»   » ಪವರ್ ಸ್ಟಾರ್ ಮೊದಲ ಚಿತ್ರಕ್ಕೆ ಆರಂಭದಲ್ಲೇ ವಿಘ್ನ!

ಪವರ್ ಸ್ಟಾರ್ ಮೊದಲ ಚಿತ್ರಕ್ಕೆ ಆರಂಭದಲ್ಲೇ ವಿಘ್ನ!

Posted By:
Subscribe to Filmibeat Kannada

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ನಿರ್ಮಾಣ ಮಾಡುತ್ತಿರುವ ಮೊದಲ ಚಿತ್ರಕ್ಕೆ ಆರಂಭದಲ್ಲೇ ವಿಘ್ನ ಎದುರಾಗಿದೆ. ಮೊನ್ನೆ ತಾನೆ ಬರ್ತ್ ಡೇ ವಿಶೇಷವಾಗಿ ಪೋಸ್ಟರ್ ಬಿಡುಗಡೆ ಮಾಡಿದ್ದ ಚಿತ್ರತಂಡ, ಈಗ ವಿವಾದ ಕೇಂದ್ರ ಬಿಂದುವಾಗಿದೆ.['ಗೋಧಿ ಬಣ್ಣ' ನಿರ್ದೇಶಕನ ಮುಂದಿನ ಚಿತ್ರದ 'ಅರ್ಧಸತ್ಯ']

ಹೌದು, 'ಗೋಧಿಬಣ್ಣ ಸಾಧಾರಣ ಮೈಕಟ್ಟು' ಚಿತ್ರದ ನಿರ್ದೇಶಕ ಹೇಮಂತ್ ರಾವ್ ನಿರ್ದೇಶನ ಮಾಡುತ್ತಿರುವ 'ಅರ್ಧ ಸತ್ಯ' ಈಗ ಸೆಟ್ಟೇರುವ ಮುನ್ನವೇ ಸಂಕಷ್ಟಕ್ಕೆ ಸಿಲುಕಿದೆ. 'ಅರ್ಧ ಸತ್ಯ' ಚಿತ್ರದ ಫಸ್ಟ್ ಲುಕ್ ರಿವಿಲ್ ಮಾಡಿ ಕುತೂಹಲ ಹುಟ್ಟಿಸಿದ್ದ ಸಿನಿಮಾ, ಈಗ ಟೈಟಲ್ ವಿಚಾರದಲ್ಲಿ ಬಿಸಿಬಿಸಿ ಚರ್ಚೆಯಾಗುತ್ತಿದೆ. ಏನದು 'ಅರ್ಧಸತ್ಯ'ದ ವಿವಾದ ಅಂತ ಮುಂದೆ ಓದಿ.....

'ಅರ್ಧ ಸತ್ಯ'ಕ್ಕೆ ಟೈಟಲ್ ಸಮಸ್ಯೆ!

ಪುನೀತ್ ರಾಜ್ ಕುಮಾರ್ ನಿರ್ಮಾಣ ಹಾಗೂ ಹೇಮಂತ್ ರಾವ್ ನಿರ್ದೇಶನ ಮಾಡುತ್ತಿರುವ 'ಅರ್ಧ ಸತ್ಯ' ಚಿತ್ರಕ್ಕೆ ಟೈಟಲ್ ಸಮಸ್ಯೆ ಎದುರಾಗಿದೆ. ಈಗಾಗಲೇ ಚಿತ್ರತಂಡವೊಂದು ಈ ಟೈಟಲ್ ರಿಜಿಸ್ಟ್ರಾರ್ ಮಾಡಿಸಿ, ಚಿತ್ರೀಕರಣ ಕೂಡ ಮಾಡುತ್ತಿದೆಯಂತೆ. ಹೀಗಾಗಿ, ಪುನೀತ್ ಅವರ 'ಅರ್ಧ ಸತ್ಯ' ಚಿತ್ರ ಸಂಕಷ್ಟ ಸಿಲುಕಿದೆ.

'ಅರ್ಧ ಸತ್ಯ' ಸಿನಿಮಾ ಯಾರದು!

ನಿರ್ಮಾಪಕ ಬಿ. ರಾಮಮೂರ್ತಿ 2011ರಲ್ಲಿ 'ಅರ್ಧ ಸತ್ಯ' ಎಂಬ ಹೆಸರಿನಲ್ಲಿ ಸಿನಿಮಾ ಶುರುಮಾಡಿದ್ದು, ಸದ್ಯ, ಚಿತ್ರೀಕರಣ ಅಂತಿಮ ಘಟ್ಟಕ್ಕೆ ಬಂದಿದೆಯಂತೆ. ಈ ಚಿತ್ರವನ್ನ ತೆಲುಗಿನ ಕಲಾ ನಿರ್ದೇಶಕ ಶಶಿವರ್ಮಾ ನಿರ್ದೇಶನ ಮಾಡುತ್ತಿದ್ದಾರೆ. ವಿಶೇಷ ಅಂದ್ರೆ, ಈ ಸಿನಿಮಾ ಕನ್ನಡ, ತೆಲುಗು, ಮತ್ತು ತಮಿಳಿನಲ್ಲಿ ತಯಾರಾಗುತ್ತಿದೆ.

'ಅರ್ಧ ಸತ್ಯ' ಚಿತ್ರದ ಪೋಸ್ಟರ್ ನೋಡಿ!

