40 ವರ್ಷಗಳ ಕಾಲ ಪ್ರೇಕ್ಷರನ್ನು ನಕ್ಕು ನಲಿಸಿದ ನವರಸ ನಾಯಕನಿಗೆ 'ರಾಘವ್ರೇಂದ್ರ ಸ್ಟೋರ್ಸ್' ತಂಡ ಸಲಾಂ

ನವರಸ ನಾಯಕ ಜಗ್ಗೇಶ್ ಸಿನಿಮಾ ಅಂದರೆ, ಆ ಸಿನಿಮಾ ನೋಡಿದವರು ನಗೋದು ಕನ್ಫರ್ಮ್. ಚಿತ್ರರಂಗಕ್ಕೆ ಕಾಲಿಟ್ಟ ದಿನದಿಂದಲೂ ಜಗ್ಗೇಶ್ ಸಿನಿಮಾ ಪ್ರೇಮಿಗಳನ್ನು ರಂಜಿಸುತ್ತಲೇ ಬಂದಿದ್ದಾರೆ.

ಜಗ್ಗೇಶ್ ಮ್ಯಾನರಿಸಂಗೆ, ಡೈಲಾಗ್‌ ಡಿಲೇವರಿಗೆ ಅವರದ್ದೇ ಆದ ಅಭಿಮಾನಿಗಳು ಇದ್ದಾರೆ. ತಮ್ಮ ಹಾವ ಭಾವದಿಂದ ನಟನೆಯ ನವರಸಗಳನ್ನು ಹೊರಹಾಕಿ ರಂಜಿಸಿದ ಅಪರೂಪದ ನಟ ಚಿತ್ರರಂಗದಲ್ಲಿ 40 ವರ್ಷಗಳನ್ನು ಪೂರೈಸಿದ್ದಾರೆ.

Homabale Films Raghavendra Stores Movie team gave tribute to 40 years of Jaggesh

ಸುಮಾರು 4 ದಶಕಗಳ ಕಾಲ ಕನ್ನಡಿಗರನ್ನು ರಂಜಿಸಿದ ಜಗ್ಗೇಶ್‌ಗೆ 'ರಾಘವೇಂದ್ರ ಸ್ಟೋರ್ಸ್' ತಂಡ ಗೌರವನ್ನು ಅರ್ಪಿಸಿದೆ. ಜಗ್ಗೇಶ್‌ ಅವರ ಹಾವ ಭಾವಗಳನ್ನೇ ಇಟ್ಟುಕೊಂಡು ಚಿಕ್ಕದೊಂದು ವಿಡಿಯೋ ಮಾಡಿ ಸೋಶಿಯಲ್‌ ಮೀಡಿಯಾದಲ್ಲಿ ರಿಲೀಸ್ ಮಾಡಿದೆ.

4 ದಶಕದ ಜಗ್ಗೇಶ್ ಜರ್ನಿಗೆ ಗೌರವ

ಜಗ್ಗೇಶ್ ಸಿನಿಮಾಗಳು ಮಾಡುವ ಮೋಡಿನೇ ಅಂತಹದ್ದು. ಮನರಂಜನೆಗಾಗಿ ಸಿನಿಮಾ ನೋಡುವುದಕ್ಕೆ ಚಿತ್ರಮಂದಿರಕ್ಕೆ ಬರುವ ಜನರಿಗೆ ನಗು ಅಂತೂ ಗ್ಯಾರಂಟಿ ಸಿಕ್ಕೇ ಸಿಗುತ್ತೆ. ಜನರನ್ನು ನಗಿಸುವ ತಾಕತ್ತು ಜಗ್ಗೇಶ್ ಅವರ ಸ್ಟ್ರೆಂಥ್. ಇಂದಿಗೂ ಆ ಕಾಯಕವನ್ನು ಮುಂದುವರೆಸಿಕೊಂಡು ಹೋಗುತ್ತಿದ್ದಾರೆ.

ಈ ಸಂದರ್ಭದಲ್ಲಿಯೇ ನವರಸ ನಾಯಕನಿಗೆ ಅವರೇ ಅಭಿನಯದ 'ರಾಘವೇಂದ್ರ ಸ್ಟೋರ್ಸ್' ತಂಡ ಗೌರವನ್ನು ಅರ್ಪಿಸಿದೆ. ಜಗ್ಗೇಶ್ ನಟಿಸಿದ ಬೇರೆ ಸಿನಿಮಾಗಳ ವಿಶಿಷ್ಟ ಮ್ಯಾನರಸಂ ಸೇರಿಸಿದ ತುಣುಕಿನ ಜೊತೆ 'ರಾಘವೇಂದ್ರ ಸ್ಟೋರ್ಸ್' ಸಿನಿಮಾದ ಹೊಚ್ಚ ದೃಶ್ಯವನ್ನು ಸೇರಿ ಗೌರವ ಸೂಚಿಸಿದೆ.

