ಹೊಂಬಾಳೆ ಲಿಸ್ಟ್‌ನಲ್ಲಿರೋ ಮೆಗಾ ಸಿನಿಮಾಗಳು ಇವೇನೆ: ಬಾಲಿವುಡ್ ಎಂಟ್ರಿ ಯಾವಾಗ?

ಕನ್ನಡದ ಪ್ರತಿಷ್ಠಿತ ನಿರ್ಮಾಣ ಸಂಸ್ಥೆಗಳಲ್ಲಿ ಹೊಂಬಾಳೆ ಫಿಲ್ಮ್ಸ್ ಕೂಡ ಒಂದು. ಈಗಾಗಲೇ ಕನ್ನಡ ಸೇರಿದಂತೆ ಹಲವು ದಕ್ಷಿಣ ಭಾರತದ ಭಾಷೆಗಳಲ್ಲಿ ಒಳ್ಳೊಳ್ಳೆ ಸಿನಿಮಾಗಳನ್ನು ನಿರ್ಮಾಣ ಮಾಡಿದೆ. ಅದರಲ್ಲಿ 'ರಾಜಕುಮಾರ', 'ಕೆಜಿಎಫ್' ಸೀರಿಸ್, 'ಕಾಂತಾರ', 'ಸಲಾರ್' ಸೇರಿದಂತೆ ಹಲವು ಸಿನಿಮಾಗಳು ಸೇರಿಕೊಂಡಿವೆ. ಪ್ಯಾನ್ ಇಂಡಿಯಾ ಸಿನಿಮಾಗಳಿಗೆ ಕೈ ಹಾಕಿದ ಮೇಲೆ ಹೊಂಬಾಳೆ ಬಿಗ್ ಬಜೆಟ್ ಸಿನಿಮಾಗಳ ಕಡೆಗೆ ಕಣ್ಣಿಟ್ಟಿದೆ.

ಪ್ಯಾನ್ ಇಂಡಿಯಾ ಲೆವೆಲ್‌ನಲ್ಲಿ 'ಕೆಜಿಎಫ್', 'ಸಲಾರ್' ಹಾಗೂ 'ಕಾಂತಾರ'ದಂತಹ ಬ್ಲಾಕ್‌ಬಸ್ಟರ್ ಸಿನಿಮಾಗಳನ್ನು ಕೊಟ್ಟಿದ್ದಾಗಿದೆ. ಈಗ ಮತ್ತೊಂದು ಸಾಹಸಕ್ಕೆ ಕೈ ಹಾಕಿದೆ ಅನ್ನೋ ಸುದ್ದಿ ಗಾಂಧಿನಗರದಲ್ಲಿ ಹರಿದಾಡುತ್ತಿದೆ. ಮುಂದೆ ಹೊಂಬಾಳೆ ಫಿಲ್ಮ್ಸ್ ಬಿಗ್ ಬಜೆಟ್‌ ಸಿನಿಮಾಗಳನ್ನು ನಿರ್ಮಿಸಲಿದೆ. ಈಗಾಗಲೇ ಆ ಸಿನಿಮಾಗಳಿಗೆ ಬೇಕಿರುವ ಪೂರ್ವ ತಯಾರಿ ಕೂಡ ನಡೆಯುತ್ತಿದೆ.

Hombale Films lined up movies Salaar 2 KGF 3 Kantara 1 and the Hrithik Roshan project

ಹೊಂಬಾಳೆ ಸದ್ಯದಲ್ಲೇ ಬಿಗ್ ಬಜೆಟ್ ಸಿನಿಮಾವೊಂದನ್ನು ನಿರ್ಮಾಣ ಮಾಡುವುದಕ್ಕೆ ತಯಾರಿ ನಡೆಸಿದೆ. ಈ ಪ್ರಾಜೆಕ್ಟ್ ಮೂಲಕ ಬಾಲಿವುಡ್‌ಗೆ ಎಂಟ್ರಿ ಕೊಡುವುದಕ್ಕೆ ಹೊರಟಿದ್ದು, ಸಕಲ ರೀತಿಯಲ್ಲಿ ಸನ್ನದ್ಧವಾಗಿದೆ ಅನ್ನೋ ವಿಷಯಗಳು ಓಡಾಡುತ್ತಿವೆ. ಹಾಗಿದ್ದರೆ, ಹೊಂಬಾಳೆ ಲಿಸ್ಟ್‌ನಲ್ಲಿರುವ ಮೋಸ್ಟ್ ಎಕ್ಸ್‌ಪೆಕ್ಟೆಡ್ ಸಿನಿಮಾಗಳು ಯಾವುವು? ಈಗಾಗಲೇ ಅನೌನ್ಸ್ ಮಾಡಿದ್ದನ್ನು ಬಿಟ್ಟು ಲಿಸ್ಟ್‌ನಲ್ಲಿರುವ ಹೊಸ ಪ್ರಾಜೆಕ್ಟ್ ಯಾವುದು? ಅದರ ಹೀರೋ ಯಾರು? ಬಾಲಿವುಡ್ ಎಂಟ್ರಿ ಯಾವಾಗ? ಅಂತ ನೋಡುವುದಾದರೇ.

