'ರಿಚರ್ಡ್ ಆಂಟನಿ'.. ರಕ್ಷಿತ್ ಶೆಟ್ಟಿ.. ಹೊಂಬಾಳೆ ಫಿಲ್ಮ್ಸ್; ನಿರ್ಮಾಣ ಮಾಡೋದ್ಯಾರು? ಸಿಕ್ತಾ ಉತ್ತರ?
'ರಿಚರ್ಡ್ ಆಂಟನಿ' ಕನ್ನಡ ಚಿತ್ರರಂಗ ಮತ್ತೊಂದು ಮೋಸ್ಟ್ ಎಕ್ಸ್‌ಪೆಕ್ಟೆಡ್ ಸಿನಿಮಾ. 'ಉಳಿದವರು ಕಂಡಂತೆ' ಚಿತ್ರದ ಪ್ರೀಕ್ವೆಲ್ ಅಂತಿದ್ದ ಹಾಗೆ ಪ್ರೇಕ್ಷಕರ ನಿರೀಕ್ಷೆ ದುಪ್ಪಟ್ಟಾಗಿದ್ದರಲ್ಲಿ ಅನುಮಾನವೇ ಇಲ್ಲ. ಆದರೆ, ಇತ್ತೀಚೆಗೆ ಈ ಸಿನಿಮಾ ನಿರ್ಮಾಣದ ಬಗ್ಗೆ ಒಂದಿಷ್ಟು ಗೊಂದಲಗಳು ಹುಟ್ಟಿಕೊಂಡಿತ್ತು.
ಕನ್ನಡ ಚಿತ್ರರಂಗದ ಬಲ್ಲ ಮೂಲಗಳು 'ರಿಚರ್ಡ್ ಆಂಟನಿ' ಸಿನಿಮಾವನ್ನು ಹೊಂಬಾಳೆ ಫಿಲ್ಮ್ಸ್ ನಿರ್ಮಾಣ ಮಾಡುತ್ತಿಲ್ಲ. ರಕ್ಷಿತ್ ಶೆಟ್ಟಿ ಸ್ವತ: ಅವರದ್ದೇ ನಿರ್ಮಾಣ ಸಂಸ್ಥೆಯಿಂದ ಸಿನಿಮಾ ಮಾಡುತ್ತಾರೆ ಅಂತ ಮಾತಾಡಿಕೊಳ್ಳುತ್ತಿದ್ದಾರೆ. ಇನ್ನೊಂದು ಕಡೆ ಕೆವಿನ್ ಪ್ರೊಡಕ್ಷನ್ ಈ ಸಿನಿಮಾಗೆ ಹಣ ಹೂಡುವುದಕ್ಕೆ ಒಲವು ತೋರುತ್ತಿದೆ ಅಂತ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆಯಾಗುತ್ತಿದೆ.

ಅಷ್ಟಕ್ಕೂ 'ರಿಚರ್ಡ್ ಆಂಟನಿ' ತಂಡದಲ್ಲಿ ಏನಾಗ್ತಿದೆ? ಹೊಂಬಾಳೆ ಫಿಲ್ಮ್ಸ್ ಈ ಸಿನಿಮಾವನ್ನು ನಿರ್ಮಾಣ ಮಾಡುತ್ತಾ ಇಲ್ವಾ? ಇಷ್ಟೊಂದು ತಡ ಮಾಡುತ್ತಿರೋದು ಯಾಕೆ? ಇಂತಹದ್ದೇ ಒಂದಿಷ್ಟು ಪ್ರಶ್ನೆಗಳು ಹುಟ್ಟಿಕೊಂಡಿದೆ. ಆದ್ರೀಗ 'ರಿಚರ್ಡ್ ಆಂಟನಿ'ಯನ್ನು ಹೊಂಬಾಳೆ ಫಿಲ್ಮ್ಸ್ ನಿರ್ಮಾಣ ಮಾಡುತ್ತೆ ಅನ್ನುವ ಬಗ್ಗೆ ವರದಿಯಾಗಿದೆ. ಈ ಸಿನಿಮಾ ಬಗ್ಗೆ ಫ್ರೆಶ್ ನ್ಯೂಸ್ ಏನು? ತಿಳಿಯಲು ಮುಂದೆ ಓದಿ..
