For Quick Alerts
  ALLOW NOTIFICATIONS  
  For Daily Alerts

  ಹೇಮಂತ್ ರಾವ್-ಪುನೀತ್ ಕಾಂಬಿನೇಷನ್ ಚಿತ್ರಕ್ಕೆ ಹೊಸ ಟೈಟಲ್!

  By Suneel
  |

  ತಮ್ಮ ಮೊದಲ ನಿರ್ದೇಶನದ ಚಿತ್ರ 'ಗೋಧಿ ಬಣ್ಣ ಸಾಧಾರಣ ಮೈಕಟ್ಟು' ಮೂಲಕವೇ ಸ್ಯಾಂಡಲ್ ವುಡ್ ನಲ್ಲಿ ಜನಪ್ರಿಯತೆ ಗಿಟ್ಟಿಸಿಕೊಂಡವರು ಹೇಮಂತ್ ರಾವ್. ಅಲ್ಲದೇ ಚೊಚ್ಚಲ ನಿರ್ದೇಶನದ ಚಿತ್ರಕ್ಕೆ ಹಲವು ಪ್ರಶಸ್ತಿಗಳನ್ನು ಹೇಮಂತ್ ರಾವ್ ಪಡೆದಿದ್ದಾರೆ.[ಪವರ್ ಸ್ಟಾರ್ ಮೊದಲ ಚಿತ್ರಕ್ಕೆ ಆರಂಭದಲ್ಲೇ ವಿಘ್ನ!]

  ಹೇಮಂತ್ ರಾವ್ ಎರಡನೇ ಸಿನಿಮಾ ಮಾಡುವ ತವಕದಲ್ಲಿ ಪುನೀತ್ ರಾಜ್ ಕುಮಾರ್ ಹುಟ್ಟುಹಬ್ಬ ದಿನದಂದು ಚಿತ್ರದ ಟೈಟಲ್ ಮತ್ತು ಪೋಸ್ಟರ್ ಬಿಡುಗಡೆ ಮಾಡಿ ಕುತೂಹಲ ಮೂಡಿಸಿದ್ದರು. ಆದರೆ ಚಿತ್ರದ ಟೈಟಲ್‌ 'ಅರ್ಧಸತ್ಯ' ಹೆಸರನ್ನು ಹೇಮಂತ್ ರಾವ್ ಗೂ ಮೊದಲೇ ಬೇರೆಯವರು ರಿಜಿಸ್ಟರ್ ಮಾಡಿಸಿದ್ದ ಕಾರಣ ಈ ಟೈಟಲ್ ಅನ್ನು ಕೈಬಿಡಲಾಗಿತ್ತು. ಈಗ ತಮ್ಮ ಎರಡನೇ ಚಿತ್ರಕ್ಕೆ ಹೇಮಂತ್ ರಾವ್ ಅಂತಿಮವಾಗಿ ಮತ್ತೊಂದು ಟೈಟಲ್ ಅನ್ನು ಫಿಕ್ಸ್ ಮಾಡಿದ್ದಾರೆ. ಮುಂದೆ ಓದಿರಿ.

  ಹೇಮಂತ್ ರಾವ್ ಎರಡನೇ ಚಿತ್ರದ ಟೈಟಲ್ ಫಿಕ್ಸ್

  ಹೇಮಂತ್ ರಾವ್ ಎರಡನೇ ಚಿತ್ರದ ಟೈಟಲ್ ಫಿಕ್ಸ್

  ಈ ಹಿಂದೆ ನೀಡಿದ್ದ 'ಅರ್ಧಸತ್ಯ' ಹೆಸರು ಬದಲಾಗಿ ಹೇಮಂತ್ ರಾವ್ ಈಗ ತಮ್ಮ ಚಿತ್ರಕ್ಕೆ 'ಕವಲು ದಾರಿ' ಎಂಬ ಹೊಸ ಟೈಟಲ್ ಅಂತಿಮಗೊಳಿಸಿದ್ದಾರೆ. ಈ ಟೈಟಲ್ ಅನ್ನು ಶೀಘ್ರದಲ್ಲೇ ಚಿತ್ರತಂಡ ಅಧಿಕೃತವಾಗಿ ಲಾಂಚ್ ಮಾಡಲಿದೆ.

  'ಅರ್ಧಸತ್ಯ' ಕೈಬಿಡಲು ಕಾರಣವೇನು?

  'ಅರ್ಧಸತ್ಯ' ಕೈಬಿಡಲು ಕಾರಣವೇನು?

