'ಟಾಕ್ಸಿಕ್‌'ಗಾಗಿ ಓಡೋಡಿ ಬಂದ 'ಫಾಸ್ಟ್ ಅಂಡ್ ಫ್ಯೂರಿಯಸ್' ಸ್ಟಂಟ್ ಡೈರೆಕ್ಟರ್ ಜೆಜೆ ಪೆರ್ರಿ; 45 ದಿನ ಭಾರತದಲ್ಲೇ ಆಕ್ಷನ್

ಭಾರತದಾದ್ಯಂತ ಎಲ್ಲ ಭಾಷೆಯ ಸಿನಿಮಾ ಮಂದಿನೂ ಯಶ್ ನಟಿಸುತ್ತಿರುವ 'ಟಾಕ್ಸಿಕ್' ಸಿನಿಮಾ ಮೇಲೆ ಕಣ್ಣಿದೆ. 'ಕೆಜಿಎಫ್ 2' ಮೂಲಕ ಲೆಕ್ಕಕ್ಕೆ ಇಟ್ಟುಕೊಳ್ಳದ ಕನ್ನಡ ಚಿತ್ರರಂಗದಿಂದ ಯಶ್ ಮಾಸ್ಟರ್ ಸ್ಟ್ರೋಕ್ ಕೊಟ್ಟಿದ್ದರು. ಇಡೀ ಭಾರತವೇ ತಿರುಗಿ ನೋಡುವಂತಹ ಮೆಗಾ ಬ್ಲಾಕ್‌ಬಸ್ಟರ್ ಸಿನಿಮಾವನ್ನು ಕೊಟ್ಟು ಎಲ್ಲರ ಹುಬ್ಬೇರಿಸುವಂತೆ ಮಾಡಿದ್ದರು. 'ಕೆಜಿಎಫ್' ಬಳಿಕ ಯಶ್ ನಡೆಯನ್ನೇ ಗಮನಿಸುತ್ತಿರುವ ಸಿನಿಮಾ ಮಂದಿಗೆ 'ಟಾಕ್ಸಿಕ್' ಯಾವ ರೀತಿ ಉತ್ತರ ಕೊಡಬಹುದು? ಈ ಪ್ರಶ್ನೆ ಎಲ್ಲರಲ್ಲೂ ಇದೆ.

'ಟಾಕ್ಸಿಕ್: ಎ ಫೇರಿಟೇಲ್ ಫಾರ್ ಗ್ರೋನ್-ಅಪ್ಸ್' ಕನ್ನಡ ಚಿತ್ರರಂಗದ ಮತ್ತೊಂದು ಬಹು ನಿರೀಕ್ಷೆಯ ಸಿನಿಮಾ. ಕನ್ನಡ ಸಿನಿಮಾವನ್ನು ಗ್ಲೋಬಲ್ ಲೆವೆಲ್‌ಗೆ ತೆಗೆದುಕೊಂಡು ಹೋಗುವುದಕ್ಕೆ ಯಶ್ ಇಟ್ಟಿರುವ ಮತ್ತೊಂದು ದಿಟ್ಟ ಹೆಜ್ಜೆ. ಅದಕ್ಕೊಂದು ಸಾಕ್ಷಿನೇ ಹಾಲಿವುಡ್‌ನಿಂದ ಓಡಿ ಬಂದಿರೋ ಬಹುಬೇಡಿಕೆಯ ಆಕ್ಷನ್ ಡೈರೆಕ್ಟರ್ ಜೆಜೆ ಪೆರ್ರಿ. ಈ ಮೂಲಕ 'ಟಾಕ್ಸಿಕ್' ಭಾರತೀಯ ಸಿನಿಮಾದ ಇತಿಹಾಸದಲ್ಲಿಯೇ ಅತ್ಯಂತ ದುಬಾರಿ ಆಕ್ಷನ್ ಸಿನಿಮಾ ಆಗುವ ಎಲ್ಲಾ ಲಕ್ಷಣಗಳೂ ಇವೆ.

