ಹಳ್ಳಿಕಾರ್ ತಳಿಗಳು ಎಷ್ಟು ಲಕ್ಷಕ್ಕೆ ಮಾರಾಟ ಆಗುತ್ತೆ? ಚಿಕ್ಕಮಗಳೂರಿನರೇ ಮುಂದು ಎಂದಿದ್ದೇಕೆ ವರ್ತೂರು ಸಂತೋಷ್?
ಬಿಗ್‌ಬಾಸ್ ಕನ್ನಡ ಸೀಸನ್ 10 ಮೂಲಕ ವರ್ತೂರು ಸಂತೋಷ್ ಜನಪ್ರಿಯತೆ ಕಳಿಸಿದ್ದಾರೆ. ಇಷ್ಟೇ ಅಲ್ಲದೆ, ಹಳ್ಳಿಕಾರ್ ತಳಿಗಳನ್ನು ಉಳಿಸುವುದಕ್ಕೆ ವರ್ತೂರು ಸಂತೋಷ್ ಶ್ರಮಿಸುತ್ತಿದ್ದಾರೆ. ಅದರಲ್ಲೂ ಬಿಗ್‌ಬಾಸ್ ಮನೆಯಿಂದ ಹೊರಬರುತ್ತಿದ್ದಂತೆ ವರ್ತೂರು ಸಂತೋಷ್ ಹಳ್ಳಿಕಾರ್ ತಳಿಗಳ ಬಗ್ಗೆನೇ ಹೆಚ್ಚು ಗಮನ ಹರಿಸಿದ್ದಾರೆ.
ಬೆಂಗಳೂರಿನಲ್ಲಿ ಹಳ್ಳಿಕಾರ್ ರೇಸ್ ನಡೆಸುವುದಕ್ಕೂ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದ್ದಾರೆ. ಈಗಾಗಲೇ ಸಾಕಷ್ಟು ಯೂಟ್ಯೂಬ್ ಚಾನೆಲ್‌ಗಳಿಗೆ ನೀಡಿದ ಸಂದರ್ಶನದಲ್ಲಿ ಹಳ್ಳಿಕಾರ್ ತಳಿಗಳ ರೇಸ್ ನಡೆಸುವುದಾಗಿ ಹೇಳಿಕೊಂಡಿದ್ದಾರೆ. ಅಲ್ಲದೆ ಕಿಚ್ಚ ಸುದೀಪ್ ಅವರನ್ನು ಈ ರೇಸ್‌ಗೆ ಆಹ್ವಾನ ನೀಡುವುದಾಗಿಯೂ ಹೇಳಿದ್ದರು. ಇಷ್ಟೇ ಅಲ್ಲದೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಹುಟ್ಟುಹಬ್ಬದಂದು ಮನೆಗೂ ಶುಭ ಕೋರಿ ಬಂದಿದ್ದರು.

ಹಳ್ಳಿಕಾರ್ ತಳಿಗಳನ್ನು ಜನಪ್ರಿಯತೆಗೊಳಿಸುವುದಕ್ಕೆ ವರ್ತೂರು ಸಂತೋಷ್ ಪ್ರಯತ್ನ ಪಡುತ್ತಿದ್ದಾರೆ. ಹಾಗಿದ್ದರೆ, ಈ ತಳಿಗಳ ಬೆಲೆ ಎಷ್ಟು? ಎಷ್ಟು ಮೊತ್ತಕ್ಕೆ ಈ ತಳಿಗಳು ಮಾರಾಟ ಆಗಿವೆ ಅನ್ನೋದನ್ನು ಸ್ವತ: ವರ್ತೂರು ಸಂತೋಷ್ ಅವರೇ ಯೂಟ್ಯೂಬ್ ಚಾನೆಲ್‌ಗೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ. ಹಾಗೇ ಹಳ್ಳಿಕಾರ್ ತಳಿಗಳನ್ನು ಖರೀದಿ ಮಾಡುವುದರಲ್ಲಿ ಚಿಕ್ಕಮಗಳೂರಿನ ಜನರೇ ಮುಂದು ಎಂದು ಹೇಳಿದ್ದಾರೆ. ಅಷ್ಟಕ್ಕೂ ಹಳ್ಳಿಕಾರ್ ತಳಿ ಕರ್ನಾಟಕದಲ್ಲಿ ಎಷ್ಟು ಮೊತ್ತಕ್ಕೆ ಸೇಲ್ ಆಗಿದೆ? ತಿಳಿಯಲು ಮುಂದೆ ಓದಿ.
