ಹೊಂಬಾಳೆ ಸಂಸ್ಥೆಯ 'ಮಹಾವತಾರ್ ನರಸಿಂಹ' ಟೀಸರ್ ನೋಡಿದ್ರಾ?; ಅಪ್ಪು-ಅಣ್ಣಾವ್ರನ್ನು ನೆನೆದಿದ್ದೇಕೆ ನೆಟ್ಟಿಗರು?

ಕನ್ನಡದ ಜನಪ್ರಿಯ ಶ್ರೀಮಂತ ನಿರ್ಮಾಣ ಸಂಸ್ಥೆ ಹೊಂಬಾಳೆ ಫಿಲ್ಮ್ಸ್ ಕೆಲವು ದಿನಗಳ ಹಿಂದಷ್ಟೇ ಹೊಸ ಸಾಹಸಕ್ಕೆ ಕೈ ಹಾಕಿತ್ತು. ತಮ್ಮ ಸಂಸ್ಥೆಯಿಂದ 3ಡಿ ಆನಿಮೇಷನ್ ಸಿನಿಮಾವನ್ನು ರಿಲೀಸ್ ಮಾಡುವುದಾಗಿ ಹೇಳಿಕೊಂಡಿತ್ತು. ಅದುವೇ 'ಮಹಾವತಾರ್ ನರಸಿಂಹ'. ಅಂದು ಕುತೂಹಲ ಕೆರಳಿಸಿದ್ದ ಈ ಸಿನಿಮಾ ಇಂದು (ಜನವರಿ 14) ಸಂಕ್ರಾಂತಿ ಹಬ್ಬದ ಸಂದರ್ಭದಲ್ಲಿ ಟೀಸರ್ ಅನ್ನು ರಿಲೀಸ್ ಮಾಡಿದೆ.

ನರಸಿಂಹನ ಪೌರಾಣಿಕ ಕಥೆಯನ್ನು 3ಡಿ ಆನಿಮೇಷನ್ ತಂತ್ರಜ್ಞಾನದಲ್ಲಿ ನಿರ್ಮಾಣ ಮಾಡಲಾಗಿದೆ. ಹೊಂಬಾಳೆ ಫಿಲ್ಮ್ಸ್ ಐದು ಭಾಷೆಗಳಲ್ಲಿ ಈ ಸಿನಿಮಾವನ್ನು ರಿಲೀಸ್ ಮಾಡುತ್ತಿದ್ದು, ಐದು ಭಾಷೆಗಳಲ್ಲೂ ಟೀಸರ್ ರಿಲೀಸ್‌ಗೆ ಮಾಡಿದೆ. ಒಂದು ಭಾಷೆಯ ಟೀಸರ್‌ಗೂ ನೆಟ್ಟಿಗರಿಂದ ಒಂದೊಂದು ರಿಯಾಕ್ಷನ್ ಸಿಕ್ಕಿದೆ. ಕನ್ನಡ, ತೆಲುಗು, ತಮಿಳು, ಮಲಯಾಳಂ ಹಾಗೂ ಹಿಂದಿ ಭಾಷೆಯಲ್ಲಿ ಈ ಸಿನಿಮಾ ರಿಲೀಸ್ ಆಗಲಿದೆ.

Hombale Films Mahavatar Narsimha Teaser out fans unhappy remembers Rajkumar and Puneeth Rajkumar

'ಮಹಾವತಾರ್ ನರಸಿಂಹ' ಸಿನಿಮಾದಲ್ಲಿ ಭಗವಾನ್ ವಿಷ್ಣು ಹಾಗೂ ಅವನ ಭಕ್ತ ಪ್ರಹ್ಲಾದ್‌ನ ಕಥೆಯನ್ನು ಹೇಳಲಾಗುತ್ತೆ. ಈ ಪೌರಾಣಿಕ ಕಥೆ ಅನಿಮೇಷನ್ ಟಚ್ ಕೊಟ್ಟು ಸಿನಿಮಾ ಮಾಡಿರುವ 'ಮಹಾವತಾರ್ ನರಸಿಂಹ' ಟೀಸರ್‌ ನೆಟ್ಟಿಗರಿಗೆ ಇಷ್ಟ ಆಗಿದೆಯಾ? ಈ 3ಡಿ ಟೀಸರ್ ನೋಡಿ ಸೋಶಿಯಲ್ ಮೀಡಿಯಾದಲ್ಲಿ ಯಾವ ಭಾಷೆಯ ಜನರು ಹೇಗೆ ಪ್ರತಿಕ್ರಿಯೆ ನೀಡುತ್ತಿದ್ದಾರೆ? ಅನ್ನೋದನ್ನು ತಿಳಿಯಲು ಮುಂದೆ ಓದಿ.