Hollywood action director JJ Perry Leads All-Indian Stunt Team for 45-Day Action Shoot in Yash s Toxic

ಹಾಲಿವುಡ್‌ನ ಸ್ಟಂಟ್‌ ಡೈರೆಕ್ಟರ್ ಜೆಜೆ ಪೆರ್ರಿ ಮೆಗಾಬ್ಲಾಸ್ಟರ್ ಸಿನಿಮಾಗಳ ಆಕ್ಷನ್ ಸೀನ್‌ಗಳನ್ನು ನಿರ್ದೇಶಿಸಿದ್ದಾರೆ. 'ಜಾನ್ ವಿಕ್' ಮತ್ತು 'ಫಾಸ್ಟ್ ಅಂಡ್ ಫ್ಯೂರಿಯಸ್' ಅಂತಹ ಸಿನಿಮಾಗಳಿಗೆ ಸಾಹಸ ಸಂಯೋಜನೆ ಮಾಡಿದ್ದು ಇದೇ ಹಾಲಿವುಡ್‌ನ ಸಾಹಸ ನಿರ್ದೇಶಕ. ಈಗ 'ಟಾಕ್ಸಿಕ್‌' ಸಿನಿಮಾದಲ್ಲಿ ಆಕ್ಷನ್ ಸೀನ್‌ಗಳನ್ನು ಸಂಯೋಜಿಸುವುದಕ್ಕಾಗಿ ಮುಂಬೈಗೆ ಬಂದಿಳಿದಿದ್ದಾರೆ. ಈ ಕಾರಣಕ್ಕೆ 'ಟಾಕ್ಸಿಕ್' ಎಲ್ಲರ ಗಮನ ಸೆಳೆಯುತ್ತಿದೆ.

ಸ್ಟಂಟ್ ಡೈರೆಕ್ಟರ್ ಜೆಜೆ ಪೆರ್ರಿ ಹಾಲಿವುಡ್ ಸಿನಿಮಾಗಳಲ್ಲಿಯೇ ಹೆಚ್ಚಾಗಿ ಕೆಲಸ ಮಾಡುತ್ತಾರೆ. ಆದರೆ, ಈ ಬಾರಿ ಭಾರತೀಯ ಸಿನಿಮಾವನ್ನು ಆಯ್ಕೆ ಮಾಡಿಕೊಂಡಿರುವುದು ಅಚ್ಚರಿ ಮೂಡಿಸಿದೆ. ಅಂತರರಾಷ್ಟ್ರೀಯ ಸಾಹಸ ತಂಡಗಳೊಂದಿಗೆ ಕೆಲಸ ಮಾಡುವ ಪೆರ್ರಿ 'ಟಾಕ್ಸಿಕ್' ಸಿನಿಮಾವನ್ನು ಆಯ್ಕೆ ಮಾಡಿಕೊಂಡಿದ್ದೇಕೆ ಅನ್ನೋದನ್ನು ಹೇಳಿಕೊಂಡಿದ್ದಾರೆ. "ಭಾರತದ ಈ ತಂಡ ವಿಶ್ವ ದರ್ಜೆಯದ್ದು. ಈ ಕಾರಣಕ್ಕಾಗಿ ನಾನು ಟಾಕ್ಸಿಕ್ ಜೊತೆ ಕೆಲಸ ಮಾಡಲು ನಿರ್ಧರಿಸಿದೆ." ಎಂದು ಪೆರ್ರಿ ಹೇಳಿಕೊಂಡಿದ್ದಾರೆ. ಅಲ್ಲದೆ, "ನಾವು ಈಗ ಒಂದು ಪ್ರಮುಖ ದೃಶ್ಯವನ್ನು ಚಿತ್ರೀಕರಿಸುತ್ತಿದ್ದೇವೆ. ಈ ಸ್ಟಂಟ್ ಮಾಡುತ್ತಿರುವುದಕ್ಕೆ ನನಗೆ ಅತೀವ ಸಂತೋಷವಿದೆ. ನಿಜಕ್ಕೂ ಈ ದೈಶ್ಯವೊಂದು ಸವಾಲು. ಆದರೆ, ಇಂತಹ ಸವಾಲುಗಳನ್ನು ನಾನು ಇಷ್ಟಪಡುತ್ತೇನೆ. ನಮ್ಮ ತಂಡ ಇದನ್ನು ಸಮರ್ಥವಾಗಿ ಎದುರಿಸುತ್ತಿದೆ. ನಾವು ಒಟ್ಟಾಗಿ ಹೊಸತನವನ್ನು ಪ್ರೇಕ್ಷಕರ ಮುಂದಿಡಲು ಇಲ್ಲಿದ್ದೇವೆ" ಎಂದು ಜೆ.ಜೆ. ಪೆರ್ರಿ ತಿಳಿಸಿದ್ದಾರೆ.

