"ನಾನು ತಪ್ಪು ಮಾಡಿಬಿಟ್ಟೆ ಅನಿಸುತ್ತಿದೆ": ಮತ್ತೆ ಬಂದ ಹುಚ್ಚ ವೆಂಕಟ್ ಬದಲಾದ್ರಾ?
ಹುಚ್ಚ ವೆಂಕಟ್ ಏನಾದರೂ ಒಂದಲ್ಲ ಒಂದು ವಿವಾದಗಳನ್ನು ಮೈಮೇಲೆ ಎಳೆದುಕೊಳ್ಳುತ್ತಿದ್ದರು. ಏನಾದರೂ ಒಂದು ಅವಾಂತರ ಮಾಡಿಕೊಂಡು ಸುದ್ದಿಯಾಗುತ್ತಿದ್ದರು. ಕೆಲವೊಮ್ಮೆ ಸಾರ್ವಜನಿಕ ಸ್ಥಳದಲ್ಲಿ ಸೀನ್ ಕ್ರಿಯೇಟ್ ಮಾಡುತ್ತಿದ್ದರು. ಹುಚ್ಚ ವೆಂಕಟ್ ರಸ್ತೆಗೆ ಇಳಿದರೆ ಅಲ್ಲೇನೋ ಅವಾಂತರ ಆಗಿದೆ ಅನ್ನೋದು ಗೊತ್ತಾಗಿಬಿಡ್ತಿತ್ತು.
ಆದರೆ, ಕೆಲವು ದಿನಗಳ ಹಿಂದಷ್ಟೇ ಹುಚ್ಚ ವೆಂಕಟ್ ಹಳೆಯ ವಿಡಿಯೋ ವೈರಲ್ ಆಗಿತ್ತು. ಮತ್ತೆ ಹುಚ್ಚ ವೆಂಕಟ್ ಬೀದಿಗೆ ಬಂದಿದ್ದಾರೆ ಅನ್ನೋ ಸುದ್ದಿ ದೊಡ್ಡದಾಗಿತ್ತು. ಬಳಿಕ ಅದು ಹಳೇ ವಿಡಿಯೋ ಅಂತಾನೂ ಸುದ್ದಿಯಾಗಿತ್ತು. ಆದ್ರೀಗ ಮತ್ತೆ ಹುಚ್ಚ ವೆಂಕಟ್ ಪ್ರತ್ಯಕ್ಷ ಆಗಿದ್ದಾರೆ.

ಹುಚ್ಚ ವೆಂಕಟ್ ಸ್ಪೀಡ್ ಪ್ಲಸ್ ಕರ್ನಾಟಕ ಯೂಟ್ಯೂಬ್ ಚಾಲೆನ್‌ನಲ್ಲಿ ಪ್ರತ್ಯಕ್ಷ ಆಗಿದ್ದಾರೆ. ಆದರೆ, ಹುಚ್ಚ ವೆಂಕಟ್ ಈ ಹಿಂದೆ ಕಂಡಿದ್ದಕ್ಕಿಂತಲೂ ವಿಭಿನ್ನವಾಗಿ ಕಂಡಿದ್ದಾರೆ. ಸಾಫ್ಟ್ ಲುಕ್‌ನಲ್ಲಿ ವೆಂಕಟ್ ಕಾಣಿಸಿಕೊಂಡಿದ್ದಾರೆ. ಈ ಸಂದರ್ಶನದಲ್ಲಿ ತನ್ನ ಒಂಟಿತನ, ಕೆಲವು ದಿನಗಳ ಹಿಂದೆ ಹರಿದಾಡಿದ ವಿಡಿಯೋ ಬಗ್ಗೆನೂ ಮಾಹಿತಿ ಹಂಚಿಕೊಂಡಿದ್ದಾರೆ. ಹುಚ್ಚ ವೆಂಕಟ್ ಸಂದರ್ಶನದ ಝಲಕ್ ಇಲ್ಲಿದೆ.
