ಮೊದಲ ಜೆನ್‌ಜಿ ಸಿನಿಮಾ 'YETO KA NAAY'ಗೆ ಕೈ ಹಾಕಿದ ಹೊಂಬಾಳೆ ಫಿಲ್ಮ್ಸ್‌; ಕನ್ನಡಿಗರಿಗೂ ಶೀಘ್ರದಲ್ಲೇ ಗುಡ್ ನ್ಯೂಸ್!

ಕನ್ನಡದ ಮೋಸ್ಟ್ ಸಕ್ಸಸ್‌ಫುಲ್ ನಿರ್ಮಾಣ ಸಂಸ್ಥೆ ಹೊಂಬಾಳೆ ಫಿಲ್ಮ್ಸ್ ಈಗಾಗಲೇ ಪರಭಾಷೆಗಳಿಗೂ ಕೈ ಚಾಚಿದೆ. ದುಬಾರಿ ಪ್ಯಾನ್ ಇಂಡಿಯಾ ಸಿನಿಮಾಗಳ ಮೂಲಕ ಸದ್ದು ಮಾಡುತ್ತಿರುವ ಹೊಂಬಾಳೆ ವಿನೂತನ ಪ್ರಯತ್ನಕ್ಕೆ ಕೈ ಹಾಕುತ್ತಲೇ ಇರುತ್ತೆ. ಈಗ ಮತ್ತೊಂದು ಪ್ರಯತ್ನ ಮಾಡುತ್ತಿದ್ದು, ಯುವ ಸಮುದಾಯವನ್ನು ಗಮನದಲ್ಲಿಟ್ಟುಕೊಂಡು ಸಿನಿಮಾ ಮಾಡುತ್ತಿದೆ.

'ಕೆಜಿಎಫ್', 'ಕೆಜಿಎಫ್ 2', 'ಸಲಾರ್'ನಂತಹ ಹೈ-ವೋಲ್ಟೇಜ್ ಮಾಸ್ ಆಕ್ಷನ್ ಸಿನಿಮಾಗಳು, ಕರ್ನಾಟಕದ ಮಣ್ಣಿನ ಸೊಗಡನ್ನು ಇಡೀ ಜಗತ್ತಿಗೆ ಸಾರಿದ 'ಕಾಂತಾರ', ಅನಿಮೇಷನ್ ಲೋಕದ 'ಮಹಾವತಾರ ನರಸಿಂಹ' ಹಾಗೂ ಕೌಟುಂಬಿಕ ಸಿನಿಮಾ 'ರಾಜಕುಮಾರ' ಸಿನಿಮಾ ಮೂಲಕ ನಿರ್ಮಾಣ ಮಾಡಿರುವ ಹೊಂಬಾಳೆ ಫಿಲ್ಮ್ಸ್ ಸದಾ ಹೊಸ ಪ್ರಯತ್ನಕ್ಕೆ ಕೈ ಹಾಕುತ್ತಲೇ ಇದೆ.

Hombale Films announced first Gen Z hip hop music movie YETO KA NAAY

ಹೊಂಬಾಳೆ ಫಿಲ್ಮ್ಸ್ ಈಗಾಗಲೇ ಪ್ಯಾನ್ ಇಂಡಿಯಾ ಲೆವೆಲ್‌ನಲ್ಲಿ ಸದ್ದು ಮಾಡಿದೆ. ಸಿನಿಮಾ ಜೊತೆಗೆ ಮ್ಯೂಸಿಕ್, ಡ್ರಾಮಾ ಅಂತ ಹೊಸ ಹೊಸ ಪ್ರಯತ್ನಗಳನ್ನು ಮಾಡುತ್ತಲೇ ಇದೆ. ಈಗ ಯುವ ಸಮುದಾಯವನ್ನು ಸೆಳೆಯುವುದಕ್ಕೆ ಅಂತಲೇ ವಿನೂತನ ಪ್ರಯತನ್ನಕ್ಕೆ ಕೈ ಹಾಕಿದೆ. ಇಷ್ಟೇ ಅಲ್ಲದೆ, ಶೀಘ್ರದಲ್ಲಿಯೇ ಕನ್ನಡ ಸಿನಿಮಾವನ್ನೂ ಅನೌನ್ಸ್ ಮಾಡೋಕೆ ರೆಡಿಯಾಗುತ್ತಿದೆ ಅನ್ನೋ ಮಾಹಿತಿ ಇದೆ.

