ರವಿಚಂದ್ರನ್‌ಗೆ ಸಿಕ್ಕಿದ ಮೊದಲ ಸಂಭಾವನೆ ಎಷ್ಟು? ಆ ಹಣವನ್ನು ಕ್ರೇಜಿಸ್ಟಾರ್ ಯಾವುದಕ್ಕೆ ಖರ್ಚು ಮಾಡಿದ್ರು?

ಕನ್ನಡ ಚಿತ್ರರಂಗದ ಕನಸುಗಾರ ರವಿಚಂದ್ರನ್ ಸಿನಿಮಾಗಳಿಗೆ ಖರ್ಚು ಮಾಡಿದ್ದಷ್ಟು ಮತ್ಯಾರೂ ಮಾಡಿಲ್ಲ. ಕ್ರೇಜಿಸ್ಟಾರ್ ಸಿನಿಮಾಗಳಿಗೆ ಪ್ರತ್ಯೇಕವಾದ ಫ್ಯಾನ್ ಬೇಸ್ ಇದೆ. ರವಿಚಂದ್ರನ್ ಹಾಡುಗಳೇ ಒಂದು ಸಿನಿಮಾ ರೇಂಜ್‌ಗೆ ಆಗುವಷ್ಟು ಖರ್ಚಾಗುತ್ತಿತ್ತು. ಅಷ್ಟು ರಿಚ್ ಆಗಿ ಸಿನಿಮಾವನ್ನು ತೆಗೆಯುವುದನ್ನು ಕಲಿಸಿಕೊಟ್ಟಿದ್ದೇ ಕ್ರೇಜಿ ಸ್ಟಾರ್. ಈ ಮಾತನ್ನು ಸ್ಯಾಂಡಲ್‌ವುಡ್‌ನ ಸಿನಿಮಾ ಮಂದಿನೂ ಒಪ್ಪಿಕೊಂಡಿದ್ದಾರೆ.

ರವಿಚಂದ್ರನ್ ಸಿನಿಮಾಗಳಿಗೆ ಖರ್ಚು ಮಾಡುವುದಕ್ಕೆ ಯಾವತ್ತೂ ಹಿಂದೆ ಮುಂದೆ ನೋಡಿಲ್ಲ. ಸಿನಿಮಾದಲ್ಲಿ ದುಡಿದಿದ್ದನ್ನು ಸಿನಿಮಾದಲ್ಲಿಯೇ ಕಳೆದುಕೊಂಡಿದ್ದಾರೆ. ಸಿನಿಮಾ ಮಾಡಿ ಗೆದ್ದಿದ್ದಾರೆ. ಸಿನಿಮಾ ಮಾಡಿ ಸೋತಿದ್ದಾರೆ. ಹತ್ತಾರು ಕೋಟಿ ಹಣ ದುಡಿದಿದ್ದಾರೆ. ಅಷ್ಟೇ ಮೊತ್ತದ ಹಣವನ್ನು ಕಳೆದುಕೊಂಡಿದ್ದಾರೆ. ಆದರೆ, ಅದ್ಯಾವುದಕ್ಕೂ ಕ್ರೇಜ್ ಸ್ಟಾರ್ ಹಿಗ್ಗಲೂ ಇಲ್ಲ, ಕುಗ್ಗಲೂ ಇಲ್ಲ ಅನ್ನೋದು ಅಷ್ಟೇ ಮುಖ್ಯ.

