Anaconda: ಹಾಲಿವುಡ್‌ ಸಿನಿಮಾ ವಿತರಣೆಗೆ ಕೈ ಹಾಕಿದ ಹೊಂಬಾಳೆ: 'ಮಾರ್ಕ್', '45'ಗೆ 'ಅನಕೊಂಡ' ಅಟ್ಯಾಕ್

ಸಿನಿಪ್ರಿಯರ ಅಚ್ಚು-ಮೆಚ್ಚಿನ ಸಿನಿಮಾಗಳಲ್ಲಿ 'ಅನಕೊಂಡ' ಕೂಡ ಒಂದು. ಚಿಕ್ಕ ಮಕ್ಕಳಿಂದ ಹಿಡಿದು ಹಿರಿಯರವರೆಗೂ 'ಅನಕೊಂಡ' (Anaconda) ಸಿನಿಮಾವನ್ನು ನೋಡದವರೇ ಇಲ್ಲ. ಇಂದಿಗೂ 'ಅನಕೊಂಡ' ಸಿನಿಮಾದ ಫ್ಯಾನ್‌ಗಳು ವಿಶ್ವದಾದ್ಯಂತ ನೋಡುವುದಕ್ಕೆ ಸಿಗುತ್ತಾರೆ. ಈಗ ಮತ್ತೊಮ್ಮೆ 'ಅನಕೊಂಡ' ನೋಡುವ ಭಾಗ್ಯ ಪ್ರೇಕ್ಷಕರ ಮುಂದಿದೆ. ಒಂದು ಕಾಲದಲ್ಲಿ ವಿಶ್ವದ ಬಾಕ್ಸಾಫೀಸ್‌ನಲ್ಲಿ ರಾರಾಜಿಸಿದ 'ಅನಕೊಂಡ'ದ ಹೊಸ ಅವತರಣಿಕೆ ರಿಲೀಸ್ ಆಗುತ್ತಿದೆ.

ಇದೇ ಡಿಸೆಂಬರ್ 25ರಂದು 'ಅನಕೊಂಡ' ಮೆಟಾ-ರಿಬೂಟ್ ಶೈಲಿಯಲ್ಲಿ ಬಿಡುಗಡೆಯಾಗುತ್ತಿದೆ. ಈ ಸಿನಿಮಾ ನೋಡುವುದಕ್ಕೆ ಇಡೀ ವಿಶ್ವವೇ ಎದುರು ನೋಡುತ್ತಿದೆ. ಹಾಗೇ ಕರ್ನಾಟಕದಲ್ಲಿರುವ ಹಾಲಿವುಡ್ ಸಿನಿಮಾ ಪ್ರಿಯರು ಕೂಡ ಈ ಸಿನಿಮಾಗಾಗಿ ಕಾದು ಕೂತಿದ್ದಾರೆ. ಅಂತಹವರಿಗೆ ಖುಷಿ ವಿಷಯವೊಂದಿದೆ. ಈ ಹೊಸ 'ಅನಕೊಂಡ' ಸಿನಿಮಾವನ್ನು ಕನ್ನಡದ ನಿರ್ಮಾಣ ಸಂಸ್ಥೆ 'ಹೊಂಬಾಳೆ ಫಿಲ್ಮ್ಸ್' ವಿತರಣೆ ಮಾಡುವುದಕ್ಕೆ ಮುಂದಾಗಿದೆ.

Hombale Films releasing 2025 Hollywood movie Anaconda entire Karnataka here is the details

