ಹೊಂಬಾಳೆ ಸೃಷ್ಟಿಸಿದ 'ಕೃಷ್ಣ ಎನಬಾರದೆ' ವಿಡಿಯೋ ಸಾಂಗ್‌ನಲ್ಲಿ ಕಲ್ಕಿ ಅವತಾರವೆತ್ತಿದೆ ಕೃಷ್ಣ
ನಾಳೆ (ಮಾರ್ಚ್ 27) ಶ್ರೀರಾಮ ನವಮಿ. ಭಾರತದಾದ್ಯಂತ ಶ್ರೀರಾಮ ನವಮಿಯನ್ನು ಭಕ್ತಿ ಪೂರ್ವಕವಾಗಿ ಆಚರಿಸಲಾಗುತ್ತದೆ. ಈಗಾಗಲೇ ಶ್ರೀರಾಮನ ಭಕ್ತರು ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ಇಂತಹ ಭಕ್ತರಿಗೆ ಹೊಂಬಾಳೆ ಸಂಸ್ಥೆಯಿಂದ ವಿಶೇಷ ಉಡುಗೊರೆಯೊಂದು ಸಿಕ್ಕಿದೆ. ರಾಮ ನವಮಿಗೆ ಒಂದು ದಿನ ಮುನ್ನವೇ ಶ್ರೀರಾಮನ ಭಕ್ತರಿಗಾಗಿ "ಕೃಷ್ಣ ಎನಬಾರದೇ.." ಎನ್ನುವ ಸಾಂಗ್ ಅನ್ನು ರಿಲೀಸ್ ಮಾಡಿದೆ.
ಹೊಂಬಾಳೆಯ ಸೃಷ್ಟಿಸಿದ "ಕೃಷ್ಣ ಎನಬಾರದೇ.." ಬರೀ ಒಂದು ಹಾಡಲ್ಲ. ಇದರ ಹಿಂದಿನ ಪರಿಕಲ್ಪನೆಯೇ ಎಲ್ಲರನ್ನೂ ಮೆಚ್ಚಿಸುತ್ತೆ. ನಮ್ಮ ಸಂಸ್ಕೃತಿ ಮತ್ತು ಆಧುನಿಕ ತಂತ್ರಜ್ಞಾನದ ಅಪೂರ್ವ ಸಂಗಮ. ಈ ಅದ್ಭುತ ಮ್ಯೂಸಿಕ್ ವಿಡಿಯೋವನ್ನು ಶ್ರೀರಾಮ ನವಮಿಯ ಅಂಗವಾಗಿ ಇಂದು (ಮಾರ್ಚ್ 16) ಬಿಡುಗಡೆ ಮಾಡಲಾಗಿದೆ.

ಹೊಂಬಾಳೆ ಸಂಸ್ಥೆ ವಿನೂತನ ಪ್ರಯತ್ನಕ್ಕೆ ಸದಾ ಮುಂದಿರುತ್ತೆ. ಅದರಲ್ಲೂ ಪೌರಾಣಿಕ ಕಥೆಗಳನ್ನು ಇಡೀ ವಿಶ್ವಕ್ಕೆ ಮುಟ್ಟಿಸಬೇಕು ಅನ್ನೋದು ಅವರ ಆಶಯ. ಅದರಕ್ಕೆ ಬೇಕಿರೋ ಎಲ್ಲಾ ಪ್ರಯತ್ನಗಳನ್ನು ಮಾಡುತ್ತಿದ್ದೆ. ಈಗಾಗಲೇ 'ಮಹಾವತಾರ್ ನರಸಿಂಹ' ಸಿನಿಮಾ ವಿಶ್ವದ ಮೂಲೆ ಮೂಲೆಯಲ್ಲಿ ಇರುವ ಭಾರತೀಯರ ವೀಕ್ಷಿಸಿದ್ದರು. ಈಗ ಮತ್ತೆ ಪೌರಾಣಿಕ ಪರಿಕಲ್ಪನೆಯಲ್ಲಿ ವಿಡಿಯೋ ಅಲ್ಬಮ್ ಅನ್ನು ಹೊತ್ತು ತರಲಾಗಿದೆ.
