IVF ಮೂಲಕ ಮಗು ಪಡೆಯಲು ನಟಿ ಭಾವನಾ ಮಾಡಿದ ಖರ್ಚು ಎಷ್ಟು? ನಟಿ ಕೊಟ್ಟ ಲೆಕ್ಕವೆಷ್ಟು?

ಕನ್ನಡದ ನಟಿ ಭಾವನಾ ರಾಮಣ್ಣ ಈಗ ಟಾಕ್ ಆಫ್ ದಿ ಟೌನ್ ಆಗಿದ್ದಾರೆ. ಅದೆಷ್ಟೋ ಮಹಿಳೆಯರ ಬದುಕಿಗೆ ಸ್ಪೂರ್ತಿಯಾಗಿ ಹೊರ ಹೊಮ್ಮಿದ್ದಾರೆ. ಮದುವೆ ಬಳಿಕ ಮಗುವಿಗಾಗಿ ಪರದಾಡುತ್ತಿರುವ ದಂಪತಿಗಳಲ್ಲಿ ಭಾವನಾ ಅವರಿಂದ ಹೊಸ ಭರವಸೆ ಮೂಡಿದೆ. ಕಳೆದ ಎರಡೂವರೆ ಮೂರು ದಶಕಗಳಿಂದ ಚಿತ್ರರಂಗದಲ್ಲಿರುವ ಭಾವನಾ ದಿಟ್ಟ ಹೆಜ್ಜೆಯನ್ನು ಇಟ್ಟಿದ್ದಾರೆ. IVF ಮೂಲಕ ಮಗುವನ್ನು ಪಡೆಯುವುದಕ್ಕೆ ನಿರ್ಧಾರಕ್ಕೆ ಬಂದಿದ್ದಾರೆ.

IVF ಮೂಲಕ ಮಗುವನ್ನು ಪಡೆಯುವ ಪದ್ಧತಿ ಹಲವು ವರ್ಷಗಳಿಂದ ನಡೆಯುತ್ತಲೇ ಇದೆ. ಆದರೆ, ಭಾವನಾ ಮದುವೆಯಾಗದೇ ಮಗುವನ್ನು ಪಡೆಯುವುದಕ್ಕೆ ಮುಂದಾಗಿದ್ದಕ್ಕೆ ಕೆಲವರು ದಿಟ್ಟ ಹೆಜ್ಜೆ ಎಂದಿದ್ದಾರೆ. ಅದರಲ್ಲೂ 40 ದಾಟಿದ ಮಹಿಳೆಯಾಗಿ ಮಗು ಪಡೆಯುವುದಕ್ಕೆ ಮುಂದಾಗಿದ್ದಕ್ಕೆ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಇದರೊಂದಿಗೆ ಭಾವನಾ IVF ಪ್ರಕ್ರಿಯೆ ಬಗೆಗಿನ ಮಾಹಿತಿಯನ್ನು ಹಂಚಿಕೊಳ್ಳುತ್ತಿದ್ದಾರೆ.

How much money did actress Bhavana Ramanna spend to become pregnant through IVF

ಸಾಮಾನ್ಯವಾಗಿ ಒತ್ತಡದಿಂದಲೋ, ದೈಹಿಕ ನ್ಯೂನ್ಯತೆಯಿಂದಲೋ ದಂಪತಿಗಳು ಮಕ್ಕಳನ್ನು ಪಡೆಯಲು ಸಾಧ್ಯವಾಗುತ್ತಿರಲಿಲ್ಲ. ಇಂತಹ ದಂಪತಿಗಳಿಗಾಗಿ IVF ಮೂಲಕ ಅವರ ಆಸೆಯನ್ನು ಈಡೇರಿಸಲು ವೈದ್ಯರು ಮುಂದಾಗಿದ್ದಾರೆ. ಆದರೆ, IVF ಪ್ರಕ್ರಿಯೆ ತುಂಬಾನೇ ದುಬಾರಿ ಎಂದು ಅಭಿಪ್ರಾಯವೂ ಕೂಡ ಇದೆ. ಹೀಗಾಗಿ ನಟಿ ಭಾವನಾ ರಾಮಣ್ಣ IVF ಮಾಡಿಸಿಕೊಳ್ಳುವುದಕ್ಕೆ ತಮಗಾದ ಖರ್ಚು ಎಷ್ಟು ಅನ್ನೋದನ್ನು ರಿವೀಲ್ ಮಾಡಿದ್ದಾರೆ.

