ಶಾರ್ಟ್ ಫಿಲ್ಮ್ ತೋರಿಸಿ ಪ್ಯಾನ್ ಇಂಡಿಯಾ ಸಿನಿಮಾಗೆ ಶಾಕ್ ಕೊಟ್ಟ ಹಾಸ್ಟೆಲ್ ಹುಡುಗರು: 3 ದಿನ ದೋಚಿದ್ದೆಷ್ಟು?

ಕನ್ನಡದ ಪ್ಯಾನ್ ಇಂಡಿಯಾ ಸಿನಿಮಾಗಳು ಜಾಗತಿಕ ಮಟ್ಟದಲ್ಲಿ ಸದ್ದು ಮಾಡುತ್ತಿದೆ. ಅಲ್ಲಿಂದಲೂ ಸ್ಮಾಲ್ ಬಜೆಟ್ ಸಿನಿಮಾ ನೋಡುವುದಕ್ಕೆ ಜನರು ಥಿಯೇಟರ್‌ಗೆ ಬರುತ್ತಿಲ್ಲ ಅನ್ನೋ ಆರೋಪವಿತ್ತು. ಅದರಲ್ಲೂ ಹೊಸಬರ ಸಿನಿಮಾಗಳಂತೂ ರಿಲೀಸ್ ಮಾಡುವುದಕ್ಕೆ ಹಿಂದೇಟು ಹಾಕುತ್ತಿದ್ದರು.

2023 ಆರಂಭದಿಂದಲೂ ಇಲ್ಲಿವರೆಗೂ ಒಂದೇ ಒಂದು ಸಿನಿಮಾ ಹಿಟ್ ಲಿಸ್ಟ್ ಸೇರಿಲ್ಲ. ಕೆಲವು ಸಿನಿಮಾಗಳು ನಿರ್ಮಾಪಕರಿಗೆ ಲಾಭ ಆಗಿದ್ದು ಬಿಟ್ಟರೆ, ಬಾಕ್ಸಾಫೀಸ್‌ನಲ್ಲಿ ಜಾದು ಮಾಡಲಿಲ್ಲ. ಕಳೆದ ಆರೇಳು ತಿಂಗಳಿನಿಂದ ಸ್ಯಾಂಡಲ್‌ವುಡ್ ಬಾಕ್ಸಾಫೀಸ್ ಡಲ್ ಹೊಡೆದಿದೆ. ವಿತರಕರು, ನಿರ್ಮಾಪಕರು, ಪ್ರದರ್ಶಕರು ಕಂಗಾಲಾಗಿದ್ದರು.

Hostel Hudugaru Bekagiddare Kannada Movie Day 3 Box Offfice Collection Report in Kannada

ಇಂತಹ ಸಂದರ್ಭದಲ್ಲೇ ಕನ್ನಡ ಚಿತ್ರರಂಗಕ್ಕೆ ಸಂಜೀವಿನಿಯಂತೆ 'ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ' ರಿಲೀಸ್ ಆಗಿದೆ. ಬಹತೇಕ ಹೊಸಬರ ತಂಡವೇ ಸೇರಿಕೊಂಡು ನಿರ್ಮಿಸಿದ ಈ ಸಿನಿಮಾ ಬಾಕ್ಸಾಫೀಸ್‌ನಲ್ಲಿ ಮೋಡಿ ಮಾಡುತ್ತಿದೆ. ಸಿನಿಮಾ ಮಂದಿಗೆ ಹೊಸ ಭರವಸೆಯನ್ನು ಮೂಡಿಸುತ್ತಿದೆ. ಮಳೆ, ಚಳಿ ಏನೇ ಇದ್ದರೂ ಸಿನಿಮಾ ನೋಡುತ್ತಿದ್ದಾರೆ. ಸಿನಿಮಾ ರಿಲೀಸ್ ಆದ ಮೂರು ದಿನಗಳ ಬಾಕ್ಸಾಫೀಸ್ ಕಲೆಕ್ಷನ್ ಕೂಡ ಜೋರಾಗಿದೆ.

ಮೂರನೇ ದಿನ ಹಾಸ್ಟೆಲ್ ಹುಡುಗರು ಗಳಿಸಿದ್ದೆಷ್ಟು?

'ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ' ಸಿನಿಮಾದ ಬಾಕ್ಸಾಫೀಸ್‌ ರಿಪೋರ್ಟ್ ಪ್ರಾಮಿಸಿಂಗ್ ಆಗಿದೆ. ಸಿನಿಮಾ ರಿಲೀಸ್ ಆದ ದಿನದಿಂದಲೂ ಕಲೆಕ್ಷನ್ ವಿಚಾರದಲ್ಲೂ ಸದ್ದು ಮಾಡುತ್ತಲೇ ಇದೆ. ಅದರಲ್ಲೂ ವೀಕೆಂಡ್‌ನಲ್ಲಿ ಹಾಸ್ಟೆಲ್ ಹುಡುಗರು ಸಿನಿಮಾ ನೋಡುವವರ ಸಂಖ್ಯೆ ಗಣನೀಯವಾಗಿ ಏರಿಕೆಯಾಗಿದೆ. ಶುಕ್ರವಾರಕ್ಕಿಂತ ಶನಿವಾರ. ಹಾಗೂ ಶನಿವಾರಕ್ಕಿಂತ ಭಾನುವಾರ ಸಿನಿಮಾ ಕಲೆಕ್ಷನ್ ಹೆಚ್ಚಾಗಿದೆ. ಅದರಲ್ಲೂ 3ನೇ ದಿನ 'ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ' ಸಿನಿಮಾದ ಬಾಕ್ಸಾಫೀಸ್ ಕಲೆಕ್ಷನ್ ಮೊದಲ ಎರಡು ದಿನಗಳಿಗಿಂತ ಹೆಚ್ಚಿದೆ. ಟ್ರೇಡ್ ಎಕ್ಸ್‌ಪರ್ಟ್‌ಗಳ ಪ್ರಕಾರ, ಮೂರನೇ ದಿನ ಬರೋಬ್ಬರಿ ಮೂರು ಕೋಟಿ ರೂ. ಕಲೆಕ್ಷನ್ ಮಾಡಿದೆ ಎನ್ನಲಾಗಿದೆ.