ಕರ್ನಾಟಕದಲ್ಲಿ ಹಳ್ಳಿಕಾರ್ ತಳಿಗಳಿಗೆ ಬೇಡಿಕೆ ಇದೆಯೇ? ಈ ತಳಿಗಳ ವ್ಯಾಪಾರ ಹೇಗೆ ಆಗುತ್ತೆ? ಹಳ್ಳಿಕಾರ್ ತಳಿಗಳ ಗುಣಮಟ್ಟವನ್ನು ಗುರುತಿಸುವುದು ಹೇಗೆ? ಅನ್ನೋದನ್ನು ವರ್ತೂರು ಸಂತೋಷ್ ಬಣ್ಣದ ಜಗತ್ತು ಅನ್ನುವ ಯೂಟ್ಯೂಬ್ ಚಾನೆಲ್‌ನ ಸಂದರ್ಶನದಲ್ಲಿ ಹೇಳಿದ್ದಾರೆ. "ಸುಳಿ ಶುದ್ಧ ಇರುವ ದನವನ್ನು ನಾನು ಕಟ್ಟಲ್ಲ. ಅದು ಎಷ್ಟು ಲಕ್ಷ ರೂಪಾಯಿ ದನನಾದ್ರೂ ಆಗಲಿ. ಅವರು ಸುಮ್ಮನೆ ಕೊಡುತ್ತೀನಿ ಅಂದರೂ ನಾನು ಕಟ್ಟುವುದಿಲ್ಲ. ಕೆಲವೊಬ್ಬರ ಮನೆಯಲ್ಲಿ ಕಟ್ಟುತ್ತಾರೆ. ಅದು ಅವರವರ ಮನೆಗೆ ಬಿಟ್ಟಿದ್ದು. " ಎಂದು ಹಳ್ಳಿಕಾರ್ ತಳಿಗಳ ಮಾನದಂಡಗಳ ಬಗ್ಗೆ ಮಾತಾಡಿದ್ದಾರೆ.

ಉತ್ತಮ ಗುಣಮಟ್ಟದ ಹಳ್ಳಿಕಾರ್ ತಳಿಗಳ ಬಗ್ಗೆ ಕೆಲವರು ಟೀಕೆ ಮಾಡಿದ್ದರು. ಅದಕ್ಕೂ ವರ್ತೂರು ಸಂತೋಷ್ ಪ್ರತಿಕ್ರಿಯೆ ಕೊಟ್ಟಿದ್ದಾರೆ. "ಕೆಲವರ ಮಾತನ್ನು ಕೇಳಿದ್ದೇನೆ. ಅದೇನು ಹುಟ್ಟುತ್ತಲೇ ಕೇಳಿಕೊಂಡು ಬಂದಿತ್ತಾ? ನೀವೇ ಮಾಡಿರೋದು ಅಂತ. ಅವರಿಗೆಲ್ಲ ಒಂದೇ ಹೇಳೋದು. ಕಲ್ಲುಗಳು ನೂರು ಇರಬಹುದು. ಇವತ್ತು ಶ್ರೀರಾಮ ಮಂದಿರದಲ್ಲಿರುವ ಕಲ್ಲು ಯಾವ ದೇವರಾಗಿರೋದು. ಒಂದು ಕಾಲದಲ್ಲಿತ್ತು. ಅದೀಗ ದೇವರಾಗಿದೆ. ಎಲ್ಲನೂ ಆಗುವುದಕ್ಕೆ ಸಾಧ್ಯನಾ? ಎಲ್ಲವೂ ಬಸಪ್ಪನೇ.. ಅದರಲ್ಲಿ ಉತ್ತಮವಾದದ್ದು ಯಾವುದು? ಅಂತ ನಮ್ಮ ಹಳೆಬರು ಬಿಟ್ಟು ಹೋಗಿರೋದು." ಎಂದು ಹೇಳಿದ್ದಾರೆ.
