ರಜನಿಕಾಂತ್ ಜಾರಿ ಬಿದ್ದ ವೈರಲ್ ವಿಡಿಯೋದಲ್ಲಿರೋ ಅಸಲಿ ವ್ಯಕ್ತಿ ಯಾರು? ಅವರೇ ಕೊಟ್ಟ ಕ್ಲಾರಿಟಿ ಏನು?

ಕೆಲವೇ ದಿನಗಳ ಹಿಂದಷ್ಟೇ ಸೂಪರ್‌ಸ್ಟಾರ್ ರಜನಿಕಾಂತ್ ಜಾರಿ ಬಿದ್ದಿದ್ದಾರೆ ಎನ್ನಲಾದ ವಿಡಿಯೋ ಒಂದು ವೈರಲ್ ಆಗಿತ್ತು. ಅದು ಸಿಸಿಟಿವಿ ವಿಡಿಯೋ ಆಗಿದ್ದರಿಂದ ನೆಟ್ಟಿಗರು ರಜನಿಕಾಂತ್ ಇರಬಹುದು ಎಂದೇ ನಂಬಿದ್ದರು. ಇನ್ನೊಂದು ಕಡೆ ಸೋಶಿಯಲ್ ಮೀಡಿಯಾಗಳಲ್ಲೂ ರಜನಿಕಾಂತ್ ಅವರೇ ಜಾರಿ ಬಿದ್ದಿದ್ದಾರೆ ಎನ್ನುವಂತೆ ಬಿಂಬಿಸಲಾಯಿತು. ಮಾಧ್ಯಮಗಳಲ್ಲಿ ಈ ವಿಡಿಯೋ ಬಗ್ಗೆ ಗೊಂದಲ ಸೃಷ್ಟಿಯಾಗಿತ್ತು.

ಈ ವಿಡಿಯೋದಲ್ಲಿ ಇರೋ ಸೂಪರ್‌ಸ್ಟಾರ್ ರಜನಿಕಾಂತ್ ಅಲ್ಲ ಅನ್ನೋದು ಗೊತ್ತಿದ್ದರೂ, ಯಾರು ಅನ್ನೋ ಬಗ್ಗೆ ಸುಳಿವು ಇರಲಿಲ್ಲ. ಈ ಮಧ್ಯೆ ದಳಪತಿ ವಿಜಯ್ ಅವರ ಅಭಿಮಾನಿಗಳು ಈ ವಿಡಿಯೋವನ್ನು ವೈರಲ್ ಮಾಡಿದ್ದರು. ಈ ಕಾರಣಕ್ಕೆ ಇದು ರಜನಿಕಾಂತ್ ಅವರೇ ಇರಬಹುದು ಎಂದು ಸಿನಿಮಾ ಪ್ರೇಮಿಗಳು ನಂಬಿ ಮರುಕ ವ್ಯಕ್ತ ಪಡಿಸಿದ್ದೂ ಇದೆ.

Here is the real person in the Rajinikanth fall down viral video and his clarification

ಅಸಲಿಗೆ ಈ ವೈರಲ್ ವಿಡಿಯೋದ ಹಿಂದಿರುವ ವ್ಯಕ್ತಿ ರಜನಿಕಾಂತ್ ಅಲ್ಲ ಅನ್ನೋದು ಬಳಿಕ ಗೊತ್ತಾಗಿತ್ತು. ಆದರೆ, ಜಾರಿ ಬಿದ್ದ ವ್ಯಕ್ತಿ ಯಾರು ಅನ್ನೋದು ಗೊತ್ತಾಗಿರಲಿಲ್ಲ. ಆದರೆ, ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಜಾರಿ ಬಿದ್ದ ವ್ಯಕ್ತಿಯೇ ತಮ್ಮ ಫೇಸ್‌ಬುಕ್ ಖಾತೆಯಲ್ಲಿ ಸ್ಪಷ್ಟನೆಯನ್ನು ಕೊಟ್ಟಿದ್ದಾರೆ. ಅಸಲಿಗೆ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಹೇಗೆ ಬಂತು ಅನ್ನೋದನ್ನು ವಿವರಿಸಿದ್ದಾರೆ.

ವಿಡಿಯೋ ವೈರಲ್ ಆಗಿದ್ದೇಗೆ?

