ಯಶ್ 'ಟಾಕ್ಸಿಕ್' ಬಗ್ಗೆ ನಟಿ ಹುಮಾ ಖುರೇಷಿ ಬಿಗ್ ಸ್ಟೇಟ್‌ಮೆಂಟ್: 8 ನಿಮಿಷದ ಝಲಕ್ ನೋಡಿ ಏನಂದ್ರು?

ಭಾರತೀಯ ಚಿತ್ರರಂಗದಲ್ಲಿ ಎಲ್ಲರ ಕಣ್ಣು 'ಟಾಕ್ಸಿಕ್' ಮೇಲಿದೆ. 'ಕೆಜಿಎಫ್ 2' ಅಂತ ಮೆಗಾ ಬ್ಲಾಕ್‌ಬಸ್ಟರ್ ಸಿನಿಮಾ ನೀಡಿದ ಬಳಿಕ ರಾಕಿಂಗ್ ಸ್ಟಾರ್ ಸಿನಿಮಾಗಾಗಿ ಇಡೀ ಚಿತ್ರರಂಗವೇ ಎದುರು ನೋಡುತ್ತಿದೆ. ಆದರೆ, ಎರಡು ಬಾರಿ ಸಿನಿಮಾ ರಿಲೀಸ್ ಡೇಟ್ ಮುಂದಕ್ಕೆ ಹೋಗಿದ್ದರಿಂದ ಗುಸು ಗುಸುಗಳು ಶುರುವಾಗಿದ್ದವು. ಕೊನೆಗೂ ಈಗ ಹೊಸ ರಿಲೀಸ್ ಡೇಟ್ ಅನ್ನು ಅನೌನ್ಸ್ ಮಾಡಲಾಗಿದೆ. ಆಗಸ್ಟ್ 26ಕ್ಕೆ ಸಿನಿಮಾ ವಿಶ್ವದಾದ್ಯಂತ ಗ್ರ್ಯಾಂಡ್ ಆಗಿ ರಿಲೀಸ್ ಆಗಲಿದೆ.

'ಟಾಕ್ಸಿಕ್' (Toxic: A Fairy Tale for Grown-ups) ಈ ವರ್ಷದ ಮೋಸ್ಟ್‌ ಎಕ್ಸ್‌ಪೆಕ್ಟೆಡ್ ಸಿನಿಮಾಗಳಲ್ಲಿ ಒಂದು. ಈಗಾಗಲೇ ಪರೋಕ್ಷವಾಗಿ ಸಿನಿಮಾ ರಿಲೀಸ್‌ಗೆ ಸಿದ್ಧತೆಗಳು ನಡೆಯುತ್ತಿದ್ದು, ದಿನದಿಂದ ದಿನಕ್ಕೆ ಭಾರಿ ಕುತೂಹಲ ಮೂಡಿಸುತ್ತಿದೆ. ಇತ್ತೀಚೆಗೆ ಈ ಸಿನಿಮಾದಲ್ಲಿ ನಟಿಸಿರುವ ಬಾಲಿವುಡ್‌ನ ಖ್ಯಾತ ನಟಿ ಹುಮಾ ಖುರೇಷಿ ಕೊಟ್ಟಿರುವ ಹೇಳಿಕೆ ಸಿನಿಮಾ ಮಂದಿಗೆ ಮತ್ತೆ ಹೊಸ ಹುರುಷು ಕೊಟ್ಟಿದೆ.

Huma Qureshi says she saw 8-9 minute cut of Toxic which massively impressed her

ಹುಮಾ ಖುರೇಶಿ ಸಿನಿಮಾದಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದು, 'ಟಾಕ್ಸಿಕ್' ಬಗ್ಗೆ ಕೊಟ್ಟಿರುವ ಹೇಳಿಕೆ ವೈರಲ್ ಆಗುತ್ತಿದೆ. ಎಬಿಪಿಗೆ ನೀಡಿದ ಸಂದರ್ಶನದಲ್ಲಿ ತಾನು ಯಶ್ ಅವರ ಅತೀ ದೊಡ್ಡ ಅಭಿಮಾನಿ ಎಂದು ಹುಮಾ ಖುರೇಶಿ ಹೇಳಿಕೊಂಡಿದ್ದಾರೆ. ಅಲ್ಲದೇ ಸಿನಿಮಾ ತುಣುಕುಗಳನ್ನು ನೀಡಿದ್ದೇನೆ ಎಂದೂ ಹೇಳಿದ್ದಾರೆ. ಇದು 'ಟಾಕ್ಸಿಕ್' ಅಭಿಮಾನಿಗಳ ಕುತೂಹಲವನ್ನು ದುಪ್ಪಟ್ಟು ಮಾಡಿದೆ.

