Toxic: ಯಶ್ ಹೇರ್‌ಸ್ಟೈಲ್‌ಗೆ 'ಟಾಕ್ಸಿಕ್' ಟೀಮ್ ಖರ್ಚು ಮಾಡಿದ್ದೆಷ್ಟು?
ರಾಕಿಂಗ್ ಸ್ಟಾರ್ ಯಶ್ ನಟನೆಯ 'ಟಾಕ್ಸಿಕ್' ಸದ್ದು ಮಾಡುವುದಕ್ಕೆ ಶುರು ಮಾಡಿದೆ. ಅದರಲ್ಲೂ 2ನೇ ಟೀಸರ್ ಬಂದ್ಮೇಲೆ ಯಶ್ ಲುಕ್‌ಗೆ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಈ ಬಹುಕೋಟಿ ವೆಚ್ಚದ ಸಿನಿಮಾ ಒಂದೊಂದು ಕುತೂಹಲವನ್ನು ಈಗ ಹೊರ ಹಾಕುತ್ತಿದೆ. ಅದರಲ್ಲೊಂದು ಯಶ್ ಹೇರ್ ಸ್ಟೈಲ್. 'ಟಾಕ್ಸಿಕ್' ಸಿನಿಮಾ ಯಶ್ ಇಂತಹದ್ದೊಂದು ಲುಕ್‌ನಲ್ಲಿ ಕಾಣಿಸಿಕೊಳ್ಳಬಹುದೆಂದು ಯಾರೂ ಊಹಿಸಿರುವುದಕ್ಕೂ ಸಾಧ್ಯವಿರಲಿಲ್ಲ.
ಕಳೆದ ಕೆಲವು ದಿನಗಳಿಂದ 'ಟಾಕ್ಸಿಕ್' ಟೀಮ್ ಸರ್ಪ್ರೈಸ್ ಮೇಲೆ ಸರ್ಪ್ರೈಸ್ ಕೊಡುತ್ತಿದೆ. ಪ್ಯಾನ್ ಇಂಡಿಯಾ ಸಿನಿಮಾ 'ಟಾಕ್ಸಿಕ್' ಎದುರು ಟಕ್ಕರ್ ಕೊಡುವುದಕ್ಕೆ ನಿಂತಿರುವ 'ಧುರಂಧರ್ 2'ಗೆ ಸರಿಯಾಗಿಯೇ ಪೈಪೋಟಿ ನೀಡುತ್ತಿದೆ. ಇದರೊಂದಿಗೆ ಈ ಎರಡೂ ಸಿನಿಮಾಗಳು ಬಾಕ್ಸಾಫೀಸ್‌ನಲ್ಲಿ ಎಷ್ಟು ಕಲೆಕ್ಷನ್ ಮಾಡುತ್ತವೆ ಅನ್ನೋದು ಕುತೂಹಲನೂ ಸೃಷ್ಟಿಯಾಗಿದೆ.

ಕಲೆಕ್ಷನ್ ವಿಚಾರದಲ್ಲಿ ದಾಖಲೆ ಬರೆಯಬೇಕು ಅನ್ನೋ ಒತ್ತಡದಲ್ಲಿ ತಂಡಗಳು ಇವೆ. ಹೀಗಾಗಿ ಒಳಗೊಳಗೆ ಭಾರೀ ಪೈಪೋಟಿ ಶುರುವಾಗಿದೆ. ಹೀಗಾಗಿ 'ಟಾಕ್ಸಿಕ್' ಒಂದೊಂದು ಬಾಣವನ್ನು ತನ್ನ ಬತ್ತಳಿಕೆಯಿಂದ ಹೊರಬಿಡುತ್ತಿದೆ. ಅದರಲ್ಲೊಂದು ಗಡ್ಡ ತೆಗೆದ ಯಶ್ ಲುಕ್. ಇಷ್ಟು ದಿನ ಗಡ್ಡದಲ್ಲಿದ್ದ ಯಶ್ ಈ ಲುಕ್‌ಗೆ ಎಷ್ಟು ಖರ್ಚಾಗಿದೆ ಗೊತ್ತೇ? ಸೆಲೆಬ್ರೆಟಿ ಹೇರ್‌ಸ್ಟೈಲಿಸ್ಟ್‌ಗೆ ಕೊಟ್ಟ ಸಂಭಾವನೆ ಕೇಳಿದರೆ ಹೌಹಾರೋದು ಗ್ಯಾರಂಟಿ.
ರಾಕಿಂಗ್ ಸ್ಟಾರ್ ಯಶ್ 'ಕೆಜಿಎಫ್' ಶುರುವಾದಲ್ಲಿಂದ ಗಡ್ಡ ತೆಗೆದಿದ್ದನ್ನು ಅಭಿಮಾನಿಗಳು ನೋಡಿರಲಿಲ್ಲ. 'ಕಿರಾತಕ 2' ಮಾಡಲು ಹೊರಟಾಗ ಯಶ್ ಕ್ಲೀನ್ ಶೇವ್ ಮಾಡಿ, ಮತ್ತೆ ಹಳೆ ಗೆಟಪ್‌ಗೆ ಮರಳಿದ್ದರು. ಆದರೆ, ಆ ಪ್ರಾಜೆಕ್ಟ್ ನಿಲ್ಲುತ್ತಿದ್ದಂತೆ ಮತ್ತೆ ಗಡ್ಡ ಬಿಟ್ಟಿದ್ದರು. ಹೀಗಾಗಿ ಮತ್ತೆ ಗಡ್ಡ ತೆಗೆಯುತ್ತಾರೋ ಇಲ್ವೋ ಅನ್ನೋ ಗೊಂದಲ ಅವರ ಅಭಿಮಾನಿಗಳ ಮುಂದಿತ್ತು. ಅದಕ್ಕೀಗ ಉತ್ತರ ಸಿಕ್ಕಿದೆ.
