ಜೂನಿಯರ್ ಎನ್‌ಟಿಆರ್ ಜೊತೆ ಹೊಂಬಾಳೆ ಫಿಲ್ಮ್ಸ್ ಸಿನಿಮಾ? ಇನ್‌ಸ್ಟಾಗ್ರಾಂ ಪೋಸ್ಟ್‌ನ ಸುಳಿವೇನು?

ಕನ್ನಡದ ಶ್ರೀಮಂತ ನಿರ್ಮಾಣ ಸಂಸ್ಥೆ ಹೊಂಬಾಳೆ ಫಿಲ್ಮ್ಸ್ ಇತ್ತೀಚೆಗೆ ಹೊಸ ಪ್ರಾಜೆಕ್ಟ್ ಅನ್ನು ಅನೌನ್ಸ್ ಮಾಡಿರಲಿಲ್ಲ. ಈಗಾಗಲೇ ಹೊಸ ಪ್ರಾಜೆಕ್ಟ್ ಘೋಷಣೆ ಮಾಡಿ ವರ್ಷಗಳೇ ಆಗಿವೆ. ಆಗಾಗ ವಿತರಣೆ ಮಾಡುವುದಕ್ಕೆ ಮುಂದೆ ಬಂದಿದ್ದು ಬಿಟ್ಟರೆ, ಹೊಸ ಪ್ರಾಜೆಕ್ಟ್ ಘೋಷಣೆ ಮಾಡಿಲ್ಲ. ಸದ್ಯ 'ಸಲಾರ್' ಪಾರ್ಟ್ 2, ಹೃತಿಕ್ ರೋಷನ್ ಜೊತೆ ಸಿನಿಮಾವನ್ನು ಅನೌನ್ಸ್ ಮಾಡಿರೋದು ಅಷ್ಟೇ.

ಹೊಂಬಾಳೆ ಫಿಲ್ಮ್ಸ್ ಸುಮ್ಮನೆ ಸಿನಿಮಾಗಳನ್ನು ಘೋಷಣೆ ಮಾಡುವುದಿಲ್ಲ. ಕಥೆ, ಕ್ಯಾನ್ವಾಸ್, ಡೈರೆಕ್ಟರ್ ಎಲ್ಲವನ್ನೂ ನೋಡಿಕೊಂಡು ಸಿನಿಮಾ ಅನೌನ್ಸ್ ಮಾಡಿದೆ. ಆದ್ರೀಗ ಜೂನಿಯರ್ ಎನ್‌ಟಿಆರ್ ಹುಟ್ಟು ಹಬ್ಬದ ವೇಳೆ ಮಾಡಿದ ಒಂದು ಪೋಸ್ಟ್ ಟಾಲಿವುಡ್‌ನಲ್ಲಿ ದೊಡ್ಡ ಸಂಚಲನವನ್ನೇ ಸೃಷ್ಟಿಸಿದೆ. ಅಷ್ಟೇ ಅಲ್ಲ ಕನ್ನಡ ಚಿತ್ರರಂಗದಲ್ಲೂ ದೊಡ್ಡ ಮಟ್ಟದ ಚರ್ಚೆಗೆ ಕಾರಣವಾಗಿದೆ.

Hombale Films gave hint to produce movie for Jr NTR on Instagram birthday post

ಹೊಂಬಾಳೆ ಮಾಡಿದ ಒಂದು ಇನ್‌ಸ್ಟಾಗ್ರಾಂ ಪೋಸ್ಟ್ ಇಷ್ಟೊಂದು ಸಂಚಲನ ಸೃಷ್ಟಿಸಬಹುದೆಂದು ಯಾರೂ ಊಹಿಸಿರಲಿಲ್ಲ. ಜೂನಿಯರ್ ಎನ್‌ಟಿಆರ್ ಹುಟ್ಟುಹಬ್ಬಕ್ಕೆ ಸ್ಯಾಂಡಲ್‌ವುಡ್‌ನ ಪ್ರತಿಷ್ಠಿತ ನಿರ್ಮಾಣ ಸಂಸ್ಥೆ 'ಹೊಂಬಾಳೆ ಫಿಲ್ಮ್ಸ್' ಹಂಚಿಕೊಂಡಿರುವ ವಿಶೇಷ ಪೋಸ್ಟ್‌ ಇಷ್ಟೊಂದು ಸಂಚಲನ ಸೃಷ್ಟಿಸುವುದಕ್ಕೆ ಕಾರಣವೇನು? ಜೂ.ಎನ್‌ಟಿಆರ್‌ಗೆ ಹೊಂಬಾಳೆ ಸಿನಿಮಾ ಮಾಡುತ್ತಾ? ತಿಳಿಯುವುದಕ್ಕೆ ಮುಂದೆ ನೋಡಿ.

