ಕರ್ನಾಟಕದ 'ಕೆಜಿಎಫ್ 2' ವಿತರಕರಿಗೆ ಸನ್ಮಾನ: ಗೆಲುವಿಗೆ ಕಾರಣವಾದವರನ್ನು ಹೊಂಬಾಳೆ, ಯಶ್ ಮರೆಯಲಿಲ್ಲ

ಕನ್ನಡದ ಪ್ಯಾನ್ ಇಂಡಿಯಾ ಸಿನಿಮಾ 'ಕೆಜಿಎಫ್ 2' ವಿಶ್ವದ ಉದ್ದಗಲಕ್ಕೂ ಸದ್ದು ಮಾಡುತ್ತಿದೆ. ಪ್ರತಿ ದಿನವೂ ಒಂದೊಂದೇ ದಾಖಲೆಗಳನ್ನು ಮುರಿಯುತ್ತಲೇ ಇದೆ. ಗ್ಲೋಬಲ್ ಬಾಕ್ಸಾಫೀಸ್‌ನಲ್ಲಿ 'ಕೆಜಿಎಫ್ 2' ಸಿನಿಮಾ ಸಾವಿರ ಕೋಟಿಯ ಗಡಿ ದಾಟಿದೆ. ಇದು ಕನ್ನಡ ಮಟ್ಟಿಗೆ ಹೊಸ ಮೈಲಿಗಲ್ಲು. ಇಂತಹದ್ದೊಂದು ಸಾಧನೆಯನ್ನು ಕನ್ನಡ ಯಾವುದೇ ಸಿನಿಮಾ ಇದೂವರೆಗೂ ಮಾಡಿರಲಿಲ್ಲ.

'ಕೆಜಿಎಫ್ 2' ಭರ್ಜರಿ ಯಶಸ್ಸಿನ ಅಲೆಯಲ್ಲಿ ತೇಲುತ್ತಿದೆ. ಮೂರು ವಾರದ ಬಳಿಕವೂ ವಿಶ್ವದೆಲ್ಲೆಡೆ ಸಿನಿಮಾದ ನಾಗಾಲೋಟ ಮುಂದುವರೆದಿದೆ. ಇದೇ ಖುಷಿಯಲ್ಲಿ ಗೆಲುವಿಗೆ ಕಾರಣರಾದವರನ್ನು ನಿರ್ಮಾಣ ಸಂಸ್ಥೆ ಮರೆತಿಲ್ಲ. ತನ್ನ ಗೆಲುವಿಗೆ ಕಾರಣಕರ್ತರಾದವರನ್ನು ಕರೆದು ಸನ್ಮಾನ ಮಾಡಿದೆ. 'ಕೆಜಿಎಫ್ 2' ಸಿನಿಮಾ ಬಿಡುಗಡೆಯಾಗಿ 20 ದಿನಗಳ ಬಳಿಕ ತಮ್ಮದೇ ಕಚೇರಿಯಲ್ಲಿ ಕರ್ನಾಟಕದ ವಿತರಕರಿಗೆ ಗೌರವಿಸಿದೆ.

ವಿತರಕರಿಗೆ ಹೊಂಬಾಳೆ ಸನ್ಮಾನ

ವಿತರಕರಿಗೆ ಹೊಂಬಾಳೆ ಸನ್ಮಾನ

'ಕೆಜಿಎಫ್ 2' ಸಿನಿಮಾವನ್ನು ಕರ್ನಾಟಕದ ಸುಮಾರು 400 ಕ್ಕೂ ಅಧಿಕ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿತ್ತು. ಸಿಂಗಲ್ ಸ್ಕ್ರೀನ್‌ನಿಂದ ಹಿಡಿದು, ಮಲ್ಟಿಪ್ಲೆಕ್ಸ್‌ನಲ್ಲಿ ಅತೀ ಹೆಚ್ಚು ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡಲಾಗಿತ್ತು. ರಾಜ್ಯದಾದ್ಯಂತ ಸಿನಿಮಾದ ಥಿಯೇಟರ್ ಸೆಟಪ್‌ಗೆ ಕಾರಣವಾಗಿದ್ದ ವಿತರಕರನ್ನು ಹೊಂಬಾಳೆ ಫಿಲ್ಮ್ಸ್ ತನ್ನ ಕಚೇರಿಗೆ ಇಂದು(ಮೇ 4) ಕರೆಸಿಕೊಂಡಿತ್ತು. ಅದ್ಭುತ ಯಶಸ್ಸಿಗೆ ಕಾರಣರಾದ ಎಲ್ಲಾ ವಿತರಕರಿಗೂ ಹೊಂಬಾಳೆ ಫಿಲ್ಮ್ಸ್ ಹಾಗೂ ಯಶ್ ಖುದ್ಧಾಗಿ ಸನ್ಮಾನ ಮಾಡಿದ್ದಾರೆ.

