'ಪಳ್ಳಿ ಚಟ್ಟಂಬಿ' ಮಲಯಾಳಂ ಸಿನಿಮಾದಲ್ಲಿ ಕರ್ನಾಟಕದ ಯಕ್ಷಗಾನ; ಕಿಕ್ ಕೊಡುತ್ತೆ ಕನ್ನಡ ಡೈಲಾಗ್

ಇತ್ತೀಚೆಗೆ ಮಲಯಾಳಂ ಸಿನಿಮಾಗಳು ಬೆಂಗಳೂರಿನಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡುತ್ತಿವೆ. ಇಲ್ಲಿ ಸಿನಿಮಾ ಒಳ್ಳೆಯ ಕಲೆಕ್ಷನ್ ಆಗುತ್ತಿವೆ. ಹೀಗಾಗಿ ಮಲಯಾಳಂ ಫಿಲ್ಮ್‌ ಮೇಕರ್ಸ್ ಬೆಂಗಳೂರಿನಲ್ಲಿ ಸಿನಿಮಾ ರಿಲೀಸ್‌ ಮಾಡುವುದಕ್ಕೆ ಆಸಕ್ತಿ ತೋರುತ್ತಿದ್ದಾರೆ. ಮೋಹನ್‌ಲಾಲ್, ಮಮ್ಮುಟ್ಟಿಯಂತಹ ದಿಗ್ಗಜರ ಸಿನಿಮಾಗಳು ಒಳ್ಳೆಯ ಕಲೆಕ್ಷನ್ ಮಾಡುತ್ತಿವೆ. ಹಿರಿಯರೊಂದಿಗೆ ಯುವ ನಟರ ಸಿನಿಮಾಗಳು ಕೂಡ ಬೆಂಗಳೂರು ಬಾಕ್ಸಾಫೀಸ್‌ನಲ್ಲಿ ಸದ್ದು ಮಾಡುತ್ತಿವೆ.

ಸದ್ಯ ಆಗಸ್ಟ್ 15ರಂದು ರಿಲೀಸ್‌ಗೆ ರೆಡಿಯಾಗಿರುವ ಮಲಯಾಳಂ ಸಿನಿಮಾ 'ಪಳ್ಳಿ ಚಟ್ಟಂಬಿ' ಕೂಡ ಕರ್ನಾಟಕದಲ್ಲಿ ರಿಲೀಸ್ ಆಗುತ್ತಿದೆ. ಕನ್ನಡದ ನಿರ್ಮಾಣ ಸಂಸ್ಥೆ ಹೊಂಬಾಳೆ ಫಿಲ್ಮ್ಸ್ ಈ ಸಿನಿಮಾವನ್ನು ಕರ್ನಾಟಕದಲ್ಲಿ ವಿತರಣೆ ಮಾಡುವುದಕ್ಕೆ ಮುಂದಾಗಿದೆ. ಮಲಯಾಳಂ ಜೊತೆಗೆ ಕನ್ನಡ ಭಾಷೆಯಲ್ಲಿಯೂ ಈ ಸಿನಿಮಾ ಬಿಡುಗಡೆಯಾಗುತ್ತಿದೆ.

Hombale Films to release Tovino Thomas starrer Palli Chattambi movie in Karnataka

'ಪಳ್ಳಿ ಚಟ್ಟಂಬಿ' ಸಿನಿಮಾದ ಪ್ರಮುಖ ಪಾತ್ರದಲ್ಲಿ ನಟಿಸಿರೋದು ಟೊವಿನೋ ಥಾಮಸ್. ಮಲಯಾಳಂನ ಈ ಸ್ಟಾರ್ ನಟನ ಮತ್ತೊಂದು ಸಿನಿಮಾ ಬೆಂಗಳೂರಿನಲ್ಲಿ ಮೋಡಿ ಮಾಡುವುದಕ್ಕೆ ಸಜ್ಜಾಗುತ್ತಿದೆ. ಟೊವೊನೋ ಥಾಮಸ್ ಸಿನಿಮಾ ಪಳ್ಳಿ ಚಟ್ಟಂಬಿ' ಈಗಾಗಲೇ ತುಣುಕುಗಳಿಂದ ಮೋಡಿ ಮಾಡಿದೆ. ಹೀಗಾಗಿ ಸಿನಿಮಾ ಬಿಡುಗಡೆಗೂ ಮುನ್ನ ಬೆಂಗಳೂರಿನಲ್ಲಿ ಪತ್ರಿಕಾ ಗೋಷ್ಟಿ ಮಾಡಿದೆ. ಈ ವೇಳಿ ಟೊವಿನೋ ಥಾಮಸ್ ಕನ್ನಡಗರು ಹಾಗೂ ಕನ್ನಡ ಭಾಷೆಯ ಬಗ್ಗೆ ಮಾತಾಡಿದ್ದಾರೆ.