ಯಶ್ ಮೇಲೆ ಅಭಿಮಾನ ದುಪ್ಪಟ್ಟಾಯ್ತು

ಬಾಲಿವುಡ್‌ ನಟಿ ಹುಮಾ ಖುರೇಷಿ ಸಂದರ್ಶನದಲ್ಲಿ 'ಟಾಕ್ಸಿಕ್' ಬಗ್ಗೆ ಕೊಟ್ಟ ಹೇಳಿಕೆಗಳು ವೈರಲ್ ಆಗುತ್ತಿವೆ. ಅದರಲ್ಲೂ ಈ ಸಿನಿಮಾದಲ್ಲಿ ಕೆಲಸ ಮಾಡಿದ ಬಳಿಕ ಯಶ್ ಅವರ ದೊಡ್ಡ ಅಭಿಮಾನಿಯಾದ ಅಂದಿದ್ದು ವೈರಲ್ ಆಗುತ್ತಿದೆ. "ನಾನು ಮೊದಲಿನಿಂದಲೂ ನಟ ಯಶ್ ಅವರ ಅಭಿಮಾನಿಯಾಗಿದ್ದೆ. ಆದರೆ, ಟಾಕ್ಸಿಕ್ ಸಿನಿಮಾದಲ್ಲಿ ಅವರೊಂದಿಗೆ ಕೆಲಸ ಮಾಡಿದ ಬಳಿಕ ಇನ್ನೂ ದೊಡ್ಡ ಅಭಿಮಾನಿಯಾಗಿದೆ" ಎಂದು ಹೇಳಿದ್ದಾರೆ. ಈ ಸಂದರ್ಶನದಲ್ಲಿ ರಾಕಿಂಗ್ ಸ್ಟಾರ್ ಯಶ್ ಅವರ ಕಾರ್ಯ ವೈಖರಿ ಬಗ್ಗೆ ಮಾತಾಡಿದ್ದಾರೆ. ಯಶ್ ನಟನೆ, ಸೆಟ್‌ನಲ್ಲಿ ಅವರ ನಡೆದುಕೊಳ್ಳುವ ರೀತಿ ತಮಗೆ ತುಂಬಾ ಇಷ್ಟ ಆಯಿತು ಎಂದು ಹೇಳಿಕೊಂಡಿದ್ದಾರೆ.

8-9 ನಿಮಿಷಗಳ 'ಟಾಕ್ಸಿಕ್' ದೃಶ್ಯ ನೋಡಿ ಥ್ರಿಲ್

ಇದೇ ಸಂದರ್ಶನದಲ್ಲಿ 'ಟಾಕ್ಸಿಕ್' ಸಿನಿಮಾದ ದೃಶ್ಯಗಳನ್ನು ನೋಡಿರುವುದಾಗಿ ಹೇಳಿ ಅಚ್ಚರಿ ಮೂಡಿಸಿದ್ದಾರೆ. ಅವರಿಗೆ 'ಟಾಕ್ಸಿಕ್' ಸಿನಿಮಾದ ಸುಮಾರು 8 ರಿಂದ 9 ನಿಮಿಷಗಳ ದೃಶ್ಯವನ್ನು ನೋಡುವ ಅವಕಾಶ ಸಿಕ್ಕಿತ್ತಂತೆ. ಆ ದೃಶ್ಯಗಳನ್ನು ನೋಡಿ ಅವರು ಬೆರಗಾಗಿದ್ದಾರೆ. "ನಾನು ಟಾಕ್ಸಿಕ್‌ ಸಿನಿಮಾದ 8-9 ನಿಮಿಷಗಳ ದೃಶ್ಯವನ್ನು ನೋಡಿ ಅಕ್ಷರಶ: ಥ್ರಿಲ್ ಆದೆ. ನನ್ನ ಇಡೀ ವೃತ್ತಿ ಬದುಕಿನಲ್ಲಿ ಇಂತಹ ಅದ್ಭುತವಾದ ಮೇಕಿಂಗ್ ನಾನು ಹಿಂದೆಂದೂ ನೋಡಿರಲಿಲ್ಲ" ಎಂದು ಹುಮಾ ಖುರೇಷಿ ಸಿನಿಮಾವನ್ನು ಹೊಗಳಿ ಕೊಂಡಾಡಿದ್ದಾರೆ.

