ಸೆಂಚುರಿ ಸ್ಟಾರ್ ಶಿವಣ್ಣನ ಫಾರ್ಮ್ ಹೌಸ್‌ನಲ್ಲಿ ಏನೇನಿದೆ? ಬೆಡ್‌ ರೂಮ್‌ ಎಷ್ಟು?

ಶಿವರಾಜ್‌ಕುಮಾರ್ ಬಹುದಿನ ಕನಸು ಈಡೇರಿದೆ. ಬೆಂಗಳೂರಿನಿಂದ ಆಚೆ ಫಾರ್ಮ್‌ಹೌಸ್ ಮಾಡಬೇಕು ಅಂತ ಆಸೆ ಪಟ್ಟಿದ್ದರು. ಆಸೆಯೀಗ ಈಡೇರಿದೆ. ಇತ್ತೀಚೆಗಷ್ಟೇ ಆ ಫಾರ್ಮ್‌ಹೌಸ್‌ಗೆ ಪೂಜೆ ಮಾಡಿ ಗೃಹಪ್ರವೇಶವನ್ನೂ ಮಾಡಿದ್ದಾರೆ. ಈ ಫೋಟೋಗಳು ವೈರಲ್ ಆಗುತ್ತಿವೆ.

ಸೆಂಚುರಿ ಸ್ಟಾರ್ ಶಿವರಾಜ್‌ಕುಮಾರ್ ಸ್ಯಾಂಡಲ್‌ವುಡ್‌ನಲ್ಲಿ ಟ್ರೆಂಡಿಂಗ್‌ನಲ್ಲಿರುವ ನಟ. ಮೂರು ಕಾರಣಗಳಿಗೆ ಸೆಂಚುರಿ ಸ್ಟಾರ್ ಶಿವರಾಜ್‌ಕುಮಾರ್ ಫುಲ್ ಟ್ರೆಂಡಿಂಗ್‌ನಲ್ಲಿ ಇದ್ದಾರೆ. ಸದಾ ಬ್ಯುಸಿ ಇರುವ ನಟ ಅನಾರೋಗ್ಯದ ಸಮಯದಲ್ಲೂ ಇಷ್ಟೊಂದು ಆಕ್ಟಿವ್ ಆಗಿರುವುದು ಅವರ ಅಭಿಮಾನಿಗಳಿಗೆ ಮತ್ತಷ್ಟು ಜೋಷ್ ಬಂದಂತೆ ಆಗಿದೆ.

ಇನ್ನು ಟ್ರೆಂಡಿಂಗ್‌ನಲ್ಲಿ ಇರುವುದಕ್ಕೆ ಕಾರಣ, ಒಂದು ಶಿವಣ್ಣನ ಸಿನಿಮಾ 'ಭೈರತಿ ರಣಗಲ್' ರಿಲೀಸ್‌ ಆಗುತ್ತಿದೆ. ಎರಡನೆಯದು ಶಿವಣ್ಣ ಆರೋಗ್ಯ ಸಮಸ್ಯೆ. ಮೂರನೆಯದ್ದು ಕನಕಪುರ ಫಾರ್ಮ್ ಹೌಸ್. ಈ ಮೂರು ಕಾರಣಗಳಿಗೆ ಶಿವಣ್ಣ ಸದ್ಯ ಟ್ರೆಂಡಿಂಗ್‌ನಲ್ಲಿ ಇದ್ದಾರೆ. ಅದರಲ್ಲೂ ಇತ್ತೀಚೆಗೆ ಸೆಂಚುರಿ ಸ್ಟಾರ್ ಹೊಸ ಫಾರ್ಮ್ ಹೌಸ್ ಪ್ರವೇಶ ಮಾಡಿದ್ದರು. ಅದರ ಫೋಟೊಗಳು ಹಾಗೂ ವಿಡಿಯೋ ಸಖತ್ ಟ್ರೆಂಡಿಂಗ್‌ನಲ್ಲಿ ಇವೆ.

