ದೊಡ್ಮನೆ ಉತ್ತರಾಧಿಕಾರಿಗೆ ಹೊಂಬಾಳೆ ಫಿಲ್ಮ್ಸ್ ಮುನ್ನುಡಿ: ಅಪ್ಪು ಫ್ಯಾನ್ಸ್ ಸಂಭ್ರಮ?

ದೊಡ್ಮನೆಯ ಮತ್ತೊಂದು ಕುಡಿ ಸ್ಯಾಂಡಲ್‌ವುಡ್‌ಗೆ ಎಂಟ್ರಿ ಕೊಡಲು ವೇದಿಕೆ ಸಜ್ಜಾಗಿದೆ. ಈಗಾಗಲೇ ರಾಘವೇಂದ್ರ ರಾಜ್‌ಕುಮಾರ್ ಎರಡನೇ ಪುತ್ರ ಯುವರಾಜ್‌ಕುಮಾರ್ ಎಂಟ್ರಿಗೆ ಸಕಲ ಪ್ರಯತ್ನವೂ ನಡೆಯುತ್ತಿದೆ. ಈ ಹಿಂದೆನೇ ಯುವ ರಣಧೀರ ಕಂಠೀರವ ಸಿನಿಮಾ ಲಾಂಚ್ ಆಗಬೇಕಿತ್ತು. ಆದರೆ, ಕಾರಣಾಂತರಗಳಿಂದ ಈ ಸಿನಿಮಾ ಸೆಟ್ಟೇರಲಿಲ್ಲ. ಈಗ ಹೊಂಬಾಳೆ ಫಿಲ್ಮ್ಸ್ ಯುವರಾಜ್‌ಕುಮಾರ್‌ರನ್ನು ಲಾಂಚ್ ಮಾಡಲಿದ್ದಾರೆ.

ಹಲವು ದಿನಗಳಿಂದ ಹೊಂಬಾಳೆ ಫಿಲ್ಮ್ಸ್ ಯುವರಾಜ್‌ಕುಮಾರ್‌ರನ್ನು ಸ್ಯಾಂಡಲ್‌ವುಡ್‌ಗೆ ಪರಿಚಯ ಮಾಡಲಿದೆ ಅನ್ನೋ ಮಾತುಗಳು ಕೇಳಿ ಬರುತ್ತಿತ್ತು. ಸಂತೋಷ್ ಆನಂದ್ ರಾಮ್ ಈ ಸಿನಿಮಾವನ್ನು ನಿರ್ದೇಶನ ಮಾಡುತ್ತಾರೆ ಎಂದು ಹೇಳಲಾಗಿತ್ತು.

ಹೊಂಬಾಳೆ ಫಿಲ್ಮ್ಸ್ ಇಂದು (ಏಪ್ರಿಲ್ 26) ಸೋಶಿಯಲ್ ಮೀಡಿಯಾದಲ್ಲಿ ಹೊಸ ಸಿನಿಮಾದ ಲಾಂಚ್ ಮಾಡುತ್ತಿರುವುದಾಗಿ ಅನೌನ್ಸ್ ಮಾಡಿದೆ. 'ಬೆಳ್ಳಿಪರದೆಗೆ ಹೊಸದೊಂದು ಪರ್ವ' ಅಂತ ಹೇಳುವ ಮೂಲಕ ಇನ್ನೂ ಸಸ್ಪೆನ್ಸ್ ಅನ್ನು ಹಾಗೆಯೇ ಕಾಯ್ದುಕೊಂಡಿದೆ. ಈ ಟ್ವೀಟ್ ಬಳಿಕ ಆ ಯಾವ ಸಿನಿಮಾ ಯಾವುದು? ಅಂತ ಕುತೂಹಲದಿಂದ ಕಾಯುತ್ತಿದ್ದಾರೆ. ಅದು ನಾಳೆ(ಏಪ್ರಿಲ್ 27) ಸಿನಿಪ್ರಿಯರ ಮುಂದೆ ಅನಾವರಣ ಆಗಲಿದೆ. ಹಾಗಿದ್ರೆ, ಅದು ಯುವರಾಜ್‌ಕುಮಾರ್ ಸಿನಿಮಾನಾ? ಹೆಚ್ಚಿನ ಮಾಹಿತಿ ತಿಳಿಯಲು ಮುಂದೆ ಓದಿ.

ಯುವ ರಾಜ್‌ಕುಮಾರ್ ಸಿನಿಮಾ ಲಾಂಚ್

ಯುವ ರಾಜ್‌ಕುಮಾರ್ ಸಿನಿಮಾ ಲಾಂಚ್

ನಾಳೆ (ಏಪ್ರಿಲ್ 27) ಹೊಂಬಾಳೆ ಫಿಲ್ಮ್ಸ್ ಅನೌನ್ಸ್ ಮಾಡುತ್ತಿರುವ ಹೊಚ್ಚ ಹೊಸ ಸಿನಿಮಾದ ಬಗ್ಗೆ ಎಲ್ಲರಲ್ಲೂ ಕುತೂಹಲವಿದೆ. ಆ ಸಿನಿಮಾ ಮತ್ಯಾವುದೂ ಅಲ್ಲ. ಅದು ಯುವರಾಜ್‌ಕುಮಾರ್ ಮೊದಲ ಸಿನಿಮಾ. ನಿರೀಕ್ಷೆಯಂತೆಯೇ ನಾಳೆ ಬೆಳಗ್ಗೆ (ಏಪ್ರಿಲ್ 27) ಬೆಳಗ್ಗೆ 9.50ಕ್ಕೆ ಯುವರಾಜ್‌ಕುಮಾರ್ ಅಭಿನಯದ ಮೊದಲ ಸಿನಿಮಾದ ಘೋಷಣೆಯಾಗಲಿದೆ. ಇದರೊಂದಿಗೆ ನಿರ್ದೇಶಕ, ಟೈಟಲ್ ಸೇರಿದಂತೆ ಇನ್ನಿತರ ಮಾಹಿತಿಗಳು ಕೂಡ ರಿವೀಲ್ ಆಗುವ ಸಾಧ್ಯತೆಯಿದೆ.