ಅಷ್ಟಕ್ಕೂ ಹೊಂಬಾಳೆ ಮ್ಯೂಸಿಕ್‌ನಲ್ಲಿ ರಿಲೀಸ್ ಮಾಡಿರುವ "ಕೃಷ್ಣ ಎನಬಾರದೇ.." ವಿಡಿಯೋ ಸಾಂಗ್‌ನಲ್ಲಿ ಸಾಕಷ್ಟು ವಿಶೇಷತೆಗಳಿವೆ. ಕೇವಲ ಹಾಡಾಗಿ ಅಷ್ಟೇ ನೋಡದೇ, ವಿಶೇಷತೆಗಳನ್ನು ಪಟ್ಟು ಮಾಡುತ್ತಾ ಹೋಗುವುದಾರೇ,
ವಿಡಿಯೋ ಸಾಂಗ್‌ನ ಕಲ್ಪನೆ
ಹೊಂಬಾಳೆ ಸಂಸ್ಥೆ ಯಾವುದಕ್ಕೆ ಕೈ ಹಾಕಿದರೂ ಅಲ್ಲೇನಾದರೂ ವಿಶೇಷತೆ ಇದ್ದೇ ಇರುತ್ತೆ. ಪ್ಯಾನ್ ಇಂಡಿಯಾದಂತಹ ದುಬಾರಿ ಸಿನಿಮಾಗಳನ್ನು ನಿರ್ಮಾಣ ಮಾಡುವುದರ ಜೊತೆಗೆ ಭಾರತೀಯ ಸಂಪ್ರದಾಯದ ಬಗ್ಗೆ ಅಪಾರ ಗೌರವ ಇಟ್ಟುಕೊಂಡಿರುವ ಹೊಂಬಾಳೆ ವಿನೂತನಕ್ಕೆ ಪ್ರಯತ್ನಕ್ಕೆ ಕೈ ಹಾಕುತ್ತಿದೆ. ಅದರ ಒಂದು ಪ್ರಯತ್ನವೇ "ಕೃಷ್ಣ ಎನಬಾರದೇ..".
ಈ ವಿಡಿಯೋ ಹಾಡಿನಲ್ಲಿ ಬರುವ ಸಾಂಪ್ರದಾಯಿಕ ಪುರಾಣ ಕಥೆಗಳಿಗೆ ಕಲ್ಪನಾತೀತ 'ಫ್ಯೂಚರಿಸ್ಟಿಕ್' (Futuristic) ಸ್ಪರ್ಶ ನೀಡಲಾಗಿದೆ. ಈ ಹಾಡಿನಲ್ಲಿ 'ಕಲ್ಕಿ' ಅವತಾರವೆತ್ತಿರುವ ಶ್ರೀಕೃಷ್ಣ ಹಾಗೂ ಪ್ರಸಿದ್ಧ ಕಾಳಿಂಗ ಮರ್ದನ ಪ್ರಸಂಗಗಳನ್ನು ಆಧುನಿಕ ತಂತ್ರಜ್ಞಾನದ ಮೂಲಕ ಪ್ರಸ್ತುತ ಪಡಿಸಲಾಗಿದೆ. ಅತ್ಯಾಧುನಿಕ ವಿಎಫ್‌ಎಕ್ಸ್ ತಂತ್ರಜ್ಞಾನದ ಮೂಲಕ ತೆರೆಯ ಮೇಲೆ ತರಲಾಗಿದೆ. ಭಾರತದ ಪುರಾಣಗಳನ್ನು ಇಂದಿನ ಪೀಳಿಗೆಗೆ ಹತ್ತಿರವಾಗುವಂತೆ ಈ ಹಾಡಿನಲ್ಲಿ ಚಿತ್ರಿಲಾಗುತ್ತಿದೆ.