ಕರ್ನಾಟಕದ ವಿತರಕರು ಫುಲ್ ಖುಷ್

ಕರ್ನಾಟಕದ ವಿತರಕರು ಫುಲ್ ಖುಷ್

ಕರ್ನಾಟಕದ ವಿತರಕರು ಕಲೆಕ್ಷನ್ ವಿಚಾರದಲ್ಲೂ ಫುಲ್ ಖುಷಿಯಾಗಿದ್ದಾರೆ. ಸಿನಿಮಾ ಬಿಡುಗಡೆಯಾದಲ್ಲಿಂದ ಇಲ್ಲಿವರೆಗೂ ಅದ್ಭುತ ಗಳಿಕೆ ಕಂಡಿದೆ. 'ಕೆಜಿಎಫ್ 2' ವಿತರಣೆ ಮಾಡಿದ ವಿತರಕರಿಗೆ ಲಾಭದಲ್ಲಿದ್ದಾರೆ. ಇದರ ಮಧ್ಯೆನೇ ಹೊಂಬಾಳೆ ಸಂಸ್ಥೆ ಕಡೆ ಸನ್ಮಾನ ಮಾಡಿದ್ದು, ವಿತರಕರಿಗೆ ಖುಷಿ ಕೊಟ್ಟಿದೆ. 'ಕೆಜಿಎಫ್ 2' ಸಿನಿಮಾವನ್ನು ವಿತರಣೆ ಮಾಡಿದ ಆರು ಮಂದಿ ವಿತರಕರನ್ನು ಕರೆದು ಸನ್ಮಾನಿಸಲಾಗಿದ್ದು, ಜಯಣ್ಣ, ಗಂಗಾಧರ್, ಹೊನ್ನಾಳಿ ವಿತರಕ ಮೋಹನ್ ಸೇರಿದಂತೆ ಹಲವರಿಗೆ ಯಶ್ ಹಾಗೂ ಹೊಂಬಾಳೆ ಫಿಲ್ಮ್ಸ್ ಸನ್ಮಾನ ಮಾಡಲಾಗಿದೆ.

'ಕೆಜಿಎಫ್ 2' ವಿತರಕರು ಏನಂತಾರೆ?

'ಕೆಜಿಎಫ್ 2' ವಿತರಕರು ಏನಂತಾರೆ?

'ಕೆಜಿಎಫ್ 2' ಸಿನಿಮಾ ವಿತರಣೆ ಮಾಡಿದ್ದ ವಿತರಕರಲ್ಲಿ ಒಬ್ಬರಾದ ಹೊನ್ನಾಳಿ ಮೋಹನ್ ಸಂತಸ ವ್ಯಕ್ತಪಡಿಸಿದ್ದಾರೆ. ಗೆಲುವಿಗೆ ಕಾರಣರಾದವರನ್ನು ಯಶ್ ಹಾಗೂ ಹೊಂಬಾಳೆ ಫಿಲ್ಮ್ಸ್ ಇಬ್ಬರೂ ಮರೆತಿಲ್ಲ. " ಕೆಜಿಎಫ್ 2 ಗೆಲುವಿನ ಬಳಿಕ ವಿತರಕರನ್ನು ಕರೆದು ಹೊಂಬಾಳೆ ಸಂಸ್ಥೆಯಲ್ಲಿಯೇ ಸನ್ಮಾನ ಮಾಡಿದ್ದರು. ನಾನು ನಮ್ಮ ಸಹೋದರರಾದ ಹೆಚ್ ಬಿ ಶಿವಯೋಗಿ ಅವರ ಜೊತೆ ಸೇರಿಕೊಂಡು ಶಿವಮೊಗ್ಗ, ಚಿಕ್ಕಮಗಳೂರು, ಸೌತ್ ಕೇಂದ್ರದಲ್ಲಿ 'ಕೆಜಿಎಫ್' ಸಿನಿಮಾವನ್ನು ವಿತರಣೆ ಮಾಡಿದ್ದೆವು. 29 ಸಿಂಗಲ್ ಸ್ಕ್ರೀನ್ ಹಾಗೂ ಮಲ್ಟಿಪ್ಲೆಕ್ಸ್‌ಗಳಲ್ಲಿ ಸಿನಿಮಾ ಬಿಡುಗಡೆಯಾಗಿತ್ತು. ಈ 20 ದಿನಗಳಲ್ಲಿ ಹಿಂದೆಂದೂ ಈ ಏರಿಯಾಗಳಲ್ಲಿ ಮಾಡದ ಕಲೆಕ್ಷನ್ ಅನ್ನು ಕೆಜಿಎಫ್ 2 ಮಾಡಿದೆ." ಎನ್ನುತ್ತಾರೆ ವಿತರಕ ಹೊನ್ನಾಳಿ ಮೋಹನ್.

ಹಿಂದಿ ಬೆಲ್ಟ್‌ನಲ್ಲಿ 'ಕೆಜಿಎಫ್ 2' ಸೂಪರ್ ಕಲೆಕ್ಷನ್

ಹಿಂದಿ ಬೆಲ್ಟ್‌ನಲ್ಲಿ 'ಕೆಜಿಎಫ್ 2' ಸೂಪರ್ ಕಲೆಕ್ಷನ್

ಕನ್ನಡ ಪ್ಯಾನ್ ಇಂಡಿಯಾ ಸಿನಿಮಾ ಹಿಂದಿ ಬೆಲ್ಟ್‌ನಲ್ಲಿ ಬೇಜಾನ್ ಸದ್ದು ಮಾಡುತ್ತಿದೆ. 20ನೇ ದಿನ ಅದೂ ರಂಜಾನ್ ಹಬ್ಬದಂದು ಹಿಂದಿ ಏರಿಯಾಗಳಲ್ಲಿ 9.27 ಕೋಟಿ ಗಳಿಕೆ ಕಂಡಿತ್ತು. ಈ ಮೂಲಕ 'ಕೆಜಿಎಫ್ 2' ಸಿನಿಮಾ ಬಾಲಿವುಡ್‌ ಬಾಕ್ಸಾಫೀಸ್‌ನಲ್ಲೇ 382 ಕೋಟಿಗೂ ಅಧಿಕ ಗಳಿಕೆ ಕಂಡಿದೆ. ಇದು ಕನ್ನಡ ಚಿತ್ರರಂಗದ ಮಟ್ಟಿಗೆ ಬಹು ದೊಡ್ಡ ದಾಖಲೆ ಎಂದೇ ಹೇಳಬಹುದು.

More from Filmibeat

English summary
Hombale Films Felicitated Karnataka Distributors For Their Support, Know More.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X