''ರಿಚರ್ಡ್ ಆಂಟನಿ' ಬಳಿಕ ರಕ್ಷಿತ್ ಶೆಟ್ಟಿಯ 5 ಸಿನಿಮಾಗಳು ಯಾವುವು ಗೊತ್ತೇ? ಇನ್ನು 6 ವರ್ಷ ಡೇಟ್ಸ್ ಲಾಕ್
ಕನ್ನಡದ ಸ್ಟಾರ್‌ಗಳು ಹೀಗೆ ಸೈಲೆಂಟ್ ಆದರೆ ಹೇಗೆ? ಅಂತ ಸಿನಿಪ್ರಿಯರು ಬೇಸರ ಹೊರಹಾಕುತ್ತಿದ್ದಾರೆ. ಇದು ನಮ್ಮ ಕನ್ನಡ ಸ್ಟಾರ್‌ಗಳಿ ಗೊತ್ತಿಲ್ಲ ಅಂತೇನು ಅಲ್ಲ. ಆದರೆ, ಈ ಕಾಂಪಿಟೇಷನ್ ಯುಗದಲ್ಲಿ ಒಳ್ಳೆಯ ಸಿನಿಮಾಗಳನ್ನು ಕೊಡಬೇಕು ಅನ್ನುವ ಒತ್ತಡವೂ ಕೂಡ ಅವರ ಮೇಲಿದೆ. ಇಂತಹ ನಾಯಕ ನಟರ ಲಿಸ್ಟ್‌ನಲ್ಲಿ ರಕ್ಷಿತ್ ಶೆಟ್ಟಿ ಕೂಡ ಹೊರತಾಗಿಲ್ಲ ಅಂತ ಅನಿಸುತ್ತಿದೆ.
'ಸಪ್ತ ಸಾಗರದಾಚೆ ಎಲ್ಲೋ' ಸೈಡ್ ಬಿ ಸಿನಿಮಾ ಬಳಿಕ 'ರಿಚರ್ಡ್ ಆಂಟನಿ' ಕೈಗೆತ್ತಿಕೊಂಡಿದ್ದರು. ಅಷ್ಟಕ್ಕೂ 'ಸಪ್ತ ಸಾಗರದಾಚೆ ಎಲ್ಲೋ' ಸಿನಿಮಾ ಮಾಡುವಾಗಲೇ ಈ ಸಿನಿಮಾದ ಸ್ಕ್ರಿಪ್ಟ್ ಕೆಲಸ ನಡೆಯುತ್ತಿತ್ತು. ಇನ್ನೇನು ಸಿನಿಮಾ ಆಗ ಶುರು ಮಾಡುತ್ತಾರೆ. ಈಗ ಶುರು ಮಾಡುತ್ತಾರೆ ಅನ್ನುವಾಗಲೇ ಇನ್ನೂ ಕಥೆ ರೆಡಿಯಾಗಿಲ್ಲ ಅಂತಿದ್ದಾರೆ. ಹಾಗಂತ ಬೇಸರ ಬೇಡ. ರಕ್ಷಿತ್ ಶೆಟ್ಟಿ ಇನ್ನು ಕಮ್ಮಿ ಅಂದರೂ ಐದು ವರ್ಷ ಯಾರ ಕೈಗೂ ಸಿಗೋ ಹಾಗೆ ಕಾಣಿಸುತ್ತಿಲ್ಲ.