ಯಶ್ 'ಟಾಕ್ಸಿಕ್' ಲುಕ್ ಕೊಟ್ಟಾಗ ಮತ್ತೆ ಗಡ್ಡ ಬಿಟ್ಟು ರಗಡ್ ಲುಕ್ ಕೊಟ್ಟಿದ್ದರು. ಇದು ಹೀಗೆ ಮುಂದುವರೆಯುತ್ತೆ ಎಂದೆ ಅಭಿಮಾನಿಗಳು ಭಾವಿಸಿದ್ದರು. ಆದರೆ, ಎರಡನೇ ಟೀಸರ್‌ನಲ್ಲಿ ಯಶ್ ಗಡ್ಡ ತೆಗೆದ ಲುಕ್ ರಿವೀಲ್ ಆಗಿತ್ತು. ಇದು ಎಐ ಲುಕ್ ಎಂದು ಕೆಲವರು ಟ್ರೋಲ್ ಮಾಡಿದ್ದರು. ಅದಕ್ಕೆ ಸೆಲೆಬ್ರಿಟಿ ಹೇರ್ ಸ್ಟೈಲಿಸ್ಟ್ ಅಲೆಕ್ಸ್ ವಿಜಯಕಾಂತ್ ಒಂದು ವಿಡಿಯೋವನ್ನು ತನ್ನ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದರು. ಅಲ್ಲಿಂದ ಹೇರ್‌ಸ್ಟೈಲ್ ಹಾಗೂ ಯಂಗ್ ಲುಕ್‌ಗೆ ಎಷ್ಟು ಖರ್ಚು ಮಾಡಿರಬಹುದೆಂದು ಹುಡುಕುವುದಕ್ಕೆ ಶುರು ಮಾಡಿದ್ದಾರೆ.
ಅಲೆಕ್ಸ್ ವಿಜಯಕಾಂತ್ ಹೈದರಾಬಾದ್‌ನಲ್ಲಿರುವ ಜನಪ್ರಿಯ ಹೇರ್‌ಸ್ಟೈಲಿಸ್ಟ್. ಟಾಲಿವುಡ್ ಸೇರಿದಂತೆ ಭಾರತದ ಸಾಕಷ್ಟು ಸೆಲೆಬ್ರೆಟಿಗಳಿಗೆ ಇವರೇ ಹೇರ್‌ಸ್ಟೈಲ್ ಮಾಡುತ್ತಾರೆ. ಅದರಲ್ಲೂ ಯಶ್ ಕೂಡ ಒಬ್ಬರು. ರಾಜಾಹುಲಿ ಸಮಯದಿಂದ ಅಲೆಕ್ಸ್ ರಾಕಿ ಭಾಯ್ ಯಶ್‌ಗೆ ಪರಿಚಯ ಎನ್ನಲಾಗಿದೆ. ಅಲ್ಲಿಂದ ಇವರ ಹೇರ್‌ಸ್ಟೈಲ್ ಮಾಡೋದು ಇವರೇ ಎನ್ನಲಾಗಿದೆ. ಈ ಟಾಕ್ಸಿಕ್‌ಗೂ ಇವರದ್ದೇ ಹೇರ್‌ಸ್ಟೈಲ್ ಇದ್ದು, ಭಾರಿ ಸಂಭಾವನೆ ಪಡೆದಿದ್ದಾರೆ ಎನ್ನಲಾಗಿದೆ.
ಒಂದು ಹೇರ್‌ಸ್ಟೈಲ್ ಮೇಕಿಂಗ್ ಸುಮಾರು ಒಂದೂವರೆ ಲಕ್ಷದಿಂದ ಮೂರುವರೆ ಲಕ್ಷದವರೆಗೂ ಖರ್ಚಾಗುತ್ತೆ ಎಂದು ಹೇಳಲಾಗುತ್ತಿದೆ. ಆತ್ಮೀಯ ಕನ್ನಡ ಯೂಟ್ಯೂಬ್ ಚಾನೆಲ್ ಮಾಡಿದ ವರದಿಯಲ್ಲಿ ಈ ವಿಷಯವನ್ನು ಪ್ರಸ್ತಾಪ ಮಾಡಲಾಗಿದೆ. ಹಾಗೇನಾದರೂ ಆದರೆ, ಹೇರ್‌ಸ್ಟೈಲ್‌ಗೆ ಎಷ್ಟು ಖರ್ಚಾಗಿರಬಹುದೆಂದು ಲೆಕ್ಕಾಚಾರ ಹಾಕಬಹುದು. ಸದ್ಯ ಯಶ್ ಯಂಗ್ ಲುಕ್ ಟ್ರೆಂಡಿಂಗ್‌ನಲ್ಲಿ ಇದೆ. ಇದರೊಂದಿಗೆ ಸಿನಿಮಾದ ಒಂದೊಂದು ಕ್ಯಾರೆಕ್ಟರ್‌ಗಳನ್ನು ತಂಡ ರಿಲೀಸ್ ಮಾಡುತ್ತಿದ್ದು, ಕುತೂಹಲ ಮತ್ತಷ್ಟು ಹೆಚ್ಚಾಗಿದೆ.


Click it and Unblock the Notifications











