ಮುಸಿಕೊಂಡಿದ್ದ ಜಗ್ಗೇಶ್-ಗುರುಪ್ರಸಾದ್ ಒಂದಾಗಿದ್ದೇಗೆ? ಇಬ್ಬರನ್ನೂ ಒಪ್ಪಿಸೋದಕ್ಕೆ ನಿರ್ಮಾಪಕರಿಗೆ ಮೀಟರ್ ಹೇಗೆ ಬಂತು?

ನವರಸ ನಾಯಕ ಜಗ್ಗೇಶ್ ಹಾಗೂ ಗುರು ಪ್ರಸಾದ್ ಇವರಿಬ್ಬರ ಕಾಂಬಿನೇಷನ್‌ ಈ ಹಿಂದೆ ಸಿಕ್ಕಾಪಟ್ಟೆ ವರ್ಕ್ ಔಟ್ ಆಗಿತ್ತು. 'ಮಠ' ಹಾಗೂ 'ಎದ್ದೇಳು ಮಂಜುನಾಥ' ಸಿನಿಮಾಗೆ ಪ್ರತ್ಯೇಕವಾಗಿ ಇಂದಿಗೂ ಫ್ಯಾನ್ಸ್ ಇದ್ದಾರೆ. ಜಗ್ಗೇಶ್‌ಗಾಗಿಯೇ ಗುರುಪ್ರಸಾದ್ ಕಥೆ ಬರೆದರೇ.. ಇಲ್ಲ ಗುರುಪ್ರಸಾದ್ ಬರೆದ ಕಥೆಗೆ ಜಗ್ಗೇಶ್ ಅವರೇ ಹೊಂದಿಕೊಳ್ಳುತ್ತಾರಾ? ಅನ್ನೋ ಅನುಮಾನ ಇಂದಿಗೂ ಇದೆ.

ಸದ್ಯಕ್ಕೀಗ 'ರಂಗನಾಯಕ' ಕಥೆ ಡಿಫ್ರೆಂಟ್ ಆಗಿದೆ. 'ಮಠ', 'ಎದ್ದೇಳು ಮಂಜುನಾಥ್' ನಿರೀಕ್ಷೆ ಇಟ್ಟುಕೊಂಡು ಥಿಯೇಟರ್‌ನಲ್ಲಿ 'ರಂಗನಾಯಕ' ಸಿನಿಮಾ ನೋಡಿದ್ದರು. ಆದರೆ, ಸಿನಿಮಾ ನೋಡಿದ ಮೇಲೆ ಪ್ರೇಕ್ಷಕರಿಗೆ ಏನೇನೋ ಅನಿಸಿದೆ. 'ಎದ್ದೇಳು ಮಂಜುನಾಥ' ಸಿನಿಮಾ ಬಳಿಕ ಜಗ್ಗೇಶ್ ಹಾಗೂ ಗುರುಪ್ರಸಾದ್ ನಡುವೆ ಬಿರುಕು ಬಿಟ್ಟಿತ್ತು. ಒಬ್ಬರ ಮೇಲೆ ಇನ್ನೊಬ್ಬರು ಮುನಿಸಿಕೊಂಡಿದ್ದರು.

How Guruprasad and Jaggesh came together for Ranganayaka after their differences

ಇನ್ನೇನು ಇವರು ಸಿನಿಮಾ ಮಾಡೋದಿಲ್ಲವೇ? ಅನ್ನೋ ಪ್ರಶ್ನೆ ಹುಟ್ಟುಕೊಂಡಿದ್ದಿದೆ. ಸುಮಾರು 15 ವರ್ಷ ಕಾದಿದ್ದವರಿಗೆ 'ರಂಗನಾಯಕ' ಸಿಕ್ಕಿದೆ. ಆದರೆ, ಇವರಿಬ್ಬರನ್ನು ಒಂದು ಮಾಡುವುದಕ್ಕೆ ನಿರ್ಮಾಪಕ ವಿಖ್ಯಾತ್ ಏನು ಮಾಡಿದ್ರು? ಈ ಜೋಡಿ ಒಟ್ಟಿಗೆ ಸೇರಿದ್ದು ಹೇಗೆ? ಮುನಿಸಿಕೊಂಡವರು ಎಲ್ಲವನ್ನೂ ಮರೆತು ಮತ್ತೆ ಒಂದಾಗಿದ್ದೇಗೆ? ಇದೆಲ್ಲವನ್ನು ತಿಳಿಯುವುದಕ್ಕೆ ಮುಂದೆ ಓದಿ...

