'ಟಾಕ್ಸಿಕ್' ಒಂದೇನಾ? 'ಶಿವಾಜಿ', 'ರಾಮಾಯಣ', 'ಹನುಮಾನ್' ಕಥೆಯೇನು: ಇವುಗಳಲ್ಲಿ ಯಶ್ ಇರ್ತಾರಾ? ಇಲ್ವಾ?

'ಕೆಜಿಎಫ್ 2' ಬಳಿಕ ರಾಕಿಂಗ್‌ ಸ್ಟಾರ್ ಯಶ್ ಸಿನಿಮಾ ಮಾಡುವುದರಲ್ಲಿ ವಿಳಂಬ ಮಾಡುತ್ತಿದ್ದಾರೆ ಅನ್ನೋ ಅರೋಪ ಚಿತ್ರರಂಗದಲ್ಲಿದೆ. ಇನ್ನೊಂದು ಯಶ್ ಅಭಿಮಾನಿಗಳು 19ನೇ ಸಿನಿಮಾಗೆ ಕಾದು ಕಾದೂ ಸುಸ್ತಾಗಿದ್ದರು. ಇದೆಲ್ಲದಕ್ಕೂ ಯಶ್ ಈಗಾಗಲೇ ತೆರೆ ಎಳೆದಿದ್ದಾರೆ. 19ನೇ ಸಿನಿಮಾದ ಟೈಟಲ್ 'ಟಾಕ್ಸಿಕ್' ಅಂತ ಅನೌನ್ಸ್ ಮಾಡಿದ್ದು ಈಗಾಗಲೇ ಗೊತ್ತಿರೋ ಸಂಗತಿ.

'ಟಾಕ್ಸಿಕ್' ಅನೌನ್ಸ್ ಆಗುತ್ತಿದ್ದಂತೆ ಇನ್ನೂ ಕೆಲವು ಸಿನಿಮಾಗಳಲ್ಲಿ ಯಶ್ ಹೆಸರು ತಳುಕು ಹಾಕಿಕೊಂಡಿದೆ. ಬೇರೆ ಬೇರೆ ಭಾಷೆಯಲ್ಲಿ ನಿರ್ಮಾಣ ಆಗುತ್ತಿರುವ ಮೆಗಾ ಸಿನಿಮಾಗಳಲ್ಲಿ ಯಶ್ ಪ್ರಮುಖ ಪಾತ್ರಗಳಲ್ಲಿ ಯಶ್ ನಟಿಸುತ್ತಾರೆ ಅನ್ನೋ ಸುದ್ದಿ ಹಲವು ದಿನಗಳಿಂದ ಓಡಾಡುತ್ತಲೇ ಇದೆ. ಆದರೆ, 'ಟಾಕ್ಸಿಕ್' ಸಿನಿಮಾದ ಶೂಟಿಂಗ್ ಇನ್ನು ಶುರುವಾಗಿಲ್ಲ. ಹೀಗಿರುವಾಗ ಹರಿದಾಡುತ್ತಿರುವ ಸಿನಿಮಾಗಳಲ್ಲಿ ಯಶ್ ಯಾವಾಗ ನಟಿಸುತ್ತಾರೆ ಅನ್ನೋ ಕುತೂಹಲವಿತ್ತು.

Here is the list of movies where Yash will act after his Toxic Movie

ಈ ಎಲ್ಲಾ ಕುತೂಹಲಗಳಿಗೆ ಯಶ್ ಇತ್ತೀಚೆಗೆ ತೆರೆ ಎಳೆದಿದ್ದರು. ಸಾಕಷ್ಟು ಆಫರ್‌ಗಳು ಬರುತ್ತಿರೋದು ನಿಜ. ಆದರೆಮ ನಾನು ಗ್ರೀನ್ ಸಿಗ್ನಲ್ ಕೊಡುವವರೆಗೂ ಯಾವುದನ್ನೂ ನಂಬಬೇಡಿ ಎಂದಿದ್ದರು. ಈ ಮೂಲಕ ಆಫರ್ ಬಂದಿರೋದು ಹೌದು. ಆದರೆ, ಇನ್ನೂ ಆ ಸಿನಿಮಾ ಒಪ್ಪಿಕೊಂಡಿಲ್ಲ ಅಂತ ಹೇಳಿದ್ದರು. ಇದರ ಹೊರತಾಗಿಯೂ ಯಶ್ ಈ ಸಿನಿಮಾಗಳಲ್ಲಿ ನಟಿಸುತ್ತಾರೆ ಅನ್ನೋ ಸುದ್ದಿ ಸೋಶಿಯಲ್ ಮೀಡಿಯಾದಲ್ಲಿ ಓಡಾಡುತ್ತಿದೆ. ಅಂತಹ ಸಿನಿಮಾಗಳ ಪಟ್ಟಿ ಇಲ್ಲಿದೆ.