'ಉಳಿದವರು ಕಂಡಂತೆ'ಯ ಪವರ್‌ಫುಲ್ ಪಾತ್ರ ರಿಚರ್ಡ್ ಆಂಟನಿ. ಈ ಸಿನಿಮಾ ರಿಲೀಸ್ ಆದಾಗ ಇಷ್ಟ ಪಡದೆ ಇದ್ದ ಪ್ರೇಕ್ಷಕರು, ನಂತರ ದಿನಗಳಲ್ಲಿ ಮೆಚ್ಚಿಕೊಂಡಿದ್ದರು. ಇಂದಿಗೂ 'ಉಳಿದವರು ಕಂಡಂತೆ' ಕನ್ನಡದ ಅತ್ಯುತ್ತಮ ಸಿನಿಮಾಗಳಲ್ಲಿ ಒಂದು. ಇದೇ ಸಿನಿಮಾದಲ್ಲಿ ರಿಚರ್ಡ್ ಆಂಟನಿಯಾಗಿ ಕಂಡಿದ್ದ ರಕ್ಷಿತ್ ಶೆಟ್ಟಿ, ಮತ್ತೊಮ್ಮೆ ಅದೇ ಶೇಡ್‌ನಲ್ಲಿ ಕಾಣಿಸಿಕೊಳ್ಳಲಿದ್ದಾರೆ.
'ರಿಚರ್ಡ್ ಆಂಟನಿ' ಕನ್ನಡದ ಬಹುನಿರೀಕ್ಷೆಯ ಸಿನಿಮಾ. ಈ ಸಿನಿಮಾ ಮೂಲಕ ಮತ್ತೆ ರಕ್ಷಿತ್ ನಿರ್ದೇಶನಕ್ಕೆ ಮರಳುತ್ತಿದ್ದಾರೆ. ಹೊಂಬಾಳೆ ಫಿಲ್ಮ್ಸ್ ನಿರ್ಮಾಣ ಅಂದಾಗ, ಸಿನಿಮಾ ಪ್ಯಾನ್ ಇಂಡಿಯಾ ರೇಂಜ್‌ನಲ್ಲಿ ಇರುತ್ತೆ ಅನ್ನೋದು ಕನ್ಫರ್ಮ್ ಆಗಿತ್ತು. ಆದರೆ, ಗ್ಯಾಪ್‌ನಲ್ಲಿ ಹೊಂಬಾಳೆಯಿಂದ ರಕ್ಷಿತ್ ಶೆಟ್ಟಿ ಹೊರಬಂದಿದ್ದಾರೆ ಅನ್ನೋ ಸುದ್ದಿ ಗೊಂದಲಕ್ಕೆ ಎಡೆ ಮಾಡಿಕೊಟ್ಟಿತ್ತು.

ಆದ್ರೀಗ ಹೊಂಬಾಳೆ ಫಿಲ್ಮ್ಸ್ ಸಂಸ್ಥೆಯೇ 'ರಿಚರ್ಡ್ ಆಂಟನಿ' ಸಿನಿಮಾವನ್ನು ನಿರ್ಮಾಣ ಮಾಡುತ್ತೆ ಎಂದು ಹೇಳಲಾಗಿದೆ. ಮಾರ್ಚ್ ಕೊನೆಯ ವಾರ ಇಲ್ಲವೇ ಏಪ್ರಿಲ್ ಮೊದಲ ವಾರ ಸಿನಿಮಾ ಸೆಟ್ಟೇರಲಿದ್ದು, ಅದ್ಧೂರಿಯಾಗಿಯೇ ಸಿನಿಮಾ ನಿರ್ಮಾಣ ಮಾಡಲಾಗುತ್ತೆ ಎಂದು ಹೊಂಬಾಳೆ ಫಿಲ್ಮ್ಸ್ ಆಪ್ತರು ಮಾಹಿತಿ ನೀಡಿದ್ದಾಗಿ ಪಬ್ಲಿಕ್ ಟಿವಿ ವೆಬ್‌ಸೈಟ್ ವರದಿ ಮಾಡಿದೆ.
