ಕರ್ನಾಟಕದಲ್ಲೂ ಮಲ್ಟಿಪ್ಲೆಕ್ಸ್ ಸ್ಕ್ರೀನ್ಸ್‌ಗಾಗಿ ಪೈಪೋಟಿ? ಟಾಕ್ಸಿಕ್‌ಗೆ ಎಷ್ಟು? 'ಧುರಂಧರ್‌ 2'ಗೆಷ್ಟು?

ಈ ವರ್ಷದ ಮೋಸ್ಟ್ ಎಕ್ಸ್‌ಪೆಕ್ಟೆಡ್‌ ಸಿನಿಮಾಗಳಲ್ಲಿ ರಾಕಿಂಗ್ ಸ್ಟಾರ್ ಯಶ್ ನಟನೆಯ 'ಟಾಕ್ಸಿಕ್' ಒಂದಾದರೆ, ರಣ್‌ವೀರ್ ಸಿಂಗ್ ಸಿನಿಮಾ 'ಧುರಂಧರ್ 2' ಮತ್ತೊಂದು. ಈ ಎರಡೂ ಸಿನಿಮಾಗಳು ಬಾಕ್ಸಾಫೀಸ್‌ನಲ್ಲಿ ದಾಖಲೆಗಳನ್ನು ಮುರಿಯುವುದಕ್ಕೆ ಶತ ಪ್ರಯತ್ನ ಮಾಡುತ್ತಿವೆ. ಈ ಬಾಕ್ಸಾಫೀಸ್ ಯುದ್ಧದಲ್ಲಿ ಗೆಲ್ಲಲೇಬೇಕು ಅಂತ ಪಣ ತೊಟ್ಟು ನಿಂತಿವೆ. ಸದ್ಯದ ಪರಿಸ್ಥಿತಿಯಲ್ಲಿ ಯಶ್ 'ಟಾಕ್ಸಿಕ್' ಮುಂಚೂಣಿಯಲ್ಲಿದೆ.

'ಟಾಕ್ಸಿಕ್' ಐದಕ್ಕಿಂತಲೂ ಹೆಚ್ಚು ಭಾಷೆಯಲ್ಲಿ ರಿಲೀಸ್ ಆಗುತ್ತಿದೆ. ಹಾಗೇ 'ಧುರಂಧರ್' ಮೆಗಾ ಸಕ್ಸಸ್ ಬಳಿಕ 'ಧುರಂಧರ್ 2' ಕೂಡ ಹಲವು ಭಾಷೆಗಳಲ್ಲಿ ಬಿಡುಗಡೆಯಾಗುತ್ತಿದೆ. ಹೀಗಾಗಿ ಎರಡೂ ಸಿನಿಮಾಗಳಿಗೂ ಅತೀ ಹೆಚ್ಚು ಸ್ಕ್ರೀನ್‌ಗಳು ಬೇಕಿವೆ. ಹೀಗಾಗಿ ಈಗಿನಿಂದಲೇ ಮಲ್ಟಿಪ್ಲೆಕ್ಸ್ ಸ್ಕ್ರೀನ್‌ಗಳ ಮೇಲೆ ಎರಡೂ ಸಿನಿಮಾ ತಂಡಗಳು ಕಣ್ಣಿಟ್ಟಿವೆ ಎಂದು ಹೇಳಲಾಗುತ್ತಿದೆ.

How much screens Yash Toxic and Ranveer Singh Dhurandhar 2 may get here is the details