'ರಂಗನಾಯಕ' ಸಿನಿಮಾವನ್ನು ನಿರ್ಮಾಣ ಮಾಡಿದ್ದು ವಿಖ್ಯಾತ್. ಅದಾಗಲೇ 'ಪುಷ್ಪಕ ವಿಮಾನ', 'ಇನ್‌ಸ್ಪೆಕ್ಟರ್ ವಿಕ್ರಂ', 'ಮಾನ್ಸೂನ್ ರಾಗ'ದಂತಹ ಸಿನಿಮಾ ಮಾಡಿದಾಗ ಬೇರೆಯಾದವರನ್ನು ಸೇರಿಸುವುದಕ್ಕೆ ಮುಂದಾಗಿದ್ದರು. ಬೇರೆಯಾದವರನ್ನು ಒಟ್ಟಿಗೆ ಸೇರಿಸಿ ಸಿನಿಮಾ ಮಾಡಬೇಕು ಆಂತ ಆಯೋಚನೆ ಮಾಡಿದಾಗ ಸಿಕ್ಕಿದ್ದೇ ಸಂಗೀತ ನಿರ್ದೇಶಕ ಅನೂಸ್ ಸೀಳಿನ್. ಈ ಮಾತನ್ನು ನಿರ್ಮಾಪಕ ವಿಖ್ಯಾತ್ ಕನ್ನಡ ಪಿಕ್ಚರ್ ಯೂಟ್ಯೂಬ್ ಚಾನೆಲ್‌ಗೆ ನೀಡಿದ ಸಂದರ್ಶನದಲ್ಲಿ ರಿವೀಲ್ ಮಾಡಿದ್ದಾರೆ.

"ಅನೂಪ್ ಸೀಳಿನ್ ಹಾಗೂ ನಾನು ಏನೋ ಕೂತು ಮಾತಾಡುತ್ತಿದ್ದೆವು. ಆಗ ಮಾಡಿದ್ರೆ, ಜಗ್ಗೇಶ್ ಅವರು ಹಾಗೂ ಗುರುಪ್ರಸಾದ್ ಕಾಂಬಿನೇಷನ್ ಪಿಕ್ಚರ್ ಮಾಡಬೇಕು. ಆದರೆ, ಅವರು ಮಾಡೋದಿಲ್ವಲ್ಲ. ಇಬ್ಬರ ನಡುವೆ ಏನೋ ಗಲಾಟೆ ಆಗಿದೆ ಅಂದೆ. ಇಲ್ಲೇ ಇದ್ದಾರೆ ಗುರುಪ್ರಸಾದ್ ಅವರ ಬಳಿ ಹೋಗೋಣ ಅಂದ್ರು. ಇಬ್ಬರೂ ಒಂದು ನೈಟ್ ಹೋದ್ವಿ. ಹೋಟೆಲ್‌ನಲ್ಲಿ ಒಂದು ರೂಮ್‌ ಮಾಡ್ಕೊಂಡು ಇರುತ್ತಾರೆ. ಹೀಗೆ ಮಾತಾಡುತ್ತಾ, ಸಿನಿಮಾ ಮಾಡುತ್ತೀರಾ? ಅಂದೆ.. ಅವರು ಯಾಕೆ ಮಾಡೋಕೆ ಆಗಲ್ಲ. ಮಾಡೋಣ ಅಂದಿದ್ದರು." ಎಂದು ಜಗ್ಗೇಶ್ ಹಾಗೂ ಗುರುಪ್ರಸಾದ್ ಅನ್ನು ಸೇರಿಸುವ ಕಲಸ ಶುರು ಮಾಡಿದ್ದರು.

