"ಯಾರನ್ನೂ ಟಾರ್ಗೆಟ್ ಮಾಡಿ ಮಾತಾಡಿರಲಿಲ್ಲ.. ಆದರೂ ಹೆಡ್‌ಬುಷ್‌ಗೆ ತೊಂದರೆ ಕೊಟ್ರು" –ನಟರಾಕ್ಷಸ ಧನಂಜಯ್

ಸ್ಯಾಂಡಲ್‌ವುಡ್‌ನಲ್ಲಿ ಕಷ್ಟ ಪಟ್ಟು ನೆಲೆ ಕಂಡುಕೊಂಡ ಅದೆಷ್ಟೋ ಕಲಾವಿದರು ಇದ್ದಾರೆ. ಹಂತ ಹಂತವಾಗಿ ಒಂದೊಂದೇ ಏಣಿ ಏರಿ ಸ್ಟಾರ್ ಪಟ್ಟಕ್ಕೇರಿದ್ದಾರೆ. ಅಂತಹ ಸ್ಟಾರ್‌ಗಳಲ್ಲಿ ಧನಂಜಯ್ ಕೂಡ ಒಬ್ಬರು. ಸೋಲಿನ ಮೇಲೆ ಸೋಲು ಕಂಡು ಈಗ ಯಶಸ್ವಿ ನಾಯಕ ನಟ ಅಂತ ಅನಿಸಿಕೊಂಡಿದ್ದಾರೆ.

ಧನಂಜಯ್ ಒಳ್ಳೊಳ್ಳೆ ಪಾತ್ರಗಳನ್ನು ಮಾಡಿದ್ರು. ಬೇರೆ ಪ್ರಕಾರದ ಸಿನಿಮಾಗಳನ್ನು ಮಾಡಿದ್ದರು. ಅದ್ಯಾವುದೂ ಗೆಲ್ಲಲಿಲ್ಲ. ಡಾಲಿ ಅನ್ನೋ ಒಂದು ನೆಗೆಟಿವ್ ಪಾತ್ರ ಅವರನ್ನು ಮತ್ತೆ ಚಿತ್ರರಂಗದಲ್ಲಿ ಉಳಿಸಿತ್ತು. ಆದರೆ, ಈ ಪಾತ್ರದ ಬಗ್ಗೆ ಹಲವು ಕಮೆಂಟ್‌ಗಳು ಬಂದವು. ಡಾಲಿಯನ್ನು ನೋಡಿ, ಆ ಪಾತ್ರದಂತೆ ಆಗಬೇಕು ಅಂತ ಹೋದ ಘಟನೆಗಳು ಅದೆಷ್ಟೋ.

Hoysala Star Dhananjay says that just because he spoke about human values, Head Bush was affected.

ತೆರೆಮೇಲೆ ನೆಗೆಟಿವ್ ರೋಲ್ ಮಾಡಿದರೆ ಏನಂತೆ? ತೆರೆಹಿಂದೆ ಒಳ್ಳೆ ಸಂದೇಶ ಕೊಡೋಣ ನಿರ್ಧರಿಸಿದ್ದ ಧನಂಜಯ್ ಅಲ್ಲಿಯೂ ಅಡೆತಡೆಯಾಗಿತ್ತು. ಈ ಎಲ್ಲಾ ವಿಷಯಗಳ ಬಗ್ಗೆ 'ಹೊಯ್ಸಳ' ಸಿನಿಮಾದ ಸಂದರ್ಶನದ ವೇಳೆ ಧನಂಜಯ್ ಮುಕ್ತವಾಗಿ ಮಾತಾಡಿದ್ದಾರೆ. ಅದರ ಝಲಕ್ ಇಲ್ಲಿದೆ.