ಅಭಿಮಾನಿಗಳಿಂದ ಪೋಸ್ಟರ್ ಅನಾವರಣ

ಅಭಿಮಾನಿಗಳಿಂದ ಪೋಸ್ಟರ್ ಅನಾವರಣ

ಯುವರಾಜ್‌ಕುಮಾರ್ ಸ್ಯಾಂಡಲ್‌ವುಡ್ ಎಂಟ್ರಿಗೆ ಅಪ್ಪು ಅಭಿಮಾನಿಗಳು ಸಕಲ ಸಿದ್ಧತೆಗಳನ್ನು ಮಾಡಿಕೊಂಡಿದ್ದಾರೆ. ದೊಡ್ಮನೆ ಉತ್ತರಾಧಿಕಾರಿಯ ಆಹ್ವಾನದ ಸಂಭ್ರಮಾಚರಣೆಗೆ ಅಭಿಮಾನಿಗಳು ಸಜ್ಜಾಗಿದ್ದು, ಡಾ.ರಾಜ್ ಸ್ಮಾರಕ ಕಂಠೀರವ ಸ್ಟೂಡಿಯೋದಲ್ಲಿ ಅಪ್ಪು ಪುಣ್ಯಭೂಮಿ ಮುಂದೆ ಬೆಳಗ್ಗೆ 11 ಗಂಟೆಗೆ ಪೋಸ್ಟರ್ ಬಿಡುಗಡೆ ಮಾಡಲಿದ್ದು, ಪುನೀತ್ ಅಭಿಮಾನಿಗಳು ಮತ್ತೆ ಸಂಭ್ರಮಿಸಲಿದ್ದಾರೆ.

ಯುವನಲ್ಲಿ ಅಪ್ಪು ಕಾಣುತ್ತಿರುವ ಫ್ಯಾನ್ಸ್

ಯುವನಲ್ಲಿ ಅಪ್ಪು ಕಾಣುತ್ತಿರುವ ಫ್ಯಾನ್ಸ್

ಪವರ್‌ಸ್ಟಾರ್ ಪುನೀತ್ ರಾಜ್‌ಕುಮಾರ್ ಅಗಲಿಕೆಯ ಬಳಿಕ ಅಭಿಮಾನಿಗಳು ಶೋಕ ಸಾಗರದಲ್ಲಿ ಮುಳುಗಿದ್ದರು. ಅಪ್ಪು ನೆನೆದು ಕಣ್ಣೀರು ಹಾಕುತ್ತಿದ್ದರು. ಈಗ ದೊಡ್ಮನೆ ಉತ್ತರಾಧಿಕಾರಿಯ ಎಂಟ್ರಿಗೆ ವೇದಿಕೆ ಸಜ್ಜಾಗಿದೆ. ತಮ್ಮ ನೆಚ್ಚಿನ ನಟನನ್ನು ಈಗ ಯುವರಾಜ್‌ಕುಮಾರ್‌ರನ್ನು ಕಾಣಲು ಅಭಿಮಾನಿಗಳು ತುದಿಗಾಲಲ್ಲಿ ನಿಂತಿದ್ದಾರೆ. ಈ ಕಾರಣಕ್ಕೆ ತಾವೇ ಖುದ್ಧಾಗಿ ಪುನೀತ್ ಪುಣ್ಯ ಭೂಮಿಯಲ್ಲಿ ಯುವ ರಾಜ್‌ಕುಮಾರ್ ಪೋಸ್ಟರ್ ಅನ್ನು ರಿಲೀಸ್ ಮಾಡಲಿದ್ದಾರೆ.

ಸಂತೋಷ್ ಆನಂದ್‌ರಾಮ್ ನಿರ್ದೇಶನ

ಸಂತೋಷ್ ಆನಂದ್‌ರಾಮ್ ನಿರ್ದೇಶನ

ಯುವ ರಾಜ್‌ಕುಮಾರ್ ಮೊದಲ ಸಿನಿಮಾಗೆ ಸಂತೋಷ್ ಆನಂದ್‌ರಾಮ್ ನಿರ್ದೇಶನ ಮಾಡಲಿದ್ದಾರೆ ಅನ್ನೋ ಸುದ್ದಿ ಹಲವು ದಿನಗಳಿಂದ ಹರಿದಾಡುತ್ತಿದೆ. ಆದರೆ, ಈ ಬಗ್ಗೆ ಹೊಂಬಾಳೆ ಫಿಲ್ಮ್ಸ್ ಆಗಲಿ, ಸಂತೋಷ್ ಆನಂದ್‌ರಾಮ್ ಆಗಲಿ ಮಾಹಿತಿಯನ್ನು ಹಂಚಿಕೊಂಡಿಲ್ಲ. ಈ ಎಲ್ಲಾ ಕುತೂಹಲಕ್ಕೂ ನಾಳೆ (ಏಪ್ರಿಲ್ 27) ಅಧಿಕೃತವಾಗಿ ತೆರೆಬೀಳಲಿದೆ.

More from Filmibeat

English summary
Homable Films will be launching Yuva Rajkumar movie on April 27th, Know More.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X