ಅನಿಮೇಷನ್ ಸಿನಿಮಾ ಮಾಡುವುದಕ್ಕೆ ಮುಂದಾಯ್ತಾ ಹೊಂಬಾಳೆ? ಕ್ಲೀಮ್ ಪ್ರೊಡಕ್ಷನ್ ಹಿನ್ನೆಲೆ ಏನು?
ಕರ್ನಾಟಕದ ಸಿನಿಮಾ ನಿರ್ಮಾಣ ಸಂಸ್ಥೆ ಹೊಂಬಾಳೆ ಫಿಲ್ಮ್ಸ್ ಮತ್ತೊಂದು ಹೊಸ ಸಾಹಸಕ್ಕೆ ಹೈ ಹಾಕಿದೆ. ಕೆಲವು ದಿನಗಳ ಹಿಂದಷ್ಟೇ ಪ್ಯಾನ್ ಇಂಡಿಯಾ ಸೂಪರ್ ಸ್ಟಾರ್ ಜೊತೆ ಮೂರು ಸಿನಿಮಾಗಳನ್ನು ಅನೌನ್ಸ್ ಮಾಡಿ ಅಚ್ಚರಿಯನ್ನಯ ಮೂಡಿಸಿತ್ತು. ಅದರ ಬೆನ್ನಲ್ಲೇ ಈಗ ಮತ್ತೊಂದು ಸಾಹಸಕ್ಕೆ ಕೈ ಹಾಕಿದೆ. ಹೊಸ ಪ್ರಾಜೆಕ್ಟ್ ಬಗ್ಗೆ ಮಾಹಿತಿಯನ್ನು ಬಿಟ್ಟು ಕೊಡದೇ ಹೋದರೂ, ಚಿಕ್ಕದೊಂದು ಸುಳಿವನ್ನಂತೂ ಕೊಟ್ಟಿದೆ.
ಕೆಲವು ದಿನಗಳ ಹಿಂದಷ್ಟೇ ಹೊಂಬಾಳೆ ಫಿಲ್ಮ್ಸ್ ಕನ್ನಡ ಚಿತ್ರರಂಗಕ್ಕೆ ಮೊದಲ ಸೂಪರ್ ಹೀರೊವನ್ನು ಪರಿಚಯಿಸಿದ್ದಾಗಿದೆ. ರೋರಿಂಗ್ ಸ್ಟಾರ್ ಶ್ರೀಮುರಳಿ ನಟನೆ 'ಬಘೀರ' ಸ್ಯಾಂಡಲ್‌ವುಡ್‌ನಲ್ಲಿ ಹೊಸ ಟ್ರೆಂಡ್ ಅನ್ನು ಹುಟ್ಟಾಕಿದೆ. ಈ ಸಿನಿಮಾ ಯಶಸ್ಸಿನ ಬೆನ್ನಲ್ಲೇ ಒಂದರ ಹಿಂದೊಂದು ಪ್ರಾಜೆಕ್ಟ್‌ಗಳನ್ನು ಹೊಂಬಾಳೆ ಫಿಲ್ಮ್ಸ್ ಅನೌನ್ಸ್ ಮಾಡುತ್ತಿದೆ. ಈಗ ಮತ್ತೊಂದು ಹೊಸ ಪ್ರಾಜೆಕ್ಟ್ ನಾಳೆ (ನವೆಂಬರ್ 16) ಅನೌನ್ಸ್ ಆಗುತ್ತಿದೆ.