ಅಷ್ಟಕ್ಕೂ 'ರಿಚರ್ಡ್ ಆಂಟನಿ' ಸಿನಿಮಾ ಸೆಟ್ಟೇರುವುದಕ್ಕೆ ಇಷ್ಟೊಂದು ತಡವಾಗಿದ್ದು ಯಾಕೆ? ಅನ್ನೋ ಪ್ರಶ್ನೆ ಕೂಡ ಎದ್ದಿತ್ತು. ರಕ್ಷಿತ್ ಶೆಟ್ಟಿ 'ಸಪ್ತ ಸಾಗರದಾಚೆ ಎಲ್ಲೋ' ಸಿನಿಮಾ ಮುಗಿಸಿ, ಸ್ಕ್ರಿಪ್ಟ್‌ಗೆ ಅಂತ ಯುಎಸ್‌ಗೆ ಹೋಗಿ ವಾಪಾಸ್ ಆಗಿದ್ದರು. ಬೆಂಗಳೂರಿಗೆ ಮರಳಿ ಹಲವು ತಿಂಗಳೇ ಕಳೆದಿದ್ದರೂ 'ರಿಚರ್ಡ್ ಆಂಟನಿ' ಬಗ್ಗೆ ಸುಳಿವು ಇರಲಿಲ್ಲ. ಆದ್ರೀಗ ಸ್ಕ್ರೀಪ್ಟ್ ಬಹುತೇಕ ಮುಗಿದಿದ್ದು, ಶೀಘ್ರದಲ್ಲಿಯೇ ಸಿನಿಮಾ ಶೂಟಿಂಗ್ ಆರಂಭ ಆಗಲಿದೆ ಎನ್ನಲಾಗುತ್ತಿದೆ.
ಇಷ್ಟೇ ಅಲ್ಲದೆ 'ರಿಚರ್ಡ್ ಆಂಟನಿ'ಗೂ ಮುನ್ನ 'ಕಾಂತಾರ 2' ಸೆಟ್ಟೇರಿದ್ದರ ಬಗ್ಗೆನೂ ಹೊಂಬಾಳೆ ಫಿಲ್ಮ್ಸ್ ಆಪ್ತರು ಮಾಹಿತಿ ಹಂಚಿಕೊಂಡಿದ್ದಾರೆ. ದೈವವೇ ಮುಹೂರ್ತಕ್ಕೆ ಸೂಚನೆ ನೀಡಿತ್ತು. ಹೀಗಾಗಿ ಸಿನಿಮಾ ಸೆಟ್ಟೇರಿಸಿದ್ದು, ರಿಚರ್ಟ್ ಆಂಟನಿಗೂ ಒಳ್ಳೆಯ ದಿನ ಹುಡುಕುತ್ತಿರುವುದಾಗಿ ಹೊಂಬಾಳೆ ಆಪ್ತರು ಮಾಹಿತಿ ನೀಡಿರುವ ಬಗ್ಗೆ ಪಬ್ಲಿಕ್ ಟಿವಿ ವೆಬ್‌ಸೈಟ್ ವರದಿ ಮಾಡಿದೆ. ಈ ಸುದ್ದಿ ರಕ್ಷಿತ್ ಶೆಟ್ಟಿ ಅಭಿಮಾನಿಗಳಿಗೆ ಕೊಂಚ ಮಟ್ಟಿಗೆ ರಿಲೀಫ್ ಕೊಟ್ಟಿದೆ. ಶೀಘ್ರದಲ್ಲೇ ಇನ್ನಷ್ಟು ಮಾಹಿತಿ ಹೊರಬಿದ್ದರೆ, ಸಿನಿಪ್ರಿಯರು ಸಮಾಧಾನಗೊಳ್ಳಬಹುದು.


Click it and Unblock the Notifications