'ಛತ್ರಪತಿ ಶಿವಾಜಿ ಮಹಾರಾಜ್' ಬಯೋಪಿಕ್

ಕಳೆದ ಕೆಲವು ದಿನಗಳಿಂದ ಛತ್ರಪತಿ ಶಿವಾಜಿ ಸಿನಿಮಾ ಬಗ್ಗೆ ಸಿಕ್ಕಾಪಟ್ಟೆ ಸುದ್ದಿಯಾಗುತ್ತಿದೆ. ಕೊನೆಗೂ ಈ ಶಿವಾಜಿ ಬಯೋಪಿಕ್ ಸೆಟ್ಟೇರಿದೆ. ಹಿಂದಿ ಹಾಗೂ ಮರಾಠಿ ಚಿತ್ರರಂಗದ ಜನಪ್ರಿಯ ನಟ ರಿತೇಶ್ ದೇಶಮುಖ್ ಈ ಸಿನಿಮಾವನ್ನು ನಿರ್ದೇಶನ ಮಾಡುವುದಲ್ಲದೆ. ಈ ಸಿನಿಮಾದಲ್ಲಿ ನಟನೆಯನ್ನೂ ಮಾಡುತ್ತಿದ್ದಾರೆ. ಆದರೂ, ಶಿವಾಜಿ ಮಹಾರಾಜ್ ಬಯೋಪಿಕ್‌ನಲ್ಲಿ ಯಶ್ ನಟಿಸುತ್ತಿದ್ದಾರೆ. ಇದು ಅವರ 20ನೇ ಸಿನಿಮಾ ಅಂತೆಲ್ಲ ಸೋಶಿಯಲ್ ಮೀಡಿಯಾದಲ್ಲಿ ಹಬ್ಬಿಸಲಾಗುತ್ತಿದೆ. ಆದರೆ, ಈ ಬಗ್ಗೆ ಅಧಿಕೃತವಾಗಿ ಮಾಹಿತಿ ಇಲ್ಲ. ಸ್ವತ: ಯಶ್ ಈ ಬಗ್ಗೆ ಕನ್ಫರ್ಮ್ ಮಾಡಿದ್ದಾರೆ.

Here is the list of movies where Yash will act after his Toxic Movie

'ರಾಮಾಯಣ'ದಲ್ಲಿ ರಾವಣ

'ದಂಗಲ್' ಅಂತಹ ರೆಕಾರ್ಡ್ ಬ್ರೇಕಿಂಗ್ ಸಿನಿಮಾ ಮಾಡಿರೋ ನಿತೇಶ್ ತಿವಾರಿ 'ರಾಮಾಯಣ' ಸಿನಿಮಾಗೆ ಕೈ ಹಾಕಿದ್ದಾರೆ. ಶ್ರೀರಾಮನಾಗಿ ರಣ್‌ಬೀರ್ ಕಪೂರ್ ನಟಿಸುತ್ತಿದ್ದರೆ, ಸೀತೆ ಹಾಗೂ ರಾವಣ ಪಾತ್ರದಲ್ಲಿ ಯಾರು ನಟಿಸಬಹುದು? ಅನ್ನೋ ಪ್ರಶ್ನೆಗೆ ಇನ್ನು ಅಧಿಕೃತವಾಗಿ ಉತ್ತರ ಸಿಕ್ಕಿಲ್ಲ. ಸೀತೆ ಪಾತ್ರದಲ್ಲಿ ಸಾಯಿ ಪಲ್ಲವಿ ಹಾಗೂ ಜಾಹ್ನವಿ ಕಪೂರ್ ಹೆಸರು ಕೇಳಿ ಬರುತ್ತಿವೆ. ಆದರೆ, ರಾವಣನ ಪಾತ್ರದಲ್ಲಿ ಯಶ್ ನಟಿಸುತ್ತಾರೆ ಎನ್ನುವ ಸುದ್ದಿ ಬಹಳ ದಿನಗಳಿಂದ ಓಡಾಡುತ್ತಿದೆ. ಆದರೆ, ಯಶ್ ಅಥವಾ ನಿತೇಶ್ ತಿವಾರಿ ತಂಡ ಈ ವಿಷಯವನ್ನು ಖಚಿತ ಪಡಿಸಿಲ್ಲ.