How many bed rooms are there in newly built farm house by Shivarajkumar near Kanakapura

ಶಿವಣ್ಣ ಈ ಫಾರ್ಮ್ ಹೌಸ್ ಕಟ್ಟುವುದಕ್ಕೆ ಶುರು ಮಾಡಿದ ದಿನದಿಂದಲೇ ಕನಕಪುರಕ್ಕೆ ಶಿಫ್ಟ್ ಆಗುತ್ತಾರೆ ಅನ್ನೋ ಮಾತು ಕೇಳಿ ಬರುತ್ತಲೇ ಇತ್ತು. ಮಾನ್ಯತಾ ಟೆಕ್ ಪಾರ್ಕ್ ಬಳಿ ಇರುವ ಮನೆಯಿಂದ ಫಾರ್ಮ್ ಹೌಸ್‌ಗೆ ಶಿಫ್ಟ್ ಆಗುತ್ತಾರೆ ಅನ್ನೋ ಕೇಳಿ ಬಂದಿತ್ತು. ಈಗ ಅದೇ ಫಾರ್ಮ್ ಹೌಸ್ ಕಂಪ್ಲೀಟ್ ಆಗಿದ್ದು, ಗೃಹಪ್ರವೇಶ ಕೂಡ ಆಗಿದೆ. ಆಗಿದ್ದರೆ, ಈ ಮನೆಯೊಳಗೆ ಇರುವ ವಿಶೇಷತೆ ಏನು? ಹೇಗೆ ಕಟ್ಟಿದ್ದಾರೆ? ಮನೆಯೊಳಗೆ ಏನಿದೆ? ಎಷ್ಟು ಬೆಡ್ ರೂಮ್‌ಗಳಿಗೆ ಅನ್ನೋದನ್ನು ತಿಳಿಯಲು ಮುಂದೆ ಓದಿ.

ಕೆಲವು ವರ್ಷಗಳ ಹಿಂದೆ ಶಿವರಾಜ್‌ಕುಮಾರ್ ಕನಕಪುರದ ಮರಳವಾಡಿ ಸಮೀಪ ಜಮೀನನ್ನು ಖರೀದಿ ಮಾಡಿದ್ದರು. ತೆಂಗು ಹಾಗೂ ಇತರೆ ಬೆಳೆಗಳಿರುವ ಈ ತೋಟ ಸುಮಾರು ಐದೂವರೆ ಎಕರೆಯಷ್ಟು ಇದೆ. ಈ ತೋಟದಲ್ಲಿ ಒಂದು ಫಾರ್ಮ್ ಹೌಸ್ ಅನ್ನು ಕಟ್ಟಬೇಕು ಅಂತ ಶಿವಣ್ಣ ಮನಸ್ಸು ಮಾಡಿದ್ದರು. ಇದು ತೋಟ ಖರೀದಿಸಿದ ಬಳಿಕ ಹುಟ್ಟಿಕೊಂಡ ಕನಸು. ಆ ಕನಸು ಈಗ ಈಡೇರಿದೆ.

ಎರಡು ವರ್ಷಗಳ ಹಿಂದೆ ಫಾರ್ಮ್ ಹೌಸ್ ಕಟ್ಟುವ ಕೆಲಸ ಆರಂಭ ಆಗಿತ್ತು. ಪಕ್ಕಾ ಟ್ರೆಡಿಷನಲ್ ಲುಕ್‌ನಲ್ಲಿ ಮನೆ ಕಟ್ಟಬೇಕು ಅಂತ ಬಯಸಿದ್ದರು. ಅದರಂತೆ ತಮ್ಮ ತೋಟದ ಮನೆಗೆ ನ್ಯಾಚುಲರ್ ಲುಕ್ ಕೊಟ್ಟಿದ್ದಾರೆ. ಮನೆಯ ಮುಂದೆ ಕಂಬಗಳು ಮನೆಗೆ ವಿಂಟೇಜ್ ಲುಕ್ ಕೊಟ್ಟಿದೆ. ಮನೆಯ ಮುಂದೆ ಜಗುಲಿ, ಕೆಂಪು ಇಟ್ಟಿಗೆಯ ಗೋಡೆಗಳನ್ನು ನೋಡಿದರೆ ಎಕೋ ಫ್ರೆಂಡ್ಲಿ ಮನೆ ಅಂತ ಅನಿಸುತ್ತೆ.