ಈ ಹಾಡಿಗಿದೆ ಸಮಯದ ನಂಟು
"ಕೃಷ್ಣ ಎನಬಾರದೇ.." ಹಾಡಿಗೆ ಸಮಯದ ನಂಟು ಇದೆ. ಈ ಹಾಡನ್ನು ಇಂದು (ಮಾರ್ಚ್ 26) ಮಧ್ಯಾಹ್ನ 12.05ಕ್ಕೆ ಬಿಡುಗಡೆ ಮಾಡಲಾಗಿತ್ತು. ಅದಕ್ಕೂ ಒಂದು ಕಾರಣವಿದೆ. ಭೂಮಿ ಮೇಲೆ ಸುಮಾರು 125 ವರ್ಷ ಇದ್ದ ಸಂಕೇತದ ಹಿನ್ನೆಲೆಯಲ್ಲಿ ಈ ಹಾಡನ್ನು 12.05ಕ್ಕೆ ರಿಲೀಸ್ ಮಾಡಲಾಗಿದೆ. ಅದು ಶ್ರೀರಾಮ ಜನ್ಮ ದಿನದ ಸಮಯದಲ್ಲಿ ಭಕ್ತರಿಗೆ ಉಡುಗೊರೆಯಾಗಿ ಹಣಿ
ಹಾಡನ್ನು ಮಧ್ಯಾಹ್ನ 12:05ಕ್ಕೆ ಬಿಡುಗಡೆ ಮಾಡಿರುವುದು ವಿಶೇಷ. ಇದು ಕೃಷ್ಣ ಭೂಮಿಯ ಮೇಲೆ ಕಳೆದ 125 ವರ್ಷಗಳ ಸಂಕೇತ ಹಾಗೂ ಶ್ರೀರಾಮನ ಜನ್ಮ ಸಮಯವಾದ ಮಧ್ಯಾಹ್ನದ ಮುಹೂರ್ತಕ್ಕೆ ಹೊಂದಿಕೆಯಾಗುವಂತೆ ಬಿಡುಗಡೆ ಮಾಡಲಾಗಿದೆ. ಹೊಂಬಾಳೆ ಮ್ಯೂಸಿಕ್‌ನಲ್ಲಿ ಈ ಹಾಡು ಲಭ್ಯವಿದೆ. ಇನ್ನು ತಾಂತ್ರಿಕ ತಂಡದ ಕಡೆಗೆ ಬರೋದಾರೆ, ಸಂಗೀತ ಮತ್ತು ಸಾಹಿತ್ಯವನ್ನು ಅನಿರುದ್ಧ ಶಾಸ್ತ್ರಿ ಮಾಡಿದ್ದರೆ, ಗಾಯಕ ವಿಜಯ್ ಪ್ರಕಾಶ್, ಅನಿರುದ್ಧ ಶಾಸ್ತ್ರಿ ಮತ್ತು ನರಹರಿ ಆಚಾರ್ ಧ್ವನಿ ನೀಡಿದ್ದಾರೆ. ಹಾಗೇ ಮೆಗ್-ಅ-ವಾಟ್ ಅವರ ರ‍್ಯಾಪ್ ಮತ್ತು ಶಾಂಡಿಲ್ಯ ಪಿಸಾಪತಿ ಅವರ ಪಿಟೀಲು ವಾದನ ಈ ಹಾಡಿಗೆ ಹೊಸ ಕಳೆ ನೀಡಿದೆ. ಮೇಘರಾಜ್ ಮತ್ತು ಸುನೀತ್ ಶೆಟ್ಟಿ ಅವರ ಕ್ರಿಯೇಟಿವ್ ಡೈರೆಕ್ಷನ್‌ನಲ್ಲಿ, ಅಸ್ತ್ರ ಸ್ಟುಡಿಯೋಸ್ ಈ ದೃಶ್ಯಗಳ ವಿಎಫ್‌ಎಕ್ಸ್ ಬಳಸಿ ಸಿದ್ಧಪಡಿಸಲಾಗಿದೆ.


Click it and Unblock the Notifications