ರಜನಿಕಾಂತ್ ಜಾರಿ ಬಿದ್ದರು ಎಂದು ಹಬ್ಬಿದ್ದ ವಿಡಿಯೋದಲ್ಲಿರುವ ಅಸಲಿ ವ್ಯಕ್ತಿಯ ಹೆಸರು ರಾಜಾರಾಂ ತಲ್ಲೂರು. ಉಡುಪಿಯ ಕುಂದಾಪುರ ಮೂಲದ ಹಿರಿಯ ಪತ್ರಕರ್ತರು ಹಾಗೂ ಲೇಖಕರು. ಇವರು ಜುಲೈ 24ರಂದು ತಮ್ಮ ಫೇಸ್‌ಬುಕ್ ಖಾತೆಯಲ್ಲಿ ಮನೆಯ ಮುಂದೆ ಪೇಪರ್ ತರುವುದಕ್ಕೆ ಹೋಗಿದ್ದಾಗ ಜಾರಿ ಬಿದ್ದ ವಿಡಿಯೋವನ್ನು ಶೇರ್ ಮಾಡಿಕೊಂಡಿದ್ದರು. ಆ ವಿಡಿಯೋದಲ್ಲಿ ಜಾರಿ ಬಿದ್ದ ಸನ್ನಿವೇಶ ಹಾಗೂ ಸ್ವಸ್ಥವಾಗಿ, ಸುಖದಿಂದ ಇದ್ದೇನೆ ಎಂದು ಸ್ಪಷ್ಟನೆಯನ್ನು ಕೊಟ್ಟಿದ್ದರು. ಅಷ್ಟರೊಳಗೆ ಯಾರೋ ಕಿಡಿಗೇಡಿಗಳು ರಜನಿಕಾಂತ್ ಜಾರಿ ಬಿದ್ದಿದ್ದಾರೆಂದು ಹಬ್ಬಿಸಿಬಿಟ್ಟಿದ್ದರು.

ಹಿರಿಯ ಪತ್ರಕರ್ತರಿಂದ ಸ್ಪಷ್ಟನೆ

ರಜನಿಕಾಂತ್ ಜಾರಿ ಬಿದ್ದರು ಎನ್ನುವ ವಿಡಿಯೋಗೆ ಸ್ವತ: ರಾಜಾರಾಂ ತಲ್ಲೂರು ಅವರೇ ಮತ್ತೆ ಸೋಶಿಯಲ್ ಮೀಡಿಯಾದಲ್ಲಿ ಕ್ಲಾರಿಟಿ ಕೊಟ್ಟಿದ್ದಾರೆ. ಅದು ಹೀಗಿದೆ. "ಡಿಯರ್ ಮೀಡಿಯಾ ಯಾಕೆ "ಡಿಯರ್ ಮೀಡಿಯಾ" ಎಂದರೆ...ವಾರದ ಹಿಂದೆ ನಾನು ಮನೆಯಲ್ಲಿ ಜಾರಿ ಬಿದ್ದ ವೀಡಿಯೊ (ನನ್ನ ಮನೆಯ ಭದ್ರತಾ ಕ್ಯಾಮರಾ ಗ್ರ್ಯಾಬ್) ಇಲ್ಲಿ ಹಂಚಿಕೊಂಡಿದ್ದೆ. ಅದನ್ನು ಈಗ ನನ್ನ ಹಲವರು ಗೆಳೆಯರು ನನಗೆ ವಾಪಸ್ ತೋರಿಸುತ್ತಿದ್ದಾರೆ. ಏನಾಗಿದೆ ಎಂದರೆ, ಯಾರೋ ಕಿಡಿಗೇಡಿಗಳು ಇದು ಸಿನಿಮಾ ನಟ ರಜನೀಕಾಂತ್, ಅವರ ಮನೆಯಲ್ಲಿ ಜಾರಿ ಬಿದ್ದದ್ದು ಎಂದು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಈಗ ಅದು ಹಲವು ಆಣಬೆ ಮಾಧ್ಯಮಗಳಲ್ಲಿ, ವಿವಿಧ ಸೋಷಿಯಲ್ ಮೀಡಿಯಾ ಪ್ಲಾಟ್‌ಫಾರಂಗಳಲ್ಲಿ ಹಂಚಿಕೆ ಆಗಿ ವೈರಲ್ ಆಗತೊಡಗಿದೆ. ಹಲವಾರು ಸ್ನೇಹಿತರು ಅದನ್ನು ನನ್ನ ಗಮನಕ್ಕೆ ತಂದಿದ್ದಾರೆ." ಎಂದು ಬರೆದುಕೊಂಡಿದ್ದಾರೆ.