ಕರ್ನಾಟಕದಲ್ಲೂ 'ಧುರಂಧರ್ 2' ಸಿನಿಮಾ 'ಟಾಕ್ಸಿಕ್‌'ಗೆ ಪೈಪೋಟಿ ಕೊಡುವುದಕ್ಕೆ ಶತ ಪ್ರಯತ್ನ ನಡೆಸುತ್ತಿದೆ ಎಂಬ ಮಾತುಗಳು ಕೇಳಿ ಬರುತ್ತಿದೆ. 'ಧುರಂಧರ್ 2' ಕರ್ನಾಟಕದಲ್ಲಿರುವ ಮಲ್ಟಿಪ್ಲೆಕ್ಸ್‌ ಸ್ಕ್ರೀನ್‌ಗಳ ಮೇಲೆ ಕಣ್ಣಿಟ್ಟಿದೆ ಎಂದು ಹೇಳಲಾಗುತ್ತಿದೆ. ಹೀಗಾಗಿ 'ಟಾಕ್ಸಿಕ್‌'ಗೆ ಇಲ್ಲಿ ಎಷ್ಟು ಸ್ಕ್ರೀನ್‌ಗಳು ಸಿಗಬಹುದು? 'ಧುರಂಧರ್‌ 2' ಎಷ್ಟು ಸಿಗಬಹುದೆಂಬ ಲೆಕ್ಕಾಚಾರ ಈಗಾಗಲೇ ಶುರುವಾಗಿದೆಯಂತೆ.

ಈಗಾಗಲೇ ಉತ್ತರ ಭಾರತದಲ್ಲಿ 'ಧರುಂಧರ್ 2' ತಂಡ ಮಲ್ಟಿಪ್ಲೆಕ್ಸ್ ಸ್ಕ್ರೀನ್‌ಗಳನ್ನು ಲಾಕ್ ಮಾಡಿಕೊಂಡು ಬರುತ್ತಿದೆ ಎಂಬ ಸುದ್ದಿ ಓಡಾಡುತ್ತಿದೆ. ಅದಕ್ಕೆ 'ಟಾಕ್ಸಿಕ್' ಟೀಮ್ ಕೂಡ ಕೌಂಟರ್ ಕೊಟ್ಟಿದೆ. 'ಕೆಜಿಎಫ್ 2' ವಿತರಣೆ ಮಾಡಿದ್ದ ಎಎ ಫಿಲ್ಮ್ಸ್‌ಗೆ ವಿತರಣೆ ಹಕ್ಕುಗಳನ್ನು ಕೊಟ್ಟಿದ್ದು, ಅತೀ ಹೆಚ್ಚು ಸ್ಕ್ರೀನ್‌ಗಳಲ್ಲಿ 'ಟಾಕ್ಸಿಕ್' ರಿಲೀಸ್‌ಗೆ ಸ್ಕೆಚ್ ಹಾಕಿದೆ. ಈಗ ಅದು ಕರ್ನಾಟಕದ ಕಡೆಗೆ ವಾಲಿದೆ ಎಂದು ಹೇಳಲಾಗುತ್ತಿದೆ.

ಕರ್ನಾಟಕದಲ್ಲಿಯೂ ಸದ್ದಿಲ್ಲದೆ 'ಟಾಕ್ಸಿಕ್' ಹಾಗೂ 'ಧುರಂಧರ್ 2' ಎರಡೂ ಸಿನಿಮಾಗಳ ತಂಡಗಳು ಮಲ್ಟಿಪ್ಲೆಕ್ಸ್ ಸ್ಕ್ರೀನ್‌ಗಳನ್ನು ಪಡೆಯುವುದಕ್ಕೆ ಪ್ರಯತ್ನ ಮಾಡುತ್ತಿವೆ. 'ಟಾಕ್ಸಿಕ್‌'ಗೆ 2 ಶೋ ಕೊಟ್ಟರೆ, ತಮಗೆ 3 ಶೋಗಳನ್ನು ಕೊಡಿ ಅಂತ 'ಧುರಂಧರ್ 2' ಪಟ್ಟು ಬೇಡಿಕೆ ಇಟ್ಟಿದೆ ಅನ್ನೋ ಮಾತು ಸ್ಯಾಂಡಲ್‌ವುಡ್ ಮಂದಿಯ ಬಾಯಲ್ಲಿ ಹರಿದಾಡುತ್ತಿದೆ. ಉತ್ತರ ಭಾರತದಲ್ಲಿ ಈಗಾಗಲೇ ಇಂತಹ ಪ್ರಯತ್ನಕ್ಕೆ ಮುಂದಾಗಿದ್ದು, ಯಶ್ ಹಾಗೂ ಕೆವಿಎನ್ ಸಂಸ್ಥೆಗಳು ಮಾಸ್ಟರ್ ಸ್ಟ್ರೋಕ್ ಕೊಟ್ಟಿದೆ ಎಂದು ಹೇಳಲಾಗುತ್ತಿದೆ.