ಮುಂದೆ ಓದಿ

IVF ಮೂಲಕ ಮಗು ಪಡೆಯಲು ಮುಂದಾದ ಭಾವನಾ ರಾಮಣ್ಣ
ನಟಿ ಭಾವನಾ ರಾಮಣ್ಣ ಇದೂವರೆಗೂ ಎಷ್ಟು ಖರ್ಷು ಮಾಡಿದ್ದಾರೆ?
ದಂಪತಿಗಳು IVF ಪ್ರಕ್ರಿಯೆಗೆ ಹೆದರುವುದು ಯಾಕೆ?

How much money did actress Bhavana Ramanna spend to become pregnant through IVF

ಹೌದು, ಐವಿಎಫ್ ಪ್ರಕ್ರಿಯೆ ಅನ್ನೋದು ತುಂಬಾನೇ ದುಬಾರಿ. ಒಂದೊಂದು ಆಸ್ಪತ್ರೆಯಲ್ಲಿ ಒಂದೊಂದು ಬೆಲೆ ಕಟ್ಟುತ್ತಾರೆ. ಇದು ದಂಪತಿಗಳಲ್ಲಿ ಭಯವನ್ನು ಮೂಡಿಸಿದೆ. ಅದರಲ್ಲೂ ಕೆಲವು ಸಕ್ಸಸ್ ಆಗುತ್ತವೆ. ಮತ್ತೆ ಕೆಲವು ಫೆಲ್ಯೂರ್ ಆಗುತ್ತವೆ. ಹೀಗಾಗಿ ಐಪಿಎಫ್‌ಗೆ ಹೆದರಿ ಎಷ್ಟೋ ಮಂದಿ ಈ ಪ್ರಕ್ರಿಯೆ ಮೂಲಕ ಮಗುವನ್ನು ಪಡೆಯುವುದಕ್ಕೆ ಹೋಗುವುದೇ ಇಲ್ಲ. ಈಗ ಭಾವನಾ ರಾಮಣ್ಣ ಫಸ್ಟ್ ಡೇ ಫಸ್ಟ್ ಶೋ ಯೂಟ್ಯೂಬ್ ಚಾನೆಲ್‌ಗೆ ನೀಡಿದ ಸಂದರ್ಶನದಲ್ಲಿ ಎಷ್ಟು ಖರ್ಚು ಆಯ್ತು ಎನ್ನುವುದನ್ನು ಹೇಳಿಕೊಂಡಿದ್ದಾರೆ.

ಖರ್ಚು ಎಷ್ಟು ಆಗುತ್ತೆ?

ನಟಿ ಭಾವನಾ ರಾಮಣ್ಣ ತನ್ನ ಐವಿಎಫ್ ಪ್ರಕ್ರಿಯೆ ಬಗ್ಗೆ ಸಾಕಷ್ಟು ಯೂಟ್ಯೂಬ್ ಚಾನೆಲ್‌ಗಳಲ್ಲಿ ಮಾತಾಡಿದ್ದಾರೆ. ಹಾಗೇ ಎಷ್ಟು ಖರ್ಚು ಆಗುತ್ತಿದೆ? ಏನೇನಕ್ಕೆ ಆಗುತ್ತಿದೆ? ಎನ್ನುವುದನ್ನೂ ಓಪನ್ ಆಗಿ ಹೇಳಿದ್ದಾರೆ. "ನನಗೆ ತುಂಬಾ ಖರ್ಚು ಏನೂ ಆಗಿಲ್ಲ. ಅದರಲ್ಲಿ ಕ್ವಾಲಿಟಿ ಆಫ್ ಎಂಬ್ರಿಯೋ ಚೆಕ್ ಮಾಡುತ್ತೇವೆ. ಅದೇ ಹೆಚ್ಚು ದುಬಾರಿ ಅಂತ ಅನಿಸುತ್ತೆ. ಕ್ವಾಲಿಟಿ ಆಫ್ ಎಂಬ್ರಿಯೋ ಚೆಕ್ ಮಾಡುವುದಕ್ಕೆ ಸುಮಾರು ಒಂದೂವರೆ ಲಕ್ಷ ಆಗುತ್ತೆ. ಅದು ಬಿಟ್ಟರೆ, ಎಲ್ಲಾ ಸೇರಿ ಆರರಿಂದ ಏಳು ಲಕ್ಷ ಖರ್ಚು ಆಗುತ್ತೆ." ಎಂದು ನಟಿ ಭಾವನಾ ಹೇಳಿಕೊಂಡಿದ್ದಾರೆ.