ಅಪ್ಪು-ಅಣ್ಣಾವ್ರನ್ನು ನೆನೆದ ನೆಟ್ಟಿಗರು

'ಮಹಾವತಾರ್ ನರಸಿಂಹ' ಹೊಂಬಾಳೆ ಫಿಲ್ಮ್ಸ್ ಅವರ ವಿಭಿನ್ನ ಪ್ರಯತ್ನ. ಇಂತಹ ಪ್ರಯತ್ನ ಆಗಬೇಕು. ಈ ನಿಟ್ಟಿನಲ್ಲಿ ಕನ್ನಡದ ನಿರ್ಮಾಣ ಸಂಸ್ಥೆ ಇಟ್ಟಿರುವ ಹೆಜ್ಜೆ ಕೂಡ ಸ್ವಾಗತಾರ್ಹ. ಆದರೆ, ಆನಿಮೇಷನ್ ಸಿನಿಮಾ ನಿರ್ಮಾಣದ ಕಡೆಗೆ ಇಟ್ಟಿರುವ ಹೆಜ್ಜೆ ಸರಿಯಾಗಿದೆಯೇ? ಅನ್ನೋ ನೆಟ್ಟಿಗರನ್ನು ಕಾಡುತ್ತಿದೆ. ಯಾಕಂದ್ರೆ ನೆಟ್ಟಿಗರ ಕಾಮೆಂಟ್‌ಗಳು ಇಂತಹದ್ದೊಂದು ಪ್ರಶ್ನೆಯನ್ನಂತೂ ಹುಟ್ಟಾಕಿದೆ. ನರಸಿಂಹ ಟೀಸರ್ ನೋಡಿದ ಬಳಿಕ ರಾಜ್‌ಕುಮಾರ್, ಪುನೀತ್ ರಾಜ್‌ಕುಮಾರ್ ಹಾಗೂ 'ಭಕ್ತ ಪ್ರಹ್ಲಾದ' ಸಿನಿಮಾವನ್ನು ನೆನಪಿಸಿಕೊಳ್ಳುತ್ತಿದ್ದಾರೆ.

ನೆಟ್ಟಿಗರು ಅಣ್ಣಾವ್ರು ಹಾಗೂ ಅಪ್ಪು ನಟಿಸಿದ 'ಭಕ್ತ ಪ್ರಹ್ಲಾದ' ಸಿನಿಮಾಗೆ ಹೋಲಿಕೆ ಮಾಡುತ್ತಿದ್ದಾರೆ. "ಅಣ್ಣಾವ್ರು ಮತ್ತು ಅಪ್ಪು ನಟಿಸಿದ ಭಕ್ತ ಪ್ರಹ್ಲಾದ ಫಿಲಂ ಅಮೋಘ" ಎಂದಿದ್ದಾರೆ. ಹಾಗೇ "ಭಕ್ತ ಪ್ರಹ್ಲಾದ ಸಿನಿಮಾ ನೋಡಿದ ನನಗೆ ಈ ಸಿನಿಮಾದ ಮೇಲೆ ಅಂತ ಆಸಕ್ತಿ ಏನು ಇಲ್ಲ. ಇದು ನನ್ನ ಅನಿಸಿಕೆ ಮಾತ್ರ ಬೇರೆಯವರಿಗೆ ಅನ್ವಯಿಸುವುದಿಲ್ಲ" ಎಂದಿದ್ದಾರೆ. ಹಾಗೇ "ಅನಿಮಷನ್ ಯಾಕೆ ಇಷ್ಟು ಬಕ್ವಾಸ್ ಕ್ವಾಲಿಟಿ ಯಲ್ಲಿ ಮಾಡಿದ್ದಾರೆ. ?? MPC ವರ್ಕ್ ನೋಡಿ ಒಮ್ಮೆ" ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. "ಈ ಟೀಸರ್ ಚೆನ್ನಾಗಿದ್ದು, ನಿರೀಕ್ಷೆಗಳು ಕೂಡ ಹೆಚ್ಚಿವೆ. ನೋಡುವುದಕ್ಕೆ ಇದೊಂದು ಭಾರತದ ಪ್ರಾಜೆಕ್ಟ್ ಎಂದು ಅನಿಸುತ್ತೆ." ಎಂದು ಇನ್ನೊಬ್ಬರು ಹೇಳಿದ್ದಾರೆ.