ಡಿಜೋ ಜೊಸೆ ಆಂಟೋನಿ 'ಪಳ್ಳಿ ಚೆಟ್ಟಂಬಿ' ಸಿನಿಮಾವನ್ನು ನಿರ್ದೇಶಿಸಿದ್ದಾರೆ. ಹೊಂಬಾಳೆ ಫಿಲಂಸ್ ಕರ್ನಾಟಕದಾದ್ಯಂತ ವಿತರಣೆಯನ್ನು ಮಾಡುತ್ತಿದೆ. ಸಿನಿಮಾ ಹಾಗೂ ಬೆಂಗಳೂರಿನ ಕನೆಕ್ಷನ್ ಬಗ್ಗೆ ಟೊವಿನೋ ಥಾಮಸ್ ಹೀಗಂದಿದ್ದಾರೆ. "ನನ್ನ ಸಿನಿಮಾಗಳು ಕರ್ನಾಟಕದಲ್ಲೂ ರಿಲೀಸ್ ಆಗಿ ಮೆಚ್ಚುಗೆ ಪಡೆದಿವೆ. ನೀವು ನನ್ನ ಸಿನಿಮಾಗಳಿಗೆ ಸಾಕಷ್ಟು ಪ್ರೀತಿ ತೋರಿಸಿದ್ದೀರಿ. ಕರ್ನಾಟಕ ನನಗೆ ಹೊಸದಲ್ಲ. ಬಾಲ್ಯದಿಂದಲೂ ನಾನು ಇಲ್ಲಿ ಬರುತ್ತಿದ್ದೇನೆ. ನಮ್ಮ ಶಾಲಾ ದಿನಗಳಲ್ಲಿ ಪ್ರವಾಸಕ್ಕೆಂದು ಬೆಂಗಳೂರು ಹಾಗೂ ಮೈಸೂರಿಗೆ ಕರೆದುಕೊಂಡು ಬರುತ್ತಿದ್ದರು. ನನ್ನ ಗೆಳೆಯರು ಇಲ್ಲಿ ಓದಿದ್ದಾರೆ. ಆಗ ಬಂದು ನಾನು ಇಲ್ಲಿ ಉಳಿದುಕೊಳ್ಳುತ್ತಿದ್ದೆ. ಡಿಯರ್ ಫ್ರೆಂಡ್ ಸಿನಿಮಾದ ಶೂಟ್ ಇಲ್ಲೇ ನಡೆದಿತ್ತು. ಆಗ ಒಂದು ತಿಂಗಳು ಬೆಂಗಳೂರಿನಲ್ಲೇ ಉಳಿದುಕೊಂಡಿದ್ದೆ. ಆಗ ಇಲ್ಲಿನ ಫುಡ್ ಅನ್ನು ಎಂಜಾಯ್ ಮಾಡಿದೆ. ಪಳ್ಳಿ ಚಟ್ಟಂಬಿಗೂ ನಿಮ್ಮೆಲ್ಲರ ಪ್ರೀತಿ ಕೊಡಿ" ಈ ಸಿನಿಮಾವನ್ನು ಸಾಕಷ್ಟು ಹಿಂದೆಯೇ ಆರಂಭಿಸಲಾಗಿತ್ತು. ಸಿನಿಮಾದ ಶೂಟಿಂಗ್ ಮಾತ್ರ ಕಳೆದ ವರ್ಷ ನಡೆಯಿತು. ನಿಮಗೆ ಸಿನಿಮಾ ಇಷ್ಟ ಆಗುತ್ತದೆ ಎಂಬುದು ನನ್ನ ಭಾವನೆ" ಎಂದು ಟೊವಿನೋ ಹೇಳಿದರು.