"ಹಬ್ಬಿದ್ದೆಲ್ಲ ಸುಳ್ಳು ಸುದ್ದಿ"
ಹುಚ್ಚ ವೆಂಕಟ್ ಮತ್ತೆ ಬೀದಿಗೆ ಬಂದಿದ್ದಾರೆ ಅನ್ನೋ ವಿಡಿಯೋ ಕೆಲವು ದಿನಗ ಹಿಂದಷ್ಟೇ ದೊಡ್ಡ ಮಟ್ಟಕ್ಕೆ ಸುದ್ದಿ ಮಾಡಿತ್ತು. ಆ ವಿಷಯದ ಬಗ್ಗೆ ಸ್ಪೀಡ್ ಪ್ಲಸ್ ಕರ್ನಾಟಕ ಯೂಟ್ಯೂಬ್ ಚಾನೆಲ್‌ನಲ್ಲಿ ಮಾತಾಡಿದ್ದಾರೆ. "ಇಲ್ಲ ಅದೆಲ್ಲ ಸುಳ್ಳು. ನನಗೆ ಫೋಟೊಶಾಪ್ ಕೂಡ ಗೊತ್ತು. ಅದನ್ನು ಏನು ಬೇಕಾದರೂ ಮಾಡಬಹುದು. ಅವೆಲ್ಲ ಸುಳ್ಳು ನಾನು ಚೆನ್ನಾಗಿದ್ದೀನಿ. ಅದೇ ಈಗ ನಮ್ಮ ಅಣ್ಣನ ಮನೆ ಆಯ್ತು. ನಮ್ಮ ಅಕ್ಕ ಚಂದ್ರಕ್ಕ ಅಂತ ಇದ್ದಾರೆ. ವಿನಯ್ ವಿದ್ಯಾ ಅಂತ ಅವರ ಮನೆಗೆ ಹೋಗುತ್ತೇನೆ. ಜನರ ಜೊತೆ ಬೆರೆಯುತ್ತಿದ್ದೇನೆ. ಮೊದಲಾದರೆ, ಒಂಟಿಯಾಗಿ ಮನೆಯಲ್ಲೇ ಇರುತ್ತಿದೆ. ಈಗ ಜನ ಬಳಿ ಹೋಗುತ್ತೇನೆ. ಈಗ ಚೆನ್ನಾಗಿದ್ದೇನೆ " ಎಂದು ಹುಚ್ಚ ವೆಂಕಟ್ ಹೇಳಿದ್ದಾರೆ.

"ನಾನು ಚೆನ್ನಾಗಿದ್ದೀನಿ"
ಹುಚ್ಚ ವೆಂಕಟ್ ಆರೋಗ್ಯ ಸರಿಯಿಲ್ಲ ಅನ್ನೋ ಸುದ್ದಿ ಕೂಡ ಓಡಾಡಿತ್ತು. ಆ ಬಗ್ಗೆನೂ ಹುಚ್ಚ ವೆಂಕಟ್ ಮಾತಾಡಿದ್ದಾರೆ. "ಆರೋಗ್ಯ ಚೆನ್ನಾಗಿದೆ. ಅದಕ್ಕೂ ಕಾರಣ ನೀವೇನೆ. ಯಾಕಂದ್ರೆ, ನಾನು ಆರೋಗ್ಯ ಕೆಡಿಸಿಕೊಳ್ಳುವುದಕ್ಕೆ ಬಿಡುವುದಿಲ್ಲ. ನೀವು ಏನಾದರೂ ಹೇಳುತ್ತೀರ. ಆ ಮೇಲೆ ಅದರ ಬಗ್ಗೆ ತಲೆಕೆಡಿಸಿಕೊಂಡು ಆಲೋಚನೆ ಮಾಡುತ್ತೇನೆ. " ಎಂದಿದ್ದಾರೆ.