ಹಿಂದಿ, ತೆಲುಗು, ತಮಿಳು, ಮಲಯಾಳಂ ಭಾಷೆಯಲ್ಲಿಯೂ 'ಮಹಾವತಾರ್ ನರಸಿಂಹ' ಟೀಸರ್ ರಿಲೀಸ್ ಆಗಿದೆ. ಇದರಲ್ಲಿ ಹಿಂದಿ ಹಾಗೂ ತೆಲುಗು ಭಾಷೆಯ ಮಂದಿಗೆ ಟೀಸರ್ ಇಷ್ಟ ಆಗಿದೆ. ಹೊಂಬಾಳೆ ಫಿಲ್ಮ್ಸ್ ನಿರ್ಮಾಣ ಸಂಸ್ಥೆ ಭಾರತೀಯ ಚಿತ್ರರಂಗವನ್ನು ಎಲ್ಲಿಗೋ ತೆಗೆದುಕೊಂಡು ಹೋಗುತ್ತೆ ಅಂತ ಹೊಗಳಿದ್ದಾರೆ. ಆದರೆ, ತಮಿಳು ಹಾಗೂ ಮಲಯಾಳಂ ಟೀಸರ್‌ಗಳಿಗೆ ನಿರೀಕ್ಷಿಸಿದ ಮಟ್ಟದಲ್ಲಿ ರೆಸ್ಪಾನ್ಸ್ ಸಿಕ್ಕಿಲ್ಲ.

'ಮಹಾವತಾರ್ ನರಸಿಂಹ' ಸಿನಿಮಾದ 3ಡಿ ಆನಿಮೇಷನ್ ಟೀಸರ್ ಹೊಸ ಭರವಸೆಯನ್ನು ಮೂಡಿಸಿದೆ. ಇದು ಹಾಲಿವುಡ್‌ ಮಟ್ಟದ ಕ್ವಾಲಿಟಿ ಅಂತೂ ಇಲ್ಲ. ಆದರೆ, ಭಾರತೀಯ ಸಿನಿಮಾಗಳು ಈಗ ನಿರ್ಮಾಣ ಆಗುತ್ತಿರುವ ಮಟ್ಟಕ್ಕೆ ತಕ್ಕಂತಿದೆ ಎಂದು ಹೇಳಬಹುದು. ಪಾತ್ರಗಳು ಇನ್ನೂ ಶಾರ್ಪ್ ಆಗಬೇಕಿತ್ತು ಅಂತ ಅನಿಸುತ್ತೆ. ಇನ್ನು ಉಳಿದಂತೆ ಸಿನಿಮಾ ಹೇಗಿರುತ್ತೆ ಅನ್ನೋದು ಕೆಲವೇ ದಿನಗಳಲ್ಲಿ ಗೊತ್ತಾಗಲಿದೆ. ಕ್ಲೀಮ್ ಆನಿಮೇಷನ್ ಸಂಸ್ಥೆಯ ಶಿಲ್ಪಾ ಧವನ್, ಕುಶಾಲ್ ದೇಸಾಯಿ ಮತ್ತು ಚೈತನ್ಯ ದೇಸಾಯಿ ಈ ಸಿನಿಮಾವನ್ನು ನಿರ್ಮಿಸಿದ್ದು, ಹೊಂಬಾಳೆ ವಿತರಣೆ ಮಾಡುವ ಸಾಧ್ಯತೆಯಿದೆ. ಇದು ಏಪ್ರಿಲ್ 3ರಂದು ಭಾರತದಾದ್ಯಂತ ರಿಲೀಸ್ ಆಗಲಿದೆ.

More from Filmibeat

English summary
Hombale Films Mahavatar Narsimha Teaser out fans unhappy remembers Rajkumar and Puneeth Rajkumar;
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X