How much was the first salary received by Crazy Star Ravichandran

ಸಿನಿಮಾಗಳಿಗೆ ಖರ್ಚು ಮಾಡುವುದಕ್ಕೆ ಹಿಂದೇಟು ಹಾಕದ ರವಿಚಂದ್ರನ್ ಮೊದಲ ಪಡೆದ ಸಂಭಾವನೆ ಎಷ್ಟು ಗೊತ್ತೇ? ಮೊದಲು ಸಂಭಾವನೆ ಅಂತ ಸಿಕ್ಕಿದ ಹಣವನ್ನು ಏನು ಮಾಡಿದ್ದರು? ಸಿನಿಮಾದಿಂದ ಬಂದ ಹಣದ ಐದು ಪಟ್ಟು ಕಾಸ್ಟ್ಯೂಮ್‌ಗೆ ಖರ್ಚು ಮಾಡಿದ್ದರೇ? ಜೀ ಕನ್ನಡದ ಭರ್ಜರಿ ಬ್ಯಾಚುಲರ್‌ನಲ್ಲಿ ಕ್ರೇಜಿಸ್ಟಾರ್ ಈ ಎಲ್ಲಾ ವಿಷಯಗಳ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ.

Take a Poll

ಕನ್ನಡ ಚಿತ್ರರಂಗದ ಜನಪ್ರಿಯ ನಿರ್ಮಾಪಕ ಎನ್.ವೀರಸ್ವಾಮಿಯವರ ಪುತ್ರ ರವಿಚಂದ್ರನ್‌ಗೆ ಸಿನಿಮಾಗಳೇನು ಹೊಸತಾಗಿರಲಿಲ್ಲ. ತಂದೆ ಸಾಕಷ್ಟು ಸೂಪರ್‌ ಹಿಟ್ ಸಿನಿಮಾಗಳನ್ನು ನಿರ್ಮಾಣ ಮಾಡಿ ಗೆದ್ದಿದ್ದರು. ಕನ್ನಡದ ದಿಗ್ಗಜರಿಗೆ ಎವರ್‌ಗ್ರೀನ್ ಸಿನಿಮಾಗಳನ್ನು ಕೊಟ್ಟಿದ್ದು ವೀರಸ್ವಾಮಿಯವರೇ. ಹಾಗಾಗಿ ಇಂದಿಗೂ ಈಶ್ವರಿ ಸಂಸ್ಥೆಯ ಮೇಲೆ ಚಿತ್ರರಂಗಕ್ಕೆ ವಿಶೇಷ ಗೌರವವಿದೆ. ಆ ಪರಂಪರೆಯನ್ನು ರವಿಚಂದ್ರನ್ ಇಂದಿಗೂ ಉಳಿಸಿಕೊಂಡು ಮುಂದೆ ಸಾಗುತ್ತಿದ್ದಾರೆ. ಇಷ್ಟೆಲ್ಲ ಇರಬೇಕಾದರೆ, ಇವರಿಗೆ ಸಿಕ್ಕಿದ ಮೊದಲ ಸಂಭಾವನೆ ಎಷ್ಟು ಅಂತ ತಿಳಿದುಕೊಳ್ಳುವ ಕುತೂಹಲವಿರುದಿಲ್ಲವೇ?

ರವಿಚಂದ್ರನ್ ಬಾಲ ನಟನಾಗಿಯೇ ಸಿನಿಮಾರಂಗಕ್ಕೆ ಎಂಟ್ರಿ ಕೊಟ್ಟಿದ್ದರು. ಆದರೆ, ನಾಯಕನಾಗಿ ಕಾಲಿಡುವುದಕ್ಕೂ ಮುನ್ನ ಮನೆಯ ಬಳಿಯೇ ಇದ್ದ ಫ್ಯಾಕ್ಟರಿಯಲ್ಲಿ ಕೆಲಸ ಮಾಡುತ್ತಿದ್ದರು. ಅಲ್ಲಿ ಇವರಿಗೆ 30 ರೂಪಾಯಿ ಸಂಭಾವನೆಯನ್ನು ಕೊಡುತ್ತಿದ್ದರು. ಅಲ್ಲಿ ಏನು ಕೆಲಸ ಮಾಡುತ್ತಿದ್ದರು? ಅನ್ನೋದನ್ನು ಭರ್ಜರಿ ಬ್ಯಾಚುಲರ್ ರಿಯಾಲಿಟಿ ಶೋನಲ್ಲಿ ರಿವೀಲ್ ಮಾಡಿದ್ದಾರೆ.

