ಕನ್ನಡ, ತೆಲುಗಿನಲ್ಲಿ ಮಿಂಚುತ್ತಿರುವ ನಟಿ ಹೃತಿಕಾ ಶ್ರೀನಿವಾಸ್ ಯಾರು? ಈಕೆಯ ಹೊಸ ಸಿನಿಮಾ ಬಗ್ಗೆ ನಿಮಗೆ ಗೊತ್ತೇ?

ಕನ್ನಡ ಚಿತ್ರರಂಗಕ್ಕೆ ಪ್ರತಿ ದಿನ ಒಬ್ಬರಲ್ಲ ಒಬ್ಬ ಹೊಸ ಮುಖದ ಪರಿಚಯ ಆಗುತ್ತಲೇ ಇರುತ್ತೆ. ಹೊಸ ನಾಯಕಿಯರು ಚಿತ್ರರಂಗಕ್ಕೆ ಎಂಟ್ರಿ ಕೊಡುತ್ತಿರುತ್ತಾರೆ. ಇವರಲ್ಲಿ ಕೆಲವರಿಗೆ ಅದೃಷ್ಟ ಕೈ ಹಿಡಿಯುತ್ತೆ. ಮತ್ತೆ ಕೆಲವರನ್ನು ಸಿನಿಮಾರಂಗ ದೂರ ಮಾಡುತ್ತೆ. ಇವರ ಮಧ್ಯೆ ಇನ್ನು ಕೆಲವು ಪ್ರತಿಭೆಗಳು ಸೈಲೆಂಟ್ ಆಗಿ ಸಿನಿಮಾರಂಗದಲ್ಲಿ ಒಂದೊಂದೇ ಮೆಟ್ಟಿಲು ಏರಿತ್ತಾ ಗುರಿಯತ್ತ ತಲುಪಿಬಿಡುತ್ತಾರೆ.

ಹೀಗೆ ಒಂದೊಂದು ಮೆಟ್ಟಿಲೇರಿ ಚಿತ್ರರಂಗದಲ್ಲಿ ಸ್ಥಾನ ಗಿಟ್ಟಿಸಿಕೊಂಡಿರುವ ನಟಿ ಹೃತಿಕಾ ಶ್ರೀನಿವಾಸ್. ಈ ನಟಿಯ ಹೊಸ ಸಿನಿಮಾವೊಂದು ಅನೌನ್ಸ್ ಆಗಿದೆ. ಅದುವೇ 'ಜಾಕಿ 42'. ಇತ್ತೀಚೆಗೆ ಬಾರಿ ಜನಪ್ರಿಯತೆ ಪಡೆದುಕೊಂಡಿರುವ ಜೀ ಕನ್ನಡದ 'ಕರ್ಣ' ಧಾರಾವಾಹಿಯ ಹೀರೋ ಕಿರಣ್ ರಾಜ್ ಈ 'ಜಾಕಿ 42 ರ ನಾಯಕಿ. ಇದೇ ಸಿನಿಮಾಗೆ ಹೃತಿಕಾ ಶ್ರೀನಿವಾಸ್ ನಾಯಕಿಯಾಗಿ ನಟಿಸುತ್ತಿದ್ದಾರೆ. ಹಾಗಂತ ಇದು ಇವರ ಮೊದಲ ಸಿನಿಮಾವೇನಲ್ಲ.

Hritika Srinivas became film makers favorite actress starring in Karna fame Kiran Raj movie Jackie 42

ಹೃತಿಕಾ ಶ್ರೀನಿವಾಸ್ ಕೇವಲ ಕನ್ನಡದಲ್ಲಿ ಅಷ್ಟೇ ಅಲ್ಲ ತೆಲುಗು ಸಿನಿಮಾಗಳಲ್ಲಿಯೂ ನಟಿಸುತ್ತಿದ್ದಾರೆ. ಅಪ್ಪಟ ಬೆಂಗಳೂರಿನ ಹುಡುಗೀಗ ಕನ್ನಡದ ಫಿಲ್ಮ್‌ ಮೇಕರ್‌ಗಳು ಫಿದಾ ಆಗಿದ್ದಾರೆ. ಈಗಾಗಲೇ ಕನ್ನಡದಲ್ಲಿ ಮೂರು ನಾಲ್ಕು ಪ್ರಾಜೆಕ್ಟ್‌ಗಳನ್ನು ಮಾಡಿದ್ದಾರೆ. ಈಗ ಆ ಸಾಲಿಗೆ ಹೊಸ ಸಿನಿಮಾದ 'ಜಾಕಿ 42' ಸೇರಿಕೊಂಡಿದೆ. ಹಾಗಿದ್ದರೆ, ನಟಿ ಹೃತಿಕಾ ಶ್ರೀನಿವಾಸ್ ಯಾರು? ಅವರ ಕೈಯಲ್ಲಿರುವ ಸಿನಿಮಾಗಳ್ಯಾವುವು? ಚಿತ್ರರಂಗಕ್ಕೆ ಈ ನಟಿಯನ್ನು ಪರಿಚಯಿಸಿದ ನಿರ್ದೇಶಕ ಯಾರು? ತಿಳಿಯುವುದಕ್ಕೆ ಮುಂದೆ ಓದಿ.