"ಅಲ್ಲಮ ಮಾಡಿದೆ, ತಿರುಗಿನೂ ನೋಡಿಲ್ಲ.. ಲನ್ ಆಗಿ ಗೆದ್ದೆ"

ದುನಿಯಾ ಸೂರಿ ನಿರ್ದೇಶಿಸಿದ 'ಟಗರು' ಸಿನಿಮಾ ಧನಂಜಯ್ ಬದುಕಿಗೆ ಟರ್ನಿಂಗ್ ಪಾಯಿಂಟ್. ಖಳನಾಯಕನಾಗಿ ಡಾಲಿ ಅವತಾರವೆತ್ತಿದಾಗ, ಗೆಲುವು ಸಿಕ್ಕಿಬಿಡ್ತು. ಆದರೆ, ಡಾಲಿ ಪಾತ್ರದಿಂದ ಸಮಾಜದ ಮೇಲೆ ಒಂದಿಷ್ಟು ಎಫೆಕ್ಟ್ ಆಗಿತ್ತು. "ಡಾಲಿ ಬಳಿಕ ಒಂದಿಷ್ಟು ಸಂಗತಿಗಳೂ ನಡೀತು. ಅದು ಡಿಪಾರ್ಟ್ಮೆಂಟ್‌ ಅವರಿಗೂ ಗೊತ್ತು. ಡಾಲಿ ತರನೇ ಆಗಬೇಕು ಅಂತ ಕೆಲವು ಸಂಗತಿಗಳು ನಡೆದಿದ್ದೂ ಆಯ್ತು. ಅದಕ್ಕೆ ನಾನು ಎಲ್ಲಾ ಕಡೆ ಹೋದಾಗಲೂ ಹೇಳಿದ್ದು, ಡಾಲಿಯನ್ನು ಒಂದು ಪಾತ್ರವಾಗಿ ನೋಡಿ ಅಂತ." ಎಂದು ಸಂದರ್ಶನದಲ್ಲಿ ಹೇಳಿದ್ದಾರೆ.

Hoysala Star Dhananjay says that just because he spoke about human values, Head Bush was affected.

"ಹೌದು ನಾನು ವಿಲನ್ ಆಗಿ ಗೆದ್ದಿದ್ದು. ಒಳಗಡೆ ನನಗೆ ನಾನು ಅಲ್ಲಮ ಮಾಡಿದೆ. ಒಳ್ಳೊಳ್ಳೆ ಪಾತ್ರಗಳನ್ನು ಮಾಡಿದೆ. ಯಾರೂ ಫಾಲೋನೂ ಮಾಡಲಿಲ್ಲ. ಯಾರೂ ತಿರುಗಿನೂ ನೋಡಿಲ್ಲ. ನಾನು ಆಕ್ಟರ್ ಅಂತಾನೂ ಪ್ರೋ ಮಾಡಿಕೊಳ್ಳಲು ಆಗಲಿಲ್ಲ. ಡಾಲಿ ಆದ್ಮೇಲೆ ಆಗಿದೆ. ನಾನು ಹೀಗೆ ಮಾಡಿಕೊಂಡು ಹೋಗ್ತೀನಿ ಅಂತ ಮಾಡಿಬಿಡುಬಹುದು. ಅದಾದ್ಮೇಲೆ ಕೆಲವು ಘಟನೆಗಳನ್ನು ನೋಡಿದಾಗ, ನನಗೇ ಅನಿಸಿತು. ಅಷ್ಟು ಪ್ರಭಾವ ಬೀರುವಂತಹ ಕಲಾವಿದ ನಾನು ಆಗಿದ್ದಾಗ, ನಾನು ಜಾಗರೂಕತೆಯಿಂದ ಆಯ್ಕೆ ಮಾಡಿಕೊಳ್ಳಬೇಕು ಅಂತ ಅನಿಸಿತ್ತು." ಎಂದು ಪಾತ್ರಗಳ ಆಯ್ಕೆ ಬಗ್ಗೆ ಮನಬಿಚ್ಚಿ ಮಾತಾಡಿದ್ದಾರೆ.

"ಯಾರನ್ನೂ ಟಾರ್ಗೆಟ್ ಮಾಡಿ ಮಾತಾಡಿಲ್ಲ"

ಸಿನಿಮಾದಲ್ಲಿ ನೆಗೆಟಿವ್ ಪಾತ್ರಕ್ಕೆ ಗೆಲುವು ಸಿಕ್ಕಿತ್ತು. ಆದರೆ, ಸಮಾಜಕ್ಕೆ ಒಳ್ಳೆಯ ಸಂದೇಶವನ್ನೂ ರವಾನೆ ಮಾಡಬೇಕಿತ್ತು. ಸಿನಿಮಾದಿಂದ ಹೊರಗೆ ಧನಂಜಯ್ ಮಾನವೀಯ ಮೌಲ್ಯಗಳ ಬಗ್ಗೆ ಮಾತಾಡೋಕೆ ಶುರು ಮಾಡಿದ್ದರು. ಅದು ಸಿನಿಮಾಗೆ ಎಫೆಕ್ಟ್ ಆಯ್ತು ಅನ್ನೋದು ಡಾಲಿ ಅನಿಸಿಕೆ."ಡಾಲಿಯನ್ನು ತಪ್ಪಾಗಿ ತೆಗೆದುಕೊಳ್ಳಬಾರದು ಅಂತ ದೊಡ್ಡ ದೊಡ್ಡವರ ಹೇಳಿಕೆಗಳನ್ನು ತೆಗೆದುಕೊಂಡು ಮಾನವೀಯ ಮೌಲ್ಯಗಳ ಬಗ್ಗೆನೇ ಮಾತಾಡಿಕೊಂಡು ಬಂದೆ." ಎನ್ನುತ್ತಾರೆ ಧನಂಜಯ್.

"ರತ್ನನ್ ಪ್ರಪಂಚ, ಬಡವ ರಾಸ್ಕಲ್ ಸಿನಿಮಾದಲ್ಲಿ ಅಷ್ಟು ಪಾಠ ಹೇಳಿಸಿದ್ದು ಅದಕ್ಕೇನೆ. ಒಳ್ಳೆಯದನ್ನು ಹೇಳಬೇಕು. ಒಳ್ಳೆಯನ್ನು ಪ್ರೇರೇಪಿಸಬೇಕು ಅಂತ. ಆದರೂ ಉಲ್ಟಾ ಹೊಡೀತಲ್ಲ. ಸಿನಿಮಾ ಹಿಂದೆ ಒಳ್ಳೆಯದನ್ನು ಮಾತಾಡಿಕೊಂಡು ಬಂದರೆ, ಅದು ಸಿನಿಮಾಗೆ ಎಫೆಕ್ಟ್ ಆಯ್ತು. ನಾನು ಒಳ್ಳೆಯದು ಮಾತಾಡಿದೆ ಅಂತ ಹೆಡ್ ಬುಷ್ ಸಮಯದಲ್ಲಿ ಎಫೆಕ್ಟ್ ಆಯ್ತು. ನಾನು ಯಾರನ್ನೂ ಟಾರ್ಗೆಟ್ ಮಾಡಿ ಮಾತಾಡಿರಲಿಲ್ಲ. ಮೌಲ್ಯಗಳ ಬಗ್ಗೆ ಮಾತಾಡಿದ್ದಕ್ಕೆ ಇವನು ಆ ಕಡೆಯವನಾ? ಈ ಕಡೆಯವನಾ ಅಂತ ಸಿನಿಮಾಗೆ ಎಫೆಕ್ಟ್ ಮಾಡಿದ್ರು." ಎಂದು ಸಂದರ್ಶನದಲ್ಲಿ ಡಾಲಿ ಹೇಳಿದ್ದಾರೆ.

More from Filmibeat

English summary
Hoysala Star Dhananjay says that just because he spoke about human values, Head Bush was affected. He also says that the Allama movie was not accepted, but Daali was well received.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X