'KGF 3' ಫಿಕ್ಸ್? ಭಾರತೀಯ ಚಿತ್ರರಂಗ ಶ್ರೇಷ್ಠ ಘರ್ಷಣೆಯ ಸುಳಿವು ಕೊಟ್ಟ ಹೊಂಬಾಳೆ.. KGF2 + Salaar + NTR 31?
ರಾಕಿ ಭಾಯ್ ಗಡ್ಡ ತೆಗೆದಿಲ್ಲ. ಕೆಜಿಎಫ್ ಗೆಟಪ್ ಬದಲಾಗಿಲ್ಲ. ಸಿನಿಮಾ ತೆರೆಕಂಡು ಒಂದು ವರ್ಷ ಆದರೂ, ರಾಕಿ ಭಾಯ್ ಒಂದೇ ಗೆಟಪ್‌ನಲ್ಲಿ ಇರೋದು ಯಾಕೆ? ಇಂತಹದ್ದೊಂದು ಪ್ರಶ್ನೆ ಯಶ್ ಅಭಿಮಾನಿಗಳನ್ನು ಕಾಡುತ್ತಲೇ ಇದೆ. ಈ ಪ್ರಶ್ನೆಗ ಉತ್ತರ ಇನ್ನೂ ಸಿಗಬೇಕಿದೆ.
'ಕೆಜಿಎಫ್ 2' ಮೆಗಾ ಬ್ಲಾಕ್‌ಬಸ್ಟರ್ ಲಿಸ್ಟ್ ಸೇರಿದ ಬಳಿಕವೂ ಹೊಸ ಸಿನಿಮಾ ಅನೌನ್ಸ್ ಮಾಡಿಲ್ಲ. 19ನೇ ಸಿನಿಮಾ ಯಾವುದು ಅನ್ನೋ ಸುಳಿವು ಕೂಡ ಇಲ್ಲ. ಆದರೂ, ತೆರೆ ಮರೆಯಲ್ಲಿ ಹೊಸ ಸಿನಿಮಾ ಬಗ್ಗೆ ಕೆಲಸ ನಡೆಯುತ್ತಲೇ ಇದೆ. ಈ ಸಿನಿಮಾ ಬಗ್ಗೆ ಸುಳಿವು ಇಲ್ಲ.
ಯಶ್ ಕೆರಿಯರ್‌ನ ಮೆಗಾ ಸಿನಿಮಾ ರಿಲೀಸ್ ಆಗಿ ಒಂದು ವರ್ಷದ ಹೊಸ್ತಿಲಲ್ಲಾದ್ರೂ 19ನೇ ಸಿನಿಮಾ ಅನೌನ್ಸ್ ಆಗಬಹುದಾ? ಅನ್ನೋ ನಿರೀಕ್ಷೆಯಲ್ಲಿರೋರಿಗೆ ಹೊಂಬಾಳೆ ಫಿಲ್ಮ್ಸ್ ಒಂದು ಸುಳಿವು ಕೊಟ್ಟಿದೆ. ಅದನ್ನು ನೋಡುತ್ತಿದ್ದಂತೆ ಅಭಿಮಾನಿಗಳು ಹೊಸ ಲೆಕ್ಕಾಚಾರ ಹಾಕುವುದಕ್ಕೆ ಶುರು ಮಾಡಿದ್ದಾರೆ.

'ಕೆಜಿಎಫ್ 3' ಬಗ್ಗೆ ಸುಳಿವು ಕೊಟ್ಟ ಹೊಂಬಾಳೆ
'ಕೆಜಿಎಫ್ ಚಾಪ್ಟರ್ 2' ಒಂದು ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಹೊಂಬಾಳೆ ಫಿಲ್ಮ್ಸ್ ಒಂದು ವಿಡಿಯೋವನ್ನು ರಿಲೀಸ್ ಮಾಡಿದೆ. ಇದೇ ವಿಡಿಯೋ ಈಗ ಸೋಶಿಯಲ್ ಮೀಡಿಯಾದಲ್ಲಿ ದೊಡ್ಡ ಚರ್ಚೆಗೆ ಕಾರಣವಾಗಿದೆ. ಹೊಂಬಾಳೆ ವಿಡಿಯೋ ರಿಲೀಸ್ ಮಾಡಿದ ಕ್ಷಣದಿಂದಲೇ ಎರಡು ಕಾರಣಕ್ಕೆ ನೆಟ್ಟಿಗರು ಥ್ರಿಲ್ ಆಗಿದ್ದಾರೆ.
ಈ ವಿಡಿಯೋದಲ್ಲಿ ಸಿಕ್ಕ ಮೊದಲ ಸುಳಿವು 'ಕೆಜಿಎಫ್ 3'. ರಾಕಿ ಭಾಯ್ ಅಭಿಮಾನಿಗಳು ಹಿಂದಿನಿಂದಲೂ 'ಕೆಜಿಎಫ್ ಚಾಪ್ಟರ್ 3' ಯಾವಾಗ? ಅಂತ ಪ್ರಶ್ನೆ ಮಾಡುತ್ತಲೇ ಇದ್ದರು. ಈಗ 'ಕೆಜಿಎಫ್ 2' ಒಂದು ವರ್ಷ ಪೂರೈಸಿದ ಬೆನ್ನಲ್ಲೇ ಚಾಪ್ಟರ್ 3 ಬಗ್ಗೆ ಮೊದಲ ಬಾರಿಗೆ ಸುಳಿವು ನೀಡಲಾಗಿದೆ. ವಿಡಿಯೋದಲ್ಲಿ " ಕೊಟ್ಟ ಮಾತನ್ನು ಉಳಿಸಿಕೊಳ್ಳಲಾಗುತ್ತೆ" ಎಂದು ಟ್ರೈಲರ್‌ನಲ್ಲಿ ಹೇಳಾಗಿತ್ತು. ಈ ವಿಡಿಯೋದ ಸಾಲನ್ನು ಬಳಸಿ, ಆ ಬಳಿಕ "ಕೊಟ್ಟ ಮಾತನ್ನು ಉಳಿಸಿಕೊಳ್ಳುತ್ತಾ?" ಅನ್ನೋ ಸಾಲನ್ನು ಹಾಕಲಾಗಿತ್ತು. ಆಗ ಬಳಿಕ '3' ಎಂಬುದನ್ನು ತೋರಿಸಿದ್ದಾರೆ. ಈ ಮೂಲಕ 'ಕೆಜಿಎಫ್ 3' ಸುಳಿವು ನೀಡಲಾಗಿದೆ.