ಹೊಂಬಾಳೆ ಫಿಲ್ಮ್ಸ್ ಮತ್ತೊಂದು ಪ್ರೊಡಕ್ಷನ್ ಹೌಸ್ ಜೊತೆ ಕೈ ಜೋಡಿಸಿ ಸಿನಿಮಾವನ್ನು ನಿರ್ಮಾಣ ಮಾಡುತ್ತಿದೆ. ಸದ್ಯ ಪೋಸ್ಟರ್ ಒಂದನ್ನು ರಿಲೀಸ್ ಮಾಡಿದ್ದು, ಇದನ್ನು ನೋಡಿದ ಬಳಿಕ ನಾನಾ ರೀತಿಯ ಚರ್ಚೆಗಳು ಆರಂಭ ಆಗಿವೆ. ಸೂಪರ್ ಹೀರೋ ಸಿನಿಮಾ ಬಳಿಕ ಫ್ಯಾಂಟಸಿ ಸಿನಿಮಾಗೆ ಕೈ ಹಾಕಿದೆ ಅಂತ ಒಂದು ಕಡೆ ಚರ್ಚೆಯಾಗುತ್ತಿದೆ. ಇನ್ನೊಂದು ಕಡೆ ಇದು ಅನಿಮೆಷನ್ ಸಿನಿಮಾ ಅಂತಲೂ ಹೇಳಲಾಗುತ್ತಿದೆ. ಆದರೆ, ಅದಕ್ಕಿಂತ ಹೆಚ್ಚಾಗಿ ಹೊಂಬಾಳೆ ಜೊತೆ ಕೈ ಜೋಡಿಸಿರುವ ನಿರ್ಮಾಣ ಸಂಸ್ಥೆ ಹಿನ್ನೆಲೆ ನೋಡಿದರೆ ಒಂದಿಷ್ಟು ಗುಟ್ಟುಗಳು ರಟ್ಟಾಗಬಹುದು.
ಅಂದ್ಹಾಗೆ, ದೆಹಲಿ ಮೂಲದ ನಿರ್ಮಾಣ ಸಂಸ್ಥೆ ಕ್ಲೀಮ್ ಪ್ರೊಡಕ್ಷನ್ ಜೊತೆ ಹೊಂಬಾಳೆ ಫಿಲ್ಮ್ಸ್ ಇದೇ ಮೊದಲ ಬಾರಿಗೆ ಕೈ ಜೋಡಿಸಿದೆ. ಕ್ಲೀಮ್ ಪ್ರೊಡಕ್ಷನ್ 2018 ರಿಂದ ಮನರಂಜನಾ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದೆ. ಆಧುನಿಕ ತಂತ್ರಜ್ಞಾನವನ್ನು ಬಳಿಸಿಕೊಂಡು ಕ್ರಿಯೇಟಿವ್ ಆಗಿ ಪ್ರೇಕ್ಷಕರಿಗೆ ಸಿನಿಮ್ಯಾಟಿಕ್ ಎಕ್ಸ್‌ಪೀರಿಯನ್ಸ್ ಮಾಡಿಸಲು ಮುಂದಾಗಿದೆ. ಸಿನಿಮಾ ಹಾಗೂ ಟಿವಿ ಕ್ಷೇತ್ರದಲ್ಲಿ ಇವರು ತಂತ್ರಜ್ಞಾನ ಹಾಗೂ ಕ್ರಿಯೇಟಿವಿಟಿಯ ನೆರವನ್ನು ನೀಡುತ್ತಿದ್ದಾರೆ.