ಹೌದು, ಧಾರಾವಾಹಿಗಳಲ್ಲಿ ನಟಿಸಿದ ಬಳಿಕ ಕಿರಣ್ ರಾಜ್ ಸಿನಿಮಾಗಳ ಕಡೆಗೆ ವಾಲಿದ್ದರು. ಬ್ಯಾಕ್ ಟು ಬ್ಯಾಕ್ ಸಿನಿಮಾಗಳನ್ನು ಮಾಡಡುತ್ತಿದ್ದರು. ಆದ್ರೀಗ ಮತ್ತೆ 'ಕರ್ಣ' ಧಾರಾವಾಹಿಯ ಮೂಲಕ ಕಿರುತೆರೆಗೆ ಎಂಟ್ರಿ ಕೊಟ್ಟಿದ್ದಾರೆ. ಸೀರಿಯಲ್ ಜೊತೆ ಜೊತೆಗೆ ಸಿನಿಮಾದಲ್ಲೂ ನಟಿಸುತ್ತಿದ್ದಾರೆ. ಅದುವೇ 'ಜಾಕಿ 42'. ಈ ಸಿನಿಮಾದಲ್ಲಿ ಹೃತಿಕಾ ಶ್ರೀನಿವಾಸ್ ನಾಯಕಿಯಾಗಿ ನಟಿಸುತ್ತಿದ್ದಾರೆ. ಮಾಡರ್ನ್ ಹಾಗೂ ಹೋಮ್ಲಿ ಎರಡು ಶೇಡ್ ಇರುವಂತಹ ಪಾತ್ರದಲ್ಲಿ ನಟಿಸುತ್ತಿದ್ದಾರೆ.

ಹಾಗಂತ ಹೃತಿಕಾ ಶ್ರೀನಿವಾಸ್ ಅವರಿಗೆ ಇದೇ ಮೊದಲನೇ ಸಿನಿಮಾ ಅಲ್ಲ. ಈ ಹಿಂದೆ ಕನ್ನಡದ ಕೆಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. ಆದರೆ, ಆ ಸಿನಿಮಾಗಳು ಬಾಕ್ಸಾಫೀಸ್‌ನಲ್ಲಿ ದೊಡ್ಡ ಸಕ್ಸಸ್ ಕಂಡಿವೆ. ಯೋಗರಾಜ್ ಭಟ್ ಹಾಗೂ ರವಿ ಶಾಮನೂರು ಜಂಟಿಯಾಗಿ ನಿರ್ಮಿಸಿದ್ದ ಸಿನಿಮಾ 'ಉಡಾಳ'ದಲ್ಲಿ ನಾಯಕಿಯಾಗಿ ನಟಿಸಿದ್ದಾರೆ. ಇದರೊಂದಿಗೆ ತೆಲುಗು ಸಿನಿಮಾಗಳಲ್ಲಿ ನಟಿಸಿದ್ದಾರೆ.

Hritika Srinivas became film makers favorite actress starring in Karna fame Kiran Raj movie Jackie 42

ಅಂದ್ಹಾಗೆ, ಹೃತಿಕಾ ಶ್ರೀನಿವಾಸ್ ಅವರನ್ನು ಚಿತ್ರರಂಗಕ್ಕೆ ಪರಿಚಯಿಸಿದ್ದು ನಿರ್ದೇಶಕ ಮಹೇಶ್ ಬಾಬು. 2019ರಲ್ಲಿ ಈ ನಟಿಯನ್ನು ಅವರೇ ನಿರ್ದೇಶಿಸುತ್ತಿದ್ದ ಸಿನಿಮಾವೊಂದಕ್ಕಾಗಿ ಸೆಲೆಕ್ಟ್ ಆಗಿದ್ದರು. ಬಳಿಕ ಸೈಲೆಂಟ್‌ ಆಗಿ ಒಂದೊಂದೇ ಸಿನಿಮಾಗಳನ್ನು ಮಾಡುವುದಕ್ಕೆ ಶುರು ಮಾಡಿದ್ದರು. ಈ ಗ್ಯಾಪ್‌ನಲ್ಲಿ ಈ ಕನ್ನಡದ ನಟಿ ತೆಲುಗು ಸಿನಿಮಾಗಳಲ್ಲಿ ನಟಿಸಿ ಬಂದಿದ್ದರು. ಈಗ ಮತ್ತೊಂದು ಕನ್ನಡ ಸಿನಿಮಾ 'ಜಾಕಿ 42'ನಲ್ಲಿ ನಟಿಸುತ್ತಿದ್ದಾರೆ.

ಡಾ. ವಿಷ್ಣುವರ್ಧನ್ ನಟಿಸಿದ್ದ 'ಅಪ್ಪಾಜಿ' ಸಿನಿಮಾದ ನಾಯಕಿ ಆಮಿನಿಯವರ ಅಣ್ಣನ ಮಗಳು ಎಂದು ವರದಿಯಾಗಿದೆ. ಹೃತಿಕಾ ಶ್ರೀನಿವಾಸ್ ಅಪ್ಪಟ ಬೆಂಗಳೂರಿನ ಹುಡುಗಿಯಾಗಿದ್ದು, ಟ್ರೆಡಿಷನಲ್ ಹಾಗೂ ಗ್ಲಾಮರ್ ರೋಲ್‌ಗಳಿಗೆ ಸೂಟ್ ಆಗುತ್ತಾರೆ. ಒಟ್ಟನಲ್ಲಿ ಹೃತಿಕಾ ಶ್ರೀನಿವಾಸ್ ಒಂದೊಂದೇ ಸಿನಿಮಾಗಳನ್ನು ಒಪ್ಪಿಕೊಂಡಿದ್ದು, ಇದನ್ನೇ ಪ್ರೊಫೆಷನ್ ಆಗಿ ಮಾಡಿಕೊಂಡಿದ್ದಾರೆ.

More from Filmibeat

English summary
Hritika Srinivas became film makers favorite actress starring in Karna fame Kiran Raj movie Jackie 42.
Read more about: actress sandalwood kannada movie
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X