ಅಂದ್ಹಾಗೆ ಜೆಜೆ ಪೆರ್ರಿ ಸುಮಾರು 45 ದಿನಗಳ ಕಾಲ 'ಟಾಕ್ಸಿಕ್' ಸಿನಿಮಾದ ಸಾಹಸ ದೃಶ್ಯವನ್ನು ಚಿತ್ರೀಕರಣ ಮಾಡಲಿದ್ದಾರೆ. ಇದು ಭಾರತೀಯ ಸಿನಿಮಾಗಳಿಗೆ ಹೊಸ ಆಯಾಮ ನೀಡುತ್ತೆ ಎಂದು ಹೇಳಲಾಗುತ್ತಿದೆ. ಸದ್ಯ ಪೆರ್ರಿ ನಿರ್ದೇಶನದಲ್ಲಿ 'ಟಾಕ್ಸಿಕ್' ಸಿನಿಮಾ ಆಕ್ಷನ್ ದೃಶ್ಯಗಳ ಚಿತ್ರೀಕರಣ ನಡೆಯುತ್ತಿದೆ. ಈ ಸಿನಿಮಾಗೆ ನಿರ್ಮಾಪಕರೂ ಆಗಿರುವ ಯಶ್, ನಿರ್ದೇಶಕಿ ಗೀತು ಮೋಹನ್‌ದಾಸ್, ವಿಎಫ್‌ಎಕ್ಸ್ ಸಂಸ್ಥೆ DNEG ಹಾಗೂ ನಿರ್ಮಾಪಕ ವೆಂಕಟ್ ಕೆ. ನಾರಾಯಣ್ ಅವರ ಹಲವು ತಿಂಗಳುಗಳ ಪೂರ್ವ ತಯಾರಿ ಫಲವಾಗಿದೆ. ದೊಡ್ಡ ಕನಸೊಂದನ್ನು ಈಡೇರಿಸಿಕೊಳ್ಳುವುದಕ್ಕೆ ದೊಡ್ಡ ಮೊತ್ತದ ಬಂಡವಾಳವನ್ನು ಇಲ್ಲಿ ಹೂಡಲಾಗಿದೆ.

'ಟಾಕ್ಸಿಕ್' ಭಾರತೀಯ ಚಿತ್ರರಂಗಕ್ಕೆ ಮಾದರಿಯಾಗಲಿದೆ. ಯಾಕಂದ್ರೆ ಆಕ್ಷನ್ ಸೀನ್‌ಗಳನ್ನು ತೆಗೆಯುವಾಗ ಪೂರ್ವ ತಯಾರಿ ಮಾಡಿಕೊಂಡು ಅಖಾಡಕ್ಕೆ ಇಳಿದಿದೆ. ವಿಸ್ತೃತ ಸ್ಟೋರಿ ಬೋರ್ಡ್, ತಂತ್ರಜ್ಞಾನವನ್ನು ಬಳಸಿಕೊಂಡು ಪೂರ್ವ ತಯಾರಿ ಇವೆಲ್ಲವೂ ಭಾರತೀಯ ಸಿನಿಮಾ ಮೇಕಿಂಗ್‌ನಲ್ಲಿ ಹೊಸ ಅಧ್ಯಾಯವನ್ನು ಬರೆಯಲಿದೆ. " ಇದು ಭಾರತೀಯ ಚಿತ್ರರಂಗಕ್ಕೆ ಹೊಸ ರೀತಿಯಲ್ಲಿ ತಲ್ಲೀನಗೊಳಿಸುವ ಹಾಗೂ ಮನಸ್ಸಿಗೆ ನಾಟುವಂತಹ ಆಕ್ಷನ್ ಭಾಷೆಯಾಗಿದೆ" ಎಂದು ಪೆರ್ರಿ ಬಣ್ಣಿಸಿದ್ದಾರೆ.

