ಜೈಲಿಗೆ ಹೋಗಿ ಬಂದ ಮೇಲೆ ಸೋನು ಗೌಡ ಅಕೌಂಟ್‌ನಲ್ಲಿ ಎಷ್ಟಿದೆ? ಎಷ್ಟು ದುಡಿಯುತ್ತಿದ್ದಾರೆ?

ರೀಲ್ಸ್ ರಾಣಿ ಅಂತಲೇ ಜನಪ್ರಿಯರಾಗಿರುವ ಸೋನು ಶ್ರೀನಿವಾಸ್ ಗೌಡ ಸೋಶಿಯಲ್ ಮೀಡಿಯಾಗಳಲ್ಲಿ ಫೇಮಸ್. ಅದರಲ್ಲೂ 'ಬಿಗ್ ಬಾಸ್‌' ಒಟಿಟಿ ಕನ್ನಡ ಸೀಸನ್ 1ರಲ್ಲಿ ಭಾಗವಹಿಸಿದ ಮೇಲಂತೂ ಸೋನು ಜನಪ್ರಿಯತೆ ಮತ್ತಷ್ಟು ಹೆಚ್ಚಿತ್ತು. ಇತ್ತೀಚೆಗೆ ನೀತಿ ನಿಯಮಗಳನ್ನು ಅನುಸರಿಸದೆ ಕಾನೂನು ಬಾಹಿರವಾಗಿ ಮಗುವನ್ನು ದತ್ತು ಪಡೆದ ಆರೋಪದ ಮೇಲೆ ಅವರನ್ನು ಬಂಧಿಸಲಾಗಿತ್ತು.

14 ದಿನಗಳ ಕಾಲ ಸೋನು ಶ್ರೀನಿವಾಸ್ ಗೌಡ ಜೈಲಿನಲ್ಲಿಇದ್ದು ಬಂದಿದ್ದಾರೆ. ಕೆಲವು ದಿನಗಳಾದ ಬಳಿಕ ಸೋನು ಶ್ರೀನಿವಾಸ್ ಗೌಡ ಸೋಶಿಯಲ್ ಮೀಡಿಯಾಗಳಲ್ಲಿ ಆಕ್ಟಿವ್ ಆಗಿದ್ದರು. ವಿಡಿಯೋ ಮಾಡಿ ಜೈಲಿನ ಅನುಭವಗಳನ್ನು ಹಂಚಿಕೊಂಡಿದ್ದರು. ಈಗ ಸ್ಪೀಡ್ ನ್ಯೂಸ್ ಪ್ಲಸ್ ಕರ್ನಾಟಕ ಯೂಟ್ಯೂಬ್ ಚಾನೆಲ್‌ನಲ್ಲಿ ಜೈಲಿನ ಅನುಭವ ಹಾಗೂ ದುಡಿಮೆ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ.

social media star Sonu Srinivas Gowda Earnings

ಜೈಲಿನಿಂದ ಬಂದ್ಮೇಲೆ ಸೋನು ಗೌಡ ಅಕೌಂಟ್‌ನಲ್ಲಿ ಎಷ್ಟಿದೆ. ಸೋಶಿಯಲ್ ಮೀಡಿಯಾದಿಂದ ಲಕ್ಷ ಲಕ್ಷ ದುಡಿಯುತ್ತಾರೆ ಅನ್ನೋ ಟೀಕೆಗಳಿಗೆ ಸೋನು ಗೌಡ ಓಪನ್ ಆಗಿ ಮಾತಾಡಿದ್ದಾರೆ. ಕಿರಿಕ್ ಕೀರ್ತಿ ಜೊತೆ ಸೋನು ಗೌಡ ರಿವೀಲ್‌ ಮಾಡಿರುವ ಬ್ಯಾಂಕ್ ಅಕೌಂಟ್ ಡಿಟೈಲ್ಸ್ ಇಲ್ಲಿದೆ.

