ಶಿವರಾತ್ರಿಗೆ ಹೊಂಬಾಳೆ ಕಡೆಯಿಂದ ಭಕ್ತಿಗೀತೆ; ಇನ್‌ಸ್ಟಾಗ್ರಾಮ್‌ನಲ್ಲಿ 'ಶಿವ ಶಂಭೋ ಸ್ವಯಂಭೋ' ಟ್ರೆಂಡಿಂಗ್

ಹೊಂಬಾಳೆ ಫಿಲ್ಮ್ಸ್ ಹೊಸ ಹೊಸ ಪ್ರಯತ್ನಕ್ಕೆ ಕೈ ಹಾಕುತ್ತಲೇ ಇರುತ್ತೆ. ಸಿನಿಮಾ ನಿರ್ಮಾಣಕ್ಕೆ ಕೈ ಹಾಕಿ ಕೇವಲ ಕರ್ನಾಟಕಕ್ಕಷ್ಟೇ ಅಲ್ಲ. ಪ್ಯಾನ್ ಇಂಡಿಯಾದ ನಿರ್ಮಾಣ ಸಂಸ್ಥೆ ಎನಿಸಿಕೊಂಡಿದೆ. 'ಕೆಜಿಎಫ್' ಹಾಗೂ 'ಕೆಜಿಎಫ್ 2' ಸೂಪರ್‌ ಸಕ್ಸಸ್ ಬಳಿಕ ಸಿನಿಮಾ ಹಾಗೂ ಸಂಗೀತ ಕ್ಷೇತ್ರದಲ್ಲಿ ವಿನೂತನ ಪ್ರಯತ್ನಗಳನ್ನು ಮಾಡುತ್ತಲೇ ಇದೆ. ಬಿಗ್ ಬಜೆಟ್‌ ಸಿನಿಮಾಗಳ ಜೊತೆ ಜನರ ಮನರಂಜನೆಗೆ ಅಗತ್ಯವಿರುವ ಕಂಟೆಂಟ್‌ಗಳ ಕಡೆಗೆ ಕಣ್ಣಿಟ್ಟಿದೆ.

ಈಗಾಗಲೇ ಹೊಂಬಾಳೆ ಫಿಲ್ಮ್ಸ್ ಬೇರೆ ಬೇರೆ ಭಾಷೆಗಳಲ್ಲಿ ಸಿನಿಮಾವನ್ನು ನಿರ್ಮಾಣ ಮಾಡುತ್ತಿದೆ. ತೆಲುಗು, ತಮಿಳು ಹಾಗೂ ಮಲಯಾಳಂ ಭಾಷೆಯಲ್ಲಿ ಸಿನಿಮಾವನ್ನು ನಿರ್ಮಾಣ ಮಾಡಿದೆ. ಇತ್ತೀಚೆಗೆ ಬಾಲಿವುಡ್‌ಗೂ ಎಂಟ್ರಿ ಕೊಟ್ಟಿದ್ದು, ಹ್ಯಾಂಡ್‌ಸಮ್ ಹಂಕ್ ಹೃತಿಕ್ ರೋಷನ್ ಜೊತೆ ಸಿನಿಮಾ ಮಾಡುವುದಾಗಿ ಅನೌನ್ಸ್ ಮಾಡಿದೆ. ಆ ಸಿನಿಮಾ ಸೆಟ್ಟೇರುವುದಕ್ಕೂ ಮುನ್ನ ಸಿನಿಮಾ ಹಾಗೂ ಸಂಗೀತ ಕ್ಷೇತ್ರದಲ್ಲಿ ವಿನೂತನ ಪ್ರಯೋಗಗಳನ್ನು ಮಾಡುತ್ತಿದೆ.

Hombale Films produced Shiva Shambo Swayambhoo devotional song releasing on Maha Shivarathri

ನಾಳೆ (ಫೆಬ್ರವರಿ 15) ಮಹಾಶಿವರಾತ್ರಿ. ಈ ಹಿನ್ನೆಲೆಯಲ್ಲಿ ಹೊಂಬಾಳೆ ಫಿಲ್ಮ್ಸ್ ಬಹುನಿರೀಕ್ಷಿತ ಭಕ್ತಿಗೀತೆಯನ್ನು ರಿಲೀಸ್ ಮಾಡುವುದಕ್ಕೆ ಮುಂದಾಗಿದೆ. 'ಶಿವ ಶಂಭೋ ಸ್ವಯಂಭೋ' ಎಂಬ ಹಾಡನ್ನು ಶಿವರಾತ್ರಿ ಹಬ್ಬದಂದೇ ರಿಲೀಸ್ ಮಾಡುತ್ತಿದೆ. ಫೆಬ್ರವರಿ 15ರಂದು ಮಹಾಶಿವರಾತ್ರಿಯ ಪವಿತ್ರ ಹಬ್ಬದ ಸಂದರ್ಭದಲ್ಲಿ ಅದ್ಧೂರಿಯಾಗಿ ಬಿಡುಗಡೆ ಮಾಡಲಾಗುತ್ತಿದೆ. ಈ ಹಾಡಿನ ಝಲಕ್ ಈಗಾಗಲೇ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಟ್ರೆಂಡಿಂಗ್‌ ಆಗಿದೆ.