"ನನ್ನ ಮೊದಲನೇ ಸ್ಯಾಲರಿ ಮೂವತ್ತು ರೂಪಾಯಿ. ನಾನು ಫ್ಯಾಕ್ಟರಿಯಲ್ಲಿ ಕೆಲಸ ಮಾಡುತ್ತಿದ್ದೆ. ಹೌದು, ಸಿನಿಮಾಗೆ ಬರುವುದಕ್ಕೂ ಮುನ್ನ ನನ್ನ ಮನೆಯ ಪಕ್ಕದಲ್ಲಿ ಒಂದು ಫ್ಯಾಕ್ಟರಿಯಿತ್ತು. ಅಲ್ಲಿಗೆ ಹೋಗಿ ಹಾಜರಿ ಹಾಕಿ, ಪೂಜೆ ಮಾಡುವ ಕೆಲಸಕ್ಕೆ ಇಟ್ಟುಕೊಂಡಿದ್ದರು." ಎಂದು ಕ್ರೇಜಿಸ್ಟಾರ್ ರವಿಚಂದ್ರನ್ ಭರ್ಜರಿ ಬ್ಯಾಚುಲರ್ ಧಾರಾವಾಹಿಯಲ್ಲಿ ಹೇಳಿಕೊಂಡಿದ್ದಾರೆ. ಇದು ಮೊದಲ ಸಂಬಳ ಆಗಿದ್ದರೆ, ಮೊದಲ ಸಿನಿಮಾಗೆ ಇವರಿಗೆ ಸಂಬಳವೇ ಸಿಕ್ಕಿರಲಿಲ್ಲ.

"ಸಿನಿಮಾ ಅಂತ ಬಂದರೆ, ಮೊದಲ ಸಿನಿಮಾ ನಾನೇ ಮಾಡಿದ್ದರಿಂದ ಸಂಭಾವನೆ ಏನು ಕೊಟ್ಟಿರಲಿಲ್ಲ. ಆದರೆ, ಒಂದು ಸಿನಿಮಾದವರು 27 ಸಾವಿರ ರೂಪಾಯಿ ಸಂಭಾವನೆ ಕೊಟ್ಟಿದ್ದರು. ಆ ಸಿನಿಮಾಗೆ ಒಂದೂವರೆ ಲಕ್ಷ ರೂಪಾಯಿಯ ಕಾಸ್ಟ್ಯೂಮ್ ಅನ್ನು ನಾನೇ ತೆಗೆದುಕೊಂಡೆ. ಆಗ ನಾನು ಬಾಂಬೆಯಿಂದಲೇ ಕಾಸ್ಟ್ಯೂಮ್ ಅನ್ನು ತರಿಸುತ್ತಿದ್ದೆ. ಆಗ ಅಮಿತಾಭ್ ಬಚ್ಚನ್‌ಗೂ ನನಗೂ ಒಬ್ಬನೇ ಕಾಸ್ಟ್ಯೂಮರ್." ಎಂದು ಕ್ರೇಜಿಸ್ಟಾರ್ ರವಿಚಂದ್ರನ್ ಭರ್ಜರಿ ಬ್ಯಾಚುಲರ್ ರಿಯಾಲಿಟಿ ಶೋನಲ್ಲಿ ಹೇಳಿಕೊಂಡಿದ್ದಾರೆ. ಸದ್ಯ ರಿಯಾಲಿಟಿ ಶೋ ಬಿಟ್ಟು ಕ್ರೇಜಿ ಸ್ಟಾರ್ ತಮ್ಮ ಪುತ್ರ ಮನೋರಂಜನ್‌ಗಾಗಿ ಸಿನಿಮಾವೊಂದರನ್ನು ನಿರ್ಮಾಣ ಮಾಡುತ್ತಿದ್ದಾರೆ. ಆ ಕೆಲಸದಲ್ಲಿ ಬ್ಯುಸಿಯಾಗಿದ್ದಾರೆ.

More from Filmibeat

English summary
How much was the first salary received by Crazy Star Ravichandran?;
Read more about: ravichandran sandalwood movies
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X