ಕಿರಿಕ್ ಕೀರ್ತಿ ಜೊತೆ ಸೋನು ಗೌಡ ತಮ್ಮ ಜೈಲಿನ ಅನುಭವಗಳನ್ನು ಹಂಚಿಕೊಂಡಿದ್ದಾರೆ. "ಎಲ್ಲರೂ ಆ ಎಕ್ಸ್‌ಪೀರಿಯನ್ಸ್ ಮಾಡಬೇಕು. ಒಂದು ತರ ಚೆನ್ನಾಗಿದೆ. ಈಗ ನನಗೆ 24 ವರ್ಷ. ಈ ವಯಸ್ಸಿನಲ್ಲಿ ಕಲಿಯುವಂತಹದ್ದೂ ಸಾಕಷ್ಟಿದೆ. ಹೇಳಿಕೊಡುವಂತಹದ್ದೂ ಸಾಕಷ್ಟಿದೆ. ಜೈಲು ಅಂತ ಬಂದರೆ, ಆ ನಾಲ್ಕು ಗೋಡೆ ಮಧ್ಯೆನೇ ಎಲ್ಲವನ್ನೂ ಕಲಿಸಿಬಿಡುತ್ತೆ. ಯಾರೂ ಏನನ್ನೂ ಹೇಳಿಕೊಡುವುದು ಬೇಡ. ಹೇಗೆ ನಡೆದುಕೊಂಡಿದ್ದೇನೆ? ಹೇಗೆ ಮಾತಾಡಬೇಕಿತ್ತು? ಅದೆಲ್ಲ ಗೊತ್ತಾಗುತ್ತೆ." ಎಂದು ಸೋನು ಗೌಡ ಹೇಳಿಕೊಂಡಿದ್ದಾರೆ.

ಸೋನು ಗೌಡ ರೀಲ್ಸ್‌ಗಿಂತ ಹೆಚ್ಚಾಗಿ ಟ್ರೋಲ್, ಟೀಕೆಗಳಿಗೆ ಗುರಿಯಾಗಿದ್ದೇ ಹೆಚ್ಚು. ಈಗ ಈ ಬಗ್ಗೆನೂ ಪ್ರತಿಕ್ರಿಯೆ ನೀಡಿದ್ದಾರೆ. "ಇವತ್ತಿಗೂ ನನ್ನನ್ನು ಯಾರು ಟ್ರೋಲ್ ಮಾಡುತ್ತಾರಲ್ಲ. ಅವರನ್ನು ಬೈ ಕೊಳ್ಳುವುದಿಲ್ಲ. ನಾನು ನಗುತ್ತಲೇ ಇರುತ್ತೇನೆ. ಕಾಮೆಂಟ್‌ಗಳನ್ನು ಮಾಡುತ್ತೇನೆ. ನೋಡಿ ಎಂಜಾಯ್ ಮಾಡುತ್ತೇನೆ. ಕೆಲವು ಕೆಟ್ಟ ಪದಗಳು ಫ್ಯಾಮಿಲಿವರೆಗೂ ಬಂದರೆ ಬೇಜಾರಾಗುತ್ತೆ. ಆದರೆ, ನನ್ನ ಬಗ್ಗೆ ಏನೇ ಮಾತಾಡಿದರೂ, ನಾನು ಪಾಸಿಟಿವ್ ಆಗಿ ತೆಗೆದುಕೊಳ್ಳುತ್ತೇನೆ." ಎಂದು ಸೋನು ಗೌಡ ಹೇಳಿದ್ದಾರೆ.