ದುಬಾರಿ ಪ್ಯಾನ್ ಇಂಡಿಯಾ ಸಿನಿಮಾಗಳನ್ನು ನಿರ್ಮಿಸಿ ಭಾರತದಾದ್ಯಂತ ಸದ್ದು ಮಾಡಿರುವ ಹೊಂಬಾಳೆ ಫಿಲ್ಮ್ಸ್ ಈಗ ಅಂತರಾಷ್ಟ್ರೀಯ ಸಿನಿಮಾರಂಗಕ್ಕೆ ಎಂಟ್ರಿ ಕೊಟ್ಟಿದೆ. ಈ ಮೂಲಕ ಹಾಲಿವುಡ್ ಕಡೆಗೆ ಪಯಣ ಬೆಳೆಸುವುದಕ್ಕೆ ಒಂದು ಹೆಜ್ಜೆಯನ್ನು ಇಟ್ಟಿದೆ. ಹಾಗಿದ್ದರೆ, ಎಷ್ಟು ಸ್ಕ್ರೀನ್‌ಗಳಲ್ಲಿ ರಿಲೀಸ್ ಆಗುತ್ತೆ? ಹೊಂಬಾಳೆ ಪ್ಲ್ಯಾನ್ಸ್ ಏನು? 'ಮಾರ್ಕ್', '45' ಸಿನಿಮಾಗಳ ಮುಂದೆ 'ಅನಕೊಂಡ'ಗೆ ಎಷ್ಟು ಸ್ಕ್ರೀನ್‌ಗಳು ಸಿಗಬಹುದು? ಅನ್ನೋದನ್ನು ತಿಳಿಯುವುದಕ್ಕೆ ಮುಂದೆ ಓದಿ.

'ಅನಕೊಂಡ' 1997ರಲ್ಲಿ ತೆರೆಕಂಡಿದ್ದ ಐಕಾನಿಕ್ ಸಿನಿಮಾದ 'ಮೆಟಾ-ರಿಬೂಟ್'. ಈ ಸಿನಿಮಾ ಒಂದು ಆಕ್ಷನ್-ಕಾಮಿಡಿ ಶೈಲಿಯಲ್ಲಿ ಇರಲಿದ್ದು, ಪ್ರೇಕ್ಷಕರಿಗೆ ಭರಪೂರ ಮನರಂಜನೆ ಸಿಗಲಿದೆ. ಈ ಸಿನಿಮಾವನ್ನು ಟಾಮ್ ಗೋರ್ಮಿಕನ್ ನಿರ್ದೇಶಿಸಿದ್ದು, ಹಾಗೇ ಕೆವಿನ್ ಎಟ್ಟನ್ ಜೊತೆ ಸೇರಿ ಸ್ಕ್ರೀನ್ ಪ್ಲೇ ರಚಿಸಿದ್ದಾರೆ. ಈ ಸಿನಿಮಾ ಕಾಮಿಡಿ, ಆಕ್ಷನ್, ಥ್ರಿಲ್ಲರ್ ಸಿನಿಮಾಗಳನ್ನು ಇಷ್ಟ ಪಡುವವರಿಗೆ ಇಷ್ಟ ಆಗಬಹುದೆಂದು ನಿರೀಕ್ಷೆ ಮಾಡಲಾಗಿದೆ.

ಈ ಸಿನಿಮಾದ ತಾರಾಗಣದ ಕಡೆಗೆ ಬರೋದಾರೆ, ಹಾಲಿವುಡ್‌ನ ಘಟಾನುಘಟಿಗಳೇ ಈ ಸಿನಿಮಾದಲ್ಲಿದ್ದಾರೆ. ಪಾಲ್ ರಡ್, ಜಾಕ್ ಬ್ಲಾಕ್, ಸ್ಟೀವ್ ಝಾನ್, ಥಾಂಡಿವೆ ನ್ಯೂಟನ್, ಡ್ಯಾನಿಯೆಲಾ ಮೆಲ್ಚಿಯರ್, ಸೆಲ್ಟನ್ ಮೆಲ್ಲೋ ಸೇರಿದಂತೆ ದೊಡ್ಡ ತಾರಾಬಳಗವೇ ಈ ಸಿನಿಮಾದಲ್ಲಿ ಇದೆ. ಈ ಸಿನಿಮಾ ಇದೇ ಡಿಸೆಂಬರ್ 25 ರಂದು ವಿಶ್ವದಾದ್ಯಂತ ತೆರೆಕಾಣುತ್ತಿದೆ. ಭಾರತದಲ್ಲಿಯೂ ಗ್ರ್ಯಾಂಡ್ ರಿಲೀಸ್ ಆಗಲಿದೆ. ಹೊಂಬಾಳೆ ಫಿಲ್ಮ್ಸ್ ಈ ಸಿನಿಮಾವನ್ನು ಸುಮಾರು 300ಕ್ಕೂ ಅಧಿಕ ಸ್ಕ್ರೀನ್‌ಗಳಲ್ಲಿ ರಿಲೀಸ್ ಮಾಡಲಿದೆ.