ಹೊಂಬಾಳೆ ಫಿಲ್ಮ್ಸ್ ಕೈಗೆತ್ತಿಕೊಂಡು ಪ್ರಾಜೆಕ್ಟ್‌ಗಳಲ್ಲಿ ಸೂಪರ್ ಸಕ್ಸಸ್ ಸಿಕ್ಕಿದೆ. ಪ್ಯಾನ್ ಇಂಡಿಯಾ ಲೆವೆಲ್‌ನಲ್ಲಿ ಹೊಸ ದಾಖಲೆಗಳನ್ನು ಬರೆದಿದೆ. ಪ್ರತಿಯೊಂದು ಪ್ರಾಜೆಕ್ಟ್‌ನಲ್ಲೂ ಹೊಸತನವನ್ನು ಪರಿಚಯಿಸುತ್ತಲೇ ಇದೆ. ಈಗ ಜೆನ್‌ಜಿ ಪ್ರಾಜೆಕ್ಟ್ ಮೂಲಕವೂ ಆ ಪರಂಪರೆಯನ್ನು ಮುಂದುವರಿಸಿದೆ. ಇಂದಿನ ಯುವ ಪೀಳಿಗೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಸಂಪೂರ್ಣ ಕಂಟೆಂಟ್ ಆಧಾರಿತ ಹಿಪ್-ಹಾಪ್ ಮ್ಯೂಸಿಕಲ್ ಸ್ಟೋರಿಯನ್ನು ತೆರೆಮೇಲೆ ತರುತ್ತಿದೆ. ಅದುವೇ 'YETO KA NAAY'.

ಅಂದ್ಹಾಗೆ ಈ ಸಿನಿಮಾ ಔಟ್ ಅಂಡ್ ಔಟ್ ಮುಂಬೈ ನಗರದ ಹಿನ್ನೆಲೆಯಲ್ಲಿ ನಿರ್ಮಾಣ ಆಗುತ್ತಿರುವ ಸಿನಿಮಾ. ಸದ್ಯ ಈ ಸಿನಿಮಾದ ಹಿಂದಿ ಅವತರಣಿಕೆಯನ್ನು 'YKN-Pehla Vaar' ಹೆಸರಿನಲ್ಲಿ ಬಿಡುಗಡೆ ಮಾಡಲು ಸಿದ್ಧತೆ ನಡೆಸಲಾಗುತ್ತಿದೆ. ಇದು ಭಾರತೀಯ ಚಿತ್ರರಂಗದ ಹೊಸದೊಂದು ಸಂಗೀತದ ಜರ್ನಿಗೆ ಮುನ್ನುಡಿ ಬರೆಯಲಿದೆ ಎಂದು ಹೊಂಬಾಳೆ ಫಿಲ್ಮ್ ಹೇಳಿಕೊಂಡಿದೆ.

