ಕೋಟಿ ಬೆಲೆ ಬಾಳುವ ಮೈಸೂರಿನ ತೋಟವನ್ನು ದರ್ಶನ್ ಖರೀದಿಸಿದ್ದು ಎಷ್ಟು ಮೊತ್ತಕ್ಕೆ? ಈಗ ಅದರ ಬೆಲೆ ಎಷ್ಟು?
ದರ್ಶನ್ ಒಬ್ಬ ನಟ ಅನ್ನೋದು ಎಷ್ಟು ಸತ್ಯವೋ.. ಒಬ್ಬ ಮಾಡರ್ನ್ ರೈತ ಅನ್ನೋದು ಅಷ್ಟೇ ಸತ್ಯ. ಅದಕ್ಕೆ ಚಾಲೆಂಜಿಂಗ್ ಸ್ಟಾರ್ ಖರೀದಿ ಮಾಡಿರುವ ತೋಟವೇ ಸಾಕ್ಷಿ. ಮೈಸೂರಿನ ತಿ.ನರಸೀಪುರ ರಸ್ತೆಯ ಕೆಂಪಯ್ಯನಹುಂಡಿ ಸಮೀಪ ಇರುವ ತೋಟದಲ್ಲಿ ದರ್ಶನ್ ಕೃಷಿ ಮಾಡಿಕೊಂಡಿದ್ದಾರೆ.
ಸಿನಿಮಾ ಶೂಟಿಂಗ್‌ನಿಂದ ಬಿಡುವು ಸಿಕ್ಕಾಗಲೆಲ್ಲ ದರ್ಶನ್ ತೋಟದ ಮನೆಗೆ ಭೇಟಿ ನೀಡುತ್ತಲೇ ಇರುತ್ತಾರೆ. ಅದೇ ತೋಟದಲ್ಲಿ ತಮ್ಮ ಇಷ್ಟದ ಪ್ರಾಣಿಗಳು ಹಾಗೂ ಪಕ್ಷಿಗಳನ್ನು ಸಾಕಿದ್ದಾರೆ. ಅವುಗಳ ಲಾಲನೆ ಪಾಲನೆಯನ್ನೂ ಮಾಡುತ್ತಾ ಬಂದಿದ್ದಾರೆ. ಅದಕ್ಕೆ ರೈತರಿಗೆ ಎದುರಾಗುವ ಸಮಸ್ಯೆಗಳ ಬಗ್ಗೆ ದರ್ಶನ್‌ಗೆ ಅರಿವಿದೆ.

ಈಗ ರಿಲೀಸ್‌ಗೆ ರೆಡಿಯಾಗಿರೋ 'ಕಾಟೇರ' ಸಿನಿಮಾ ಕೂಡ ರೈತರ ಸಮಸ್ಯೆ ಕುರಿತು ಇದೆ. ದರ್ಶನ್ ತೋಟದ ಮನೆ ಅದೆಷ್ಟೋ ಮಂದಿಗೆ ವಂಡರ್‌ಲ್ಯಾಂಡ್ ಇದ್ದಂತೆ. ಕೃಷಿ ಜೊತೆ ಜೊತೆಗೆ ತನ್ನ ಹವ್ಯಾಸವನ್ನು ಈಡೇರಿಸಿಕೊಳ್ಳುತ್ತಿರುವ ದರ್ಶನ್ ಮೈಸೂರಿನ ಈ ತೋಟವನ್ನು ಎಷ್ಟು ಮೊತ್ತಕ್ಕೆ ಖರೀದಿ ಮಾಡಿದ್ದಾರೆ ಅನ್ನೋದು ಗೊತ್ತೇ..
ದರ್ಶನ್ ಕರಿಯರ್‌ಗೆ ದೊಡ್ಡ ಬ್ರೇಕ್ ಕೊಟ್ಟ 'ಸಾರಥಿ' ಸಿನಿಮಾ ಬಿಡುಗಡೆಗೂ ಮುನ್ನವೇ ಮೈಸೂರಿನ ಸಮೀಪವಿರುವ ಈ ತೋಟದ ಮನೆಯನ್ನು ಖರೀದಿ ಮಾಡಿದ್ದರು. ಸುಮಾರು 15 ಎಕ್ಕರೆ ವಿಸ್ತೀರ್ಣದಲ್ಲಿರುವ ಈ ತೋಟ ಈಗ ಕೋಟಿ ಲೆಕ್ಕದಲ್ಲಿ ಬೆಲೆ ಬಾಳುತ್ತೆ. ಇಂತಹ ಪ್ರಾಪರ್ಟಿಯನ್ನು ದರ್ಶನ್ ಹತ್ತು ಹದಿನೈದು ವರ್ಷಗಳ ಹಿಂದೆ ಎಷ್ಟು ಮೊತ್ತಕ್ಕೆ ಖರೀದಿ ಮಾಡಿದ್ದರು ಅನ್ನೋದನ್ನು ರಿವೀಲ್ ಮಾಡಿದ್ದಾರೆ.
ಇತ್ತೀಚೆಗೆ ದರ್ಶನ್ ನೀಡಿದ ಸಂದರ್ಶನದಲ್ಲಿ ಮೈಸೂರಿನ ತಿ.ನರಸೀಪುರ ರಸ್ತೆಯ ಕೆಂಪಯ್ಯನಹುಂಡಿ ಸಮೀಪವಿರುವ ತೋಟದ ಬಗ್ಗೆ ಮಾಹಿತಿ ನೀಡಿದ್ದಾರೆ. 'ಕಾಟೇರ' ಬಗ್ಗೆ ಮಾಹಿತಿ ನೀಡುವಾಗ ರೈತರು ಕೋಟಿ ಲೆಕ್ಕದಲ್ಲಿ ಜಮೀನನ್ನು ಮಾರಾಟ ಮಾಡುತ್ತಿದ್ದಾರೆ. ಆದರೆ ಮುಂದೆ ಏನಾಗಬಹುದು ಅನ್ನೋ ಅರಿವು ಅವರಿಗೆ ಇಲ್ಲ ಎಂದು ಕಳವಳವನ್ನು ವ್ಯಕ್ತಪಡಿಸಿದ್ದಾರೆ.