Huma Qureshi says she saw 8-9 minute cut of Toxic which massively impressed her

ಸಂಚಲನ ಸೃಷ್ಟಿಸಿದ ಹುಮಾ ಹೇಳಿಕೆ

ಬಾಲಿವುಡ್ ನಟಿ ಹುಮಾ ಖುರೇಷಿ ಬಾಲಿನಲ್ಲಿ ಹೆಚ್ಚಾಗಿ ಕಾಣಿಸಿಕೊಂಡಿದ್ದರೂ, ದಕ್ಷಿಣ ಭಾರತದಲ್ಲಿ ಕೆಲವು ಭಾಷೆಗಳಲ್ಲಿ ನಟಿಸಿದ್ದಾರೆ. ಹಾಗೇ ಹಾಲಿವುಡ್‌ ಸಿನಿಮಾಗಳಿಗೂ ಬಣ್ಣ ಹಚ್ಚಿದ್ದಾರೆ. ಸಿನಿಮಾ ಕ್ಷೇತ್ರದಲ್ಲಿ ಇಷ್ಟೊಂದು ಅನುಭವವಿರುವ ಹುಮಾ ಖುರೇಶಿ 'ಟಾಕ್ಸಿಕ್' ದೃಶ್ಯಗಳನ್ನು ಈ ಮಟ್ಟಿಗೆ ಹೊಗಳಿದ್ದು ಚರ್ಚೆಗೆ ಗ್ರಾಸವಾಗಿದೆ. ಈ ಕಾರಣಕ್ಕೆ 'ಟಾಕ್ಸಿಕ್' ಸಿನಿಮಾ ಮತ್ತೆ ಚರ್ಚೆಯಲ್ಲಿದೆ.

'ಟಾಕ್ಸಿಕ್' ಗ್ಲೋಬಲ್ ರಿಲೀಸ್

ಮಲಯಾಳಂ ನಿರ್ದೇಶಕಿ ಗೀತು ಮೋಹನ್‌ದಾಸ್ ನಿರ್ದೇಶಿಸಿರುವ 'ಟಾಕ್ಸಿಕ್' ಗ್ಲೋಬಲ್ ರಿಲೀಸ್ ಆಗುತ್ತಿದೆ. ಇತ್ತೀಚೆಗೆ ಸಿನಿಮಾ ಕೆಲವು ದೃಶ್ಯಗಳನ್ನು ರೀ-ಶೂಟ್ ಮಾಡಲಾಗಿದೆ ಎಂದೂ ಹೇಳಲಾಗುತ್ತಿದೆ. ಈಗ ಹುಮಾ ಖುರೇಶಿ ಕೊಟ್ಟಿರುವ ಹೇಳಿಕೆಗಳು ರಾಕಿ ಭಾಯ್ ಅಭಿಮಾನಿಗಳಲ್ಲಿ ಹೊಸ ಹುಮ್ಮಸ್ಸನ್ನು ತಂದಿದೆ. ಸಿನಿಮಾ ಗ್ಲೋಬಲ್ ಹಿಟ್ ಆದರೆ, ಯಶ್ ರೇಂಜ್ ಬೇರಯೇ ಇರುತ್ತೆ.

English summary
Huma Qureshi says she saw 8-9 minute cut of Toxic which massively impressed her. Huma Qureshi also says that she was a Yash fan but became a bigger Yash fan after working with him.
Read more about: actress yash
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X