ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ದರ್ಶನ್-ಪವಿತ್ರಾ ಗೌಡ: ತನಿಖೆ ವೇಳೆ ಪೊಲೀಸರಿಗೆ ದರ್ಶನ್ ಹೆಸರು ಸಿಕ್ಕಿದ್ದೇಗೆ?
ಸ್ಯಾಂಡಲ್‌ವುಡ್ ಸೂಪರ್‌ಸ್ಟಾರ್ ದರ್ಶನ್ ಕೊಲೆ ಪ್ರಕರಣದಲ್ಲಿ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಬೆಂಗಳೂರಿನ ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಜೂನ್ 9ರಂದು 33 ವರ್ಷದ ಅಪರಿಚಿತ ವ್ಯಕ್ತಿಯ ಮೃತದೇಹ ಪತ್ತೆಯಾಗಿತ್ತು. ಇಲ್ಲಿಂದ ಪೊಲೀಸರು ಮೃತದೇಹವನ್ನು ವಶಕ್ಕೆ ಪಡೆದು ತನಿಖೆಯನ್ನು ಆರಂಭಿಸಿದ್ದರು.
ಅಪರಿಚಿತ ವ್ಯಕ್ತಿಯ ಶವವನ್ನು ಪೊಲೀಸರು ಗುರುತು ಪತ್ತೆ ಹಚ್ಚುವ ಕೆಲಸವನ್ನು ಮಾಡುತ್ತಾರೆ. ಮೊದಲು ಇದೊಂದು ಆತ್ಮಹತ್ಯೆ ಪ್ರಕರಣ ಇರಬಹುದು ಎಂದು ಊಹಿಸಿದ್ದ ಪೊಲೀಸರಿಗೆ ಮೃತದೇಹದ ಮೇಲಾದ ಗಾಯದ ಗುರುತನ್ನು ಕಂಡು ಇದು ಕೊಲೆ ಎಂಬ ನಿರ್ಧಾರಕ್ಕೆ ಬಂದಿದ್ದರು. ಅಲ್ಲಿಂದ ತನಿಖೆಯನ್ನು ಚುರುಕು ಗೊಳಿಸಿದ್ದರು.

ಮೃತ ವ್ಯಕ್ತಿಯ ಪೋನ್ ಲೋಕೇಶ್ ಟ್ರ್ಯಾಕ್ ಮಾಡಿದ್ದರು. ಈ ವೇಳೆ ಹಿಂದಿನ ದಿನ ರಾಜಾರಾಜೇಶ್ವರಿ ನಗರದ ಸುತ್ತ ಮೃತ ವ್ಯಕ್ತಿಯ ಓಡಾಡಿದ್ದು ಗಮನಕ್ಕೆ ಬಂದಿತ್ತು. ಅಷ್ಟೊರಳಗೆ ಈತ ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಎಂಬ ಮಾಹಿತಿ ಸಿಕ್ಕಿತ್ತು. ಪೊಲೀಸರು ಸಿಸಿಟಿವಿ ಎಲ್ಲವನ್ನೂ ಪರಿಶೀಲನೆ ಮಾಡುವ ಸಾಕ್ಷಿಯನ್ನು ಕಲೆ ಹಾಕುವ ಪ್ರಯತ್ನಕ್ಕೆ ಮುಂದಾಗಿದ್ದರು.
ಈ ವೇಳೆ ಮೂವರು ಮಂದಿ ಪೊಲೀಸ್ ಠಾಣೆಗೆ ಬಂದು ರೇಣುಕಾಸ್ವಾಮಿ ಕೊಲೆ ಮಾಡಿದ್ದು ತಾವೇ ಎಂದು ಶರಣಾಗಿದ್ದರು. ಈ ಮೂವರನ್ನು ಪ್ರತ್ಯೇಕವಾಗಿ ವಿಚಾರಣೆ ಮಾಡಿದ್ದರು. ಇದರಲ್ಲಿ ಒಬ್ಬೊಬ್ಬರು ಒಂದೊಂದು ರೀತಿ ಮಾಹಿತಿ ನೀಡಿದ್ದರು. ಇದು ಪೊಲೀಸರ ಅನುಮಾನಕ್ಕೆ ಕಾರಣವಾಗಿತ್ತು. ಬಳಿಕ ಶರಣಾದ ಆರೋಪಿಗಳು ಅಸಲಿ ವಿಷಯವನ್ನು ಬಯಲಿಗೆ ಎಳೆದಿದ್ದರು.

ದರ್ಶನ್ ಅವರ ಸಂಗಾತಿ ಪವಿತ್ರಾ ಗೌಡಗೆ ಇನ್‌ಸ್ಟಾಗ್ರಾಂ ಖಾತೆಯಲ್ಲಿ ರೇಣುಕಾಸ್ವಾಮಿ ಅಶ್ಲೀಲ ಮೆಸೇಜ್ ಮಾಡುತ್ತಿದ್ದ, ಅಲ್ಲದೆ ವಿಡಿಯೋವನ್ನು ಕಳುಹಿಸುತ್ತಿದ್ದ. ಇದರಿಂದ ದರ್ಶನ್ ಸಿಟ್ಟಿಗೆದ್ದಿದ್ದರು. ಹೀಗಾಗಿ ರೇಣುಕಾಸ್ವಾಮಿಯನ್ನು ಚಿತ್ರದುರ್ಗದ ಅಭಿಮಾನಿ ಸಂಘದ ಅಧ್ಯಕ್ಷನ ಮೂಲಕ ದರ್ಶನ್ ಕರೆಸಿಕೊಂಡಿದ್ದರು.
ರಾಜಾರಾಜೇಶ್ವರಿ ನಗರದ ಖಾಸಗಿ ಸ್ಥಳದಲ್ಲಿ ಕರೆಸಿಕೊಂಡಿದ್ದರು. ಬಳಿಕದ ದರ್ಶನ್ ಹಾಗೂ ಅವರ ಸಹಚರರು ರೇಣುಕಾಸ್ವಾಮಿ ಬಳಿ ಹಲ್ಲೆ ಮಾಡಿದ್ದರು. ಈ ವೇಳೆ ರೇಣುಕಾಸ್ವಾಮಿ ಸ್ಥಳದಲ್ಲಿಯೇ ಸಾವನ್ನಪ್ಪಿದ್ದರು. ಈ ವೇಳೆ ದರ್ಶನ್ ಹಾಗೂ ಪವಿತ್ರಾಗೌಡ ಇಬ್ಬರೂ ಇದ್ದರು ಅನ್ನುವ ಮಾಹಿತಿಯನ್ನು ಶರಣಾಗಿದ್ದವರೇ ಒಪ್ಪಿಕೊಂಡಿದ್ದರು. ಈ ಹಿನ್ನೆಲೆಯಲ್ಲಿ ದರ್ಶನ್ ಅವರನ್ನು ಇಂದು ಬೆಳಗ್ಗೆ ಮೈಸೂರಿನಲ್ಲಿ ಬಂಧಿಸಲಾಗಿದೆ ಎಂದು ಮಾಧ್ಯಮಗಳಲ್ಲಿ ವರದಿಗಳಾಗಿವೆ.


Click it and Unblock the Notifications