How many bed rooms are there in newly built farm house by Shivarajkumar near Kanakapura

ಇನ್ನು ಈ ಮನೆಯೊಳಗೆ ಪ್ರವೇಶ ಮಾಡುತ್ತಿದ್ದಂತೆ ದೊಡ್ಡ ಹಾಲ್ ಇದೆ. ಇದರೊಂದಿಗೆ ಹೆಚ್ಚು ಕಡಿಮೆ ಅಷ್ಟೇ ದೊಡ್ಡದಾದ ಓಪನ್ ಕಿಚನ್ ಇದೆ. ಅಂದ್ಹಾಗೆ ಈ ಫಾರ್ಮ್ ಹೌಸ್‌ನಲ್ಲಿ ಒಟ್ಟು ನಾಲ್ಕು ಬೆಡ್ ರೂಮ್‌ಗಳು ಇವೆ. ಕುಟುಂಬದ ದೊಡ್ಡದು ಇರುವುದರಿಂದ ಬೃಹತ್ ಆಗಿಯೇ ಮನೆಯನ್ನು ನ್ಯಾಚುಲರ್ ಲುಕ್ ಕೊಡುವಂತೆ ಮನೆಯನ್ನು ಕಟ್ಟಲಾಗಿದೆ. ಹೀಗಾಗಿ ಈ ಫಾರ್ಮ್ ಹೌಸ್ ವಿಶಿಷ್ಟವಾಗಿ ಕಾಣುತ್ತೆ.

ಬಹುತೇಕ ಎಲ್ಲಾ ತಾರೆಯರೂ ಫಾರ್ಮ್ ಹೌಸ್ ಅನ್ನು ತಮಗೆ ಇಷ್ಟ ಬಂದ ಹಾಗೆ ಕಟ್ಟಿಕೊಂಡಿದ್ದಾರೆ. ಶಿವಣ್ಣ ಫಾರ್ಮ್ ಹೌಸ್ ಕೂಡ ಅಷ್ಟೇ ಸುಂದರವಾಗಿದೆ. ಶೂಟಿಂಗ್‌ನಿಂದ ಬಿಡುವು ಸಿಕ್ಕಿದಾಗ, ವೀಕೆಂಡ್‌ನಲ್ಲಿ ಶಿವರಾಜ್‌ಕುಮಾರ್ ಕುಟುಂಬ ಸಮೇತ ಇಲ್ಲಿಗೆ ಬಂದು ಉಳಿದುಕೊಳ್ಳುತ್ತಾರೆ. ಕೆಲಸದಿಂದ ಬ್ರೇಕ್ ಬೇಕು ಅಂದಾಗ ಫಾರ್ಮ್ ಹೌಸ್‌ಗೆ ಬಂದು ಇಲ್ಲಿ ರಿಲ್ಯಾಕ್ಸ್ ಮಾಡುತ್ತಾರೆ. ಉಳಿದ ದಿನಗಳಲ್ಲಿ ಮಾನ್ಯತಾ ಟೆಕ್‌ ಪಾರ್ಕ್ ಬಳಿಯೇ ಇರುತ್ತಾರೆಂದು ಆಪ್ತರು ಹೇಳುತ್ತಾರೆ.

More from Filmibeat

English summary
How many beds are there in newly built farm house by Shivarajkumar near Kanakapura?;
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X