ಹೀಗಾಗಿದ್ರು.. ಮತ್ತೆ ಸಹಜ ಸ್ಥಿತಿಗೆ ಮರಳಿದ ಕಿಚ್ಚನ ನಾಯಕಿ; ಕನ್ನಡಕ್ಕೆ ಕಮ್ ಬ್ಯಾಕ್ ಮಾಡ್ತಾರಾ ರೇಖಾ?

ಒಂದು ಕಾಲದಲ್ಲಿ ಸ್ಯಾಂಡಲ್‌ವುಡ್‌ನಲ್ಲಿ ಮಿಂಚಿದ ನಟಿ ರೇಖಾ. 2001 ರಿಂದ 2014ರವರೆಗೂ ರೇಖಾ ಚಿತ್ರರಂಗದಲ್ಲಿ ಆಕ್ಟಿವ್ ಆಗಿದ್ದರು. ಅದರಲ್ಲೂ ಆರಂಭದ ದಿನಗಳಲ್ಲಿ ಈ ನಟಿಗೆ ಸಿಕ್ಕಾಪಟ್ಟೆ ಯಶಸ್ಸು ಸಿಕ್ಕಿತ್ತು. ಕಿಚ್ಚ ಸುದೀಪ್ ನಟಿಸಿದ 2ನೇ ಸಿನಿಮಾ 'ಹುಚ್ಚ' ಸಿಕ್ಕಾಪಟ್ಟೆ ಯಶಸ್ಸು ತಂದು ಕೊಟ್ಟಿತ್ತು. ಅಪ್ಪಟ ಟ್ರೆಡಿಷನಲ್ ಲುಕ್‌ನಲ್ಲಿ ಮಿಂಚಿದ್ದರು. ಇಂದಿಗೂ ರೇಖಾರನ್ನು ಈ ಪಾತ್ರದಿಂದಲೇ ಗುರುತಿಸುತ್ತಾರೆ.

ಇವರ ಕರಿಯರ್‌ಗೆ ಮತ್ತೊಂದು ದೊಡ್ಡ ಹಿಟ್ ಕೊಟ್ಟ ಸಿನಿಮಾ 'ಚಿತ್ರ'. ಈ ಸಿನಿಮಾದಲ್ಲಿ ರೇಖಾ ಗ್ಲಾಮರ್ ಲುಕ್‌ನಲ್ಲಿ ಕಾಣಿಸಿಕೊಂಡಿದ್ದರು. ಎರಡೂ ಸಿನಿಮಾಗಳಲ್ಲೂ ರೇಖಾರನ್ನು ಪ್ರೇಕ್ಷಕರು ಗುರುತಿಸಿದ್ದರು. ಕನ್ನಡದಲ್ಲಿ ಎರಡು ಬ್ಯಾಕ್ ಟು ಬ್ಯಾಕ್ ಹಿಟ್ ಸಿನಿಮಾಗಳನ್ನು ಕೊಡುತ್ತಿದ್ದಂತೆ ತೆಲುಗು ಮಂದಿ ಆಫರ್ ಕೊಟ್ಟರು. ಕನ್ನಡದಿಂದ ಅಲ್ಲಿಗೂ ಹೋಗಿ ಗೆಲುವು ಕಂಡರು. ಅಲ್ಲಿ 'ಆನಂದಂ', 'ಜಬಿಲಿ' ಅನ್ನೋ ಸಿನಿಮಾಗಳಲ್ಲಿ ನಟಿಸಿ ತೆಲುಗು ಮಂದಿಯ ಗಮನ ಸೆಳೆದಿದ್ದರು.

Huchcha Actress Rekha Vedavyas looks fine after health issue will she comeback to Films

ಇಲ್ಲಿಂದ ಒಂದಿಷ್ಟು ದಿನ ತೆಲುಗು, ತಮಿಳು ಅಂತ ಅಲ್ಲಿಯ ಸಿನಿಮಾಗಳಲ್ಲಿಯೇ ಬ್ಯುಸಿಯಾಗಿ ಬಿಟ್ಟರು. ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ನಟಿಸಿದರು. ಮತ್ತೆ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ರೇಖಾ ಸಾಕಷ್ಟು ಸಿನಿಮಾಗಳಲ್ಲಿ ನಟಿಸಿದರು. ಆದರೆ, ದಕ್ಷಿಣ ಭಾರತದಲ್ಲಿ ಫೇಮಸ್ ಆಗುತ್ತಿದ್ದಂತೆ ಬಾಲಿವುಡ್‌ ಕಡೆಗೆ ಒಲವು ಬೆಳೆಸಿಕೊಂಡಿದ್ದರು. ಹೀಗಾಗಿ ಮುಂಬೈನಲ್ಲಿ ನೆಲೆಸಿದ್ದರು. 2014ರಿಂದ ಅಕ್ಷರಶ: ರೇಖಾ ಕಣ್ಮರೆಯಾಗಿಬಿಟ್ಟರು.