'ರಿಚರ್ಡ್ ಆಂಟನಿ' ಸಿನಿಮಾಗಾಗಿ ಒಂದಿಷ್ಟು ಸಮಯ ಹಿಡಿಯುತ್ತಿರುವುದು ನಿಜ. ಆದರೆ, ಒಮ್ಮೆ ಸ್ಕ್ರಿಪ್ಟ್ ಲಾಕ್ ಮಾಡಿದರೆ, ಬೇಗ ಬೇಗ ಶೂಟಿಂಗ್ ಆರಂಭ ಆಗುತ್ತೆ ಅನ್ನೋದನ್ನು ರಕ್ಷಿತ್ ಶೆಟ್ಟಿನೇ ಹೇಳಿಕೊಂಡಿದ್ದಾರೆ. ಹಾಗೇ 'ರಿಚರ್ಡ್ ಆಂಟನಿ' ಬಳಿಕ ಅವರ ಡ್ರೀಮ್ ಪ್ರಾಜೆಕ್ಟ್‌ಗಳು ಕೂಡ ಬೇಗ ಆರಂಭ ಆಗುತ್ತವೆ. ಸದ್ಯ ರಕ್ಷಿತ್ ಹೇಳಿಕೊಂಡಂತೆ ಅವರ ಕೈಯಲ್ಲಿ 6 ಪ್ರಾಜೆಕ್ಟ್‌ಗಳಿವೆ. ಅವುಗಳನ್ನು ಮುಗಿಸುವುದಕ್ಕೆ ಕಮ್ಮಿ ಅಂದ್ರು ಇನ್ನು ಐದು ವರ್ಷ ಬೇಕಿದೆ.
ರಿಷಬ್ ಶೆಟ್ಟಿಯ ಒಂದು ವಿಡಿಯೋ ಯೂಟ್ಯೂಬ್‌ನಲ್ಲಿ ಟ್ರೆಂಡಿಂಗ್‌ನಲ್ಲಿ ಇದೆ. ತಮ್ಮ ಮುಂದಿನ ಸಿನಿಮಾಗಳ ಬಗ್ಗೆ ಮಾಹಿತಿಯನ್ನು ಹಂಚಿಕೊಂಡಿದ್ದಾರೆ. ಈ ವೇಳೆ ತಮ್ಮ ಮುಂದಿನ ಪ್ರಾಜೆಕ್ಟ್‌ಗಳ ಬಗ್ಗೆ ರಿವೀಲ್ ಮಾಡಿದ್ದಾರೆ. ಯಾವ್ಯಾವ ಸಿನಿಮಾ ಮಾಡುತ್ತೇನೆ ಅನ್ನೋದನ್ನು ಸುಳಿವನ್ನು ಬಿಟ್ಟಿಕೊಟ್ಟಿದ್ದಾರೆ. ಹಾಗಿದ್ದರೆ, ರಕ್ಷಿತ್ ಶೆಟ್ಟಿ ಒಪ್ಪಿಕೊಂಡಿರುವ ಆ ಆರು ಸಿನಿಮಾಗಳು ಯಾವುವು ಅನ್ನೋ ಲಿಸ್ಟ್ ಇಲ್ಲಿದೆ ನೋಡಿ.

ರಕ್ಷಿತ್ ಶೆಟ್ಟಿ ಈ ಹಿಂದೆನೇ ಹೇಳಿಕೊಂಡಿದ್ದರು. ಹೊಸ ಸಿನಿಮಾಗಳನ್ನು ಒಪ್ಪಿಕೊಳ್ಳುತ್ತಿಲ್ಲ. ಈಗಾಗಲೇ ಕೈಯಲ್ಲಿರುವ ಸಿನಿಮಾಗಳನ್ನು ಮುಗಿಸಿದ ಬಳಿಕ ಹೊಸ ಸಿನಿಮಾಗಳ ಬಗ್ಗೆ ಯೋಚನೆ ಮಾಡುವುದಾಗಿ ಹೇಳಿಕೊಂಡಿದ್ದರು. ಆದರೆ, ಆ ಸಿನಿಮಾಗಳ ಬಗ್ಗೆ ರಿವೀಲ್ ಮಾಡಿರಲಿಲ್ಲ. ಇತ್ತೀಚೆಗೆ ಟೊರೆಂಟೊ ಕನ್ನಡ ಸಂಘ ಆಯೋಜಿಸಿದ್ದ ಕಾರ್ಯಕ್ರಮಕ್ಕೆ ವಿಶೇಷ ಅತಿಥಿಯಾಗಿ ಹೋಗಿದ್ದ ರಕ್ಷಿತ್ ತಮ್ಮ ಬಳಿಕ ಇರುವ ಆರು ಸಿನಿಮಾಗಳ ಬಗ್ಗೆ ಮಾತಾಡಿದ್ದಾರೆ.