ಹಾಗೇ ತನ್ನ ಖಾಸಗಿ ಡಾಟ ಬಗ್ಗೆನೂ ಎಚ್ಚರಿಕೆ ನೀಡಿದ್ದಾರೆ. "ಈ ಪೋಸ್ಟ್ ಟ್ರುತ್ ಯುಗದಲ್ಲಿ, ಸ್ವತಃ ಈ ಡೇಟಾದ ಮೂಲ ವ್ಯಕ್ತಿ ಆಗಿರುವ ನಾನು, ಅದು ನನ್ನ ವೀಡಿಯೊ, ನಟ ರಜನೀಕಾಂತ್ ಅವರದಲ್ಲ ಎಂದರೆ ನಂಬುವವರು ಇಲ್ಲ! ಮೇಲುನೋಟಕ್ಕೆ ಇದು ತಮಾಷೆ ಅನ್ನಿಸಬಹುದು. ಆದರೆ ಅರೆ ಖಾಸಗಿ ಡೇಟಾಗಳು (ಇಲ್ಲಿ ಅರೆ ಖಾಸಗಿ ಏಕೆಂದರೆ, ನನ್ನ ಫೇಸ್‌ಬುಕ್ ವಾಲ್ ನನ್ನ ಸ್ನೇಹಿತರು ಮತ್ತು ಅವರ ಸ್ನೇಹಿತರಿಗೆ ಸೀಮಿತ. ಅಲ್ಲಿಂದಾಚೆಗೆ ಲಭ್ಯ ಇಲ್ಲದಂತೆ ಸೆಟ್ಟಿಂಗ್ ಇದೆ!) ಹೀಗೆ ಕಿಡಿಗೇಡಿತನದ ಕಾರಣಕ್ಕೆ ಹಾದಿ ತಪ್ಪಿದಾಗ ಏನಾಗಬಹುದು ಎಂಬುದಕ್ಕೆ ಇದು ಉದಾಹರಣೆ. ಈ ಪ್ರತಿಯೊಂದೂ ಚಾನೆಲ್‌ಗಳಿಗೆ ಅದು ನನ್ನ ವೀಡಿಯೊ ಎಂದು ಹೇಳುವಷ್ಟು, ಅವರು ಪ್ರತಿಯೊಬ್ಬರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಷ್ಟು ಸಮಯವೂ, ವ್ಯವಧಾನವೂ ನನ್ನಲ್ಲಿಲ್ಲ. ಸದ್ಯಕ್ಕೆ, ಇದು ಡಿಯರ್ ಮೀಡಿಯಾದ ಹಣೆಬರಹ ಎಂದು ಸುಮ್ಮನಿರಬೇಕು. ಆದರೆ ಗಮನಿಸಿ: ಅಗತ್ಯ ಬಿತ್ತೆಂದರೆ, ಈ ವೈರಸ್‌ನ ಬುಡ ತನಕ ತಲುಪಿ, ಅದನ್ನು ಮೂಲದಿಂದಲೇ ಉಚ್ಛಾಟಿಸುವುದು ಹೇಗೆಂಬುದು ಚೆನ್ನಾಗಿ ಗೊತ್ತಿದೆ. ಆಗ ಸಂಭವಿಸಬಹುದಾದ ಎಲ್ಲ ಕಷ್ಟ-ನಷ್ಟಗಳಿಗೂ ಸಂಬಂಧಿತರೇ ಹೊಣೆಗಾರರಾಗಲಿದ್ದಾರೆ. ಡಿಯರ್ ಮೀಡಿಯಾಕ್ಕೂ ಗೊತ್ತಿರಲಿ ಎಂಬ ಕಾರಣಕ್ಕೆ ಇದು ಅವರಿಗೆ ತಿಳಿವಳಿಕೆ ಸೂಚನೆ ಕೂಡ. ನಿಖರವಾಗಿ, ಇಂದು (30 ಜುಲೈ) ಬೆಳಗ್ಗೆ ಹೊತ್ತಿಗೆ, 123 ಬಾರಿ ಈ ವೀಡಿಯೊವನ್ನು ಸೇವ್ ಮಾಡಿಕೊಳ್ಳಲಾಗಿದೆ." ಎಂದು ಕಳವಳ ವ್ಯಕ್ತಪಡಿಸಿದ್ದಾರೆ.

Disclaimer: "ಸೂಪರ್ ಸ್ಟಾರ್ ರಜನಿಕಾಂತ್ ಜಾರಿ ಬಿದ್ರಾ? ವೈರಲ್ ವಿಡಿಯೋಗೆ ಕ್ಲಾರಿಟಿ ಕೊಡುವ ಸಲುವಾಗಿ ರಾಜಾರಾಂ ತಲ್ಲೂರು ಅವರ ಫೇಸ್‌ಬುಕ್ ಖಾತೆಯಲ್ಲಿ ನೀಡಿರುವ ಕ್ಲಾರಿಟಿಯನ್ನು ಇಲ್ಲಿ ದಾಖಲಿಸಲಾಗಿದೆ.

More from Filmibeat

English summary
Here is the real person in the Rajinikanth fall down viral video and his clarification.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X