'ಕಾಂತಾರ' ಚಾಪ್ಟರ್ 1

'ಕಾಂತಾರ' ಸಿನಿಮಾ ಸೂಪರ್ ಸಕ್ಸಸ್ ಆದ್ಮೇಲೆ ಪ್ರೀಕ್ವೆಲ್ ಶೂಟಿಂಗ್ ನಡೆಯುತ್ತಿದೆ. ಬಿಗ್ ಬಜೆಟ್‌ನಲ್ಲಿ 'ಕಾಂತಾರ ಚಾಪ್ಟರ್ 1' ಶೂಟಿಂಗ್ ನಡೆಯುತ್ತಿದೆ. ಇದು ಹೊಂಬಾಳೆ ನಿರ್ಮಾಣದ ಮೋಸ್ಟ್ ಎಕ್ಸ್‌ಪೆಕ್ಟೆಡ್ ಸಿನಿಮಾಗಳಲ್ಲಿ ಒಂದು. ಅದಕ್ಕೆ ಕಾರಣ ಏನು ಅಂತ ಹೇಳಬೇಕಿಲ್ಲ. ಈಗಾಗಲೇ ಈ ಸಿನಿಮಾ ನೋಡುವುದಕ್ಕೆ ಕನ್ನಡಿಗರಷ್ಟೇ ಅಲ್ಲ. ಇಡೀ ದೇಶವೇ ಎದುರು ನೋಡುತ್ತಿದೆ. 'ಕಾಂತಾರ' ಬಾಕ್ಸಾಫೀಸ್‌ನಲ್ಲಿ 1000 ಕೋಟಿ ರೂ. ಕಳಿಸಬಹುದೆಂದು ಈಗಿನಿಂದಲೇ ಲೆಕ್ಕ ಹಾಕಲಾಗುತ್ತಿದೆ.

Hombale Films lined up movies Salaar 2 KGF 3 Kantara 1 and the Hrithik Roshan project

'ಸಲಾರ್ 2'

ಪ್ರಶಾಂತ್ ನೀಲ್ ಹಾಗೂ ಪ್ರಭಾಸ್ ಕಾಂಬಿನೇಷನ್ ಸಿನಿಮಾ 'ಸಲಾರ್'ಗೆ ಬಾಕ್ಸಾಫೀಸ್‌ನಲ್ಲಿ ಸೂಪರ್ ರೆಸ್ಪಾನ್ಸ್ ಸಿಕ್ಕಿತ್ತು. ಸಿನಿಮಾ ಬಿಡುಗಡೆಗೂ ಮುನ್ನವೇ ಹೊಂಬಾಳೆ ಫಿಲ್ಮ್ಸ್ 'ಸಲಾರ್ 2' ಅನೌನ್ಸ್ ಮಾಡಿತ್ತು. ಈ ಸಿನಿಮಾ ಹೊಂಬಾಳೆಯ ಲಿಸ್ಟ್‌ನಲ್ಲಿ ಬಹುನಿರೀಕ್ಷಿತ ಸಿನಿಮಾಗಳಲ್ಲೊಂದು. ಸದ್ಯಕ್ಕೆ ಹರಿದಾಡುತ್ತಿರುವ ಸುದ್ದಿಯ ಪ್ರಕಾರ, 2027ಗೆ ಈ ಸಿನಿಮಾ ರಿಲೀಸ್ ಆಗಲಿದೆ. ಇದರೊಂದಿಗೆ ಪ್ರಭಾಸ್ ಜೊತೆಯೇ ಇನ್ನೆರಡು ಸಿನಿಮಾವನ್ನು ಹೊಂಬಾಳೆ ಅನೌನ್ಸ್ ಮಾಡಿದೆ.