"ಮುಂದಿನ ಆರು ಸಿನಿಮಾಗಳನ್ನು ಲಿಸ್ಟ್ ಮಾಡಿದರೆ, ಅದರಲ್ಲಿ 'ಥಗ್ಸ್ ಆಫ್ ಮಾಲ್ಗುಡೀಸ್' ಆ ಲಿಸ್ಟ್‌ನಲ್ಲಿ ಇರುತ್ತೆ. ಆದರೆ, ಅದು ಯಾವಾಗ ಕೂಡಿ ಬರುತ್ತೆ ಅನ್ನೋದು ನನಗೂ ಇನ್ನೂ ಗೊತ್ತಿಲ್ಲ. ನನ್ನ ಮುಂದಿನ ಸಬ್ಜೆಕ್ಟ್ ರಿಚರ್ಡ್ ಆಂಟನಿ, ಪುಣ್ಯಕೋಟಿ ಹಾಗೂ ಮಿಡ್ ವೇ ಟು ಮೋಕ್ಷ. ಈ ಮೂರು ಸಿನಿಮಾಗಳನ್ನು ಮೊದಲು ಮುಗಿಸಬೇಕು. ರಿಚರ್ಡ್ ಆಂಟನಿ ಶುರುವಾದರೆ ಫಾಸ್ಟ್ ಆಗಿ ಸಿನಿಮಾ ಮಾಡುತ್ತೇನೆ ಅನ್ನೋ ಕಾನ್ಫಿಡೆನ್ಸ್ ಇದೆ. ಆರು ಸಿನಿಮಾಗಳಲ್ಲಿ ಥಗ್ಸ್ ಆಫ್ ಮಾಲ್ಗುಡೀಸ್ ಕೂಡ ಒಂದು. ಆದರೆ, ಯಾವ ಲೈನ್‌ಅಪ್‌ನಲ್ಲಿ ಇರುತ್ತೆ ಅನ್ನೋ ಐಡಿಯಾ ಇಲ್ಲ" ಎಂದು ಹೇಳಿದ್ದಾರೆ.
ರಕ್ಷಿತ್ ಶೆಟ್ಟಿಯ ಆರು ಸಿನಿಮಾಗಳನ್ನು ಪಟ್ಟಿ ಮಾಡುವುದಾದರೆ, ಅವರೇ ಹೇಳಿದಂತೆ 'ರಿಚರ್ಡ್ ಆಂಟನಿ', 'ಪುಣ್ಯಕೋಟಿ' ಪಾರ್ಟ್ 1, 'ಪುಣ್ಯಕೋಟಿ' ಪಾರ್ಟ್ 2 ( ರೂಮರ್) 'ಮಿಡ್ ವೇ ಟು ಮೋಕ್ಷ' ಮೊದಲ ಮೂರು ಸಿನಿಮಾಗಳು. ಆ ಬಳಿಕ ಹೇಮಂತ್ ರಾವ್ ಅವರ ಜೊತೆ 'ತೆನಾಲಿ' ಸಿನಿಮಾ ಅನ್ನೋ ಮಾತಿದೆ. ಹಾಗೇ 'ಥಗ್ಸ್ ಆಫ್ ಮಾಲ್ಗುಡೀಸ್'. ಇಷ್ಟು ಸಿನಿಮಾಗಳಿಗೆ ರಕ್ಷಿತ್ ಶೆಟ್ಟಿ ಕೆಲಸ ಮಾಡುತ್ತಿದ್ದಾರೆ. ಇವೆಲ್ಲವೂ ವರ್ಷಕ್ಕೆ ಒಂದರಂತೆ ಬಂದರೂ, ಇನ್ನೂ ಆರು ವರ್ಷ ಲಾಕ್.


Click it and Unblock the Notifications











