ಮಲಯಾಳಂಗೆ ಹೊಂಬಾಳೆ ಎಂಟ್ರಿ: ಪೃಥ್ವಿರಾಜ್ 'ಟೈಸನ್'
'ಕೆಜಿಎಫ್' ಸರಣಿ ಬಳಿಕ ಹೊಂಬಾಳೆ ಫಿಲ್ಮ್ಸ್ ರಾಷ್ಟ್ರ ಮಟ್ಟದಲ್ಲಿ ಹೆಸರು ಮಾಡಿದೆ. ಭಾರತದ ಎರಡನೇ ಅತಿ ಹೆಚ್ಚು ಗಳಿಕೆ ಕಂಡ ಸಿನಿಮಾ ನಿರ್ಮಿಸಿದ ಸಂಸ್ಥೆ ಮತ್ತೊಂದು ಚಿತ್ರರಂಗಕ್ಕೆ ಕಾಲಿಟ್ಟಿದೆ. ನಿನ್ನೆ ( ಜೂನ್ 09) ಹೇಳಿದಂತೆ ಹೊಂಬಾಳೆ ಫಿಲ್ಮ್ಸ್ ತನ್ನ ಹೊಸ ಸಿನಿಮಾವನ್ನು ಅನೌನ್ಸ್ ಮಾಡಿದೆ.
ಹೊಂಬಾಳೆ ಫಿಲ್ಮ್ಸ್ ಸಂಸ್ಥೆ ಮಲಯಾಳಂ ಚಿತ್ರರಂಗಕ್ಕೆ ಕಾಲಿಟ್ಟಿದೆ. ಪ್ಯಾನ್ ಇಂಡಿಯಾ ಸಿನಿಮಾ ಮಾಡುವುದಷ್ಟೇ ಅಲ್ಲ. ಪ್ಯಾನ್ ಇಂಡಿಯಾ ಸಂಸ್ಥೆಯಾಗಿ ಹೊರಹೊಮ್ಮಲಿದೆ. ಕನ್ನಡದ ನಿರ್ಮಾಣ ಸಂಸ್ಥೆ ನಿಧಾನವಾಗಿ ಬೇರೆ ಬೇರೆ ಇಂಡಸ್ಟ್ರಿಗೆ ಕಾಲಿಡುತ್ತಿದೆ.

ಕನ್ನಡ ಆಯ್ತು. ತೆಲುಗು ಆಯ್ತು. ಈಗ ಮಲಯಾಳಂ ಚಿತ್ರರಂಗಕ್ಕೆ ಕಾಲಿಟ್ಟಿದೆ. ಮಾಲಿವುಡ್‌ನಲ್ಲಿ ತನ್ನ ಮೊದಲ ಸಿನಿಮಾವನ್ನು ನಿರ್ಮಾಣ ಮಾಡುತ್ತಿದೆ. ಈ ಸಿನಿಮಾಗೆ 'ಟೈಸನ್' ಅಂತ ಹೆಸರಿಟ್ಟಿದ್ದು, ಮಲಯಾಳಂ ನಟಿ ಪೃಥ್ವಿರಾಜ್ ಸುಕುಮಾರನ್ ಪ್ರಮುಖ ಪಾತ್ರದಲ್ಲಿ ನಟಿಸುವುದರ ಜೊತೆಗೆ ನಿರ್ದೇಶನ ಕೂಡ ಮಾಡಲಿದ್ದಾರೆ. ಈ ಮೂಲಕ ಮಲಯಾಳಂ ಬಾಕ್ಸಾಫೀಸ್‌ನಲ್ಲೂ ಸುನಾಮಿ ಎಬ್ಬಿಸಲು ಸಜ್ಜಾಗಿದೆ.
English summary
Hombale Films Producing Malayalam Movie Tyson Starrer Prithviraj Sukumaran, Know More.


Click it and Unblock the Notifications