'ಶಿವ ಶಂಭೋ ಸ್ವಯಂಭೋ' ನಾಳೆ (ಫೆಬ್ರವರಿ 15) ಬಿಡುಗಡೆಯಾಗಲಿದೆ. ಆದರೆ, ಅದಕ್ಕೂ ಮೊದಲು ಡಿಜಿಟಲ್ ಲೋಕದಲ್ಲಿ ಸಿಕ್ಕಾಪಟ್ಟೆ ಸಂಚಲನವನ್ನು ಮೂಡಿಸಿದೆ. ಈಗಾಗಲೇ ಈ ಭಕ್ತಿಗೀತೆಯ ಪ್ರೋಮೋವನ್ನು ಸುಮಾರು 6 ಮಿಲಿಯನ್‌ಗೂ ಹೆಚ್ಚು ಮಂದಿ ವೀಕ್ಷಣೆ ಮಾಡಿದ್ದು, ಅದ್ಭುತ ಪ್ರತಿಕ್ರಿಯೆ ವ್ಯಕ್ತವಾಗಿದೆ" ಎಂದು ಹೊಂಬಾಳೆ ಫಿಲ್ಮ್ಸ್ ಅಧಿಕೃತವಾಗಿ ಹೇಳಿಕೊಂಡಿದೆ. ಹೀಗಾಗಿ ಈ ಭಕ್ತಿಗೀತೆಯ ಬಗ್ಗೆ ಕುತೂಹಲ ಮತ್ತಷ್ಟು ಹೆಚ್ಚಾಗಿದೆ.

ವಿಶೇಷವೆಂದರೆ 'ಶಿವ ಶಂಭೋ ಸ್ವಯಂಭೋ' ಹಾಡಿನ ಪ್ರೋಮೋ ಆಡಿಯೋ ಇನ್‌ಸ್ಟಾಗ್ರಾಮ್‌ನಲ್ಲಿ ಸಿಕ್ಕಾಪಟ್ಟೆ ಟ್ರೆಂಡ್ ಆಗುತ್ತಿದೆ. ಇನ್‌ಸ್ಟಾಗ್ರಾಂನಲ್ಲಿ ಸಾವಿರಾರು ಮಂದಿ ಈ ಮಂತ್ರ ಮುಗ್ಧಗೊಳಿಸುವ ಧ್ವನಿಯನ್ನು ಬಳಸಿ ರೀಲ್ಸ್‌ಗಳನ್ನು ಮಾಡುತ್ತಿದ್ದಾರೆ. ಮಹಾಶಿವರಾತ್ರಿ ಹಬ್ಬದ ಈ ಸಂದರ್ಭದಲ್ಲಿ ಈ ಸೀಸನ್‌ನ ಅತ್ಯಂತ ಜನಪ್ರಿಯ ಭಕ್ತಿಗೀತೆಯಾಗಿ ಹೊರಹೊಮ್ಮುವ ಎಲ್ಲಾ ಸಾಧ್ಯತೆಗಳಿವೆ. ಅದಕ್ಕೆ ಪ್ರೋಮೊನೇ ಸಾಕ್ಷಿ.

Hombale Films produced Shiva Shambo Swayambhoo devotional song releasing on Maha Shivarathri

ಆಧ್ಯಾತ್ಮಿಕ ಶಕ್ತಿ ಹಾಗೂ ಭಕ್ತಿ ಭಾವವನ್ನು ಸೂಚಿಸುವ ಈ ಹಾಡು ಈಗಾಗಲೇ ದೇಶಾದ್ಯಂತ ಕೇಳುಗರ ಮನಗೆದ್ದಿದೆ. ಪ್ರೋಮೋ ರಿಲೀಸ್ ಆದ ಬಳಿಕ ಕೇವಲ ಹಿನ್ನೆಲೆ ಸಂಗೀತದಿಂದಲೇ ಪ್ರೇಕ್ಷಕರಲ್ಲಿ ರೋಮಾಂಚನವನ್ನು ಉಂಟು ಮಾಡುತ್ತಿದೆ. 'ಶಿವ ಶಂಭೋ ಸ್ವಯಂಭೋ' ಪೂರ್ಣ ಪ್ರಮಾಣದ ಹಾಡನ್ನು ಕೇಳಲು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ಹೊಂಬಾಳೆ ಫಿಲ್ಮ್ಸ್ ಕೂಡ ಇದೇ ಉತ್ಸಾಹದಲ್ಲಿ ಇದೆ.

ಭಕ್ತಿ, ಶಕ್ತಿ ಮತ್ತು ಆಧ್ಯಾತ್ಮಿಕ ಸಂಕೇತವಾಗಿರುವ ಮಹಾಶಿವರಾತ್ರಿಯಂದೇ ಈ ಹಾಡು ಬಿಡುಗಡೆಯಾಗುತ್ತಿರುವುದು ವಿಶೇಷ. ಶಿವರಾತ್ರಿಯನ್ನು ದೇಶಾದ್ಯಂತ ಭಕ್ತರು ವಿಜೃಂಭಣೆಯಿಂದ ಆಚರಿಸುತ್ತಾರೆ. ಹೀಗಾಗಿ 'ಶಿವ ಶಂಭೋ ಸ್ವಯಂಭೋ' ಕೇವಲ ಹಾಡಾಗಿ ಉಳಿಯದೆ, ಈ ವರ್ಷದ ಶ್ರೇಷ್ಠ ಭಕ್ತಿಗೀತೆಯಾಗುವ ಎಲ್ಲಾ ಸಾಧ್ಯತೆಗಳೂ ಇವೆ. 'ಶಿವ ಶಂಭೋ ಸ್ವಯಂಭೋ' ನಾಳೆ ಅಂದರೆ, ಫೆಬ್ರವರಿ 15ರಂದು ಎಲ್ಲಾ ಪ್ರಮುಖ ಪ್ಲಾಟ್‌ಫಾರ್ಮ್‌ಗಳಲ್ಲಿ ಬಿಡುಗಡೆಯಾಗಲಿದೆ.

More from Filmibeat

English summary
Hombale Films produced Shiva Shambo Swayambhoo devotional song releasing on Maha Shivarathri
Read more about: hombale films song
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X