Hombale Films releasing 2025 Hollywood movie Anaconda entire Karnataka here is the details

ಈ ಸಿನಿಮಾ ಮೂಲಕ ಹೊಂಬಾಳೆ ಫಿಲ್ಮ್ಸ್ ಗ್ಲೋಬಲ್ ಸಿನಿಮಾವನ್ನು ಲೋಕಲ್ ಏರಿಯಾಗಳಿಗೆ ತಲುಪಿಸುವ ಪ್ರಯತ್ನ ಮಾಡುತ್ತಿದೆ. ಹಾಲಿವುಡ್ ಸಿನಿಮಾವೊಂದು ಹೊಂಬಾಳೆ ಫಿಲ್ಮ್ಸ್ ಸಹಭಾಗಿತ್ವವು ಗ್ಲೋಬಲ್ ಲೆವೆಲ್‌ನಲ್ಲಿ ಕನ್ನಡ ಚಿತ್ರರಂಗದ ಪ್ರಭಾವ ಮತ್ತು ವಿಶ್ವಾಸಾರ್ಹತೆಗೆ ಸಾಕ್ಷಿಯಾಗಿದೆ. ಈ ಮೂಲಕ ಹೊಂಬಾಳೆ ಫಿಲ್ಮ್ಸ್ ಗ್ಲೋಬಲ್ ಕಂಟೆಂಟ್ ಹಾಗೂ ಸ್ಥಳೀಯ ಮಾರುಕಟ್ಟೆಯ ನಡುವೆ ಸೇತುವೆಯಾಗಿ ನಿಂತಿದೆ.

'ಅನಕೊಂಡ' ಜೊತೆಗೆ ಕನ್ನಡ ಎರಡು ಬಿಗ್ ಬಜೆಟ್ ಸಿನಿಮಾಗಳು ರಿಲೀಸ್ ಆಗುತ್ತಿವೆ. ಕಿಚ್ಚ ಸುದೀಪ್ ನಟನೆಯ 'ಮಾರ್ಕ್' ಹಾಗೂ ಶಿವಣ್ಣ, ಉಪೇಂದ್ರ, ರಾಜ್ ಬಿ ಶೆಟ್ಟಿ ನಟನೆಯ '45' ರಿಲೀಸ್ ಆಗುತ್ತಿದೆ. ಹೀಗಾಗಿ ಕರ್ನಾಟಕದಲ್ಲಿ ಈ ಎರಡು ಸಿನಿಮಾಗಳ ಜೊತೆ 'ಅನಕೊಂಡ' ಎಂಟ್ರಿ ಕೊಟ್ಟಿದೆ. ಕನ್ನಡ ಸಿನಿಮಾಗಳು 'ಅನಕೊಂಡ'ಗೆ ಅಟ್ಯಾಕ್ ಮಾಡುತ್ತವೋ..? ಇಲ್ಲಾ 'ಅನಕೊಂಡ' ಈ ಎರಡು ಸಿನಿಮಾಗಳಿಗೆ ಅಟ್ಯಾಕ್ ಮಾಡುತ್ತೋ.. ಕ್ರಿಸ್‌ಮಸ್ ದಿನ ರಿವೀಲ್ ಆಗಲಿದೆ.

More from Filmibeat

English summary
Hombale Films releasing 2025 Hollywood movie Anaconda entire Karnataka here is the details.
Read more about: hombale films karnataka
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X