Ramya Case: ರಮ್ಯಾಗೆ ಕತ್ತರಿ ಹಾಕೋದು ಬೇಡ ಎಂದ ಕೋರ್ಟ್.. ಪಾಸ್ ಆದ ಹಾಸ್ಟೆಲ್ ಹುಡುಗರು!
'ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ' ಹೊಸಬರ ತಂಡದ ವಿರುದ್ಧ ರಮ್ಯಾ ತಿರುಗಿಬಿದ್ದಿದ್ದರು. ತನ್ನ ಅನುಮತಿ ಇಲ್ಲದೆ ಸಿನಿಮಾಗಳಲ್ಲಿ ದೃಶ್ಯಗಳನ್ನು ಬಳಸಿಕೊಳ್ಳಲಾಗಿದೆ ಎಂದು ಕಮರ್ಷಿಯಲ್ ನ್ಯಾಯಾಲಯದಲ್ಲಿ ಮೆಟ್ಟಿಲೇರಿ ದೂರನ್ನು ದಾಖಲಿಸಿದ್ದರು.
ಸಿನಿಮಾ ಬಿಡುಗಡೆಗೆ ಎರಡು ದಿನ ಬಾಕಿ ಇರುವಾಗಲೇ ರಮ್ಯಾ ದೂರ ದಾಖಲಿಸಿದ್ದು ಚಿತ್ರತಂಡಕ್ಕೂ ಅಚ್ಚರಿ ಮೂಡಿಸಿತ್ತು. ಹೀಗಾಗಿ 'ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ' ಸಿನಿಮಾ ತಂಡ ಕೂಡ ನ್ಯಾಯಾಲಯದ ಮೊರೆ ಹೋಗಿತ್ತು.

ಕಳೆದ ಎರಡು ದಿನಗಳಿಂದ ನಡೆದ ವಿಚಾರಣೆಯನ್ನು ಪರಿಶೀಲಿಸಿದ ಬಳಿಕ ಕಮರ್ಷಿಯಲ್ ಕೋರ್ಟ್ 'ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ' ತಂಡದ ಪರ ತೀರ್ಪು ನೀಡಿದೆ. ಹಾಸ್ಟೆಲ್ ಹುಡುಗರು ಹಾಗೂ ರಮ್ಯಾ ನಡುವಿನ ಫೈಟ್‌ನಲ್ಲಿ ಮೋಹಕತಾರೆ ಸೋಲಾಗಿದ್ದು, ನಾಳೆ (ಜುಲೈ 21) ಸಿನಿಮಾ ರಾಜ್ಯಾದ್ಯಂತ ರಿಲೀಸ್ ಆಗೋದು ಪಕ್ಕಾ ಆಗಿದೆ.
ಒಂದು ಕೋಟಿ ರೂ. ಕೇಸ್ ದಾಖಲಿಸಿದ ರಮ್ಯಾ
ಮೋಹಕತಾರೆ ರಮ್ಯಾ 'ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ' ತಂಡದ ವಿರುದ್ಧ ತಿರುಗಿಬಿದ್ದಿದ್ದರು. ತನ್ನ ಇಲ್ಲದೆ ದೃಶ್ಯವನ್ನು ಬಳಕೆ ಮಾಡಿದ್ದಾರೆಂದು ಕಮರ್ಷಿಯಲ್ ಕೋರ್ಟ್ ಮೆಟ್ಟಿಲೇರಿದ್ದರು. ಅಲ್ಲದೆ ಒಂದು ಕೋಟಿ ರೂ. ನೀಡಬೇಕೆಂದು ದೂರಿನಲ್ಲಿ ತಿಳಿಸಿದ್ದರು. 'ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ' ಪರ ಲಾಯರ್ ವೇಲನ್ ವಾದ ಮಂಡಿಸಿದ್ದರು.
ನಾಳೆ (ಜುಲೈ 21) 'ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ' ಸಿನಿಮಾ ರಿಲೀಸ್ ಆಗುತ್ತಿದ್ದು ಬಿಡುಗಡೆಗೆ ಅವಕಾಶ ಕೊಡಬೇಕು ಎಂದು ಮನವಿ ಮಾಡಿಕೊಂಡಿದ್ದರು. ಪರ-ವಿರೋಧ ವಾದವನ್ನು ಆಲಿಸಿದ ಬಳಿಕ ರಮ್ಯಾ ಹಾಕಿದ್ದ ಕೇಸ್ ಅನ್ನು ಕೋರ್ಟ್ ತೆರವು ಗೊಳಿಸಿದ್ದು, ಬಿಡುಗಡೆಗೆ ಅನುವು ಮಾಡಿಕೊಟ್ಟಿದೆ.
ಹಾಸ್ಟೆಲ್ ಹುಡುಗರಿಗೆ ಅಡ್ವಾನ್ಸ್ ಬುಕಿಂಗ್ ಆರಂಭ
'ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ' ಸಿನಿಮಾ ಬಿಡುಗಡೆಗೆ ಅವಕಾಶ ನೀಡುತ್ತಿದ್ದಂತೆ ಅಡ್ವಾನ್ಸ್ ಬುಕಿಂಗ್ ಆರಂಭ ಆಗಿದೆ. ಹೀಗಾಗಿ ಚಿತ್ರತಂಡ ಕೊನೆಯ ಹಂತದ ಪ್ರಚಾರವನ್ನು ಮಾಡುತ್ತಿದೆ. ನಾಳೆ ಅದ್ಧೂರಿಯಾಗಿ ರಾಜ್ಯಾದ್ಯಂತ ಸಿನಿಮಾ ಬಿಡುಗಡೆಯಾಗುತ್ತಿದೆ. ಬಹುತೇಕ ಹೊಸಬರೇ ಸೇರಿ ನಿರ್ಮಿಸಿರುವ ಸಿನಿಮಾಗೆ ಪ್ರೇಕ್ಷಕರು ಪ್ರತಿಕ್ರಿಯೆ ಹೇಗಿರುತ್ತೆ ಅನ್ನೋದೇ ಈಗ ಕುತೂಹಲ.
ಅಜನೀಶ್ ಲೋಕನಾಥ್ ಮ್ಯೂಸಿಕ್ ಈಗಾಗಲೇ ಪ್ರೇಕ್ಷಕರಿಗೆ ಇಷ್ಟ ಆಗಿದೆ. ರಕ್ಷಿತ್ ಶೆಟ್ಟಿ ಈ ಸಿನಿಮಾವನ್ನು ಪ್ರೆಸೆಂಟ್ ಮಾಡುತ್ತಿರುವುದರಿಂದ ಮತ್ತಷ್ಟು ಬಲ ಬಂದಂತಾಗಿದೆ. ಹಾಸ್ಟೆಲ್ ಜೀವನವನ್ನು ಮತ್ತೆ ಮೆಲುಕು ಹಾಕುವುದಕ್ಕೆ ಪ್ರೇಕ್ಷಕರಿಗೆ ಈ ಸಿನಿಮಾ ಸಹಾಯ ಮಾಡುತ್ತಾ? ಇಲ್ವಾ ಅನ್ನೋದು ನಾಳೆ ಬೆಳಗ್ಗೆ ಹೊತ್ತಿಗೆ ಗೊತ್ತಾಗಲಿದೆ.


Click it and Unblock the Notifications