ಹಳ್ಳಿಕಾರ್ ತಳಿಗಳ ಬೆಲೆ ಕಮ್ಮಿಯೇನಿಲ್ಲ. ರೇಸ್ ನಡೆಯುವಾಗ ಈ ತಳಿಗಳನ್ನು ಲಕ್ಷ ಲಕ್ಷ ಕೊಟ್ಟು ಖರೀದಿ ಮಾಡುತ್ತಾರೆ. "ನಮ್ಮ ಕರ್ನಾಟಕದಲ್ಲಿ ಬೀಜದ ಹೋರಿನಲ್ಲಿ ಮಾರಿರೋದು 26 ಲಕ್ಷಕ್ಕೆ ಏಕಲವ್ಯ. ಎಕಸಿ ಎತ್ತುಗಳಲ್ಲಿ ರೇಸ್ ಫೀಲ್ಡ್‌ನಲ್ಲಿ ಸುಮಾರು ಎತ್ತು ಮಾರುತ್ತಿದ್ದೆ. ಒಂದೊಂದು ಎತ್ತೇ 11 ಲಕ್ಷ ರೂಪಾಯಿ. 17 ಲಕ್ಷ, 15 ಲಕ್ಷ ರೂಪಾಯಿವರೆಗೂ ಮಾರುತ್ತಿದ್ದೆ. " ಎಂದು ವರ್ತೂರು ಸಂತೋಷ್ ಹೇಳಿದ್ದಾರೆ.
ಹಾಗೇ ಚಿಕ್ಕಮಗಳೂರು ಮಂದಿನೇ ಇಷ್ಟೆಲ್ಲ ಲಕ್ಷ ಕೊಟ್ಟು ಹಳ್ಳಿಕಾರ್ ತಳಿಗಳನ್ನು ಖರೀದಿ ಮಾಡುತ್ತಾರೆ ಎಂದಿದ್ದಾರೆ. "ಇದರಲ್ಲಿ ಚಿಕ್ಕಮಗಳೂರಿನವರು ಹೆಚ್ಚು ಬೆಲೆ ಕೊಟ್ಟು ಕೊಂಡುಕೊಂಡಿರುವವರು ಅವರೇ ಜಾಸ್ತಿ. ಬೇರೆಯವರು ತೆಗೆದುಕೊಳ್ಳುತ್ತಾರೆ. ನಾನು ಕಂಡಂತೆ 10 ರಿಂದ 15 ಕೊಟ್ಟು ಕೊಂಡವರು ಅವರೇ. ಕೆಲವು ಜಿಲ್ಲೆ ಹೆಸರು ಹೇಳಿದಾಗ ಬೇಜಾರು ಮಾಡಿಕೊಳ್ಳಬೇಡಿ. ವಾಸ್ತವನ್ನು ಹೇಳಿದ್ದೇನೆ ಅಷ್ಟೇ. ಎಲ್ಲರೂ ಸಾಕುತ್ತಾರೆ. ಒಂದು ಮನೆ ಮುಂದೆ ಹೋದರೆ, ಐದೈದು ರೇಸ್ ಹೋರಿಗಳು ಇವೆ. " ಎಂದಿದ್ದಾರೆ.


Click it and Unblock the Notifications