ಇದೇ ವೇಳೆ ಕನ್ನಡದ ಬಗ್ಗೆಯೂ ಅವರು ಮಾತನಾಡಿದರು. "ನಾವು ಕೇವಲ ನೆರೆಹೊರೆಯವರಲ್ಲ.. ನಾವು ರಕ್ತ ಸಂಬಂಧಿಗಳು. ದಕ್ಷಿಣದ ಎಲ್ಲಾ ಭಾಷೆಗಳ ಮಧ್ಯೆ ಸಾಮ್ಯತೆ ಇದೆ. ಈ ಸಿನಿಮಾದಲ್ಲಿ ಕರ್ನಾಟಕದ ಕಲೆ ಯಕ್ಷಗಾನದ ಬಳಕೆ ಕೂಡ ಆಗಿದೆ ಎಂಬುದು ವಿಶೇಷ. ಹೀಗಾಗಿ,ಕನ್ನಡದ ಸಂಭಾಷಣೆ ಕೂಡ ಸಿನಿಮಾದಲ್ಲಿ ಬರುತ್ತದೆ ಎಂದು ಟೊವಿನೋ ಥಾಮಸ್ ಕನ್ನಡ ಭಾಷೆಯ ಬಗ್ಗೆ ಅಭಿಪ್ರಾಯ ಹೊರ ಹಾಕಿದ್ದಾರೆ.

ಇನ್ನು ಕನ್ನಡದಲ್ಲಿ 'ಮುಗಿಲ್ ಪೇಟೆ' ಸಿನಿಮಾ ಗೆ ನಾಯಕಿಯಾಗಿದ್ದ ಕಯಾದು ಲೋಹರ್, ಈಗ 'ಪಳ್ಳಿ ಚೆಟ್ಟಂಬಿ' ಸಿನಿಮಾದಲ್ಲಿ ನಾಯಕಿ. "ರೆಬೇಕಾ ರೀತಿಯ ಪಾತ್ರ ಮಾಡಬೇಕು ಎಂಬ ಕನಸು ಇತ್ತು. ನಾನು ಶೇ.100ರಷ್ಟು ಶ್ರಮ ಹಾಕಿದ್ದೇನೆ. ಮುಗಿಲ್ ಪೇಟೆ ಸಿನಿಮಾ ಮಾಡಿದ್ದೆ. ಅಲ್ಲಿಂದ ನನ್ನ ಪ್ರಯಾಣ ಶುರುವಾಯಿತು. ನನ್ನ ಮೊದಲ ಸಿನಿಮಾಗೆ ತೋರಿಸಿದ ಪ್ರೀತಿಯನ್ನು ಈ ಸಿನಿಮಾಗೂ ತೋರಿಸಿ" ಎಂದು ಕಯಾದು ಲೋಹರ್ ಹೇಳಿದ್ದಾರೆ.

ಈ ಸಿನಿಮಾದಲ್ಲಿ ರೆಬೇಕಾ ಪಾತ್ರದಲ್ಲಿ ಕಯಾದು ಅಭಿನಯಿಸಿದ್ದಾರೆ. 2018ರಲ್ಲಿ ನನ್ನ ಮೊದಲ ಸಿನಿಮಾ ಮಾಡಿದೆ. ಆ ಬಳಿಕ ಈ ಸಿನಿಮಾ ಕೆಲಸ ಆರಂಭಿಸಿದೆ. ಕಥೆ ಕೇಳುತ್ತಿದ್ದಂತೆ ಟೊವಿನೋಗೆ ಕರೆ ಮಾಡಿದೆ. ಅವರು ಮಾಡೋಣ ಎಂದರು. 2026ರ ಏಪ್ರಿಲ್ 15 ರಂದು ಸಿನಿಮಾ ತೆರೆಗೆ ಬರುತ್ತಿದೆ. 1950ರ ಕಾಲಘಟ್ಟದ ಕಥೆ ಸಿನಿಮಾದಲ್ಲಿದೆ. ಇದು ಹಳ್ಳಿಯಲ್ಲಿ ನಡೆಯುವ ಕಥೆ" ಎಂದರು ನಿರ್ದೇಶಕರು.

More from Filmibeat

English summary
Hombale Films to release Tovino Thomas starrer Palli Chattambi movie in Karnataka.
Read more about: hombale films karnataka malayam
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X