Hollywood action director JJ Perry Leads All-Indian Stunt Team for 45-Day Action Shoot in Yash s Toxic

ಮುಂಬೈನಲ್ಲಿ 'ಟಾಕ್ಸಿಕ್' ಸಿನಿಮಾದ ಈ ಆಕ್ಷನ್ ಸೀಕ್ವೆನ್ಸ್ ಶೂಟಿಂಗ್ ನಡೆಯುತ್ತಿದೆ. ಇದು ಭಾರತೀಯ ಸಿನಿಮಾ ಉದ್ಯಮದಲ್ಲಿ ಮತ್ತೊಂದು ಹೊಸ ಮೈಲಿಗಲ್ಲು ಸ್ಥಾಪಿಸಲಿದೆ. 'ಟಾಕ್ಸಿಕ್' ಕನ್ನಡ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ಏಕಕಾಲದಲ್ಲಿ ಶೂಟಿಂಗ್ ನಡೆಯುತ್ತಿದೆ. ಇದರ ಜೊತೆಗೆ ಹಿಂದಿ, ತೆಲುಗು, ತಮಿಳು ಮತ್ತು ಮಲಯಾಳಂ ಭಾಷೆಗಳಲ್ಲಿಯೂ ಡಬ್ಬಿಂಗ್ ಆಗಿ ಬಿಡುಗಡೆಯಾಗಲಿವೆ. ಈ ಮೂಲಕ ಯಶ್ ಗ್ಲೋಬಲ್ ಸಿನಿಮಾ ಮಾಡುವತ್ತ ಹೆಜ್ಜೆ ಇಟ್ಟಿದ್ದಾರೆ.

"ಭಾರತದ ಪ್ರಾಚೀನ ಸಂಸ್ಕೃತಿ ಶ್ರೀಮಂತ ಮತ್ತು ಬಹು ಆಯಾಮಗಳಿ೦ದ ಕೂಡಿದೆ. ಕೆಲವು ನೂರು ವರ್ಷಗಳ ಇತಿಹಾಸವಿರುವ ಅಮೆರಿಕದವನಾಗಿ, ಇಲ್ಲಿಗೆ ಬಂದು ಜಾಗತಿಕ ಸಿನಿಮಾದ ವ್ಯಾಕರಣವನ್ನು ಭಾರತೀಯ ಸಿನಿಮಾ ಶೈಲಿಯ ಕಥಾ ನಿರೂಪಣೆಯೊಂದಿಗೆ ಹೆಣೆಯುವುದು ಥ್ರಿಲ್ ನೀಡುತ್ತಿದೆ" ಎಂದು ಪೆರ್ರಿ ಹೇಳಿದ್ದಾರೆ. ವೆಂಕಟ್ ಕೆ. ನಾರಾಯಣ್ ಅವರ ಕೆವಿಎನ್ ಪ್ರೊಡಕ್ಷನ್ಸ್ ಹಾಗೂ ಮತ್ತು ಯಶ್ ಅವರ ಮಾನ್‌ಸ್ಟರ್ ಮೈಂಡ್ ಕ್ರಿಯೇಷನ್ಸ್ ಬ್ಯಾನರ್ ಅಡಿಯಲ್ಲಿ 'ಟಾಕ್ಸಿಕ್: ಎ ಫೇರಿಟೇಲ್ ಫಾರ್ ಗ್ರೋನ್-ಅಪ್ಸ್' ಸಿನಿಮಾ ನಿರ್ಮಾಣ ಆಗುತ್ತಿದ್ದು, ಮಾರ್ಚ್ 19, 2026 ರಂದು ವಿಶ್ವದಾದ್ಯಂತ ರಿಲೀಸ್ ಆಗಲಿದೆ.

More from Filmibeat

English summary
Hollywood action director JJ Perry, known for John Wick, is leading an all-Indian stunt team for a massive 45-day action marathon shoot in Yash and Geetu Mohandas’ Toxic: A Fairytale For Grown-ups.
Read more about: yash toxic kannada movie
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X