  ಹೇಮಂತ್ ರಾವ್ 'ಅರ್ಧಸತ್ಯ' ಟೈಟಲ್ ಪ್ರಕಟಗೊಳಿಸುವ ಮುಂಚೆಯೇ ನಿರ್ಮಾಪಕ ಬಿ. ರಾಮಮೂರ್ತಿ 2011 ರಲ್ಲಿ ಅದೇ ಟೈಟಲ್ ಅನ್ನು ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ರಿಜಿಸ್ಟರ್ ಮಾಡಿಸಿದ್ದರು. ಅಲ್ಲದೇ ರಾಮಮೂರ್ತಿ ರವರ ಈ ಚಿತ್ರದ ಶೂಟಿಂಗ್ ಅಂತಿಮ ಘಟ್ಟ ತಲುಪಿದ್ದು, ಕನ್ನಡ, ತೆಲುಗು, ತಮಿಳಿನಲ್ಲಿ ತಯಾರಾಗುತ್ತಿದೆ. ಆದ್ದರಿಂದ ಹೇಮಂತ್ ರಾವ್ ಈಗ ತಮ್ಮ ಚಿತ್ರಕ್ಕೆ ಹೊಸ ಟೈಟಲ್ ನೀಡಿದ್ದಾರೆ.['ಗೋಧಿ ಬಣ್ಣ' ನಿರ್ದೇಶಕನ ಮುಂದಿನ ಚಿತ್ರದ 'ಅರ್ಧಸತ್ಯ']

  ಹೇಮಂತ್ ಚಿತ್ರದ ಹೀರೋ ಯಾರು?

  ಹೇಮಂತ್ ಚಿತ್ರದ ಹೀರೋ ಯಾರು?

  'ಕವಲು ದಾರಿ' ಚಿತ್ರದಲ್ಲಿ ಸಿಂಪಲ್ ಸುನಿಯ 'ಆಪರೇಷನ್ ಅಲಮೇಲಮ್ಮ' ಚಿತ್ರದಲ್ಲಿ ನಟಿಸಿರುವ ಮನೀಶ್ ರಿಷಿ ರವರು ಚಿತ್ರದ ನಾಯಕ ನಟನಾಗಿ ಬಣ್ಣ ಹಚ್ಚಲಿದ್ದಾರೆ ಎಂದು ತಿಳಿದಿದೆ.

  ಪುನೀತ್ ಮತ್ತು ಹೇಮಂತ್ ರಾವ್ ಕಾಂಬಿನೇಷನ್ ಚಿತ್ರ

  ಪುನೀತ್ ಮತ್ತು ಹೇಮಂತ್ ರಾವ್ ಕಾಂಬಿನೇಷನ್ ಚಿತ್ರ

  ಹೇಮಂತ್ ರಾವ್ ಎರಡನೇ ಚಿತ್ರ 'ಕವಲು ದಾರಿ' ಪುನೀತ್ ರಾಜ್ ಕುಮಾರ್ ರವರ ಹೊಸ ಬ್ಯಾನರ್ ಪಿಆರ್‌ಕೆ ಮತ್ತು ಹೊಂಬಾಳೆ ಫಿಲ್ಮ್ಸ್ ಬ್ಯಾನರ್ ಗಳ ಜಂಟಿ ನಿರ್ಮಾಣದಲ್ಲಿ ಮೂಡಿಬರಲಿದೆ.

  ಶಾಲೆ ನೆನಪುಗಳನ್ನು ಕಾಡಿಸುವ 'ಕವಲು ದಾರಿ'

  ಶಾಲೆ ನೆನಪುಗಳನ್ನು ಕಾಡಿಸುವ 'ಕವಲು ದಾರಿ'

  ಕಥೆ-ಚಿತ್ರಕಥೆ-ಸಂಭಾಷಣೆ ಬರೆದು ಹೇಮಂತ್ ರಾವ್ ನಿರ್ದೇಶನ ಮಾಡಲಿರುವ 'ಕವಲು ದಾರಿ' ಶಾಲಾ ದಿನಗಳ ಹಳೇ ನೆನಪುಗಳನ್ನು ಕುರಿತ ಥ್ರಿಲ್ಲಿಂಗ್ ಚಿತ್ರ. ಚರಣ್ ರಾಜ್ ಸಂಗೀತ ಸಂಯೋಜನೆ ಮತ್ತು ಅದ್ವೈತ ಗುರುಮೂರ್ತಿ ಛಾಯಾಗ್ರಹಣ ಚಿತ್ರಕ್ಕಿದೆ.

  English summary
  'Godhi Banna Sadharana Maikattu' fame director Hemanth Rao's next film, which is being produced by Puneeth Rajakumar has been titled as 'Kavalu Daari'.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X