ಕೆಜಿಎಫ್ 3

'ಕೆಜಿಎಫ್ 2' ಬಾಕ್ಸಾಫೀಸ್‌ನಲ್ಲಿ ಮೆಗಾ ಹಿಟ್ ಅಂತ ಸಾಬೀತಾಗುತ್ತಿದ್ದಂತೆ 'ಕೆಜಿಎಫ್ 3' ಬಗ್ಗೆ ಮಾತುಕತೆ ನಡೆದಿತ್ತು. ಪ್ರಶಾಂತ್ ನೀಲ್ ಹಾಗೂ ಯಶ್ ಇಬ್ಬರೂ ಬೇರೆ ಪ್ರಾಜೆಕ್ಟ್‌ಗಳಲ್ಲಿ ಬ್ಯುಸಿಯಾಗಿದ್ದಿದ್ದರಿಂದ ಯಾವಾಗ ಟೇಕಾಫ್ ಆಗುತ್ತೆ ಅನ್ನುವ ಬಗ್ಗೆ ಮಾಹಿತಿಯಿಲ್ಲ. ಆದರೂ, ಒಂದು ಲೆಕ್ಕಾಚಾರದ ಪ್ರಕಾರ 2026ನಲ್ಲಿ 'ಕೆಜೆಎಫ್ 3'ಗೆ ಒಂದು ಕ್ಲಾರಿಟಿ ಸಿಗಬಹುದು.

ಹೃತಿಕ್ ರೋಷನ್ ಸಿನಿಮಾ?

ಹೊಂಬಾಳೆ ಸಂಸ್ಥೆಗೆ ಬಾಲಿವುಡ್‌ಗೆ ಎಂಟ್ರಿ ಕೊಡುವುದಕ್ಕೆ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದೆ. ಈ ಎಲ್ಲಾ ಸಿನಿಮಾಗಳ ಜೊತೆ ಬಾಲಿವುಡ್‌ ಸಿನಿಮಾವನ್ನು ಶೀಘ್ರದಲ್ಲಿಯೇ ಅನೌನ್ಸ್ ಮಾಡುವ ಸಾಧ್ಯತೆಯಿದೆ. ಬಾಲಿವುಡ್‌ ಚೊಚ್ಚಲ ಸಿನಿಮಾಗೆ ಹೃತಿಕ್ ರೋಷನ್ ಅನ್ನು ಅಪ್ರೋಚ್ ಮಾಡುವ ಸಾಧ್ಯತೆಯಿದೆ ಎನ್ನಲಾಗಿದೆ. ಈ ಹಿಂದೆ 'ಕೆಜಿಎಫ್ 3'ಗೆ ಹೃತಿಕ್ ರೋಷನ್ ಹೀರೋ ಆಗಬಹುದೆಂಬ ಸುದ್ದಿನೂ ಹಬ್ಬಿತ್ತು. ಅದೆಲ್ಲ ಕೇವಲ ವದಂತಿ ಅಷ್ಟೇ ಅನ್ನೋ ಮಾಹಿತಿನೂ ಹೊರಬಿದ್ದಿತ್ತು. ಈಗ ಹೃತಿಕ್ ರೋಷನ್ ಜೊತೆ ಸಿನಿಮಾ ಮಾಡುವುದಕ್ಕೆ ಹೊಂಬಾಳೆ ಸಂಸ್ಥೆ ಗಂಭೀರವಾಗಿ ಆಲೋಚನೆ ಮಾಡುತ್ತಿದೆ ಎಂದು ಹೇಳಲಾಗಿದೆ. ಇದು ಸ್ಯಾಂಡಲ್‌ವುಡ್‌ನಲ್ಲಿ ಹರಿದಾಡುತ್ತಿರುವ ಸುದ್ದಿ. ಈ ಬಗ್ಗೆ ಹೊಂಬಾಳೆ ಫಿಲ್ಮ್ಸ್ ಇನ್ನೂ ಅಧಿಕೃತವಾಗಿ ಎಲ್ಲೂ ಹೇಳಿಕೊಂಡಿಲ್ಲ.

ಈ ಎಲ್ಲಾ ಸಿನಿಮಾಗಳ ಜೊತೆಗೆ ಹೊಂಬಾಳೆ ಲಿಸ್ಟ್‌ನಲ್ಲಿ ರಕ್ಷಿತ್ ಶೆಟ್ಟಿ ನಿರ್ದೇಶಿಸಿ, ನಟಿಸುತ್ತಿರುವ 'ರಿಚರ್ಡ್ ಆಂಟೋನಿ', ಆನಿಮೇಷನ್ ಸಿನಿಮಾ 'ಮಹಾವತಾರ್ ನರಸಿಂಹ' ಪ್ರಾಜೆಕ್ಟ್‌ಗಳು ಕೂಡ ಲಿಸ್ಟ್‌ನಲ್ಲಿ ಇವೆ.

More from Filmibeat

English summary
Hombale Films lined up movies Salaar 2, KGF 3, Kantara 1 and the Hrithik Roshan project;
Read more about: hombale films hrithik roshan
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X