ಅಡುಗೆ ಭಟ್ಟರಾಗಿ ನವರಸ ನಾಯಕ ಜಗ್ಗೇಶ್

ರಾಘವೇಂದ್ರ ಸ್ಟೋರ್ಸ್ ಸಿನಿಮಾದಲ್ಲಿ ನವರಸ ನಾಯಕ ಜಗ್ಗೇಶ್ ಅಡುಗೆ ಭಟ್ಟರಾಗಿ ಕಾಣಿಸಿಕೊಂಡಿದ್ದಾರೆ. ವಯಸ್ಸು 40 ಆದರೂ ಮದುವೆ ಆಗದ ವ್ಯಕ್ತಿಯ ಪಾತ್ರದಲ್ಲಿ ಜನರನ್ನು ಈ ಬಾರಿಯೂ ಹೊಟ್ಟೆ ಹುಣ್ಣಾಗುವಷ್ಟು ನಗಿಸುತ್ತಿದ್ದಾರೆ. ಈಗಾಗಲೇ ಸಿನಿಮಾ ಟೀಸರ್ ಹಾಗೂ ಟ್ರೈಲರ್ ಗಮನ ಸೆಳೆದಿದೆ.

ನವರಸ ನಾಯಕ ಜಗ್ಗೇಶ್‌ಗೆ ನಾಯಕಿಯಾಗಿ ಕನ್ನಡ ನಟಿ ಶ್ವೇತಾ ಶ್ರೀವತ್ಸವ್ ನಟಿಸಿದ್ದಾರೆ. ಇವರಿಬ್ಬರ ಕಾಂಬಿನೇಷನ್‌ ಅನ್ನು ತೆರೆಮೇಲೆ ನೋಡುವುದಕ್ಕೆ ಸಿನಿಪ್ರಿಯರು ಕಾದು ಕೂತಿದ್ದಾರೆ. ಅಲ್ಲದೆ ಸಂತೋಷ್ ಆನಂದ್‌ರಾಮ್ ನಿರ್ದೇಶನ ಮಾಡಿರುವುದರಿಂದ ನಿರೀಕ್ಷೆ ದುಪ್ಪಟ್ಟಾಗಿದೆ.

ಜಗ್ಗೇಶ್ ವೃತ್ತಿ ಬದುಕಿನ ವಿಶಿಷ್ಟ ಸಿನಿಮಾ

ಕನ್ನಡದ ಪ್ರತಿಷ್ಠಿತ ನಿರ್ಮಾಣ ಸಂಸ್ಥೆ ಹೊಂಬಾಳೆ ಫಿಲ್ಮ್ಸ್ 'ರಾಘವೇಂದ್ರ ಸ್ಟೋರ್ಸ್' ಸಿನಿಮಾವನ್ನು ನಿರ್ಮಾಣ ಮಾಡಿದೆ. ಹೀಗಾಗಿ ಸಿನಿಮಾ ಮೇಲೆ ನಿರೀಕ್ಷೆ ಹೆಚ್ಚಿದೆ. ಜಗ್ಗೇಶ್ ಬಾಣಸಿಗನಾಗಿ ಕಾಣಿಸಿಕೊಳ್ಳುವುದರ ಜೊತೆಗೆ ಬದುಕಿನ ಕೆಲವು ಸತ್ಯಗಳನ್ನು ಈ ಸಿನಿಮಾ ಮೂಲಕ ಪ್ರೇಕ್ಷಕರಿಗೆ ತಿಳಿಸುತ್ತಿದ್ದಾರೆ.

ಕಮರ್ಶಿಯಲ್ ಸಿನಿಮಾ ಜೊತೆ ಸಾಮಾಜಿಕ ಮೌಲ್ಯಗಳನ್ನು ತೆರೆಮೇಲೆ ಸಂತೋಷ್ ಆನಂದ್‌ರಾಮ್ ಈ ಬಾರಿ ಏನು ಹೇಳಲು ಹೊರಟ್ಟಿದ್ದಾರೆ ಅನ್ನೋ ಕುತೂಹಲವಿದೆ. ಇದೇ ಏಪ್ರಿಲ್ 28ಕ್ಕೆ ಸಿನಿಮಾ ಬಿಡುಗಡೆಯಾಗುತ್ತಿದ್ದು, ಜಗ್ಗೇಶ್ ಹಾಸ್ಯ ಕಚಗುಳಿ ಇಡಲಿದ್ದಾರೆ.

More from Filmibeat

English summary
Hombale Films Raghavendra Stores Movie team gave tribute to 40 years of Jaggesh, know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X