"ನಾನು ದುಡ್ಡಿಂದ ನಾನು ಫೇಮಸ್ ಆಗಿಲ್ಲ"
ಹುಚ್ಚ ವೆಂಕಟ್ ಈ ಹಿಂದೆ ನಡೆದುಕೊಂಡಿದಕ್ಕೆ ಪಶ್ಚಾತಾಪ ಪಟ್ಟಿದ್ದಾರೆ. ಹಿಂದೆ ಒಂಟಿಯಾಗಿದ್ದೆ. ಜನರ ಜೊತೆ ಬೆರೆತಿಲ್ಲ. ನಾನು ತಪ್ಪು ಮಾಡಿಬಿಟ್ಟೆ ಎಂದು ಹೇಳಿಕೊಂಡಿದ್ದಾರೆ. "ನಾನು ದುಡ್ಡಿಂದ ನಾನು ಫೇಮಸ್ ಆಗಿಲ್ಲ. ಜನರ ಪ್ರೀತಿಯಿಂದ ಆಗಿದ್ದು. ನಾನು ಮೊದಲು ಮನೆಯಿಂದ ಆಚೆಗೆ ಹೋಗುತ್ತಿರಲಿಲ್ಲ. ಕೆಲಸವಿದ್ದರೆ ಆಚೆ. ಇಲ್ಲ ಅಂದರೆ ಇಲ್ಲ. ಈಗ ನಾನು ಎಲ್ಲರ ಜೊತೆ ಆಚೆ ಹೋಗಿ ಜನರು ಮಾತಾಡಿಸಿದಾಗ ಮಾತಾಡುತ್ತೇನೆ. ಆ ಖುಷಿಯನ್ನು ನಾನು ಈಗ ನೋಡುತ್ತಿದ್ದೇನೆ. ಮೊದಲು ನಾನು ತಪ್ಪು ಮಾಡಿಬಿಟ್ಟೆ ಅನಿಸುತ್ತಿದೆ. ಈಗ ಒಂಟಿ ತನ ಹೋಗಿ, ಜನರ ಜೊತೆ ಬೆರೆಯುತ್ತಿದ್ದೇನೆ." ಎಂದು ಹುಚ್ಚ ವೆಂಕಟ್ ಹೇಳಿದ್ದಾರೆ.
ಅಪ್ಪ-ಅಮ್ಮನ ನೆನೆದು ಭಾವುಕ
ಹುಚ್ಚ ವೆಂಕಟ್ ತಂದೆ ಕಳೆದ ಒಂದೂವರೆ ವರ್ಷದ ಹಿಂದಷ್ಟೇ ನಿಧನರಾಗಿದ್ದಾರೆ. ತಾಯಿ 2010ರಲ್ಲಿ ಇಹಲೋಕ ತ್ಯಜಿಸಿದ್ದರು. ಇದನ್ನು ನೆನಪಿಸಿಕೊಂಡು ಕೆಲವು ಕ್ಷಣ ಭಾವುಕರಾಗಿದ್ದಾರೆ. "ನಾನು ಸ್ಕೂಲ್ ಟೈಮ್‌ನಲ್ಲಿಯೇ ಯೋಚನೆ ಮಾಡುತ್ತಿದ್ದೆ. ಯಾಕೆ ಅಪ್ಪ ಅಮ್ಮನ ಬಗ್ಗೆ ಒಂದು ಸಬ್ಜೆಕ್ಟ್ ಇಡುವುದಿಲ್ಲ ಅಂತ. ಯಾಕೆ ಟೀಚರ್‌ಗಳು ಅಪ್ಪ ಅಮ್ಮನ ಬಗ್ಗೆ ಹೇಳುವುದಿಲ್ಲ ಅನಿಸುತ್ತೆ. ಅದಕ್ಕೆ ಒಂದು ಸಬ್ಜೆಕ್ಟ್ ಮಾಡಿದ್ದರೆ, ಅದ ವಾಲ್ಯೂ ಎಷ್ಟು ಇರುತ್ತೆ ಅಲ್ವಾ?" ಎಂದು ವೆಂಕಟ್ ಹೇಳಿದ್ದಾರೆ.


Click it and Unblock the Notifications