ವಿಜಯ್ ಕಿರಗಂದೂರು ನಿರ್ಮಿಸುತ್ತಿರುವ ಈ ಸಿನಿಮಾಗೆ ಸಾರಂಗ್ ಸಂಜೀವ್ ಸಾಠಾಯೆ ನಿರ್ದೇಶನ ಮಾಡುತ್ತಿದ್ದಾರೆ. ಹಾಗೇ ಸಾರಂಗ್ ಸಾಠಾಯೆ, ಸುಜಯ್ ಜಾಧವ್, ಸೃಷ್ಟಿ ತಾವಡೆ ಮತ್ತು ಶ್ರೇಯಸ್ ಸಾಗ್ವೇಕರ್ ಅವರು ಜಂಟಿಯಾಗಿ ಸ್ಕ್ರೀನ್ ಪ್ಲೇ ಮಾಡಿದ್ದಾರೆ. ಎ.ವಿ. ಪ್ರಫುಲ್ಲಚಂದ್ರ ಸಂಗೀತ ನಿರ್ದೇಶನ ಮಾಡಿದ್ದು, ಹರ್ಷವೀರ್ ಒಬೆರಾಯ್ ಅವರ ಕ್ಯಾಮರಾ ವರ್ಕ್ ಈ ಸಿನಿಮಾಗಿದೆ. ಪ್ರಸ್ತುತ ಮುಂಬೈನಲ್ಲಿ ಸಿನಿಮಾದ ಚಿತ್ರೀಕರಣ ವೇಗವಾಗಿ ನಡೆಯುತ್ತಿದೆ. ಈ ವರ್ಷದ ಕೊನೆಯಲ್ಲಿ ಅಂದರೆ, ಡಿಸೆಂಬರ್ ತಿಂಗಳಲ್ಲಿ ರಿಲೀಸ್ ಮಾಡುವುದಕ್ಕೆ ಹೊಂಬಾಳೆ ಫಿಲ್ಮ್ಸ್ ಪ್ಲಾನ್ ಮಾಡಿಕೊಂಡಿದೆ.

ಬಹಳ ದಿನಗಳಾಯ್ತು ಹೊಂಬಾಳೆ ಫಿಲ್ಮ್ ಕನ್ನಡ ಸಿನಿಮಾವನ್ನು ಅನೌನ್ಸ್ ಮಾಡಿಲ್ಲ. ಕನ್ನಡಿಗರು ಹೊಸ ಸಿನಿಮಾವನ್ನು ಘೋಷಣೆ ಮಾಡುವುದನ್ನೇ ಎದುರು ನೋಡುತ್ತಿದ್ದಾರೆ. ಹೊಂಬಾಳೆ ಫಿಲ್ಮ್ಸ್ ಸಂಸ್ಥೆಯ ಆಂತರಿಕ ಮೂಲಗಳಿಂದ ಮಹತ್ವದ ಮಾಹಿತಿಯೊಂದು ಸಿಕ್ಕಿದ್ದು, ಕನ್ನಡಕ್ಕೆ ಸೂಟ್ ಆಗುವಂತಹ ವಿಭಿನ್ನ ಕಥಾಹಂದರದ ಕಥೆಗಳನ್ನು ಸತತವಾಗಿ ಆಲಿಸುತ್ತಿದೆ. ಸ್ಯಾಂಡಲ್‌ವುಡ್‌ನಲ್ಲಿ ಶೀಘ್ರದಲ್ಲೇ ಕಂಟೆಂಟ್ ಆಧಾರಿತ ವಿಶಿಷ್ಟ ಕನ್ನಡ ಪ್ರಾಜೆಕ್ಟ್‌ಗಳನ್ನು ಸಂಸ್ಥೆಯು ಅನೌನ್ಸ್ ಮಾಡುವುದಕ್ಕೆ ಯೋಜಿಸುತ್ತಿದೆ. ಕನ್ನಡಿಗರಿಗೆ ಮತ್ತಷ್ಟು ಉನ್ನತ ಗುಣಮಟ್ಟದ ಸಿನಿಮಾಗಳನ್ನು ನೀಡಲು ಹೊಂಬಾಳೆ ಫಿಲ್ಮ್ಸ್ ಮುಂದಾಗಿದೆ ಎನ್ನಲಾಗಿದೆ.

English summary
KGF, Salaar like high voltage movie production company Hombale Films announced first Gen Z hip hop music movie YETO KA NAAY. Buzz is that Homable will be announcing content orianted Kannada movie.
Read more about: hombale films movie
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X