ಕ್ಲೀಮ್ ಪ್ರೊಡಕ್ಷನ್ ತನ್ನ ಬಳಿ ಸುಮಾರು 4 ಸಾವಿರ ಚದರ ಅಡಿಯಷ್ಟು ದೊಡ್ಡದಾದ ಸ್ಟುಡಿಯೋ ಇದೆ ಎಂದು ಹೇಳಿಕೊಂಡಿದೆ. ಇದರಲ್ಲಿ ಅನಿಮೇಷನ್ ಸ್ಟುಡಿಯೋ ಇರುವುದಾಗಿಯೂ ಹೇಳಿಕೊಂಡಿದೆ. ಇದನ್ನು ಆಧಾರವಾಗಿಟ್ಟುಕೊಂಡು ಈಗಾಗಲೇ ಹೊಂಬಾಳೆ ಫಿಲ್ಮ್ಸ್ ರಿಲೀಸ್ ಮಾಡಿರುವ ಪೋಸ್ಟ್ ನೋಡಿದರೆ, ಇದೊಂದು ಅನಿಮೇಷನ್ ಸಿನಿಮಾ ಅನ್ನೋದನ್ನು ಊಹೆ ಮಾಡಬಹುದು. ಏನಕ್ಕೂ ನಾಳೆ (ನವೆಂಬರ್ 16) ಸಂಜೆ 3.33ಕ್ಕೆ ಫಸ್ಟ್ ಲುಕ್ ರಿಲೀಸ್ ಆದಾಗ ಎಲ್ಲವೂ ಬೆಳಕಿಗೆ ಬರಲಿದೆ.
ಈ ಸಿನಿಮಾವನ್ನು ಅಶ್ವಿನ್ ಕುಮಾರ್ ನಿರ್ದೇಶನ ಮಾಡುತ್ತಿದ್ದಾರೆ. ಅಂದ್ಹಾಗೆ ಅಶ್ವಿನ್ ಕುಮಾರ್ ಇದೇ ಕ್ಲೀನ್ ನಿರ್ಮಾಣ ಸಂಸ್ಥೆಯ ಸಹ ಸಂಸ್ಥಾಪಕ ಹಾಗೂ ಕ್ರಿಯೇಟಿವ್ ಡೈರೆಕ್ಟರ್. ಸುಮಾರು ಎರಡು ದಶಕಗಳ ಕಾಲ ಈ ಕ್ಷೇತ್ರದಲ್ಲಿ ಕೆಲಸ ಮಾಡಿದ ಅನುಭವವಿದೆ. ಅಲ್ಲದೆ ಸಿನಿಮಾ ಕ್ಷೇತ್ರದಲ್ಲಿಯೂ ಅನುಭವವಿದೆ. ಹೀಗಾಗಿ ಇದೊಂದು ಅನಿಮೇಷನ್ ಕಮ್ ಫ್ಯಾಂಟಸಿ ಸಿನಿಮಾ ಇರಬಹುದೆಂಬ ನಿರೀಕ್ಷೆಯಿದೆ.
ಹೊಂಬಾಳೆ ಹೊಸ ಹೊಸ ಸಾಹಸಕ್ಕೆ ಕೈ ಹಾಕುತ್ತಿದೆ. ಹಾಲಿವುಡ್ ಸಿನಿಮಾ ಮಾದರಿಯಲ್ಲಿ ಕನ್ನಡಕ್ಕೆ ಸೂಪರ್ ಹೀರೋ ಕೊಟ್ಟ ಬಳಿಕ ಮತ್ತೊಂದು ಹೊಸ ಪ್ರಯತ್ನಕ್ಕೆ ಮುಂದಾಗಿದ್ದಾರೆ. ಅಂದ್ಹಾಗೆ ಈ ಸಿನಿಮಾ ಕನ್ನಡ, ಹಿಂದಿ, ತೆಲುಗು, ತಮಿಳು ಹಾಗೂ ಮಲಯಾಳಂ ಭಾಷೆಗಳಲ್ಲಿ ಬಿಡುಗಡೆಯಾಗಲಿದೆ. ಸದ್ಯಕ್ಕೆ ಈ ಸಿನಿಮಾ ಬಗ್ಗೆ ಹೆಚ್ಚಿನ ಸುಳಿವನ್ನು ಬಿಟ್ಟಿಕೊಟ್ಟಿಲ್ಲ. ಆದರೆ, ಇನ್ನೊಂದು ದಿನಗಳಲ್ಲಿ ಒಂದು ಕ್ಲಾರಿಸಿ ಸಿಗಬಹುದು.


Click it and Unblock the Notifications











