ಪುನೀತ್ ಓಂಕಾರ.. 'ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ' 50 ದಿನ ಕಂಪ್ಲೀಟ್.. ಥಿಯೇಟರ್‌ ಮುಂದೆ ಸಂಭ್ರಮ!

'ಕಾಂತಾರ' ಬಳಿಕ ಕನ್ನಡ ಚಿತ್ರರಂಗ ಸೊರಗಿ ಹೋಗಿತ್ತು. ರಿಲೀಸ್ ಆದ ಕನ್ನಡ ಸಿನಿಮಾಗಳು ದೊಡ್ಡ ಮಟ್ಟದಲ್ಲಿ ಸದ್ದು ಮಾಡಿರಲೇ ಇಲ್ಲ. ಜನರು ಚಿತ್ರಮಂದಿರಕ್ಕೆ ಬಂದಿರಲೇ ಇಲ್ಲ. ಇಂತಹ ಸಂದರ್ಭದಲ್ಲಿ 'ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ' ಜನರನ್ನು ಮತ್ತೆ ಚಿತ್ರಮಂದಿರಕ್ಕೆ ಕರೆದುಕೊಂಡು ಬಂದಿತ್ತು.

'ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ' ಸಿನಿಮಾ 2021 ಜನವರಿಯಲ್ಲಿ ಮೇಕಿಂಗ್ ಶುರುವಾಗಿತ್ತು. ಯುವಕರ ತಂಡವೊಂದು ಸಿನಿಮಾ ಮಾಡಬೇಕು ಅನ್ನೋ ಕನಸು ಹೊತ್ತು ನಿರ್ಮಾಣಕ್ಕೆ ಮುಂದಾಗಿದ್ದರು. ಅಲ್ಲಿಂದ ಕೊರೊನಾ, ಲಾಕ್‌ಡೌನ್ ಎಲ್ಲಾ ಸಂಕಷ್ಟವನ್ನು ದಾಟಿ ಕೊನೆಗೂ ಸಿನಿಮಾವನ್ನು ರಿಲೀಸ್ ಮಾಡಿದ್ದರು.

Hostel Hudugaru Bekagiddare Movie completed 50 days in theatre

ಹಾಸ್ಟೆಲ್ ಹುಡುಗರಿಗೆ ಅಪ್ಪು ಓಂಕಾರ

ಪವರ್‌ಸ್ಟಾರ್ ಪುನೀತ್ ರಾಜ್‌ಕುಮಾರ್ ಸಿನಿಮಾ ಶುರುವಾದ ಆರಂಭದಿಂದಲೇ ಈ ತಂಡದ ಬೆನ್ನೆಲುಬಾಗಿ ನಿಂತಿದ್ದರು. ಅಂದ್ಹಾಗೆ, 'ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ' ಸಿನಿಮಾಗೆ ಓಂಕಾರ ಹಾಕಿದ್ದೇ ಪವರ್‌ಸ್ಟಾರ್ ಪುನೀತ್ ರಾಜ್‌ಕುಮಾರ್. ಹೀಗಾಗಿ ಆರಂಭದ ದಿನದಿಂದಲೇ ಸಿನಿಮಾದ ಪ್ರಚಾರವನ್ನು ವಿಭಿನ್ನವಾಗಿ ಆರಂಭ ಮಾಡಿದ್ದರು.

85 ರಾತ್ರಿ ಶೂಟಿಂಗ್

'ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ' ವಿಭಿನ್ನ ಕಾನ್ಸೆಪ್ಟ್ ಸಿನಿಮಾ ಆಗಿತ್ತು. ರಾತ್ರಿಗಳಲ್ಲಿಯೇ ಹೆಚ್ಚು ಹೊತ್ತು ಸಿನಿಮಾ ಚಿತ್ರೀಕರಣ ಮಾಡಬೇಕಿತ್ತು. ಹೀಗಾಗಿ ಸತತ 85 ರಾತ್ರಿಗಳಲ್ಲಿ ಸಿನಿಮಾದ ಚಿತ್ರೀಕರಣ ಮಾಡಿದ್ದರು. ವಿಶೇಷ ಅಂದರೆ, ಈ ಸಿನಿಮಾದಲ್ಲಿ 500ಕ್ಕೂ ಹೆಚ್ಚು ಯುವ ಪ್ರತಿಭೆಗಳು ಸಿನಿಮಾದಲ್ಲಿ ನಟಿಸಿದ್ದಾರೆ. ಮಂಗಳೂರಿನ ವಿಶ್ವ ವಿದ್ಯಾನಿಲಯದ ಬಾಯ್ಸ್ ಹಾಸ್ಟೆಲ್‌ನಲ್ಲಿ ಸಿನಿಮಾದ ಶೂಟಿಂಗ್ ಮಾಡಲಾಗಿತ್ತು.

Hostel Hudugaru Bekagiddare Movie completed 50 days in theatre

ಇಡೀ ಚಿತ್ರರಂಗವೇ ಸಾಥ್

ಪುನೀತ್ ರಾಜ್‌ಕುಮಾರ್‌ ಅವರಿಂದ ಶುರುವಾದ ಸಿನಿಮಾಗೆ ಇಡೀ ಚಿತ್ರರಂಗವೇ ಸಾಥ್ ಕೊಟ್ಟಿದ್ದರು. ಈ ಸಿನಿಮಾವನ್ನು ರಕ್ಷಿತ್ ಶೆಟ್ಟಿಯ ಪರಂವಃ ಪಿಕ್ಚರ್ಸ್ ಸಿನಿಮಾ ಬಿಡುಗಡೆಗೆ ಸಾಥ್ ಕೊಟ್ಟಿದ್ದರು. ಅಲ್ಲದೇ ವಿಶೇಷ ಪಾತ್ರದಲ್ಲಿ ರಿಷಭ್ ಶೆಟ್ಟಿ, ಸ್ಯಾಂಡಲ್‌ವುಡ್‌ ಕ್ವೀನ್ ರಮ್ಯಾ, ನಿರ್ದೇಶಕ ಪವನ್ ಕುಮಾರ್, ದಿಗಂತ್ ಮಂಚಾಲೆ, ಶೈನ್ ಶೆಟ್ಟಿ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು.

50 ದಿನಗಳ ಸಂಭ್ರಮ

'ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ' ಸಿನಿಮಾವನ್ನು ಗುಲ್ಮೋಹರ್ ಫಿಲಂಸ್ ಹಾಗೂ ವರುಣ್ ಸ್ಟುಡಿಯೋಸ್ ಸೇರಿ ನಿರ್ಮಿಸಿತ್ತು. ನಿತಿನ್ ಕೃಷ್ಣಮೂರ್ತಿ ನಿರ್ದೇಶನ ಹಾಗೂ ಕಥೆ-ಚಿತ್ರಕಥೆಯನ್ನೂ ಬರೆದಿದ್ದಾರೆ. ಅರವಿಂದ್ ಕಶ್ಯಪ್ ಕ್ಯಾಮರಾ ಹಾಗೂ ಅಜನೀಶ್ ಲೋಕನಾಥ್ ಸಂಗೀತ ನೀಡಿದ್ದರು. ಸದ್ಯ 50 ದಿನಗಳ ಸಂಭ್ರಮದಲ್ಲಿರುವ ತಂಡ ಚಿತ್ರಮಂದಿರದ ಮುಂದೆ 50 ದಿನಗಳ ಸಂಭ್ರಮದಲ್ಲಿ ಮುಳುಗಿ ಎದ್ದಿದೆ.

More from Filmibeat

English summary
Hostel Hudugaru Bekagiddare Movie completed 50 days in theatre.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X