ಸಿನಿಮಾ ಶುರುವಾಗಿ ವರ್ಷಗಳೇ ಕಳೆದಿವೆ. ಕೆಲ ಸಮಸ್ಯೆಗಳಿಂದ ತಡವಾಗಿದೆ. ಈಗ ಚಿತ್ರೀಕರಣ ಅಂತಿಮಘಟ್ಟದಲ್ಲಿದ್ದು, ಆದಷ್ಟೂ ಬೇಗ ಬಿಡುಗಡೆ ಮಾಡುವ ತಯಾರಿ ನಡೆಸಿದ್ದಾರಂತೆ ನಿರ್ಮಾಪಕರು.

ನಾಯಕ ಯಾರು ಗೊತ್ತಾ?

ಅಂದ್ಹಾಗೆ, 'ಅರ್ಧ ಸತ್ಯ' ಚಿತ್ರದ ನಾಯಕ ಅಕ್ಷಯ್. ಅಕ್ಷಯ್ ನಿರ್ಮಾಪಕ ಬಿ.ರಾಮಮೂರ್ತಿ ಅವರ ಮಗ. ಚಿತ್ರದಲ್ಲಿ ಅಕ್ಷಯ್ ಗೆ ದಿವ್ಯ ಮತ್ತು ಸಂಜನಾ ಇಬ್ಬರು ನಾಯಕಿಯಾಗಿದ್ದಾರೆ.

ಪುನೀತ್ ಚಿತ್ರಕ್ಕೂ 'ಅರ್ಧ ಸತ್ಯ' ಹೆಸರಿಟ್ಟಿದ್ದೇಕೆ?

ಈಗಾಗಲೇ 'ಅರ್ಧ ಸತ್ಯ' ಎಂಬ ಹೆಸರಿನಲ್ಲಿ ಸಿನಿಮಾವೊಂದು ತಯಾರಿಯಾಗುತ್ತಿರುವಾಗ, ಮತ್ತೆ ಅದೇ ಟೈಟಲ್ ಅನೌನ್ಸ್ ಮಾಡಿದ್ದು ಯಾಕೆ ಎಂಬ ಪ್ರಶ್ನೆ ಈಗ ಗೊಂದಲ ಮೂಡಿಸಿದೆ. ಟೈಟಲ್ ಅನೌನ್ಸ್ ಮಾಡುವ ಮುಂಚೆ ವಾಣಿಜ್ಯ ಮಂಡಳಿಯಲ್ಲಿ ಈ ಬಗ್ಗೆ ವಿಚಾರಿಸಬೇಕು. ಹಾಗಿದ್ದರೂ, ಈ ರೀತಿ ಆಗಲು ಹೇಗೆ ಸಾಧ್ಯ?

ಹೇಮಂತ್ ನಿರ್ದೇಶನದ 'ಅರ್ಧ ಸತ್ಯ' ಪೋಸ್ಟರ್ ನೋಡಿ!

ಇನ್ನೂ ಹೇಮಂತ್ ರಾವ್ ನಿರ್ದೇಶನ ಮಾಡಲಿರುವ 'ಅರ್ಧ ಸತ್ಯ'ದ ಪೋಸ್ಟರ್ ಬಿಡುಗಡೆಯಾಗಿದೆ. ಈ ಚಿತ್ರದಲ್ಲಿ 'ಆಪರೇಷನ್ ಅಲಮೇಲಮ್ಮ' ಖ್ಯಾತಿಯ ಮನೀಶ್ ನಾಯಕನಾಗಿ ಅಭಿನಯಿಸುತ್ತಿದ್ದಾರೆ. ಈ ಚಿತ್ರವನ್ನ ಹೊಂಬಾಳೆ ಫಿಲ್ಮ್ಸ್ ಹಾಗೂ ಪುನೀತ್ ರಾಜ್ ಕುಮಾರ್ ಜಂಟಿಯಾಗಿ ನಿರ್ಮಾಣ ಮಾಡಲಿದ್ದಾರೆ. ಚರಣ್ ರಾಜ್ ಸಂಗೀತ ನೀಡಲಿದ್ದಾರೆ.

ಯಾರ ಪಾಲಿಗೆ 'ಅರ್ಧಸತ್ಯ'?

ಈಗ ಒಂದೇ ಟೈಟಲ್ ನಲ್ಲಿ ಎರಡು ಸಿನಿಮಾ ಶುರುವಾಗಿದೆ. ಆದ್ರೆ, ಈ ಇಬ್ಬರಲ್ಲಿ 'ಅರ್ಧ ಸತ್ಯ' ಯಾರಿಗೆ ಸಿಗಲಿದೆ. ಮೊದಲೇ ನಿಗಧಿಯಾಗಿರುವಂತೆ ಬಿ.ರಾಮಮೂರ್ತಿ ಅವರೇ 'ಅರ್ಧ ಸತ್ಯ' ಸಿನಿಮಾ ಮಾಡಿ ಮುಗಿಸ್ತಾರಾ? ಅಥವಾ ಪುನೀತ್ ರಾಜ್ ಕುಮಾರ್ ನಿರ್ಮಾಣದಲ್ಲಿ ಘೋಷಣೆಯಾಗಿರುವಂತೆ ನಿರ್ದೇಶಕ ಹೇಮಂತ್ ರಾವ್ ಈ ಹೆಸರಿನಲ್ಲಿ ಸಿನಿಮಾ ಮಾಡ್ತಾರಾ ಎಂಬ ಕುತೂಹಲ ಕಾಡುತ್ತಿದೆ.

English summary
'Godhi Banna Sadharana Mykattu' Director Hemanth Rao Released his second Movie 'Ardha Satya' First Poster. Now Ardha Satya Title Faceing Controversy.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada