Salaar Coming Soon: 'ಸಲಾರ್' ಪೋಸ್ಟ್‌ಪೋನ್ ಎಂದ ಹೊಂಬಾಳೆ.. ಹೊಸ ರಿಲೀಸ್ ಡೇಟ್ ಮಾತ್ರ ಹೇಳಿಲ್ಲ!

'ಕೆಜಿಎಫ್ ಚಾಪ್ಟರ್ 2' ಭಾರತೀಯ ಬಾಕ್ಸಾಫೀಸ್‌ನಲ್ಲಿ ಹೊಸ ಇತಿಹಾಸವನ್ನೇ ಬರೆದಿತ್ತು. ಹೀಗಾಗಿ ಪ್ರಶಾಂತ್ ನೀಲ್ ಮುಂದಿನ ಸಿನಿಮಾ 'ಸಲಾರ್' ಬಗ್ಗೆ ಇನ್ನಿಲ್ಲದ ಕುತೂಹಲವಿದೆ. ಅದರಲ್ಲೂ ಪ್ಯಾನ್ ಇಂಡಿಯಾ ಸೂಪರ್‌ಸ್ಟಾರ್ ಪ್ರಭಾಸ್ ಹಾಗೂ ಪ್ರಶಾಂತ್ ನೀಲ್ ಕಾಂಬಿನೇಷನ್ ಸಿನಿಮಾ ನೋಡುವುದಕ್ಕೆ ಪ್ರೇಕ್ಷಕರು ತುದಿಗಾಲಲ್ಲಿ ನಿಂತಿದ್ದಾರೆ.

'ಸಲಾರ್' ಸಿನಿಮಾ ಸೆಪ್ಟೆಂಬರ್ 28ರಂದು ಬಿಡುಗಡೆ ಮಾಡುವುದಾಗಿ ಹೊಂಬಾಳೆ ಫಿಲ್ಮ್ಸ್ ಹೇಳಿತ್ತು. ಆದರೆ, ಕೆಲವು ದಿನಗಳಿಂದ 'ಸಲಾರ್' ಬಿಡುಗಡೆಯನ್ನು ಮುಂದೂಡಲಾಗಿದೆ ಅನ್ನೋ ಸುದ್ದಿ ಹರಿದಾಡುತ್ತಲೇ ಇತ್ತು. ಆದರೂ, ನಿರ್ಮಾಣ ಸಂಸ್ಥೆ ಹೊಂಬಾಳೆ ಫಿಲ್ಮ್ಸ್ ಮಾತ್ರ ಈ ಬಗ್ಗೆ ತುಟಿಪಿಟಿಕ್ ಅಂದಿರಲಿಲ್ಲ.

Hombale Films confirmed that Prabhas Salaar will not be released on Sept 28th

ಕೊನೆಗೂ ಇಂದು (ಸೆಪ್ಟೆಂಬರ್ 13) ಹೊಂಬಾಳೆ ಫಿಲ್ಮ್ಸ್ ಅಧಿಕೃತವಾಗಿ 'ಸಲಾರ್' ಸಿನಿಮಾದ ಬಿಡುಗಡೆಯನ್ನು ಮುಂದೂಡುತ್ತಿರುವುದಾಗಿ ಅನೌನ್ಸ್ ಮಾಡಿದೆ. 'ಕೆಜಿಎಫ್ 2' ಬಿಡುಗಡೆ ದಿನ ಕೂಡ ಹೀಗೆ ಪೋಸ್ಟ್‌ಪೋನ್ ಆಗಿತ್ತು. ಆದರೆ, ಆ ವೇಳೆ ಹೊಸ ರಿಲೀಸ್ ಡೇಟ್ ಅನ್ನು ಘೋಷಣೆ ಮಾಡಿತ್ತು. 'ಸಲಾರ್' ಬಿಡುಗಡೆಯನ್ನು ಮುಂದೂಡಿದನ್ನು ತಿಳಿಸಿರೋ ಹೊಂಬಾಳೆ ಹೊಸ ಡೇಟ್ ಬಗ್ಗೆ ಸುಳಿವನ್ನೂ ನೀಡಿಲ್ಲ.

ಅಭಿಮಾನಿಗಳಿಗೆ ಕ್ಷಮೆ ಕೇಳಿದ ಹೊಂಬಾಳೆ

ಈ ವರ್ಷನಾದರೂ 'ಸಲಾರ್' ಸಿನಿಮಾ ರಿಲೀಸ್ ಆಗುತ್ತೆ ಎಂದು ನಿರೀಕ್ಷೆ ಮಾಡಲಾಗಿತ್ತು. ಅನೌನ್ಸ್ ಮಾಡಿದ ದಿನದಂದೇ ಸಿನಿಮಾ ರಿಲೀಸ್ ಕೂಡ ಆಗಬಹುದು ಎಂದೇ ನಿರೀಕ್ಷೆಯಿತ್ತು. ಸೆಪ್ಟೆಂಬರ್ 28 ಹತ್ತಿರವಿದ್ದಾಗಲೂ 'ಸಲಾರ್' ಟೀಮ್ ಪ್ರಚಾರ ಮಾಡುವುದಕ್ಕೆ ಮುಂದಾಗಿರಲಿಲ್ಲ. ಈಗ ಹೊಂಬಾಳೆ ಸಂಸ್ಥೆ ಅಧಿಕೃತವಾಗಿ 'ಸಲಾರ್' ರಿಲೀಸ್ ಮುಂದೂಡಿರುವ ಬಗ್ಗೆ ಅನೌನ್ಸ್ ಮಾಡಲಾಗಿದೆ. ಅಲ್ಲದೆ, "ನಿರಂತರವಾಗಿ ಸಲಾರ್ ಸಿನಿಮಾ ಬಗ್ಗೆ ನೀವು ನೀಡುತ್ತಿರುವ ಬೆಂಬಲಕ್ಕೆ ಚಿರಋಣಿಯಾಗಿದ್ದೇವೆ. ಇದನ್ನೇ ಗಮನದಲ್ಲಿಟ್ಟುಕೊಂಡು ಸೆಪ್ಟೆಂಬರ್ 28ರಂದು ರಿಲೀಸ್ ಡೇಟ್ ಅನ್ನು ಮುಂದೂಡಿದ್ದೇವೆ." ಎಂದು ಹೇಳುವ ಮೂಲಕ ಸಿನಿಮಾ ಪ್ರೇಮಿಗಳಿಗೆ ಹಾಗೂ ಪ್ರಭಾಸ್ ಅಭಿಮಾನಿಗಳಿಗೆ ಕ್ಷಮೆ ಕೋರಿದ್ದಾರೆ.