Here is the list of movies where Yash will act after his Toxic Movie

'ಹನುಮಾನ್ 2'ನಲ್ಲಿ ಯಶ್

ಇತ್ತೀಚೆಗೆ ಬಾಕ್ಸಾಫೀಸ್‌ನಲ್ಲಿ ಅಚ್ಚರಿ ಮೂಡಿಸಿದ್ದ ಸಿನಿಮಾ 'ಹನುಮಾನ್'. ತೆಲುಗು ಹಾಗೂ ಹಿಂದಿ ಬೆಲ್ಟ್‌ಗಳಲ್ಲಿ ಈ ಸಿನಿಮಾ ಸಿಕ್ಕಾಪಟ್ಟೆ ಸದ್ದು ಮಾಡಿದೆ. ಹೀಗಾಗಿ ನಿರ್ದೇಶಕರು ಈಗಾಗೇ 'ಹನುಮಾನ್ 2'ಗೆ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದ್ದಾರೆ. 'ಹನುಮಾನ್ 2' ಸಿನಿಮಾ ಅನೌನ್ಸ್ ಆಗುತ್ತಿದ್ದಂತೆ ರಾಕಿಂಗ್ ಸ್ಟಾರ್ ಯಶ್ ನಟಿಸುತ್ತಿದ್ದಾರೆ ಅನ್ನೋ ಮಾತು ಕೇಳಿ ಬರುತ್ತಿದೆ. ಈ ಬಗ್ಗೆ ಯಶ್ ಬಳಿ ಪ್ರಶ್ನೆ ಮಾಡಿದ ಸಂದರ್ಭದಲ್ಲಿ ನಾನು ಹೇಳುವವರೆಗೂ ಯಾವುದನ್ನೂ ನಂಬಬೇಡಿ ಎಂದಿದ್ದಾರೆ.

ಅನೌನ್ಸ್ ಆಗಿದ್ದು 'ಟಾಕ್ಸಿಕ್' ಒಂದೇ

ಯಶ್ ಸದ್ಯಕ್ಕೆ ಅನೌನ್ಸ್ ಮಾಡಿದ್ದು 'ಟಾಕ್ಸಿಕ್' ಮಾತ್ರ. 'ಕೆಜಿಎಫ್ 2' ಬಳಿಕ ಈ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಸದ್ಯ ಈ ಸಿನಿಮಾದ ಶೂಟಿಂಗ್ ಇನ್ನೂ ಆರಂಭಗೊಂಡಿಲ್ಲ. ಅದಕ್ಕೆ ಬೇಕಿರೋ ಎಲ್ಲಾ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದ್ದಾರೆ. 'ಟಾಕ್ಸಿಕ್' ಪ್ಯಾನ್ ಇಂಡಿಯಾ ಅಷ್ಟೇ ಅಲ್ಲ ಪ್ಯಾನ್ ವರ್ಲ್ಡ್‌ ಸಿನಿಮಾ ಅನ್ನೋ ಚಿಕ್ಕದೊಂದು ಸುಳಿವನ್ನು ಬಿಟ್ಟುಕೊಟ್ಟಿದ್ದಾರೆ. ಆದರೆ, ಈ ಸಿನಿಮಾ ಬಗ್ಗೆನೂ ಸದ್ಯಕ್ಕೆ ಹೆಚ್ಚಿನ ಮಾಹಿತಿಯನ್ನು ಬಿಟ್ಟುಕೊಟ್ಟಿಲ್ಲ.

More from Filmibeat

English summary
Rocking star Yash's rumored movie list.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X