ಜೂನಿಯರ್ ಎನ್‌ಟಿಆರ್ ಬರ್ತ್‌ಡೇ ಪ್ರಯುಕ್ತ 'ಡ್ರ್ಯಾಗನ್' ಸಿನಿಮಾದ ಪವರ್‌ಫುಲ್ ಗ್ಲಿಂಪ್ಸ್ ರಿಲೀಸ್ ಮಾಡಲಾಗಿತ್ತು. ಜೂನಿಯರ್ ಎನ್‌ಟಿಆರ್‌ ಬರ್ತ್‌ಡೇ ವಿಶ್ ಮಾಡುವುದರ ಜೊತೆಗೆ ಪವರ್-ಪ್ಯಾಕ್ಡ್ ಗ್ಲಿಂಪ್ಸ್‌ ಅನ್ನು ಮೆಚ್ಚಿಕೊಂಡು ತನ್ನ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಪೋಸ್ಟ್ ಅನ್ನು ಹಂಚುಕೊಳ್ಳಲಾಗಿತ್ತು. ಈ ಪೋಸ್ಟ್ ಬಳಿಕ ದೊಡ್ಡ ಸಂಚಲನ ಸೃಷ್ಟಿಸಿದೆ. ಅಷ್ಟಕ್ಕೂ ಇನ್‌ಸ್ಟಾಗ್ರಾಂ ಪೋಸ್ಟ್‌ನಲ್ಲಿ ಏನಿದೆ ಎಂದು ನೋಡುವುದಾರೇ,

"A Dragon Rises. A Mass Roars. What an explosive glimpse, Every frame screams MASS and MAGIC. Wishing The Devil, @jrntr a Massive Happy birthday", ಎಂದು ಹೊಂಬಾಳೆ ಫಿಲ್ಮ್ಸ್ ತನ್ನ ಅಧಿಕೃತ ಖಾತೆಗಳಲ್ಲಿ ಬರೆದು ಪೋಸ್ಟ್ ಮಾಡಿತ್ತು. ಆದರೆ, ಈ ಪೋಸ್ಟ್‌ ಕೇವಲ ಅನ್ನು ಕೇವಲ ಬರ್ತ್‌ಡೇ ವಿಶ್ ಮಾಡುವುದಕ್ಕಷ್ಟೇ ಅಲ್ಲ. ಇದರ ಹಿಂದೆ ದೊಡ್ಡದೊಂದು ಲೆಕ್ಕಾಚಾರವೇ ಅಡಗಿದೆ ಎಂಬ ಮಾತುಗಳು ಕೇಳಿಬಂದಿದ್ದವು.

ಸದ್ಯ ಜೂನಿಯರ್ ಎನ್‌ಟಿಆರ್ ಮತ್ತು ಪ್ರಶಾಂತ್ ನೀಲ್ ಕಾಂಬಿನೇಷನ್‌ನ 'ಡ್ರ್ಯಾಗನ್' ಚಿತ್ರವನ್ನು ಮೈತ್ರಿ ಮೂವಿ ಮೇಕರ್ಸ್ ಮತ್ತು ಎನ್‌ಟಿಆರ್ ಆರ್ಟ್ಸ್ ಸಂಸ್ಥೆಗಳು ಜಂಟಿಯಾಗಿ ನಿರ್ಮಿಸುತ್ತಿವೆ. ಹೀಗಿದ್ದರೂ, ಹೊಂಬಾಳೆ ಫಿಲ್ಮ್ಸ್ ಈ ಚಿತ್ರದ ಗ್ಲಿಂಪ್ಸ್ ಅನ್ನು ಶೇರ್ ಮಾಡಿ ಸಂಭ್ರಮಿಸಿದೆ. ಇದು ಕೇವಲ ಪ್ರಶಾಂತ್ ನೀಲ್ ಮೇಲಿನ ಗೌರವಕ್ಕೆ ಪೋಸ್ಟ್ ಮಾಡಿದ್ದಾ? ಇಲ್ಲ ಬೇರೆ ಏನಾದರೂ ಹೊಸ ವಿಚಾರವಿದೆಯಾ? ಅನ್ನೋ ಪ್ರಶ್ನೆಯಂತೂ ಕಾಣುತ್ತಿದೆ.

