ರಿಷಬ್ ಶೆಟ್ಟಿ ನಿರ್ದೇಶನದ ಕಾಂತಾರದಲ್ಲಿ ನಟಿಸುವ ಆಸೆ ಇದೇಯೇ: ಹೊಂಬಾಳೆ ಫಿಲ್ಮ್ಸ್ ನೀಡಿದೆ ಸುವರ್ಣಾವಕಾಶ!

ಇತ್ತೀಚೆಗಷ್ಟೇ ರಿಷಬ್ ಶೆಟ್ಟಿ ನಿರ್ದೇಶನದ ಕಾಂತಾರ ಅಧ್ಯಾಯ-1 ಸಿನಿಮಾದ ಬಹುನಿರೀಕ್ಷಿತ ಮೊದಲ ಪೋಸ್ಟರ್ ಬಿಡುಗಡೆ ಆಗಿತ್ತು. ಪೋಸ್ಟರ್ ನೋಡಿ ಸಿನಿಪ್ರೇಮಿಗಳು ಇಷ್ಟಪಟ್ಟಿದ್ದರು. ಸಿನಿಮಾ ಯಾವಾಗ ಬರುತ್ತೇ...? ಯಾವ ಯಾವ ನಟ, ನಟಿಯರು ಸಿನಿಮಾದ ಭಾಗವಾಗಿರುತ್ತಾರೆ ಎಂದು ಕಾಯುತ್ತಿದ್ದರು. ಈಗ ನೀವೇ ಈ ಸಿನಿಮಾದ ಭಾಗವಾಗಬಹುದು!.

ಹೌದು.... ಹೊಂಬಾಳೆ ಫಿಲ್ಮ್ಸ್ ಸುವರ್ಣವಕಾಶ ನೀಡಿದೆ. ಕಾಂತಾರ ಅಧ್ಯಾಯ-1 ರಲ್ಲಿ ನಟಿಸಲು ಆಸಕ್ತಿ ಇರುವವರು ಅರ್ಜಿ ಸಲ್ಲಿಸಿ, ಆಡಿಷನ್ ನೀಡಿ ಸಿನಿಮಾದಲ್ಲಿ ನಟಿಸಬಹುದು. ರಿಷಬ್ ಶೆಟ್ಟಿ ನಿರ್ದೇಶನದ ಕಾಂತಾರ ಪ್ರಿಕ್ವೆಲ್ ಬಹುನಿರೀಕ್ಷಿತ ಕನ್ನಡ ಸಿನಿಮಾಗಳ ಸಾಲಿನಲ್ಲಿ ಮೊದಲ ಸ್ಥಾನದಲ್ಲಿದೆ.

Hombale Films has invited auditions for Rishabh Shettys Kantara Chapter-1

ಕಾಂತಾರದಲ್ಲಿ ನಟಿಸಲು ಆಸಕ್ತಿಯಿದ್ದರೇ ಹೀಗೆ ಮಾಡಿ

ರಿಷಬ್ ಶೆಟ್ಟಿ ನಿರ್ದೇಶನದ ಕಾಂತಾರ ಪ್ರಿಕ್ವೆಲ್‌ನಲ್ಲಿ ನಟಿಸಲು ಬಯಸುವವರಾಗಿದ್ದರೇ, ಸೂಪರ್ ಹಿಟ್ ಕಾಂತಾರದ ಸಿನಿಮಾ ತಂಡದಲ್ಲಿ ಕೆಲಸ ಮಾಡಲು ಬಯಸುವವರಾಗಿದ್ದರೆ ಅವರಿಗಾಗಿಯೇ ಹೊಂಬಾಳೆ ಫಿಲ್ಮ್ಸ್ ಒಳ್ಳೆ ಅವಕಾಶ ನೀಡುತ್ತಿದೆ. 'ಕಾಂತಾರ ಚಾಪ್ಟರ್ 1'ನಲ್ಲಿ ನಟಿಸಲು ಕಲಾವಿದರ ಅವಶ್ಯಕತೆ ಇದೆ. ಹೀಗಾಗಿಯೇ ಹೊಂಬಾಳೆ ಫಿಲ್ಮ್ಸ್ ಕಾಲ್​ಫಾರ್ ಮಾಡಿದೆ.

'ಕಲಾವಿದರು ಬೇಕಾಗಿದ್ದಾರೆ' ಎಂದು ಹೊಂಬಾಳೆ ಫಿಲ್ಮ್ಸ್ ಪೋಸ್ಟರ್ ಹಂಚಿಕೊಂಡಿದ್ದು, ಸಿನಿಮಾದಲ್ಲಿ ನಟಿಸಲು ವಯಸ್ಸಿನ ಮಿತಿ ಇದೆ. ಕಾಂತಾರದ ಭಾಗವಾಗಲು ಬಯಸುವ ಪುರುಷರ ವಯಸ್ಸು 30 ವರ್ಷದಿಂದ 60 ವರ್ಷದ ಒಳಗೆ ಇರಬೇಕು. ಅದೇ ರೀತಿ 18 ರಿಂದ 60 ವರ್ಷದ ಮಹಿಳೆಯರು ಅರ್ಜಿ ಸಲ್ಲಿಸಬಹುದು.

ಕಾಂತಾರ ಸಿನಿಮಾದಲ್ಲಿ ನಟಿಸಲು ಅರ್ಜಿ ಸಲ್ಲಿಸುವುದು ಹೇಗೆ?