How Guruprasad and Jaggesh came together for Ranganayaka after their differences

ಗುರುಪ್ರಸಾದ್ ಏನೋ ಬೇಗನೇ ಒಪ್ಪಿಕೊಂಡಿದ್ದರು. ನಿರ್ಮಾಪಕ ವಿಖ್ಯಾತ್ ಐದು ಸಾವಿರದ ಒಂದು ರೂಪಾಯಿಯನ್ನು ಅಡ್ವಾನ್ಸ್ ಎಂಬಂತೆ ನೀಡಿದ್ದರು. "ಜಗ್ಗೇಶ್ ಸರ್‌ಗೆ ಸಿನಿಮಾ ಮಾಡಬೇಕು ಅಂದರೆ, ಸಡನ್ ಆಗಿ ನನ್ನ ಬಳಿ ಸ್ಕ್ರಿಪ್ಟ್ ಇಲ್ಲ ಅಂತೆಲ್ಲ ಹೇಳುತ್ತಾರೆ. ನಾಳೆ ಸಿಗೋಣ ಬನ್ನಿ ಅಂತಾರೆ. ನಾಳೆ ಹೋಗುತ್ತೀನಿ, ರಂಗನಾಯಕ ಅಂತ ಬರೆದಿಟ್ಟಿರುತ್ತಾರೆ. ಇದೊಂದು ಸ್ಕ್ರಿಪ್ಟ್ ಇರುತ್ತೆ ಮಾಡಿದ ಕೂಡಲೇ ಇಷ್ಟ ಆಗುತ್ತೆ. ಟೈಟಲ್ ಕೇಳಿದ ಕೂಡಲೇ ಖುಷಿ ಆಗುತ್ತೆ. ಅಡ್ವಾನ್ಸ್ ಕೊಟ್ಟರೆ, ಕಥೆ ಹೇಳುತ್ತೇನೆ ಅಂದರು. ತಕ್ಷಣವೇ 5 ಸಾವಿರದ ಒಂದು ರೂಪಾಯಿ ಕೊಡಿ ಅಂದರು. ತಕ್ಷಣವೇ ಗೂಗಲ್ ಪೇ ಮಾಡಿದೆ." ಎನ್ನುತ್ತಾರೆ.

ಜಗ್ಗೇಶ್ ಹಾಗೂ ಗುರುಪ್ರಸಾದ್ ಇಬ್ಬರೂ ಮುನಿಸಿಕೊಂಡು ನಾನೊಂದು ತೀರ, ನೀನೊಂದು ತೀರ ಅಂತಿದ್ದಾರೆ. ಇವರನ್ನು ಒಟ್ಟಿಗೆ ಸೇರಿಸುವುದೇ ದೊಡ್ಡ ಸವಾಲಿನದಾಗಿತ್ತು. "ಜಗ್ಗೇಶ್ ಅವರನ್ನು ಹೇಗೆ ಒಪ್ಪಿಸುತ್ತೀರಾ? ಅಂದು ಗುರುಪ್ರಸಾದ್. ದಿನ ಅವರ ಬಳಿ ಹೋಗಿ ಕೂತು ಕೂತು ಸಿನಿಮಾಗೆ ಒಪ್ಪಿಸುತ್ತೇನೆ. ಆಗ ಗುರುಪ್ರಸಾದ್, ಜಗ್ಗೇಶ್ ಅಂದರೆ ಅದಕ್ಕೆ ಬೇರೆ ಮೀಟರ್ ಇರಬೇಕು. ಅದು ಸುಲಭಕ್ಕೆ ಆಗಲ್ಲ ಅಂತಾರೆ. ಆ ಮೀಟರ್ ನನಗೂ ಇದೆ ಸಾರ್ ಒಪ್ಪಿಕೊಳ್ಳಿ ಅಂತ ಹೇಳಿದ್ದಾಗ, ಆ ಸಿನಿಮಾ ಶುರುವಾಗುತ್ತೆ." ಎಂದು ವಿಖ್ಯಾತ್ ಇಬ್ಬರನ್ನು ಒಟ್ಟಿಗೆ ಸೇರಿದ್ದರ ಬಗ್ಗೆ ಹೇಳಿಕೊಂಡಿದ್ದಾರೆ.

More from Filmibeat

English summary
How Guruprasad and Jaggesh reunited?
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X