ಹೊಂಬಾಳೆ ಸಂಸ್ಥೆಗೆ 'ಕೆಜಿಎಫ್', 'ಕೆಜಿಎಫ್ 2' ಮತ್ತು 'ಸಲಾರ್' ನಂತಹ ಮೆಗಾ ಬ್ಲಾಕ್‌ಬಸ್ಟರ್‌ಗಳನ್ನು ಪ್ರಶಾಂತ್ ನೀಲ್ ನೀಡಿದ್ದಾರೆ. ಹೀಗಾಗಿ ಪ್ರಶಾಂತ್ ನೀಲ್ ವಿಷನ್ ಅನ್ನು ಹೊಂಬಾಳೆ ಮತ್ತೊಮ್ಮೆ ಮುಕ್ತವಾಗಿ ಶ್ಲಾಘಿಸಿದೆ.ಈ ಪೋಸ್ಟ್ ನೋಡಿದ ಪ್ರೇಕ್ಷಕರು ಮತ್ತು ಟ್ರೇಡ್ ಅನಾಲಿಸ್ಟ್‌ಗಳು ಸೋಶಿಯಲ್ ಮೀಡಿಯಾದಲ್ಲಿ ಒಂದು ಪ್ರಶ್ನೆಯನ್ನು ಹುಟ್ಟಾಕಿದ್ದಾರೆ. ಹೊಂಬಾಳೆ ಫಿಲ್ಮ್ಸ್ ಬ್ಯಾನರ್ ಅಡಿಯಲ್ಲಿ ಜೂನಿಯರ್ ಎನ್‌ಟಿಆರ್ ಸಿನಿಮಾ ಮಾಡಬಹುದೇ? ಅನ್ನೋ ಅನುಮಾನವಂತೂ ಮೂಡಿದೆ.

ಮೂಲಗಳ ಪ್ರಕಾರ, ಕೇವಲ ಜನ್ಮದಿನದ ಶುಭಾಶಯ ಕೋರುವುದಷ್ಟೇ ಈ ಪೋಸ್ಟ್‌ನ ಉದ್ದೇಶವಾಗಿರಲಿಲ್ಲ. ಪ್ಯಾನ್-ಇಂಡಿಯಾ ಮಟ್ಟದಲ್ಲಿ ಹೊಸ ಇತಿಹಾಸ ಸೃಷ್ಟಿಸುತ್ತಿರುವ ಹೊಂಬಾಳೆ ಫಿಲ್ಮ್ಸ್, ಜೂನಿಯರ್ ಎನ್‌ಟಿಆರ್ ಇಬ್ಬರೂ ಸೇರಿ ಒಂದು ಮೆಗಾ ಪ್ರಾಜೆಕ್ಟ್ ಮಾಡಲು ಈಗಾಗಲೇ ತೆರೆಮರೆಯಲ್ಲಿ ಮಾತುಕತೆ ನಡೆಸುತ್ತಿದೆ ಎಂಬ ಗಾಢ ವದಂತಿಗಳಿವೆ. ಇಷ್ಟೇ ಅಲ್ಲದೆ,

ಮತ್ತೊಂದೆಡೆ, ಹೊಂಬಾಳೆ ಫಿಲ್ಮ್ಸ್ ಇತ್ತೀಚೆಗೆ ತೆಲುಗಿನ ದೊಡ್ಡ ಚಿತ್ರಗಳ ಓವರ್‌ಸೀಸ್ ಹಾಗೂ ಕರ್ನಾಟಕದ ವಿತರಣಾ ಹಕ್ಕುಗಳನ್ನು (Distribution Rights) ಕೈಗೆತ್ತಿಕೊಳ್ಳುತ್ತಿರುವುದರಿಂದ, 'ಡ್ರಾಗನ್' ಚಿತ್ರದ ಥಿಯೇಟ್ರಿಕಲ್ ರಿಲೀಸ್ ಮತ್ತು ವಿತರಣೆಯ ಜವಾಬ್ದಾರಿಯನ್ನು ಹೊಂಬಾಳೆ ವಹಿಸಿಕೊಳ್ಳುವ ಸಾಧ್ಯತೆಗಳೂ ದಟ್ಟವಾಗಿವೆ.

English summary
Hombale Films gave hint to produce movie for Jr NTR on Instagram birthday post.
Read more about: hombale films ntr movie
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X