»   » ಕನ್ನಡ 'ತಾರಕಾಸುರ' ಚಿತ್ರದಲ್ಲಿ ಹಾಲಿವುಡ್ ನಟ ಡ್ಯಾನಿ ಅಭಿನಯ

ಕನ್ನಡ 'ತಾರಕಾಸುರ' ಚಿತ್ರದಲ್ಲಿ ಹಾಲಿವುಡ್ ನಟ ಡ್ಯಾನಿ ಅಭಿನಯ

Posted By:
Subscribe to Filmibeat Kannada

'ರಥಾವರ' ಚಿತ್ರ ಖ್ಯಾತಿಯ ನಿರ್ದೇಶಕ ಬಂಡಿಯಪ್ಪ ಇತ್ತೀಚೆಗೆ ತಾನೆ ತಮ್ಮ ನಿರ್ದೇಶನದ ಹೊಸ ಚಿತ್ರ 'ತಾರಕಾಸುರ' ಟೀಸರ್ ಬಿಡುಗಡೆ ಮಾಡಿ ಸ್ಯಾಂಡಲ್ ವುಡ್ ಚಿತ್ರ ಪ್ರೇಮಿಗಳಲ್ಲಿ ಕುತೂಹಲ ಮೂಡಿಸಿದ್ದರು. ಆದರೆ ಈಗ ಈ ಚಿತ್ರದ ಬಗ್ಗೆ ಇನ್ನೊಂದು ಹೊಸ ಸುದ್ದಿ ಹೊರಬಿದ್ದಿದ್ದು, ಚಿತ್ರದ ಬಗ್ಗೆ ಇನ್ನಷ್ಟು ಕ್ಯೂರಿಯಾಸಿಟಿ ಹೆಚ್ಚಾಗಲು ಕಾರಣವಾಗಿದೆ.['ರಥಾವರ' ನಿರ್ದೇಶಕನ 'ತಾರಕಾಸುರ' ಟೀಸರ್ ನೋಡಿ]

ಹೌದು, ಯಾಕಂದ್ರೆ 'ತಾರಕಾಸುರ' ಚಿತ್ರದಲ್ಲಿ ಹಾಲಿವುಡ್ ನ ಖ್ಯಾತ ನಟ ಡ್ಯಾನಿ ಸಪನಿ ಅಭಿನಯಿಸಲಿದ್ದಾರೆ ಎಂಬ ಸುದ್ದಿ ಕೇಳಿಬಂದಿದೆ. ತಮಿಳು ನಟ ಸೂರ್ಯ ಅಭಿನಯದ ಸೂಪರ್ ಹಿಟ್ ಸಿನಿಮಾ 'ಸಿಂಗಂ 2' ಚಿತ್ರ ನೋಡಿದವರಿಗೆ ಬಹುಶಃ ಡ್ಯಾನಿ ಸಪನಿ ಮುಖ ಪರಿಚಯ ಇರುತ್ತದೆ. ಡ್ಯಾನಿ ಸಪನಿ ಹಾಲಿವುಡ್ ನ ಸಿನಿಮಾಗಳಲ್ಲಿ ಮಾತ್ರವಲ್ಲದೇ ಕಿರುತೆರೆ ನಟನಾಗಿ ಅಭಿನಯಿಸಿದ್ದಾರೆ.

Hollywood Actor Danny Sapani to act in Taarakaasura movie

ಅಂದಹಾಗೆ 'ರಥಾವರ' ಅಂತಹ ಮಾಸ್ ಹಿಟ್ ಸಿನಿಮಾ ನೀಡಿದ್ದ ಚಂದ್ರಶೇಖರ್ ಬಂಡಿಯಪ್ಪಾ ಈಗ ಅಂತಹದ್ದೇ ಟೈಟಲ್ ನಲ್ಲಿ ನವನಟ ವೈಭವ್ ಗೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಅಂದಹಾಗೆ ನವನಟ ವೈಭವ್ ರವರು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಕಾರ್ಯದರ್ಶಿ ನರಸಿಂಹಲು ಅವರ ಪುತ್ರ.

ಚಿತ್ರಕ್ಕೆ ನರಸಿಂಹಲು ರವರೇ ಬಂಡವಾಳ ಹೂಡಿದ್ದು, ವೈಭವ್ ರವರಿಗೆ ಕನ್ನಡದ ಸ್ಟಾರ್ ನಟಿಯೊಬ್ಬರು ಜೊತೆಯಾಗಿ ಅಭಿನಯಿಸಲಿದ್ದಾರೆ ಎಂಬ ಸುದ್ದಿ ಕೇಳಿಬಂದಿದೆ. ಆದರೆ ಅವರು ಯಾರು ಎಂಬ ಬಗ್ಗೆ ಇನ್ನೂ ಮಾಹಿತಿ ಹೊರಬಿದ್ದಿಲ್ಲ. ಚಿತ್ರಕ್ಕೆ ಧರ್ಮ ವಿಶ್ ಸಂಗೀತ ಸಂಯೋಜನೆ, ಕುಮಾರ್ ಗೌಡ ಎಂಬುವವರ ಛಾಯಾಗ್ರಹಣ ಚಿತ್ರಕ್ಕಿದೆ.

English summary
Hollywood Actor Danny Sapani to make Sandalwood Debut through Kannada Movie 'Taarakaasura' Directecd by 'Rathavara' fame Chandrashekar Bandiyappa.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada