For Quick Alerts
  ALLOW NOTIFICATIONS  
  For Daily Alerts

  'ಕೆಜಿಎಫ್ 3' ಸಿನಿಮಾಗೆ ಹೃತಿಕ್ ರೋಷನ್ ಎಂಟ್ರಿ? ವಿಜಯ್ ಕಿರಗಂದೂರು ಪ್ರತಿಕ್ರಿಯೆ ಏನು?

  |

  'ಕೆಜಿಎಫ್ 2' ರಿಲೀಸ್‌ಗೂ ಮುನ್ನ ಮಾಡಿದ ಸದ್ದೇ ಒಂದು. 'ಕೆಜಿಎಫ್ 2' ರಿಲೀಸ್ ಬಳಿಕ ಮಾಡಿದ ಸದ್ದೇ ಇನ್ನೊಂದು. ಬಾಕ್ಸಾಫೀಸ್‌ನಲ್ಲಿ 'ಕೆಜಿಎಫ್ ಚಾಪ್ಟರ್ 2' ಸಿನಿಮಾ ಬರೆದು ದಾಖಲೆಗಳನ್ನು ಬಾಲಿವುಡ್ ಇನ್ನೂ ಅರಗಿಸಿಕೊಳ್ಳುತ್ತಿದೆ. ಅಷ್ಟರಲ್ಲೇ 'ಕೆಜಿಎಫ್ ಚಾಪ್ಟರ್ 3' ಬಗ್ಗೆ ಟಾಕ್ ಶುರುವಾಗಿದೆ.

  Recommended Video

  KGF Chapter 3 | ಹೃತಿಕ್ ರೋಷನ್ ಎಂಟ್ರಿ ಬಗ್ಗೆ ವಿಜಯ್ ಕಿರಗಂದೂರು ಪ್ರತಿಕ್ರಿಯೆ | #HrithikRoshan

  'ಕೆಜಿಎಫ್' ಅಭಿಮಾನಿಗಳು ಸಿನಿಮಾ ಮುಗಿಸಿದ್ದಾರೆ. ಇನ್ನೇನು 'ಕೆಜಿಎಫ್ 2' ಸಿನಿಮಾ ಕೂಡ ಥಿಯೇಟರ್‌ನಿಂದ ಒಟಿಟಿಗೆ ಪೂರ್ಣ ಪ್ರಮಾಣದಲ್ಲಿ ಶಿಫ್ಟ್ ಆಗುತ್ತಿದೆ. ಈ ಗ್ಯಾಪ್‌ನಲ್ಲೇ ಮಾಧ್ಯಮಗಳಲ್ಲಿ 'ಕೆಜಿಎಫ್ 3'ನಲ್ಲಿ ಹೃತಿಕ್ ರೋಷನ್ ನಟಿಸುತ್ತಾರೆಂಬ ಸುದ್ದಿ ಹರಿದಾಡಿತ್ತು. 'ಕೆಜಿಎಫ್ 3' ಸಿನಿಮಾದಲ್ಲಿ ಬಾಲಿವುಡ್‌ನ ಹ್ಯಾಂಡ್‌ಸಮ್ ಹಂಕ್ ಹೃತಿಕ್ ರೋಷನ್ ಅಂದಾಗಲೇ ಯಶ್ ಅಭಿಮಾನಿಗಳ ಕಿವಿ ನೆಟ್ಟಗಾಗಿತ್ತು.

  41 ದಿನದಲ್ಲಿ ಇಷ್ಟೊಂದು ಇಳಿಕೆ ಕಂಡೇ ಇಲ್ಲ: 'ಕೆಜಿಎಫ್ 2' ಕಲೆಕ್ಷನ್ ಡ್ರಾಪ್ ಆಗಿದ್ದೇಕೆ?41 ದಿನದಲ್ಲಿ ಇಷ್ಟೊಂದು ಇಳಿಕೆ ಕಂಡೇ ಇಲ್ಲ: 'ಕೆಜಿಎಫ್ 2' ಕಲೆಕ್ಷನ್ ಡ್ರಾಪ್ ಆಗಿದ್ದೇಕೆ?

  ಏಪ್ರಿಲ್ 14ರಂದು ರಿಲೀಸ್ ಆಗಿದ್ದ ಸಿನಿಮಾ 'ಕೆಜಿಎಫ್ 2' ಇನ್ನೇನು 50 ದಿನಗಳನ್ನು ಪೂರೈಸಲಿದೆ. ಈ ಮಧ್ಯೆ 'ಕೆಜಿಎಫ್ 3' ಬಗ್ಗೆ ಚರ್ಚೆ ಆರಂಭ ಆಗಿದೆ. ಜೊತೆಗೆ ಹೃತಿಕ್ ರೋಷನ್‌ಗೆ ನಿರ್ಮಾಪಕರು ಅಪ್ರೋಚ್ ಮಾಡಿದ್ದಾರೆ ಎನ್ನಲಾಗಿತ್ತು. ಈ ಬಗ್ಗೆ ಖಾಸಗಿ ಮಾಧ್ಯಮವೊಂದಕ್ಕೆ 'ಕೆಜಿಎಫ್ 2' ನಿರ್ಮಾಪಕ ವಿಜಯ್ ಕಿರಗಂದೂರು ಪ್ರತಿಕ್ರಿಯೆ ನೀಡಿದ್ದಾರೆ.

  'ಕೆಜಿಎಫ್ 3' ಸಿನಿಮಾದಲ್ಲಿ ಹೃತಿಕ್ ರೋಷನ್

  'ಕೆಜಿಎಫ್ 3' ಸಿನಿಮಾದಲ್ಲಿ ಹೃತಿಕ್ ರೋಷನ್

  ಈ ಹಿಂದೆ ರಾಷ್ಟ್ರೀಯ ಮಾಧ್ಯಮವೊಂದಕ್ಕೆ ವಿಜಯ್ ಕಿರಗಂದೂರು 'ಕೆಜಿಎಫ್ 3' ಆರಂಭದ ಬಗ್ಗೆ ಮಾಹಿತಿ ನೀಡಿದ್ದರು. ಅಲ್ಲಿಂದ 'ಕೆಜಿಎಫ್ ಚಾಪ್ಟರ್ 3' ಯಾವಾಗ ಆರಂಭ? ಪ್ರಶ್ನೆ ಅಭಿಮಾನಿಗಳನ್ನು ಕಾಡುತ್ತಲೇ ಇದೆ. ಇದರ ಜೊತೆನೇ 'ಕೆಜಿಎಫ್ 3'ಯಲ್ಲಿ ಹೃತಿಕ್ ರೋಷನ್ ನಟಿಸುತ್ತಾರೆ ಎಂಬ ಸುದ್ದಿ 'ಕೆಜಿಎಫ್' ಅಭಿಮಾನಿಗಳ ನಿದ್ದೆ ಕೆಡಿಸಿರುವುದಂತೂ ನಿಜ. ಈ ಬಗ್ಗೆ ಏಷ್ಯಾನೆಟ್ ನ್ಯೂಸ್‌ಎಬಲ್‌ಗೆ ವಿಜಯ್ ಕಿರಗಂದೂರು ಪ್ರತಿಕ್ರಿಯೆ ನೀಡಿದ್ದಾರೆ. " ನಾವಿನ್ನೂ ಸ್ಟಾರ್‌ಕಾಸ್ಟ್ ಬಗ್ಗೆ ಏನೂ ನಿರ್ಧಾರ ತೆಗೆದುಕೊಂಡಿಲ್ಲ. ಕೆಜಿಎಫ್ ಫ್ರಾಂಚೈಸಿಗೆ ಯಾರು ಸೇರಿಕೊಳ್ಳತ್ತಾರೆಂಬುದು ಇನ್ನೂ ನಿರ್ಧಾರವಾಗಿಲ್ಲ." ಎಂದು ಹೇಳಿದ್ದಾರೆ.

  'ಕೆಜಿಎಫ್‌ 2'ಗೆ ಟಕ್ಕರ್ ಕೊಡುತ್ತಾ 'ಭೂಲ್ ಭುಲಯ್ಯ 2' ಕಲೆಕ್ಷನ್?'ಕೆಜಿಎಫ್‌ 2'ಗೆ ಟಕ್ಕರ್ ಕೊಡುತ್ತಾ 'ಭೂಲ್ ಭುಲಯ್ಯ 2' ಕಲೆಕ್ಷನ್?

  ಈ ವರ್ಷ ಇಲ್ಲ 'ಕೆಜಿಎಫ್ ಚಾಪ್ಟರ್ 3'

  ಈ ವರ್ಷ ಇಲ್ಲ 'ಕೆಜಿಎಫ್ ಚಾಪ್ಟರ್ 3'

  "ಕೆಜಿಎಫ್ ಚಾಪ್ಟರ್ 3 ಈ ವರ್ಷ ಸೆಟ್ಟೇರುವುದಿಲ್ಲ. ನಮ್ಮ ಬಳಿ ಬೇರೆ ಪ್ಲ್ಯಾನ್ ಇದೆ. ಈ ವೇಳೆ ಪ್ರಶಾಂತ್ ನೀಲ್ 'ಸಲಾರ್' ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಇನ್ನೊಂದು ಕಡೆ ಯಶ್ ಹೊಸ ಸಿನಿಮಾ ಅನೌನ್ಸ್ ಮಾಡಲಿದ್ದಾರೆ. ಇವರಿಬ್ಬರೂ ಒಟ್ಟಿಗೆ ಬಂದ ಸಮಯದಲ್ಲಿ 'ಕೆಜಿಎಫ್ 3' ಕೆಲಸ ಆರಂಭ ಆಗಲಿದೆ. ಸದ್ಯ ನಾವು ಯಾವುದೇ ಸಮಯವನ್ನು ಫಿಕ್ಸ್ ಮಾಡಿಕೊಂಡಿಲ್ಲ." ಎಂದು ವಿಜಯ್ ಕಿರಗಂದೂರು ಪ್ರತಿಕ್ರಿಯೆ ನೀಡಿದ್ದಾರೆ.

  'ಕೆಜಿಎಫ್ 3' ಬಗ್ಗೆ ವಿಜಯ್ ಹಿಂದೆ ಹೇಳಿದ್ದೇನು?

  'ಕೆಜಿಎಫ್ 3' ಬಗ್ಗೆ ವಿಜಯ್ ಹಿಂದೆ ಹೇಳಿದ್ದೇನು?

  ಈ ಹಿಂದೆ ವಿಜಯ್ ಕಿರಗಂದೂರು ರಾಷ್ಟ್ರೀಯ ಮಾಧ್ಯಮಕ್ಕೆ 'ಕೆಜಿಎಫ್ 3' ಇದೇ ವರ್ಷ ರಿಲೀಸ್ ಆಗುತ್ತೆ ಎಂದು ಹೇಳಿದ್ದರು. ಅಕ್ಟೋಬರ್‌ನಲ್ಲಿ 'ಸಲಾರ್' ರಿಲೀಸ್ ಆಗುತ್ತೆ. ಆ ಬಳಿಕ 'ಕೆಜಿಎಫ್ 3' ಕೆಲಸ ಆರಂಭ ಆಗುತ್ತೆ ಎಂದು ಹೇಳಿದ್ದರು. ಬಳಿಕ 'ಕೆಜಿಎಫ್ 2' ಕಾರ್ಯಕಾರಿ ನಿರ್ಮಾಪಕ ಕಾರ್ತಿಕ್ ಗೌಡ ಅಂತಹ ಆಲೋಚನೆ ಇಲ್ಲವೆಂದು ಹೇಳಿದ್ದರು. ಈ ಗೊಂದಲದಲ್ಲಿಯೇ ವಿಜಯ್ ಕಿರಗಂದೂರು ಹೃತಿಕ್ ರೋಷನ್ ಸೇರ್ಪಡೆ ಬಗ್ಗೆ ಕ್ಲಾರಿಟಿ ಕೊಟ್ಟಿದ್ದಾರೆ.

  40ನೇ ದಿನವೂ ಜಗ್ಗಲಿಲ್ಲ 'ಕೆಜಿಎಫ್ 2' ಕಲೆಕ್ಷನ್: 'ಭೂಲ್ ಭೂಲಯ್ಯ 2' ಲೆಕ್ಕಕ್ಕಿಲ್ಲ!40ನೇ ದಿನವೂ ಜಗ್ಗಲಿಲ್ಲ 'ಕೆಜಿಎಫ್ 2' ಕಲೆಕ್ಷನ್: 'ಭೂಲ್ ಭೂಲಯ್ಯ 2' ಲೆಕ್ಕಕ್ಕಿಲ್ಲ!

  ಕೆಲವೇ ದಿನಗಳಲ್ಲಿ ಬಾಲಿವುಡ್ ಸಿನಿಮಾ

  ಕೆಲವೇ ದಿನಗಳಲ್ಲಿ ಬಾಲಿವುಡ್ ಸಿನಿಮಾ

  'ಕೆಜಿಎಫ್ 2' ಅತೀ ದೊಡ್ಡ ಯಶಸ್ಸಿನ ಬಳಿಕ ಹೊಂಬಾಳೆ ಫಿಲ್ಮ್ಸ್ ಬಗ್ಗೆ ಎಲ್ಲಾ ಚಿತ್ರರಂಗಕ್ಕೂ ಚಿರಪರಿಚಿತವಾಗಿದೆ. ಹೀಗಾಗಿ ಇನ್ನು ಕೆಲವೇ ತಿಂಗಳಲ್ಲಿ ಬಾಲಿವುಡ್ ಸಿನಿಮಾವನ್ನೂ ಲಾಂಚ್ ಮಾಡುವ ಸಾಧ್ಯತೆಯಿದೆ ಎನ್ನಲಾಗಿದೆ. ಅಲ್ಲಿನ ಪ್ರೊಡಕ್ಷನ್ ಹೌಸ್ ಜೊತೆ ಮಾತುಕತೆ ನಡೆಯುತ್ತಿದ್ದು, ಶೀಘ್ರದಲ್ಲಿಯೇ ಹೊಂಬಾಳೆ ಫಿಲ್ಮ್ಸ್ ಅನೌನ್ಸ್ ಮಾಡಲಿದೆ ಎನ್ನಲಾಗುತ್ತಿದೆ.

  English summary
  Hrithik Roshan Will Be Part Of Yash Starrer KGF Chapter 3 Producer Vijay Kiragandur Reaction, Know More.
  Wednesday, May 25, 2022, 16:03
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X