Hostel Hudugaru Bekagiddare Kannada Movie Day 3 Box Offfice Collection Report in Kannada

ಮೂರು ದಿನಗಳ ಒಟ್ಟು ಕಲೆಕ್ಷನ್ ಎಷ್ಟು?

'ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ' ಜುಲೈ 21ಕ್ಕೆ ರಾಜ್ಯಾದ್ಯಂತ ಬಿಡುಗಡೆಯಾಗಿತ್ತು. ಮೊದಲ ದಿನ (ಜುಲೈ 21)ರಂದು ಸಿನಿಮಾ ಗಳಿಸಿದ್ದು 1.09 ಕೋಟಿ ರೂ. ಹಾಗೇ ಎರಡನೇ ದಿನ (ಜುಲೈ 22)ರಂದು 2.1 ಕೋಟಿ ರೂ. ಗಳಿಕೆ ಕಂಡಿದೆ. ಹಾಗೇ ಮೂರನೇ ದಿನ (ಜುಲೈ 23)ರಂದು ಹೆಚ್ಚು ಕಡಿಮೆ 3 ಕೋಟಿ ರೂ. ಕಲೆಕ್ಷನ್ ಆಗಿದೆ ಎಂದು ಟ್ರೇಡ್ ಎಕ್ಸ್‌ಪರ್ಟ್‌ ಲೆಕ್ಕಾಹಾಕಿದ್ದಾರೆ. ಈ ಮೂಲಕ ಅಂದಾಜು 6 ಕೋಟಿ ರೂ.ವರೆಗೂ ಸಿನಿಮಾ ಕಲೆಕ್ಷನ್ ಮಾಡಿದೆ ಎನ್ನಲಾಗಿದೆ.

ಸೋಮವಾರದಿಂದ ಶುಕ್ರವಾರದವರೆಗೆ ಹೇಗೆ?

ಸೂಪರ್‌ಸ್ಟಾರ್ ಸಿನಿಮಾಗಳೇ ಇರಲಿ..ಹೊಸಬರ ಸಿನಿಮಾಗಳೇ ಆಗಲಿ.. ಮೊದಲ ಮೂರು ದಿನ ಬಿಟ್ಟರೆ, ನಾಲ್ಕನೇ ದಿನದಿಂದ ಆ ಸಿನಿಮಾ ಸವಾಲುಗಳನ್ನು ಎದುರಿಸುತ್ತೆ. ಇದೊಂತರ ಸಿನಿಮಾ ತಂಡಕ್ಕೆ ಅಗ್ನಿಪರೀಕ್ಷೆ ಇದ್ದಂತೆ. ಮುಂದಿನ ವೀಕೆಂಡ್ ಬರೋವರೆಗೂ ಹಾಸ್ಟೆಲ್ ಹುಡುಗರು ಗಟ್ಟಿಯಾಗಿ ಥಿಯೇಟರ್‌ನಲ್ಲಿ ನಿಂತರೆ, ಮುಂದಿನ ವೀಕೆಂಡ್ ಮುಗಿಯೋ ಹೊತ್ತಿಗೆ 10 ಕೋಟಿ ರೂ. ಕ್ಲಬ್ ಅನ್ನು ಆರಾಮಾಗಿ ಸೇರಬಹುದು. ಸದ್ಯ ಸಿಕ್ಕಿರೋ ಮಾಹಿತಿ ಪ್ರಕಾರ, ಸೋಮವಾರ ಕಲೆಕ್ಷನ್ ಕೊಂಚ ಡ್ರಾಪ್ ಆಗಿದ್ದರೂ, ಸ್ಟಡಿಯಾಗಿದೆ.

ಎಷ್ಟು ಸ್ಕ್ರೀನ್‌ಗಳಲ್ಲಿ ರಿಲೀಸ್?

'ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ' ಸಿನಿಮಾಗೆ ರಕ್ಷಿತ್ ಶೆಟ್ಟಿ ಬೆಂಬಲವಾಗಿ ನಿಂತಿದ್ದಾರೆ. ಆದರೂ, ಮೊದಲ ದಿನ ರಾಜ್ಯಾದ್ಯಂತ 130 ಸ್ಕ್ರೀನ್‌ಗಳಲ್ಲಷ್ಟೇ ರಿಲೀಸ್ ಮಾಡಲಾಗಿತ್ತು. ಉತ್ತಮ ರೆಸ್ಪಾನ್ಸ್ ಸಿಕ್ಕ ಬಳಿಕ ಎರಡನೇ ದಿನ 10 ಸ್ಕ್ರೀನ್ ಹೆಚ್ಚಾಗಿತ್ತು. ಭಾನುವಾರ ಸುಮಾರು 200 ಸ್ಕ್ರೀನ್‌ಗಳಿಗೆ ಏರಿಕೆ ಮಾಡಲಾಗಿದೆ. ಹೀಗಾಗಿ ಮುಂದಿನ ದಿನಗಳಲ್ಲಿ ಸಿಗುವ ರೆಸ್ಪಾನ್ಸ್ ನೋಡಿ ಸ್ಕ್ರೀನ್‌ಗಳ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆಯಿದೆ.

More from Filmibeat

English summary
Hostel Hudugaru Bekagiddare Day 3 Box Office Collection in Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X