social media star Sonu Srinivas Gowda Earnings

ಸೋಶಿಯಲ್ ಮೀಡಿಯಾಗೆ ಬಂದಾಗ ಸೋನು ಗೌಡರನ್ನು ಸಿಕ್ಕಾಪಟ್ಟೆ ಟೀಕಿಸಿದ್ದರು. ಕೆಲವು ಪೇಜ್‌ಗಳು ಟ್ರೋಲ್ ಮಾಡಿದ್ದವು. ಆಗ ಹೆದರಿ ಹಿಂದೆ ಸರಿದಿದ್ದಕ್ಕೆ ಸೋನು ಯಾರು ಅಂತಲೇ ಗೊತ್ತಾಗುತ್ತಿರಲಿಲ್ಲ ಎಂದಿದ್ದಾರೆ. "ಡಿಪ್ಲೋಮಾ ಫೈನಲ್ ಇಯರ್‌ವರೆಗೂ ನಾನು ದುಡ್ಡಿಗೆ ಕೈ ಚಾಚುತ್ತಿದ್ದೆ. ಪಾಕೆಟ್ ಮನಿ ಎಷ್ಟು ಕೊಡುತ್ತಿದ್ದರೋ ಬಿಡುತ್ತಿದ್ದರೋ ಒಟ್ಟಿನಲ್ಲಿ ಕೈ ಚಾಚುತ್ತಿದ್ದೆ. ಡಿಪ್ಲೋಮಾ ಆದ ಕೂಡಲೇ ಸೋಶಿಯಲ್ ಮೀಡಿಯಾಗೆ ಕಾಲಿಟ್ಟಿದ್ದು, ಅವತ್ತಿನಿಂದ ಇವತ್ತಿನವರೆಗೂ ನಾನು ನಮ್ಮ ಮನೆಯವರ ಬಳಿ ಕೂ ಚಾಚುವುದಿಲ್ಲ. ಈಗ ಟ್ರೋಲ್‌ಗಳನ್ನೋ, ನೆಗೆಟಿವ್‌ಗಳನ್ನ ಸಹಿಕೊಂಡೇ ಒಂದಿಷ್ಟು ಹಣ ಸಂಪಾದನೆ ಮಾಡುತ್ತಿದ್ದೇನೆ. ಕಷ್ಟಗಳು ಎದುರಾದಾಗಲೆಲ್ಲ ಬೇಡ ಅಂತ ಬಿಟ್ಟು ಬಿಟ್ಟಿದ್ದರೆ, ಸೋನು ಯಾರು ಅಂತ ಯಾರಿಗೂ ಗೊತ್ತಾಗುತ್ತಲೇ ಇರಲಿಲ್ಲ." ಎಂದು ಹೇಳಿದ್ದಾರೆ.

ಇನ್ನು ಜೈಲಿನಿಂದ ಬಂದ್ಮೇಲೆ ಸೋನು ಗೌಡ ಅಕೌಂಟ್‌ನಲ್ಲಿ ಎಷ್ಟಿದೆ? ಸೋಶಿಯಲ್ ಮೀಡಿಯಾದಿಂದ ಅವರು ಎಷ್ಟು ಸಂಪಾದನೆ ಮಾಡುತ್ತಾರೆ? ಅನ್ನೋದನ್ನು ಸ್ಪೀಡ್ ಪ್ಲಸ್ ಯೂಟ್ಯೂಬ್ ಚಾನೆಲ್‌ನಲ್ಲಿ ರಿವೀಲ್ ಮಾಡಿದ್ದಾರೆ. "ಇವಾಗಲೂ ನನ್ನ ಅಕೌಂಟ್ ತೆಗೆದು ನೋಡಿ. ಆಚೆಗೆ ಬಂದಾಗ ಇರಲಿ ಅಂತ ಒಂದು 10 ಸಾವಿರ ಇಟ್ಟುಕೊಂಡಿದ್ದೇನೆ. ಬ್ಯಾಂಕ್ ಬ್ಯಾಲೆನ್ಸ್ ತೋರಿಸುತ್ತೇನೆ. ನಿಜವಾಗಲೂ ನನ್ನ ಬಳಿ ದುಡ್ಡೇ ಇಲ್ಲ. ಅಲ್ಲ ಗುರು.. ಲಕ್ಷ ಲಕ್ಷ ದುಡಿಯೋ ಹಾಗಿದ್ರೆ, ಇನ್ನೂ ಚೆನ್ನಾಗಿ ಇರುತ್ತಿದ್ದೆವು ಏನೋ.. ಒಂದು ತಿಂಗಳಲ್ಲಿ ಒಂದು ಐವತ್ತು ಸಾವಿರ ದುಡಿಯಬಹುದು. ಏನು 50 ಲಕ್ಷ ರೂ. ದುಡಿಯೋ ತರ ಮಾತಾಡುತ್ತಾರೆ." ಎಂದು ಹೇಳಿಕೊಂಡಿದ್ದಾರೆ.

More from Filmibeat

English summary
How much is in Sonu Gowda's account after coming out of jail? How much is she earning?
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X