How much screens Yash Toxic and Ranveer Singh Dhurandhar 2 may get here is the details

ಇನ್ನು ಕರ್ನಾಟಕದಲ್ಲಿ ಸುಮಾರು 70ಕ್ಕೂ ಹೆಚ್ಚು ಮಲ್ಟಿಪ್ಲೆಕ್ಸ್ ಇವೆ. ಒಂದೊಂದು ಮಲ್ಟಿಪ್ಲೆಕ್ಸ್ ಪ್ರಾಪರ್ಟಿಯಲ್ಲಿಯೂ ಕಮ್ಮಿ ಅಂದರೂ, 5 ಸ್ಕ್ರೀನ್‌ಗಳಂತೆ ಲೆಕ್ಕ ಹಾಕಿಕೊಂಡರೂ ಒಟ್ಟು 350 ಸ್ಕ್ರೀನ್‌ಗಳು ಸಿಗುತ್ತವೆ. 'ಧುರಂದರ್ 2' ಕರ್ನಾಟಕದ ಸಿಂಗಲ್‌ ಸ್ಕ್ರೀನ್‌ಗಳಲ್ಲಿ ಪ್ರದರ್ಶನ ಕಾಣುವಂತಹ ಸಿನಿಮಾ ಅಲ್ಲ. ಹೀಗಾಗಿ ಮಲ್ಟಿಪ್ಲೆಕ್ಸ್ ಕಡೆಗೆ ಹೆಚ್ಚು ಗಮನ ಹರಿಸಿದೆ ಎಂದು ಸಿನಿಮಾ ಮಂದಿ ಮಾತಾಡಿಕೊಳ್ಳುತ್ತಿದ್ದಾರೆ.

ಒಟ್ಟಾರೆ, 'ಟಾಕ್ಸಿಕ್' ರಿಲೀಸ್ ಡೇಟ್ ಹತ್ತಿರ ಬರುತ್ತಿದ್ದಂತೆ ಒಂದರ ಹಿಂದೊಂದು ಸವಾಲು ಎದುರಾಗುತ್ತಲೇ ಇವೆ. ಅದಕ್ಕೆ ಯಶ್ ಹಾಗೂ ಕೆವಿಎನ್ ಪ್ರೊಡಕ್ಷನ್ ತಿರುಗೇಟು ಕೊಡುತ್ತಲೇ ಇದ್ದಾರೆ. ಸದ್ಯ ಬ್ಯುಸಿನೆಸ್ ವಿಚಾರದಲ್ಲಿ ಸದ್ದು ಮಾಡುತ್ತಿರುವ 'ಟಾಕ್ಸಿಕ್' ಬಿಡುಗಡೆಗೂ ಮುನ್ನವೇ ₹1000 ಕೋಟಿ ಗಳಿಸುವ ಟಾರ್ಗೆಟ್ ಇಟ್ಟುಕೊಂಡಿದೆ. ಒಂದು ವೇಳೆ ಇದನ್ನು ಸಾಧಿಸಿದರೆ, ಅತೀ ಹೆಚ್ಚು ಪ್ರೀ ರಿಲೀಸ್ ಬ್ಯುಸಿನೆಸ್‌ ಮಾಡಿದ ಸಿನಿಮಾಗಳ ಸಾಲಿನಲ್ಲಿ ಮುಂಚೂಣಿಯಲ್ಲಿ ಇರಲಿದೆ.

More from Filmibeat

English summary
How much screens Yash Toxic and Ranveer Singh Dhurandhar 2 may get here is the details.
Read more about: yash toxic ranveer singh
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X