ಕಾಂತಾರ ಸಿನಿಮಾದಲ್ಲಿ ರಿಷಬ್ ಶೆಟ್ಟಿ ನಾಯಕನಾಗಿ ನಟಿಸಲಿದ್ದಾರೆ. ನಾಯಕಿಯಾಗಿ ಸಪ್ತಮಿ ಗೌಡ ಇರಲಿದ್ದರೆಯೇ ಇಲ್ಲವೇ ಎಂಬ ಬಗ್ಗೆ ಇನ್ನು ಮಾಹಿತಿಯಿಲ್ಲ. ಉಳಿದ ಪಾತ್ರಗಳಿಗೆ ಹುಟುಕಾಟ ನಡೆಸಲಾಗುತ್ತಿದೆ. ಸಿನಿಮಾಗೆ ನೂರಾರು ಕಲಾವಿದರ ಅವಶ್ಯಕತೆ ಇರುವುದರಿಂದ ಈ ಸಿನಿಮಾದಲ್ಲಿ ನಟಿಸಲು ಸಾಕಷ್ಟು ಜನರಿಗೆ ಅವಕಾಶವಿರಲಿದೆ. ಅರ್ಜಿ ಸಲ್ಲಿಸಲು ಡಿಸೆಂಬರ್‌ 14 ಕೊನೆಯ ದಿನಾಂಕವಾಗಿದೆ.

ಅರ್ಜಿ ಸಲ್ಲಿಸಲು, ನೋಂದಣಿ ಮಾಡಲು ಬಯಸುವವರು kantara.film ಗೆ ಭೇಟಿ ನೀಡಬೇಕು. ಈ ಲಿಂಕ್‌ನ ಮೇಲೆ ಕ್ಲಿಕ್ ಮಾಡಿದರೇ ಅದು ನಿಮ್ಮ ಹೆಸರು, ಮೊಬೈಲ್ ನಂಬರ್, ಈಮೇಲ್ ಐಡಿ, ವಿಳಾಸ, ಜೆಂಡರ್, ವಯಸ್ಸು, ಹುಟ್ಟಿದ ದಿನ, ವಿದ್ಯಾಹರ್ತೆ, ಉದ್ಯೋಗ, ಯಾವ ಯಾವ ಭಾಷೆಗಳು, ನಿಮ್ಮ ತೂಕ, ಎತ್ತರ, ಇನ್‌ಸ್ಟಾಗ್ರಾಮ್ ಐಡಿ, ನಟನೆಯಲ್ಲಿ ಅನುಭವ ಸೇರಿ ಹಲವು ವಿಷಯಗಳನ್ನು ಕೇಳಲಾಗುತ್ತದೆ.

ಕಾಂತಾರ ತಂಡದ ಭಾಗವಾಗಲು ಮತ್ತೊಂದು ವಿಶೇಷ ಸೂಚನೆಯನ್ನು ಕೂಡ ನೀಡಲಾಗಿದೆ. ರೀಲ್ಸ್ ಮತ್ತು ಅವುಗಳನ್ನೇ ಹೋಲುವ ವಿಡಿಯೋಗಳಿದ್ದರೆ ಅದನ್ನು ಸ್ವೀಕರಿಸಲು ಸಾಧ್ಯವಿಲ್ಲ ಎಂದು ಹೊಂಬಾಳೆ ಫಿಲ್ಮ್ಸ್ ಫೋಸ್ಟರ್‌ನಲ್ಲಿ ಮೊದಲೆ ತಿಳಿಸಿದೆ.

ಇನ್ನು, ಹೊಂಬಾಳೆ ಫಿಲ್ಮ್ಸ್ ನವೆಂಬರ್ 11 ರಂದು ಮಲ್ಲೇಶ್ವರನಲ್ಲಿರುವ ಜಿಎಂ ರೆಜೋಯ್ಜ್ ಡಿಜಿಟಲ್ ಆಡಿಟೋರಿಯಂ ಬ್ಯಾಕ್ವೆಟ್‌ನಲ್ಲಿ ಸಹಾಯಕ ನಿರ್ದೇಶಕರಿಗೆ ಕಾಲ್‌ಫರ್ ಮಾಡಿತ್ತು. "ನಿಮ್ಮ ಸೃಜನಶೀಲತೆ ಮತ್ತು ಕಥೆ ಹೇಳುವ ಉತ್ಸಾಹವನ್ನು ನಮ್ಮ ಸಿನಿಮಾ ಲೋಕಕ್ಕೂ ತನ್ನಿ. ನಮ್ಮ ರೋಚಕ ಸಿನಿಮಾ ಪ್ರಾಜೆಕ್ಟ್‌ಗಳ ಭಾಗವಾಗಲು ನಾವು ನಿಮ್ಮನ್ನು ಸ್ವಾಗತಿಸುತ್ತೇವೆ. ಇಲ್ಲಿ ನೀವು ಕಲಿಯಬಹುದು, ಬೆಳೆಯಬಹುದು ಮತ್ತು ಬೆಳ್ಳಿ ಪರದೆಯ ಮ್ಯಾಜಿಕ್‌ಗಳಿಗೆ ಕೊಡುಗೆ ನೀಡಬಹುದು" ಎಂದು ಹೇಳಿತ್ತು.

More from Filmibeat

English summary
Opportunity to act in Kantara chapter1, auditions open.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X