ಗೊಂದಲ, ಭಯ ಏಕೆ?

"ಅದು ತುಂಬಾ ಜನಕ್ಕೆ ಗೊಂದಲವಿದೆ. ಬಾಡಿ ತಾಯಿ ಹಾಗೂ ಐವಿಎಫ್‌ಗೂ ನಡುವೆ ಕನ್ಫ್ಯೂಷನ್ ಇದೆ. ಬಾಡಿ ತಾಯಿ ಅಂದರೆ, ಸುಮಾರು ₹35 ರಿಂದ ₹40 ಲಕ್ಷ ಆಗುತ್ತೆ. ತುಂಬಾ ಜನ ಹಾಗೇ ಅಂದುಕೊಂಡಿದ್ದಾರೆ. ಬಹಳಷ್ಟು ಮಂದಿಗೆ ಹಾಗೇ ಮಾಹಿತಿ ಸಿಕ್ಕಿದೆಯಂತೆ. ಅಷ್ಟೆಲ್ಲ ಖಂಡಿತಾ ಆಗುವುದಿಲ್ಲ. ಡಿಲೇವರಿ ಎಲ್ಲಾ ಸೇರಿದರೆ ಒಂದು ₹10 ಲಕ್ಷದ ಒಳಗೆ ಅಂತ ಹೇಳಬಹುದು. ಇದು ಸಂಪೂರ್ಣವಾಗಿ ಮಹಿಳೆಯ ದೇಹದ ಮೇಲೆ ಡಿಪೆಂಡ್ ಆಗಿದೆ. ಅವಳು ದೇಹವನ್ನು ಯಾವ ಸ್ಥಿತಿಯಲ್ಲಿ ಇಟ್ಟುಕೊಂಡಿದ್ದಾಳೆ ಅನ್ನೋದು ತುಂಬಾನೇ ಮುಖ್ಯ ಆಗುತ್ತೆ" ಎಂದು ನಟಿ ಭಾವನಾ ಹೇಳಿದ್ದಾರೆ.

ಭಾವನಾ ಅವರಿಗೆ ಅವಳಿ ಮಕ್ಕಳೇ ಹುಟ್ಟುತ್ತಾರೆಂದು ವೈದ್ಯರು ಹೇಳಿದ್ದರಿಂದ ಸಹಜ ಡಿಲೇವರಿ ಆಗುವುದಿಲ್ಲ. ಹೀಗಾಗಿ ವೈದ್ಯರು ಪೂರ್ಣ 9 ತಿಂಗಳು ಬಿಡುವುದಿಲ್ಲ. 8 ತಿಂಗಳು ಅವರ ಮೂಮ್ಮೆಂಟ್ಸ್ ಎಲ್ಲಾ ನೋಡಿಕೊಂಡು ಒಂದು ನಿರ್ಧಾರಕ್ಕೆ ಬರುತ್ತಾರೆ ಎಂದು ನಟಿ ಭಾವನಾ ರಾಮಣ್ಣ ಹೇಳಿಕೊಂಡಿದ್ದಾರೆ. ಅವರ ಪ್ರಕಾರ, ಸೆಪ್ಟೆಂಬರ್‌ ತಿಂಗಳಲ್ಲಿ ಅವರಿಗೆ ಅವಳಿಗಳು ಜನಿಸುವ ಸಾಧ್ಯತೆಯಿದೆ. ಇದೇ ವೇಳೆ ಭಾವನಾ ಹಾಗೂ ಮಕ್ಕಳನ್ನು ಒಪ್ಪುವ ವ್ಯಕ್ತಿ ಸಿಕ್ಕಿದರೆ ಮುಂದಿನ ದಿನಗಳಲ್ಲಿ ವಿವಾಹವಾಗುವಾಗಿಯೂ ಹೇಳಿದ್ದಾರೆ.

More from Filmibeat

English summary
How much money did actress Bhavana Ramanna spend to become pregnant through IVF?;
Read more about: bhavana actress sandalwood
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X