ಇದೇ ಸಂದರ್ಭದಲ್ಲಿ ತಮ್ಮ ತೋಟವನ್ನು ಸುಮಾರು 45 ಲಕ್ಷ ರೂಪಾಯಿಗೆ ಖರೀದಿ ಮಾಡಿದ್ದೇ ಎಂದು ಹೇಳಿಕೊಂಡಿದ್ದಾರೆ. "ಇವತ್ತು ಏನಾಗಿದೆ ಜಾಗಗಳು ಕೂಡ ಕೋಟಿಗಟ್ಟಲೆ ಹೊರಟು ಹೋಗಿದೆ. ರೈತ ಕೋಟಿಗಟ್ಟಲೆ ದುಡ್ಡು ದುಡೀತಾ ಇದ್ದಾನೆ ಇಲ್ಲ ಅಂತಲ್ಲ. ಮುಂದೆ ಅವನ ಉಳುಮೆ ಎಲ್ಲಿ? ನಾನು ಮೈಸೂರಿನಲ್ಲಿ ನನ್ನ ತೋಟವನ್ನು 45 ಲಕ್ಷ ರೂಪಾಯಿಗೆ ಪೂರ್ತಿ ತೋಟ ತೆಗೆದುಕೊಂಡಿದ್ದು, ಇವತ್ತು ಎಕ್ಕರೆಗೆ ಒಂದೂವರೆ ಕೋಟಿಗೆ ಕೇಳುತ್ತಾರೆ." ಎಂದು ದರ್ಶನ್ ರಿವೀಲ್ ಮಾಡಿದ್ದಾರೆ.
ಸದ್ಯಕ್ಕಿರೋ ಮಾಹಿತಿ ಪ್ರಕಾರ, ಮೈಸೂರಿನ ತಿ.ನರಸೀಪುರ ರಸ್ತೆಯ ಕೆಂಪಯ್ಯನಹುಂಡಿ ಸಮೀಪ ಇರುವ ಈ ತೋಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಅವರ ಹೆಸರಿನಲ್ಲಿ ಇದೆ. ಈ ಹಿಂದೆ ನಿರ್ಮಾಪಕ ಉಮಾಪತಿ ಹಾಗೂ ದರ್ಶನ್ ನಡುವಿನ ಕಿತ್ತಾಟದ ವೇಳೆನೂ ದರ್ಶನ್ ತೋಟ ತನ್ನ ಪತ್ನಿ ಹೆಸರಲ್ಲಿ ಇದೆ ಎಂದು ಹೇಳಿದ್ದರು.
'ಕಾಟೇರ' ಸಿನಿಮಾ ಕೂಡ ಹೊಸ ಪ್ರಯತ್ನ ಎಂದು ಹೇಳಿದ್ದಾರೆ. ಹಿಂದೆ ರೈತರ ಮೇಲೆ ಏನು ನಡೀತು ಅನ್ನೋದು ಗೊತ್ತಿಲ್ಲ. ಅದನ್ನೇ 'ಕಾಟೇರ' ಸಿನಿಮಾದಲ್ಲಿ ಹೇಳುತ್ತಿರೋದಾಗಿ ಎಂದು ದರ್ಶನ್ ಹೇಳಿದ್ದಾರೆ. "ಇದೊಂದು ಹೊಸ ಪ್ರಯತ್ನ. ಈಗಿನ ಜನರೇಷನ್‌ಗೆ ರೈತರ ಮೇಲೆ ಏನು ನಡೀತು ಅನ್ನೋದು ಯಾರಿಗೂ ಗೊತ್ತಿಲ್ಲ. ಅದನ್ನೊಂದು ಮೆಲುಕು ಹಾಕಿದ್ದೇವೆ ಅಷ್ಟೇ. ಹಿಂಗಿತ್ತಪ್ಪ ಮುಂದೆ ಹೀಗೆ ಆಗೋದು ಬೇಡ. ನೀವೆಲ್ಲ ಚೇತರಿಸಿಕೊಳ್ಳಿ ಎದ್ದೇಳಿ ಎಂದು ಹೇಳಿದ್ದೇವೆ" ಎಂದು ದರ್ಶನ್ ಹೇಳಿದ್ದಾರೆ.


Click it and Unblock the Notifications