KGF2 + Salaar + NTR 31?
ಒಂದ್ಕಡೆ 'ಕೆಜಿಎಫ್ 3' ಬಗ್ಗೆ ಕೊಟ್ಟರೆ, ಇನ್ನೊಂದು ಕಡೆ ಭಾರತೀಯ ಚಿತ್ರರಂಗದ ಶ್ರೇಷ್ಠ ಸಿನಿಮಾಗಳ ಸಂಘರ್ಷ ಎಂದು ಹೇಳಲಾಗಿದೆ. ಈ ಸಾಲು ಸಿನಿಮಾ ಪ್ರೇಮಿಗಳನ್ನು ಕಾಡಲು ಶುರುವಾಗಿದೆ. ಒಟ್ನಲ್ಲಿ ಹೊಂಬಾಳೆ ಫಿಲ್ಮ್ಸ್ ದೊಡ್ಡದೇನನ್ನೋ ಪ್ಲಾನ್ ಮಾಡಿದೆ ಅನ್ನೋ ಸುಳಿವನ್ನಂತೂ ವಿಡಿಯೋ ಮೂಲಕ ನೀಡಲಾಗಿದೆ.
ಇದೇ ಸಾಲನ್ನು ಇಟ್ಟುಕೊಂಡು ಅಭಿಮಾನಿಗಳು ನಾನಾ ರೀತಿಯ ಲೆಕ್ಕಾಚಾರ ಹಾಕಿದ್ದಾರೆ. ರಾಕಿ ಭಾಯ್ಸ್ ಫ್ಯಾನ್ಸ್ 'ಕೆಜಿಎಫ್ 2'+ಸಲಾರ್+ಎನ್‌ಟಿಆರ್31 ಎಂದು ಕಮೆಂಟ್ ಮಾಡಿದ್ದಾರೆ. ಈ ಮೂರು ಸಿನಿಮಾಗಳಿಗೂ ಏನೋ ಲಿಂಕ್ ಇದೆ ಅಂತ ಗೆಸ್ ಮಾಡುತ್ತಿದ್ದಾರೆ. ಈ ಮೂಲಕ ಪ್ರಶಾಂತ್ ನೀಲ್ ಒಂದು ಯುನಿವರ್ಸ್ ಅನ್ನು ಸೃಷ್ಟಿ ಮಾಡಲು ಮುಂದಾಗಿದ್ದಾರಾ? ಅನ್ನೋ ಪ್ರಶ್ನೆನೂ ಅಭಿಮಾನಿಗಳನ್ನು ಕಾಡುತ್ತಿದೆ.
ಸದ್ಯಕ್ಕಂತೂ 'ಕೆಜಿಎಫ್ ಚಾಪ್ಟರ್ 3' ಸೆಟ್ಟೇರುವ ಲಕ್ಷಣಗಳು ಇಲ್ಲ. ಯಶ್, ಪ್ರಶಾಂತ್ ನೀಲ್ ಇಬ್ಬರೂ ಬೇರೆ ಬೇರೆ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಹೀಗಾಗಿ ಅವರ ಕಮಿಟ್ಮೆಂಟ್ ಮುಗಿದ ಬಳಿಕ ಮೆಗಾ ಸಿನಿಮಾ ಶುರುವಾಗುವ ಸಾಧ್ಯತೆಯಿದೆ.


Click it and Unblock the Notifications