ರೇಖಾ ನೆನಪಿಸಿಕೊಂಡು ಅವರ ಅಭಿಮಾನಿಗಳು ತಲೆ ಕೆಡಿಸಿಕೊಂಡಿದಷ್ಟೇ ಬಂತು. ಅವರು ಎಲ್ಲಿದ್ದಾರೆ? ಏನ್ಮಾಡ್ತಿದ್ದಾರೆ? ಯಾಕೆ ಸಿನಿಮಾದಲ್ಲಿ ನಟಿಸುತ್ತಿಲ್ಲ? ಅನ್ನೋ ಗೊಂದಲಕ್ಕೆ ಬಿದ್ದಿದ್ದರು. ಹೀಗೆ ಒಂದಿಷ್ಟು ವರ್ಷ ಕಳೆದು ಹೋಯ್ತು. ನಿಧಾನವಾಗಿ ಅಭಿಮಾನಿಗಳು ಕೂಡ ರೇಖಾರನ್ನು ಮರೆತು ಬಿಟ್ಟಿದ್ದರು. ಆದರೆ, ಒಂದು ದಿನ ತೆಲುಗು ರಿಯಾಲಿಟಿ ಶೋನ ವೇದಿಕೆ ಮೇಲೆ ರೇಖಾರನ್ನು ನೋಡಿ ಸಿನಿಪ್ರಿಯರ ಶಾಕ್ ಆಗಿದ್ದರು.

Huchcha Actress Rekha Vedavyas looks fine after health issue will she comeback to Films

ಇವರೇನಾ 'ಹುಚ್ಚ' ಸಿನಿಮಾದಲ್ಲಿ ನಟಿಸಿದ್ದ ನಟಿ ಅನ್ನೋ ಅನುಮಾನ ಮೂಡಿತ್ತು. ಅವರ ಆರೋಗ್ಯದಲ್ಲಿ ವ್ಯತ್ಯಾಸ ಆಗಿ ರೇಖಾ ಗುರುತೇ ಸಿಗದಂತೆ ಆಗಿದ್ದರು. ತೀರಾ ತೆಳ್ಳಗಾಗಿದ್ದ ಅವರನ್ನು ನೋಡಿ ಸಿನಿ ಮಂದಿ ಆತಂಕ ವ್ಯಕ್ತಪಡಿಸಿದ್ದರು. ಆ ತೆಲುಗಿನ ವೇದಿಕೆ ಮೇಲೆ ತಮ್ಮ ಆರೋಗ್ಯದ ಬಗ್ಗೆ ಚಿಕ್ಕ ಸುಳಿವು ಬಿಟ್ಟುಕೊಟ್ಟರೂ ಸಮಸ್ಯೆ ಏನು ಅನ್ನೋದು ಹೇಳಿಕೊಂಡಿರಲಿಲ್ಲ. ಆದ್ರೀಗ ರೇಖಾ ಸಂಪೂರ್ಣವಾಗಿ ಗುಣಮುಖರಾಗಿದ್ದಾರೆ. ಮೊದಲಿನಂತೆ ಸಹಜ ಸ್ಥಿತಿಗೆ ಮರಳಿದ್ದಾರೆ.

ಇತ್ತೀಚೆಗೆ ಕಲರ್ಸ್ ಕನ್ನಡದ 'ಅನುಬಂಧ ಅವಾರ್ಡ್ಸ್' ಕಾರ್ಯಕ್ರಮದಲ್ಲಿ ಅತಿಥಿಯಾಗಿ ಕಾಣಿಸಿಕೊಂಡಿದ್ದರು. ಆಗ ರೇಖಾರನ್ನು ನೋಡಿ ಫ್ಯಾನ್ಸ್ ಖುಷಿ ಪಟ್ಟಿದ್ದಾರೆ. ಮತ್ತೆ ಕನ್ನಡ ಸಿನಿಮಾಗಳಲ್ಲಿ ನಟಿಸಬೇಕು ಅನ್ನೋ ಆಸೆ ವ್ಯಕ್ತಪಡಿಸಿದ್ದಾರೆ. ರೇಖಾ ಮತ್ತೆ ಕನ್ನಡ ಸಿನಿಮಾಗಳಲ್ಲಿ ನಟಿಸುತ್ತಾರೋ ಇಲ್ವೋ? ಆದರೆ, ಅವರು ಗುಣಮುಖರಾಗಿದ್ದನ್ನು ಕಂಡು ಫ್ಯಾನ್ಸ್ ಖುಷಿಯಾಗಿದ್ದಾರೆ.

ನಟಿ ರೇಖಾ ಸೋಶಿಯಲ್ ಮೀಡಿಯಾದಲ್ಲೂ ಆಕ್ಟಿವ್ ಆಗಿದ್ದಾರೆ. ಇನ್‌ಸ್ಟಾಗ್ರಾಂನಲ್ಲಿ ತಮ್ಮ ಫೋಟೊಗಳು ಹಾಗೂ ವಿಡಿಯೋಗಳನ್ನು ಶೇರ್ ಮಾಡುತ್ತಲೇ ಇರುತ್ತಾರೆ. ಹೀಗಾಗಿ ಶೀಘ್ರದಲ್ಲಿಯೇ ಯಾವುದಾರೂ ಸಿನಿಮಾಗಳಲ್ಲಿ ಕಾಣಿಸಿಕೊಂಡರೂ ಅಚ್ಚರಿಯಿಲ್ಲ. ಎಲ್ಲಾ ಸರಿಯಾಗಿ ನಡೆಯುತ್ತಿದ್ದ ಇವರ ಲೈಫ್‌ನಲ್ಲಿ ಆರೋಗ್ಯ ಸಮಸ್ಯೆ ಕೆಲವು ವರ್ಷಗಳ ಕಾಲ ಕಣ್ಮರೆಯಾಗುವಂತೆ ಮಾಡಿತ್ತು.

More from Filmibeat

English summary
Huchcha Actress Rekha Vedavyas looks fine after health issue. Will she comeback to Films?
Read more about: rekha huchcha health
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X