"ಸಲಾರ್ ಕಮಿಂಗ್ ಸೂನ್"

ಹೊಂಬಾಳೆ ಫಿಲ್ಮ್ಸ್ ಪ್ರಭಾಸ್ ಅಭಿಮಾನಿಗಳಿಗೆ ನಿರಾಸೆ ಮಾಡಿದ್ದೇನೋ ಸರಿ. ಆದರೆ, ಪ್ರಶಾಂತ್ ನೀಲ್ ನಿರ್ದೇಶನದ 'ಸಲಾರ್' ಸಿನಿಮಾ ಬಿಡುಗಡೆಯನ್ನು ಯಾಕೆ ಮುಂದೂಡಿದ್ದೇವೆ ಅನ್ನೋನ್ನು ರಿವೀಲ್ ಮಾಡಿಲ್ಲ. ಎಲ್ಲಕ್ಕಿಂತ ಹೆಚ್ಚಾಗಿ ಹೊಸ ಡೇಟ್ ಅನ್ನೂ ಅನೌನ್ಸ್ ಮಾಡಿಲ್ಲ. ಹೀಗಾಗಿ ಸಹಜವಾಗಿಯೇ ಡಾರ್ಲಿಂಗ್ ಫ್ಯಾನ್ಸ್ ನಿರಾಸೆಗೊಂಡಿದ್ದಾರೆ. ಆದರೆ, ಕೊನೆಯಲ್ಲಿ 'ಸಲಾರ್ ಕಮಿಂಗ್ ಸೂನ್' (#salaarcomingsoon) ಅಂತ ಹೇಳಿದ್ದು ಸಮಾಧಾನ ತಂದಿದೆ.


ಕೊನೆಯ ಹಂತದಲ್ಲಿ 'ಸಲಾರ್'

ಹೊಸ ರಿಲೀಸ್ ಡೇಟ್ ಅನ್ನು ಕೆಲವೇ ದಿನಗಳಲ್ಲಿ ತಿಳಿಸುವುದಾಗಿ ಹೊಂಬಾಳೆ ಫಿಲ್ಮ್ಸ್ ಹೇಳಿದೆ. ಇದರೊಂದಿಗೆ 'ಸಲಾರ್' ಸಿನಿಮಾ ಫೈನಲ್ ಟಚ್ ನೀಡಲಾಗುತ್ತಿದೆ ಎಂದೂ ಹೇಳಿದೆ. ಆದರೆ, ಫ್ಯಾನ್ಸ್ ಮಾತ್ರ ಸಲಾರ್ ತಂಡ ಕಾಲೆಳೆಯುತ್ತಿದ್ದಾರೆ. 'ಲಿಯೋ' ಹಾಗೂ 'ದಿ ವಾಕ್ಸಿನ್ ವಾರ್' ಸಿನಿಮಾಗೆ ಹೆದರಿ 'ಸಲಾರ್' ಸಿನಿಮಾವನ್ನು ಮುಂದಕ್ಕೆ ಹಾಕಿದ್ರಾ? ಎಂದು ಕಮೆಂಟ್ ಮಾಡುತ್ತಿದ್ದಾರೆ.

'ಸಲಾರ್' ರೀ ಶೂಟ್

'ಸಲಾರ್' ಸಿನಿಮಾದ ಕೆಲವು ಭಾಗದ ದೃಶ್ಯಗಳನ್ನು ಪ್ರಶಾಂತ್ ರೀ ಶೂಟ್ ಮಾಡುತ್ತಿದ್ದಾರೆ ಎಂದೂ ಸುದ್ದಿ ಹಬ್ಬಿದೆ. ಎಡಿಟಿಂಗ್ ಬಳಿಕ ಪ್ರಶಾಂತ್ ನೀಲ್‌ಗೆ 'ಸಲಾರ್' ತೃಪ್ತಿಕೊಟ್ಟಿಲ್ಲ. ಈ ಕಾರಣಕ್ಕೆ 'ಸಲಾರ್' ಸಿನಿಮಾದ ಕೆಲವು ಭಾಗದ ದೃಶ್ಯವನ್ನು ಮತ್ತೆ ಶೂಟಿಂಗ್ ಮಾಡುತ್ತಿದ್ದಾರೆ ಎಂದು ಬಲ್ಲ ಮೂಲಗಳಿಂದ ಫಿಲ್ಮಿಬೀಟ್‌ಗೆ ಮಾಹಿತಿ ಸಿಕ್ಕಿತ್ತು. ಹೀಗಾಗಿ ನಿರೀಕ್ಷೆಯಂತೆ 'ಸಲಾರ್' ಮುಂದೂಡಲ್ಪಟ್ಟಿದೆ.

More from Filmibeat

English summary
Hombale Films confirmed that Prabhas Salaar release postpone
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X