸಿನಿಮಾ ತೆರೆಕಂಡು ಹೆಚ್ಚು ಕಡಿಮೆ ಒಂದು ತಿಂಗಳಾಗುತ್ತಿದೆ. ಈಗ ಸಿನಿಮಾ ವೀಕ್ಷಿಸಿದ್ದಾರೆ. ಇದಕ್ಕೆ ಕಾರಣವೇನು? ಅನ್ನೋದನ್ನೂ ತಿಳಿಸಿದ್ದಾರೆ. ಹಾಗೇ ರಿಷಬ್ ಶೆಟ್ಟಿ ಬಗ್ಗೆನೂ ಮೆಚ್ಚುಗೆ ಸೂಚಿಸಿದ್ದಾರೆ.

ಮೂರು ವಾರಗಳ 'ಕಾಂತಾರ' ವೀಕ್ಷಿಸಿದ ಡಾಲಿ
ರಿಷಬ್ ಶೆಟ್ಟಿ ಸಿನಿಮಾದ ಅಬ್ಬರ ಇನ್ನೂ ನಿಂತಿಲ್ಲ. ದೇಶ-ವಿದೇಶದಲ್ಲಿ 'ಕಾಂತಾರ' ಸಿನಿಮಾ ನೋಡುವುದಕ್ಕೆ ಕ್ಯೂನಲ್ಲಿ ನಿಂತಿರೋ ದೃಶ್ಯಗಳು ಕಾಣುವುದಕ್ಕೆ ಸಿಗುತ್ತಿದೆ. 'ಕಾಂತಾರ' ಎಲ್ಲೆಲ್ಲಿ ರಿಲೀಸ್ ಆಗಿದೆಯೋ ಅಲ್ಲೆಲ್ಲಾ ಸಿನಿಮಾಗೆ ಪಾಸಿಟಿವ್ ರೆಸ್ಪಾನ್ಸ್ ಸಿಗುತ್ತಿದೆ. ಬಾಕ್ಸಾಫೀಸ್‌ನಲ್ಲೂ ಹೊಸ ಹೊಸ ದಾಖಲೆಗಳನ್ನು ಸೃಷ್ಟಿಸುತ್ತಾ ಮುನ್ನುಗ್ಗುತ್ತಿದೆ. ಈ ಮಧ್ಯೆ ಡಾಲಿ ಧನಂಜಯ್ 'ಕಾಂತಾರ' ಸಿನಿಮಾವನ್ನು ವೀಕ್ಷಿಸಿದ್ದಾರೆ. ಜೊತೆಗೆ ಸಿನಿಮಾವನ್ನು ತಡವಾಗಿ ವೀಕ್ಷಿಸಲು ಕಾರಣವೇನು? ಅನ್ನೋದನ್ನೂ ತಿಳಿಸಿದ್ದಾರೆ.

'ಕಾಂತಾರ' ಸಿನಿಮಾ ಬಗ್ಗೆ ಡಾಲಿ ಹೇಳಿದ್ದೇನು?
ಡಾಲಿ ಧನಂಜಯ್ 'ಕಾಂತಾರ' ಸಿನಿಮಾ ನೋಡಿದ ಬಳಿಕ ಟ್ವೀಟ್ ಮಾಡಿದ್ದಾರೆ. "ಕಾಂತಾರ ನನ್ನ ಹೆಡ್ ಬುಷ್ ಸಿನಿಮಾದ ನಡುವೆ ನೋಡುವುದು ತಡವಾಯಿತು. ಪ್ರೀತಿಯ ಗೆಳೆಯ ರಿಷಬ್ ಒಳಗಿನ ಬರಹಗಾರ, ನಟ ಹಾಗೂ ನಿರ್ದೇಶಕನ ಅಭಿಮಾನಿಯಾದೆ. ಇದು ಎಂತಹ ಅದ್ಭುತ ಅನುಭವ. ಗೆಳತಿ ಸಪ್ತಮಿಯ ಮುಗ್ಧತೆ ಇಷ್ಟವಾಯಿತು. 'ಕಾಂತಾರ' ಖಂಡಿತವಾಗಿಯೂ ನಮ್ಮ ಹೆಮ್ಮೆ. ಕನ್ನಡ ಚಿತ್ರರಂಗದ ಹೆಮ್ಮೆ." ಎಂದು ಡಾಲಿ ಧನಂಜಯ್ ಟ್ವಿಟರ್‌ನಲ್ಲಿ ಬರೆದುಕೊಂಡಿದ್ದಾರೆ.

ಹೊಂಬಾಳೆಗೆ ಪ್ರೀತಿಯ ಅಪ್ಪುಗೆ
'ಕೆಜಿಎಫ್' ಹಾಗೂ 'ಕಾಂತಾರ'ದಂತಹ ಅದ್ಭುತ ಸಿನಿಮಾಗಳನ್ನು ನಿರ್ಮಾಣ ಮಾಡಿರುವ ಹೊಂಬಾಳೆ ಫಿಲ್ಮ್ಸ್ ಸಿನಿಮಾವನ್ನೂ ಹಾಡಿ ಹೊಗಳಿಸಿದ್ದಾರೆ. " ಇಂತಹ ಕಥೆಗಳನ್ನು ಒಪ್ಪಿ, ಅಪ್ಪಿ ಜಗತ್ತಿಗೆ ತಲುಪಿಸುವಂತಹ ನಮ್ಮ ಹೊಂಬಾಳೆ ಫಿಲ್ಮ್ಸ್‌ಗೆ ನನ್ನ ಪ್ರೀತಿಯ ಅಪ್ಪುಗೆ" ಎಂದು ಡಾಲಿ ಧನಂಜಯ್ ಪ್ರತ್ಯೇಕವಾಗಿ ಟ್ವೀಟ್ ಮಾಡಿದ್ದಾರೆ.

'ಕಾಂತಾರ' ನಿಲ್ಲದ ಓಟ
'ಕಾಂತಾರ' ಸಿನಿಮಾ ಕ್ರೇಜ್ ಈಗ ವಿಶ್ವದ ನಾನಾ ದೇಶಗಳಲ್ಲಿ ಹಬ್ಬಿದೆ. ಕನ್ನಡ ಸಿನಿಮಾದ ಮತ್ತೊಂದು ಸಿನಿಮಾ ವಿಶ್ವದ ಸಿನಿಮಾ ದಿಗ್ಗಜರ ಗಮನ ಸೆಳೆಯುವ ಎಲ್ಲಾ ಲಕ್ಷಣಗಳೂ ಇವೆ. ಈಗಾಗಲೇ ಯುಎಸ್‌ಎ ಸೇರಿದಂತೆ ಹಲವು ದೇಶಗಳಲ್ಲಿ 'ಕಾಂತಾರ' ನೋಡುವುದಕ್ಕೆ ಮುಗಿಬೀಳುತ್ತಿದ್ದಾರೆ. ಹೀಗೆ ಕ್ರೇಜ್ ಮುಂದುವರೆದರೆ, 'ಕಾಂತಾರ' ಚಿತ್ರರಂಗದಲ್ಲಿ ಹೊಸ ದಾಖಲೆಗಳನ್ನು ಬರೆಯಬಹುದು.


Click it and Unblock the Notifications











